Updated at Thu,19th Jan, 2017 8:12AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಟ ಓಂ ಪುರಿ ಸಾವು : ಹಿಂದಿನ ರಾತ್ರಿ ನಡೆದದ್ದೇನು ? ಇಲ್ಲಿದೆ ವಿವರ

ಹೊಸದಿಲ್ಲಿ : ಬಾಲಿವುಡ್‌ ಹಿರಿಯ ನಟ ಓಂ ಪುರಿ (66) ಅವರ ಹಠಾತ್‌ ಸಾವು ಇಡಿಯ ಭಾರತೀಯ ಚಿತ್ರರಂಗಕ್ಕೆ ಭಾರೀ ದೊಡ್ಡ ಶಾಕ್‌ ನೀಡಿರುವುದು ಸತ್ಯ. ಅವರ ಅನಿರೀಕ್ಷಿತ ಸಾವಿಗಾಗಿ ಚಿತ್ರರಂಗ ಮರುಗಿದೆ. ಹಾಗಿದ್ದರೂ ಓಂ ಪುರಿ ಅವರು ಸಹಜ ಸಾವನ್ನು ಕಂಡಿಲ್ಲ ಎಂದು ಕೆಲವು ವರದಿಗಳು ಹೇಳುತ್ತಿವೆ. ಅವರ ಸಾವು ಶಂಕಾಸ್ಪದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಓಂ ಪುರಿ ಸಾವಿನ ಹಿಂದೆ ಯಾರದೇ ಕೈವಾಡ ಇರುವ ಸಾಧ್ಯತೆಯನ್ನು ಮುಂಬಯಿ ಪೊಲೀಸರು ತಳ್ಳಿ ಹಾಕಿದ್ದಾರೆ.

ಆದರೆ ಓಂ ಪುರಿಯ ಸ್ನೇಹಿತನಾಗಿರುವ ಅವರ ಕಾರಿನ ಚಾಲಕ ಖಾಲಿದ್‌ ಕಿದ್ವಾಯಿ ನೀಡಿರುವ ಹೇಳಿಕೆ ಗಮನಾರ್ಹವಾಗಿದೆ. ಓಂ ಪುರಿ ಸಾವಿನ ಹಿಂದಿನ ರಾತ್ರಿ ನಡೆದ ಕೆಲವು ಆಘಾತಕಾರಿ ವಿದ್ಯಮಾನಗಳ ಮೇಲೆ ಆತನ ಹೇಳಿಕೆ ಬೆಳಕು ಚೆಲ್ಲುತ್ತವೆ.

ಡಿಎನ್‌ಎ ವರದಿ ಮಾಡಿರುವ ಪ್ರಕಾರ ಓಂ ಪುರಿ ಅವರು ತಮ್ಮ ಪುತ್ರನನ್ನು ಕಾಣಲು ಹಿಂದಿನ ಗುರುವಾರ ಸಂಜೆ ತೃಶೂಲ್‌ ಕಟ್ಟಡಕ್ಕೆ ತೆರಳಿದ್ದಾರೆ. ಆದರೆ ತನ್ನ ಪುತ್ರ ಹಾಗೂ ತನ್ನ ಮಾಜಿ ಪತ್ನಿ ನಂದಿತಾ ಯಾವುದೋ ಪಾರ್ಟಿಗೆ ಹೋಗಿರುವುದು ಓಂ ಪುರಿಗೆ ತಿಳಿದು ಬರುತ್ತದೆ. 

ಆಗ ಓಂ ಪುರಿ ಅವರು ಮಾಜಿ ಪತ್ನಿ ನಂದಿತಾಗೆ ಫೋನ್‌ ಮಾಡುತ್ತಾರೆ. ಫೋನಿನಲ್ಲಿ  ಸಿಟ್ಟಿನಿಂದ ಕೂಗಾಡುತ್ತಾರೆ. ಪಾರ್ಟಿಯಿಂದ ಬೇಗನೆ ಮನೆಗೆ ಮರಳಬೇಕೆಂದೂ ತಾನು ತನ್ನ ಪುತ್ರನನ್ನು ಅರ್ಜೆಂಟಾಗಿ ಕಾಣಬೇಕಾಗಿದೆ ಎಂದೂ ಓಂ ಪುರಿ ಫೋನಿನಲ್ಲಿ ಗುಡುಗುತ್ತಾರೆ. 

ಇದಾಗಿ ಸುಮಾರು 45 ನಿಮಿಷಗಳ ಕಾಲ ಓಂ ಪುರಿ, ನಂದಿತಾಳ ಫ್ಲಾಟ್‌ನಲ್ಲಿ  ಕಾಯುತ್ತಾರೆ.  ಆದರೆ ಪತ್ನಿ - ಪುತ್ರ ಇಬ್ಬರೂ ಮರಳಿ ಬರುವುದಿಲ್ಲ. ಈ ನಡುವೆ ಓಂ ಪುರಿ ಲಿಕ್ಕರ್‌ ಬಾಟಲ್‌ ಹಿಡಿದುಕೊಂಡು ಗ್ಲಾಸಿಗೆ ಮದ್ಯವನ್ನು ಸುರಿಯುತ್ತಾ ಕುಡಿಯಲು ಆರಂಭಿಸುತ್ತಾರೆ. ಪತ್ನಿ - ಮಗನಿಗಾಗಿ ಕಾದು ಸುಸ್ತಾಗಿ ಕುಡಿಯುವುದನ್ನು ಮುಗಿಸಿ ಕಾರನ್ನು ಹತ್ತುತ್ತಾರೆ. 

ಇವಿಷ್ಟು ವಿವರಗಳನ್ನು ಓಂ ಪುರಿ ಅವರ ಚಾಲಕ-ಸ್ನೇಹಿತ ಖಾಲಿದ್‌ ಕಿದ್ವಾಯಿ ಪೊಲೀಸರಿಗೆ ನೀಡಿದ್ದಾರೆ. 

ಓಂ ಪುರಿ ಜನವರಿ 6ರಂದು ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದರು. 


More News of your Interest

Trending videos

Back to Top