Updated at Fri,18th Aug, 2017 5:49PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟಿವಿ ನಟ ಅಮಿತ್‌ ಟಂಡನ್‌ ಪತ್ನಿ ರೂಬಿ ದುಬೈಯಲ್ಲಿ ಅರೆಸ್ಟ್‌

ಹೊಸದಿಲ್ಲಿ : ಖ್ಯಾತ ಟಿವಿ ನಟ ಅಮಿತ್‌ ಟಂಡನ್‌ ಅವರ, ಚರ್ಮರೋಗ ತಜ್ಞೆಯಾಗಿರುವ ಪತ್ನಿ ರೂಬಿ ಟಂಡನ್‌ ಅವರು ಬಂಧಿತರಾಗಿದ್ದು ಪ್ರಕೃತ ದುಬೈ ಜೈಲಿನಲ್ಲಿರುವುದಾಗಿ ವರದಿಯಾಗಿದೆ. 

ಕೆಲ ಸಮಯದ ಹಿಂದೆ ಅಮಿತ್‌ ಮತ್ತು ಪತ್ನಿ ರೂಬಿ ಪ್ರತ್ಯೇಕಗೊಳ್ಳುತ್ತಾರೆಂಬ ಸುದ್ದಿ ವೈರಲ್‌ ಆಗಿತ್ತು. ಅದಾಗಿ ಈಗ ಅಮಿತ್‌ ಪತ್ನಿ ರೂಬಿ ದುಬೈಯಲ್ಲಿ ಅರೆಸ್ಟ್‌ ಆಗಿರುವ ಶಾಕಿಂಗ್‌ ಸುದ್ದಿ ವೈರಲ್‌ ಆಗಿದೆ. 

ದುಬೈನ ಆರೋಗ್ಯ ಇಲಾಖೆಯ ಯಾರೋ ಒಬ್ಬರು ರೂಬಿ ವಿರುದ್ದ ಕೇಸು ದಾಖಲಿಸಿದ್ದು ಆ ಪ್ರಕಾರ ಆಕೆಯನ್ನು ಬಂಧಿಸಲಾಗಿದೆ; ಪ್ರಕೃತ ಆಕೆ ಅಲ್‌ ರಫಾ ಜೈಲಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

"ಹೌದು ರೂಬಿ ದುಬೈ ಜೈಲಿನಲ್ಲಿದ್ದಾರೆ. ಆಕೆಯನ್ನು ಜೈಲಿನಿಂದ ಬಿಡಿಸ ಹೊರತರಲು ನಾನು ಯತ್ನಿಸುತ್ತಿದ್ದೇನೆ; ಮುಂದಿನ ವಾರ ದುಬೈಗೆ ಹೋಗುತ್ತೇನೆ' ಎಂದು ಅಮಿತ್‌ ಟಂಡನ್‌ ಹೇಳಿರುವುದನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಡಾಟ್‌ ಕಾಮ್‌ ವರದಿ ಮಾಡಿದೆ. 

ಅಮಿತ್‌ ಮತ್ತು ರೂಬಿಗೆ ಒಬ್ಬಳು ಮಗಳಿದ್ದಾಳೆ. 

Back to Top