ಮುಖಕ್ಕೆ ಪೇಪರ್ಸುತ್ತಿಕೊಂಡರೂ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ!
Team Udayavani, Sep 9, 2017, 3:52 AM IST
ತಂತ್ರಜ್ಞಾನ ಅಪ್ಡೇಟ್ ಆಗುತ್ತಿರುವ ಜೊತೆಗೆ ಕಳ್ಳಕಾಕರು ಅಪ್ಡೇಟ್ ಆಗುತ್ತಿದ್ದಾರೆ. ಕಳ್ಳತನ ತಡೆಯಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಇವರು ಸಿಸಿಟಿವಿ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಮಾದರಿಗಳನ್ನು ಕಂಡುಕೊಳ್ಳುತ್ತಾರೆ. ಚೀನಾದಲ್ಲಿ ಕಳ್ಳನೊಬ್ಬ ತನ್ನ ಗುರುತು ಸಿಗಬಾರದೆಂದು ಟಾಯ್ಲೆಟ್ ಪೇಪರ್ ಅನ್ನು ಮುಖಕ್ಕೆ ಸುತ್ತಿಕೊಂಡು ಕನ್ನ ಹಾಕಲು ಖಾಲಿಯಿದ್ದ ಆಸ್ಪತ್ರೆಯೊಂದಕ್ಕೆ ಬಂದಿದ್ದ.
ದರೋಡೆ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಅನಾಯಾಸವಾಗಿ ಸಿಕ್ಕಿಬಿದ್ದ. ಕಾರಣ ಆತ ಎಷ್ಟೇ ಮುನ್ನೆಚ್ಚರಿಕೆಯಿಂದ ಮುಖಕ್ಕೆ ಪೇಪರ್ ಸುತ್ತಿಕೊಂಡು ಆಸ್ಪತ್ರೆಯೊಳಗೆ ಬಂದಿದ್ದರೂ, ಆತ ಪೇಪರ್ ಸುತ್ತಿಕೊಳ್ಳುವಾಗ ಮತ್ತೂಂದು ಸಿಸಿಟಿವಿ ಕ್ಯಾಮೆರಾ ಎದುರೇ ನಿಂತಿದ್ದ. ಅಲ್ಲಿ ಕ್ಯಾಮೆರಾ ಇದ್ದಿದ್ದು ಅವನಿಗೆ ಗೊತ್ತೇ ಆಗಿರಲಿಲ್ಲ