Updated at Sun,23rd Jul, 2017 9:30AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

33.17 ಕೋಟಿ ರೂ. ಬಾಚಿದ ರಣಬೀರ್, ಕತ್ರಿನಾ ಜೋಡಿಯ 'ಜಗ್ಗ ಜಾಸೂಸ್'

ಬಾಲಿವುಡ್ ನ ಜಗ್ಗ ಜಾಸೂಸ್ ಮೊದಲ ದಿನವೇ ಸಕ್ಸಸ್ ಆಗಿ ರಣಬೀರ್ ಕತ್ರಿನಾ ಜೋಡಿಗೆ ಯಶಸ್ಸಿನ ಕಿರೀಟ ತೊಡಿಸಿದೆ. 
ಜಗ್ಗಾ ಜಾಸೂಸ್ ಉತ್ತಮ ಆರಂಭ ಕಂಡಿದೆ. ದೇಶಾದ್ಯಂತ ಬಿಡುಗಡೆಯಾದ ಬಾಲಿವುಡ್ ನಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಚಿತ್ರ 'ಜಗ್ಗ ಜಾಸೂಸ್' ಬಿಡುಗಡೆಯಾದ 3ನೇ ದಿನಕ್ಕೆ 33.17 ಕೋಟಿ ರೂಪಾಯಿಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಜನ ಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂದಿದೆ ಚಿತ್ರತಂಡ. ಅನುರಾಗ್ ಬಸು ನಿರ್ದೇಶನದ 'ಜಗ್ಗಜಾಸೂಸ್' ಸಿನಿಮಾದಲ್ಲಿ  ರಣ್ ಬೀರ್ ಶಾಲಾ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯ ಮನೋಜ್ಞವಾಗಿದೆ ಎಂಬ ಹೊಗಳಿಕೆ ವ್ಯಕ್ತವಾಗಿದೆ.

ಕಳೆದುಹೋಗಿರುವ ತನ್ನ ತಂದೆಯನ್ನು ಹುಡುಕುವ ಬಾಲಕನ ಕಥೆ ಇದಾಗಿದ್ದು, ರಣ್ ಬೀರ್ ಗೆ ಜೊತೆಯಾಗಿ ಕತ್ರೀನಾ ಕೈಪ್ ಕೂಡಾ ಸಕತ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಮುಗ್ದತೆಯ ನಟನೆ ಮೆಚ್ಚುಗೆಗೆ ಪಾತ್ರವಾಗಿದೆ. ಸಯಾನಿ ಗುಪ್ತಾ ಮತ್ತು ಸೌರಭ್ ಶುಕ್ಲಾ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಬರ್ಫಿ ಚಿತ್ರದ ನಂತರ ಬಸು ಹಾಗೂ ರಣ್ ಬೀರ್ ಜೊತೆಯಾಗಿ ಕೆಲಸ ಮಾಡಿದ ಎರಡನೇ ಚಿತ್ರ ಇದಾಗಿದೆ . 

ಕತ್ರೀನಾ ರಣ್ ಬೀರ್ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರೂ, ಈ ಚಿತ್ರ ಇವರಿಬ್ಬರಿಗೆ ಹೊಸ ಬ್ರೇಕ್ ನೀಡಲಿದೆ ಎಂಬ ವಿಶ್ವಾಸ ಇವರಿಬ್ಬರದ್ದು. ಅದಕ್ಕೆ ತಕ್ಕಂತೆಯೇ ಸಿನಿರಸಿಕರಿಂದ ರೆಸ್ಪಾನ್ಸ್ ಸಿಕ್ಕಿದೆ. 


Back to Top