Updated at Tue,23rd May, 2017 9:51AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಾಹುಬಲಿ 2 ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ 1,500 ಕೋಟಿಗೆ ನಿಕಟ !

ಮುಂಬಯಿ : ಎಸ್‌ ಎಸ್‌ ರಾಜಮೌಳಿ ಅವರ ರೋಮಾಂಚಕ ದೃಶ್ಯವೈಭವದ ಮಹೋನ್ನತ ಚಿತ್ರ "ಬಾಹುಬಲಿ 2' ಈಗಿನ್ನು ಸದ್ಯದಲ್ಲೇ ಸಾರ್ವಕಾಲಿಕ ದಾಖಲೆಯ 1,500 ಕೋಟಿ ರೂ. ಬಾಕ್ಸ್‌ ಗಳಿಕೆಯನ್ನು ದಾಟಲಿದೆ.

ಬಾಹುಬಲಿ 2 ಚಿತ್ರವನ್ನು ಕೇವಲ ಭಾರತೀಯರು ಮಾತ್ರವಲ್ಲ; ವಿಶ್ವಾದ್ಯಂತದ ಚಿತ್ರ ಪ್ರೇಮಿಗಳು ಕೂಡ ಬಹುವಾಗಿ ಮೆಚ್ಚಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.

ಭಾರತೀಯ ಚಿತ್ರೋದ್ಯಮದ ಬಾಕ್ಸ್‌ ಆಫೀಸ್‌ ಅಂಕಿ ಅಂಶಗಳನ್ನು  ವಿಶ್ಲೇಷಿಸುವ ರಮೇಶ್‌ ಬಾಲಾ ಅವರ ಪ್ರಕಾರ ಬಾಹುಬಲಿ 2 ಚಿತ್ರದ ವಿಶ್ವಾದ್ಯಂತದ ಬಾಕ್ಸ್‌ ಆಫೀಸ್‌ ಗಳಿಕೆ ಈಗಲೇ 1,450 ಕೋಟಿ ರೂ. ದಾಟಿದೆ. 

ಬಾಹುಬಲಿ 2 ಚಿತ್ರದ ಬಾಕ್ಸ್‌ ಆಫೀಸ್‌ ಗಳಿಕೆ ವಿವರ ಇಂತಿದೆ :

ಭಾರತ : ನೆಟ್‌ : 925 ಕೋಟಿ ರೂ., ಗ್ರಾಸ್‌ : 1,189 ಕೋಟಿ ರೂ. 

ಸಾಗರೋತ್ತರ : ಗ್ರಾಸ್‌ : 261 ಕೋಟಿ ರೂ. 

ಒಟ್ಟು 1,450 ಕೋಟಿ ರೂ. 

ಬಾಹುಬಲಿ 2 ಚಿತ್ರ ತೆರೆಕಂಡದ್ದು ಈವರ್ಷ ಎಪ್ರಿಲ್‌ 28ರಂದು. ಚಿತ್ರದ ತಾರಾಣಗಣದಲ್ಲಿ ರಾಣಾ ದಗ್ಗುಬತಿ (ಬಲ್ಲಾಳದೇವ), ರಮ್ಯ ಕೃಷ್ಣನ್‌ (ಶಿವಗಾಮಿ ದೇವಿ), ಸತ್ಯರಾಜ್‌ (ಕಟ್ಟಪ್ಪ), ನಸರ್‌ (ಬಿಜ್ಜಳದೇವ), ಅನುಷ್ಕಾ ಶೆಟ್ಟಿ (ದೇವಸೇನಾ) ಮತ್ತು ತಮನ್ನಾ  ಭಾಟಿಯಾ (ಆವಂತಿಕಾ)ಇದ್ದಾರೆ. 


More News of your Interest

Trending videos

Back to Top