ಟಿಸಿಎಸ್ ಸಿಇಓ ನಟರಾಜನ್ ಚಂದ್ರಶೇಖರನ್ ಟಾಟಾ ಸನ್ಸ್ ಹೊಸ ಅಧ್ಯಕ್ಷ
Team Udayavani, Jan 12, 2017, 7:28 PM IST
ಹೊಸದಿಲ್ಲಿ : ಟಿಸಿಎಸ್ ಸಿಇಓ ನಟರಾಜನ್ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ನ ಹೊಸ ಅಧ್ಯಕ್ಷರನ್ನಾಗಿ ಕಂಪೆನಿಯು ಇಂದು ಗುರುವಾರ ನೇಮಿಸಿದೆ. ಇವರು ಈಗಿನ ತಾತ್ಕಾಲಿಕ ಅಧ್ಯಕ್ಷ ರತನ್ ಟಾಟಾ ಹಾಗೂ ಪದಚ್ಯುತ ಸೈರಸ್ ಮಿಸ್ತ್ರಿ ಅವರ ಉತ್ತರಾಧಿಕಾರಿಯಾಗಿರುತ್ತಾರೆ.
ರತನ್ ಟಾಟಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಟಾಟಾ ಸನ್ಸ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಪೆಪ್ಸಿಕೋ ಮುಖ್ಯಸ್ಥೆ ಇಂದ್ರಾ ನೂಯಿ, ವೋಡಾಫೋನ್ ಸಮೂಹದ ಮಾಜಿ ಮುಖ್ಯಸ್ಥ ಅರುಣ್ ಸಾರಿನ್, ಟಾಟಾ ರಿಟೇಲ್ ಯೂನಿಟ್ ಟ್ರೆಂಟ್ನ ಅಧ್ಯಕ್ಷ ನವಲ್ ಟಾಟಾ ಮೊದಲಾದ ಹೈ ಪ್ರೊಫೈಲ್ ಹೆಸರುಗಳು ಪರಿಶೀಲನೆಯಲ್ಲಿದ್ದವು. ಅಂತಿಮವಾಗಿ ಟಿಸಿಎಸ್ ಸಿಇಓ ನಟರಾಜನ್ ಚಂದ್ರಶೇಖರನ್ ಅವರನ್ನು ಸಭೆಯಲ್ಲಿ ಆಯ್ಕೆಮಾಡಲಾಯಿತು ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಟಾಟಾ ಸನ್ಸ್ ಕಂಪೆನಿಯ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರನ್ ಅವರ ನೇಮಕಾತಿಯು ಹೊಸ ಅಧ್ಯಕ್ಷರನ್ನು ಶೋಧಿಸುವ ಐವರು ಸದಸ್ಯರ ಸಮಿತಿಗೆ ನೀಡಲಾಗಿದ್ದ ಫೆ.24ರ ಗಡುವಿಗೆ ಒಂದು ತಿಂಗಳ ಮೊದಲೇ ನಡೆದಿರುವುದು ಗಮನಾರ್ಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್