ಕಚೇರಿಯಲ್ಲಿ ಕಾಫಿ, ಟೀ ಕುಡಿವವರಿಗೆ ಕಹಿ ಸುದ್ದಿ!
Team Udayavani, Sep 23, 2017, 4:10 AM IST
ಕಚೇರಿಯಲ್ಲಿ ಕೆಲಸ ಮಾಡುವಾಗ ನೀವು ಪದೇ ಪದೆ ಟೀ, ಕಾಫಿ ಕುಡಿಯುತ್ತೀರಾ? ಹೌದು. ಕಾಫಿ, ಟೀ ಇಲ್ಲದಿದ್ದರೆ ನಮಗೆ ತಲೆಯೇ ಓಡುವುದಿಲ್ಲ ಎನ್ನುವವರು ನೀವಾದರೆ, ನಿಮಗೆ ಇಲ್ಲೊಂದು ಕೆಟ್ಟ ಸುದ್ದಿಯಿದೆ. ಕಚೇರಿಗಳಲ್ಲಿ ಕಾಫಿ, ಟೀ ಕುಡಿಯಲು ಬಳಸುವ ಕಪ್ ಅಥವಾ ಮಗ್‌ಗಳಲ್ಲಿ ಅಪಾಯಕಾರಿ ಸೂಕ್ಷ್ಮಾಣುಗಳಿರುತ್ತವೆ. ಹೆಚ್ಚಾಗಿ ಫೇಕಲ್ ಬ್ಯಾಕ್ಟೀರಿಯಾ ಎಂಬ ಅಪಾಯಕಾರಿ ಬ್ಯಾಕ್ಟೀರಿಯಾ ಇರುತ್ತದೆ. ನಾವು ಕಪ್‌ಗ್ಳನ್ನು ತೊಳೆದೇ ಬಳಸುತ್ತೇವೆ, ಹಾಗಾಗಲು ಸಾಧ್ಯವೇ ಇಲ್ಲ ಎಂದು ನೀವು ಹೇಳಬಹುದು. ಆದರೆ, ಅರಿಝೋನಾ ವಿವಿಯ ಸೂಕ್ಷ್ಮಾಣುವಿಜ್ಞಾನ ತಜ್ಞ, ಪ್ರೊಫೆಸರ್ ಚಾರ್ಲ್ಸ್ ಗರ್ಬ ನಡೆಸಿದ ಅಧ್ಯಯನದಲ್ಲಿ, ಕಚೇರಿಗಳಲ್ಲಿ ಬಳಸುವ ಶೇ.90 ಕಾಫಿ ಮಗ್‌ಗಳಲ್ಲಿ ಕ್ರಿಮಿಗಳು ಇರುತ್ತವೆ ಎಂದು ತಿಳಿದುಬಂದಿದೆ. ಜೊತೆಗೆ ಕಪ್‌ಗ್ಳನ್ನು ತೊಳೆಯಲು ಬಳಸುವ ಸ್ಪಾಂಜ್‌ಗಳಲ್ಲೂ ಕ್ರಿಮಿಗಳು ಇದ್ದು, ಈ ಸ್ಪಾಂಜ್ ಗಳನ್ನು ಬಳಸಿ ನೀವು ಮಗ್‌ಗಳನ್ನು ಎಷ್ಟೇ ತೊಳೆದರೂ ಕ್ರಿಮಿಯಿಂದ ಮುಕ್ತಿ ಇಲ್ಲ ಎಂದಿದ್ದಾರೆ. ಹಾಗಾದರೆ ಇದಕ್ಕೆಲ್ಲಾ ಪರಿಹಾರ ಎಂದರೆ, ನೀವು ಮನೆಯಿಂದಲೇ ಕಾಫಿ ಕಪ್ ತರುವುದು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ