ಬೂಸನ್ ಚಿತ್ರೋತ್ಸವಕ್ಕೆ “ಅಜ್ಜಿ’ಗೆ ಆಹ್ವಾನ!
Team Udayavani, Sep 12, 2017, 12:16 PM IST
ಮುಂಬಯಿ: ದ.ಕೊರಿಯಾದಲ್ಲಿ ನಡೆಯುವ ಪ್ರತಿಷ್ಠಿತ ಬೂಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವ (ಬಿಐಎಫ್ಎಫ್)ಗೆ ದೇವಶಿಶ್ ಮುಖೀಜಾ ನಿರ್ದೇಶನದ “ಅಜ್ಜಿ’ ಹಿಂದಿ ಚಿತ್ರ ಆಯ್ಕೆಯಾಗಿದೆ.
ಯೋಡ್ಲಿ ಫಿಲಂಸ್ ನಿರ್ಮಾಣದ ಈ ಚಿತ್ರ, ಹೊಸ ತಲೆಮಾರಿನ ಚಿತ್ರ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಮುಂದಿನ ತಿಂಗಳು ಅಕ್ಟೋಬರ್ 12ರಿಂದ 21ರ ವರೆಗೆ ಈ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದೆ.
9 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಸಮಾಜ ನ್ಯಾಯ ಒದಗಿಸಲು ವಿಫಲವಾದಾಗ ಆಕೆಯ ವೃದ್ಧೆ ಅಜ್ಜಿ, ಹೇಗೆ ನ್ಯಾಯವನ್ನು ಒದಗಿಸುತ್ತಾಳೆ ಎಂಬುದರ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಚಿತ್ರ ಸುಷ್ಮಾ ದೇಶಪಾಂಡೆ, ಶ್ರಾವಣಿ ಸೂರ್ಯವಂಶಿ, ಸಾದಿಯಾ ಸಿದ್ದಿಕಿ, ಅಭಿಷೇಕ್ ಬ್ಯಾನರ್ಜಿ, ಸ್ಮಿತಾ ತಾಂಬೆ ಅವರ ತಾರಾಗಣವನ್ನು ಹೊಂದಿದೆ. “ಜಗತ್ತಿನ ಸಾವಿರಾರು ಚಿತ್ರಗಳಲ್ಲಿ ಹೊಸ ತಲೆಮಾರಿನ ಚಿತ್ರಗಳ ಪೈಕಿ ಚಿತ್ರೋತ್ಸವಕ್ಕೆ ಆಯ್ಕೆ ಯಾದ 10 ಚಿತ್ರಗಳಲ್ಲಿ ಇದೂ ಒಂದಾಗಿದ್ದು ಚಿತ್ರ ತಂಡಕ್ಕೆ ಹೆಮ್ಮೆಯಾಗಿದೆ ಎಂದು ಮುಖೀಜಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ