CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

75 ರ ಸಂಭ್ರಮದಲ್ಲಿ  ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌

 ಮುಂಬಯಿ: ಬಾಲಿವುಡ್‌ನ‌ ಮೇರು ನಟ ಅಮಿತಾಭ್‌ ಬಚ್ಚನ್‌ ಬುಧವಾರ 75 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅತೀ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಹಿರಿಯ ನಟರಿಗೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ, ಚಿತ್ರರಂಗದ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. 

ಜನಪ್ರಿಯ ಟಿವಿ ಶೋ 'ಕೌನ್‌ ಬನೇಗಾ ಕರೋಡ್‌ಪತಿ'ಯ 9 ನೇ ಯ ಅವತರಣಿಕೆ ನಿರ್ವಹಿಸುತ್ತಿರುವ ಬಿಗ್‌ಬಿಗೇ ಚಿತ್ರೀಕರಣದ ವೇಳೆ ಅಚ್ಚರಿಯೊಂದು ಕಾದಿತ್ತು. 

ತಾನು ಕಲಿತಿದ್ದ ನೈನಿತಾಲ್‌ನ ಶೇರ್‌ವುಡ್‌ ಕಾಲೇಜಿನ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ವಿಡಿಯೋ ನೋಡಿ ಅಮಿತಾಭ್‌ ಭಾವುಕರಾದರು. ಅಮಿತಾಭ್‌ ಜನ್ಮದಿನದ ಸಂಭ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅಮಿತಾಭ್‌ಗಾಗಿ ಬರ್ತ್‌ಡೇ ಸಾಂಗ್‌ ಹಾಡಿದರು. 

ವಿಡಿಯೋ ನೋಡುತ್ತಿದ್ದಂತೆ ಅಮಿತಾಭ್‌ ಕಣ್ಣಾಲಿಗಳಲ್ಲಿ ನೀರು ಜಿನುಗಿತು. ನಾನಿದನ್ನ ನಿರೀಕ್ಷೆ ಮಾಡಿಯೇ ಇರಲಿಲ್ಲ ಎಂದಿರುವುದಾಗಿ ವರದಿಯಾಗಿದೆ. ಈ ಎಪಿಸೋಡ್‌ ಅಕ್ಟೋಬರ್‌ 11 ಇಂದು ಪ್ರಸಾರವಾಗಲಿದೆ. 

Back to Top