45 ಲಕ್ಷ ಮೌಲ್ಯದ ವಜ್ರ ಹಿಂದಿರುಗಿಸಿದ ಬಾಲಕ
Team Udayavani, Aug 20, 2017, 6:42 AM IST
ಪುಕ್ಸಟ್ಟೆ ಏನೇ ಸಿಕ್ಕರೂ ಬಿಡದ ಜನರು ವಜ್ರ ಸಿಕ್ಕರೆ ಬಿಡುತ್ತಾರೆಯೇ? ಖಂಡಿತಾ ಇಲ್ಲ, ಎಂದು ನೀವು ಹೇಳುವು ದಾದರೆ ನಿಮ್ಮ ಯೋಚನೆಯೇ ತಪ್ಪು. ಇಂದಿನ ಕಾಲದಲ್ಲೂ ಪ್ರಾಮಾಣಿಕ ಜನರು ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗುವಂಥ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ವಾಚ್ಮನ್ ಮತ್ತು ಅವರ ಮಗ ದಾರಿಯಲ್ಲಿ ಸಿಕ್ಕ 45 ಲಕ್ಷ ರೂ. ಬೆಲೆಬಾಳುವ ವಜ್ರವನ್ನು ಅದರ ಮಾಲೀಕರಿಗೆ ತಲುಪಿಸಿದ್ದಾರೆ. ಮನ್ಸುಖಬಾಯ್ ಸವಾಲಿಯಾ ಎಂಬ ವಜ್ರದ ಮಧ್ಯವರ್ತಿ ಭಾನುವಾರ ಮನೆಗೆ ತೆರಳುವಾಗ ವಜ್ರ ಇರಿಸಿದ್ದ ಪೊಟ್ಟಣವನ್ನು ಕಳೆದುಕೊಂಡರು.
ಅದೇ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಬಾಲಕ ವಿಶಾಲ್ ಉಪಾಧ್ಯಾಯ್ ಅದನ್ನು ತೆಗೆದುಕೊಂಡು ಹೋಗಿ ತನ್ನ ಅಪ್ಪನಿಗೆ ನೀಡಿದ್ದ. ಬಳಿಕ ಅಪ್ಪ, ಮಗ ಇಬ್ಬರೂ ವಜ್ರದ ಪೊಟ್ಟಣವನ್ನು ಸೂರತ್ ಡೈಮಂಡ್ ಅಸೋಸಿಯೇಷನ್ ಅಧಿಕಾರಿಗಳಿಗೆ ನೀಡಿದ್ದರು. ಸಿಸಿಟೀವಿ ಮೂಲಕ ಈ ಮಾಲೀಕರನ್ನು ಪತ್ತೆ ಮಾಡಿದ ಅವರು ವಜ್ರವನ್ನು ಹಿಂದಿರುಗಿಸಿದ್ದಾರೆ. ಅಲ್ಲದೇ, ಅಪ್ಪ ಮಗನನ್ನು ಸನ್ಮಾನಿಸಿದ್ದಾರೆ. ಬಾಲಕನ ಶಿಕ್ಷಣದ ಖರ್ಚನ್ನೂ ಭರಿಸುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ