Updated at Fri,18th Aug, 2017 5:26PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸೆನ್ಸಾರ್‌ ಮಂಡಳಿ ಅಧ್ಯಕ್ಷರಾಗಿ ಪ್ರಸೂನ್‌ : ಬೆನಗಲ್‌ ಸ್ವಾಗತ

ಮುಂಬಯಿ : ಕೇಂದ್ರ ಚಲನಚಿತ್ರ ಸೆನ್ಸಾರ್‌ ಮಂಡಳಿಯ ಅಧ್ಯಕ್ಷರಾಗಿ ಪ್ರಸೂನ್‌ ಜೋಷಿ ನೇಮಕಗೊಂಡಿರುವುದನ್ನು ಹಿರಿಯ ಚಿತ್ರ ನಿರ್ದೇಶಕ ಶ್ಯಾಮ್‌ ಬೆನಗಲ್‌ ಸ್ವಾಗತಿಸಿದ್ದಾರೆ. 

ಪ್ರಸೂನ್‌ ಜೋಷಿ ಸಿನೇಮಾವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದಾರೆ ಎಂದು ಬೆನಗಲ್‌ ಹೇಳಿದ್ದಾರೆ.

ಪ್ರಸೂನ್‌ ಜೋಷಿ ಅವರು ಪಹಲಾಜ್‌ ನಿಹಲಾನಿ ಅವರ ಉತ್ತರಾಧಿಕಾರಿಯಾಗಿದ್ದಾರೆ. ನಿಹಲಾನಿ ಅವರನ್ನು ಸೆನ್ಸಾರ್‌ ಮಂಡಳಿಯ ಅಧ್ಯಕ್ಷ ಪದಕ್ಕೆ 2015ರ ಜನವರಿಯಲ್ಲಿ ನೇಮಿಸಲಾಗಿತ್ತು. ನಿಹಲಾನಿ ಅವರ ಅನೇಕ ನಡೆ, ಕ್ರಮ, ಹೇಳಿಕೆಗಳು ವಿವಾದಾತ್ಮಕವಾಗಿದ್ದವು. 

ಸೆನ್ಸಾರ್‌ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಓರ್ವ ಗೀತ ರಚನಕಾರ-ಕವಿ ನೇಮಕಗೊಂಡಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬೆನಗಲ್‌, "ಪ್ರಸೂನ್‌ ಜೋಷಿ ಸ್ವತಃ ಒಬ್ಬ ಕಲಾವಿದರು; ಅವರು ಉನ್ನತ ಮಟ್ಟದ ಕವಿ ಕೂಡ. ಅವರು ಚಲನಚಿತ್ರ ಮಾಧ್ಯಮವನ್ನು ಚೆನ್ನಾಗಿ ಅರಿತವರಾಗಿದ್ದಾರೆ' ಎಂದು ಹೇಳಿದರು. 

Back to Top