ಕುಸಿದು ಬಿದ್ದ ಸ್ಪರ್ಧಿ ಮಾಡಿದ ಸಾಹಸ ಸ್ಫೂರ್ತಿದಾಯಕ!
Team Udayavani, Sep 20, 2017, 4:47 AM IST
ಜೀವನದಲ್ಲಿ ನಾವು ಯಾವ ಸಂದರ್ಭದಲ್ಲೂ ಸೋಲು ಒಪ್ಪಿಕೊಳ್ಳಬಾರದು ಎಂಬುದಕ್ಕೆ ಉದಾಹರಣೆಯಾಗುವಂಥ ವಿಡಿಯೋವೊಂದು ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಾಷಿಂಗ್ಟನ್ನಲ್ಲಿ ನಡೆದ ಟನಲ್ ಮ್ಯಾರಥಾನ್ನ ಸ್ಪರ್ಧಿ ಡಿವಾನ್ ಬೀಲಿಂಗ್ ತನ್ನ ಗುರಿ ಮುಟ್ಟಲು ಮಾಡಿದ ಸಾಹಸ ಈ ವಿಡಿಯೋದಲ್ಲಿದೆ.
ಸ್ಪರ್ಧೆಯ ಗುರಿ ಮುಟ್ಟಲು ಡಿವಾನ್ಗೆ ಇನ್ನು 12 ಗಜಗಳು ಮಾತ್ರ ಬಾಕಿ ಇತ್ತು. ಆದರೆ ಅಷ್ಟರಲ್ಲಿ ಅವರು ಬಳಲಿಕೆ ಯಿಂದ ಕುಸಿದರು. ಎದ್ದು ನಿಲ್ಲಲು ಪ್ರಯತ್ನಿಸಿದರಾದರೂ ಅವರಿಂದ ಸಾಧ್ಯವಾಗಲಿಲ್ಲ. ಕಡೆಗೆ ಕಲ್ಲು, ಜಲ್ಲಿಗಳಿಂದ ಕೂಡಿದ್ದ ರಸ್ತೆಯಲ್ಲಿ ತೆವಳಲು ಪ್ರಯತ್ನಿಸಿದರು. ಅಷ್ಟರಲ್ಲಿ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾದವು. ಆದರೂ ಛಲ ಬಿಡದೆ, ನೆಲದ ಮೇಲೆ ಉರುಳುತ್ತಾ ತಮ್ಮ ಗುರಿ ತಲುಪಿದರು. ಅಲ್ಲಿ ನೆರೆದಿದ್ದವರೆಲ್ಲಾ ನಿಬ್ಬೆರಗಾದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ನಮಗೆ ನಡೆಯಲಾಗದಿದ್ದಾಗ, ತೆವಳುತ್ತಲಾದರೂ ಗುರಿ ತಲುಪಬೇಕು. ಇದು ನನ್ನ ಜೀವನದ ಸಿದ್ಧಾಂತ’ ಎಂದಿದ್ದಾರೆ.
Video Courtesy: Piece of News
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ
Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?