ಮುಂಬಯಿ ಶೇರು 115 ಅಂಕ ಜಿಗಿತ; ನಿಫ್ಟಿ ಸಾರ್ವಕಾಲಿಕ ದಾಖಲೆ
Team Udayavani, Mar 30, 2017, 4:55 PM IST
ಮುಂಬಯಿ : ಐತಿಹಾಸಿಕ ಜಿಎಸ್ಟಿ ಮಸೂದೆಯ ನಾಲ್ಕು ಪೂರಕ ಮಸೂದೆಗಳು ಲೋಕಸಭೆಯಲ್ಲಿ ಪಾಸಾಗಿದ್ದು ಇದೇ ವರ್ಷ ಜುಲೈ 1ರಿಂದ ಜಿಎಸ್ಟಿ ಜಾರಿಗೆ ಬರುವುದು ಖಚಿತವೆಂಬ ಆಶಾಭಾವನೆಯಲ್ಲಿ ಹೊಸ ಭರವಸೆಯನ್ನು ತಳೆದಿರುವ ಮುಂಬಯಿ ಶೇರು ಪೇಟೆ ಇಂದು ನಿರಂತರ ಮೂರನೇ ದಿನವೂ ಮುನ್ನಡೆಯನ್ನು ಕಾಯ್ದುಕೊಂಡು 115.99 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 29,647.42 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 29.95 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ಎತ್ತರದ ಮಟ್ಟವಾಗಿ ದಿನದ ವಹಿವಾಟನ್ನು 9,173.75 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಅದಾನಿ ಪೋರ್ಟ್, ಎಚ್ ಡಿ ಎಫ್ ಸಿ ಬ್ಯಾಂಕ್, ಈಶರ್ ಮೋಟರ್, ಭಾರ್ತಿ ಏರ್ಟೆಲ್, ಇಂಡಸ್ಇಂಡ್ ಬ್ಯಾಂಕ್ ಟಾಪ್ ಗೇನರ್ ಎನಿಸಿಕೊಂಡವು. ಐಡಿಯಾ ಸೆಲ್ಯುಲರ್, ಬಿಎಚ್ಇಎಲ್, ಒಎನ್ಜಿಸಿ, ಕೋಲ್ ಇಂಡಿಯಾ, ಟಾಟಾ ಸ್ಟೀಲ್ ಟಾಪ್ ಲೂಸರ್ ಎನಿಸಿಕೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್