Infosys:CEO ಸಿಕ್ಕಾ ರಾಜೀನಾಮೆ;ಪ್ರವೀಣ್ ನೇಮಕ
Team Udayavani, Aug 18, 2017, 9:49 AM IST
ಹೊಸದಿಲ್ಲಿ : ಇನ್ಫೋಸಿಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ವಿಶಾಲ್ ಸಿಕ್ಕಾ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ.
ಯು.ಬಿ.ಪ್ರವೀಣ್ ರಾವ್ ಅವರನ್ನು ಹಂಗಾಮಿ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪೆನಿ ಕಾರ್ಯದರ್ಶಿ ಎ.ಜಿ.ಎಸ್. ಮಣಿಕಂಠ ತಿಳಿಸಿದ್ದಾರೆ.
ಅಗಸ್ಟ್ 18 ರಂದು ಸಿಕ್ಕಾ ಅವರ ರಾಜೀನಾಮೆಯನ್ನು ಕಂಪೆನಿಯ ಬೋರ್ಡ್ ಮೀಟಿಂಗ್ನಲ್ಲಿ ಅಂಗೀಕರಿಸಲಾಗಿದೆ.ಸಿಕ್ಕಾ ಇನ್ನುಮುಂದೆ ಕಂಪೆನಿಯ ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಮಣಿಕಂಠ ತಿಳಿಸಿದ್ದಾರೆ.
50 ರ ಹರೆಯದ ಸಿಕ್ಕಾ 2014 ಜೂನ್ 12 ರಿಂದ ಭಾರತದ 2 ನೇ ಅತೀ ದೊಡ್ಡ ಐಟಿ ಸರ್ವಿಸ್ ಕಂಪೆನಿ ಇನ್ಫೋಸಿಸ್ನ ಸಿಇಓ ಆಗಿ ಕಾರ್ಯನಿರ್ವಹಿಸಿದ್ದರು.
30 ವರ್ಷಗಳ ಅನುಭವವಿರುವ ಪ್ರವೀಣ್ ರಾವ್ ಅವರು ಸದ್ಯ ಇನ್ಫೋಸಿಸ್ ಬಿಪಿಒದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಾಗತಿಕ ಮಾರಾಟ, ಜಾಗತಿಕ ವಿತರಣೆ ಮತ್ತು ವ್ಯಾಪಾರ ಸಕ್ರಿಯಗೊಳಿಸುವ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್