ವಚನ ಸಾಹಿತ್ಯ ಓದಿನೊಂದಿಗೆ ಪಾಲಿಸಿ: ಡಾ|ಪಟ್ಟಣಶೆಟ್ಟಿ


Team Udayavani, Jun 27, 2017, 11:59 AM IST

hub5.jpg

ಧಾರವಾಡ: ಸಾಮಾಜಿಕ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಚಿಂತನೆ ಕೊಡಬಲ್ಲ ವಚನ ಸಾಹಿತ್ಯವನ್ನು ಓದುವುದಷ್ಟೇ ಅಲ್ಲದೇ ಅಳವಡಿಕೆಗೂ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಮುರುಘಾಮಠದಲ್ಲಿ ಸೋಮವಾರ ನಡೆದ ಲಿಂ| ತ್ರಿವಿಧ ದಾಸೋಹ ಮೂರ್ತಿ ಶ್ರೀ ಮಹಾಂತಪ್ಪಗಳ 24ನೇ ಸ್ಮರಣೋತ್ಸವದಲ್ಲಿ ಐದು ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ನಮ್ಮೊಳಗೆ ನಾವು ಬೆಳಕು ಕಂಡಾಗ ಮಾತ್ರ ನಮ್ಮೆದುರಿಗೆ ಬೆಳಗು ಕಂಡು ಬರುತ್ತದೆ. ಅಂತಹ ಸಾತ್ವಿಕ ಚಿಂತನೆಗಳ ಸಾಹಿತ್ಯದ ಮೂಲಕ ಹೊರಗಣ ಬೆಳಕನ್ನು ಕಾಣುವಂತಾಗಬೇಕು. ವಚನಕಾರರು ತಮ್ಮ ಅನುಭವದ ಮೇಲೆ ಬರೆದ ವಚನಗಳನ್ನು ವಿಶೇಷವಾಗಿ ವಿವರಿಸಿ ಅವುಗಳ ಮೌಲ್ಯಗಳನ್ನು ಹೆಚ್ಚಿಸಿದ ಕಾರಣ ಅವು ಷಟಸ್ಥಲ ರೂಪಗಳನ್ನು ಪಡೆದುಕೊಂಡವು.

ಮೌಲ್ಯಯುತ ಅನುಭಾವದ ವಿಷಯಗಳು ವಚನ ಸಾಹಿತ್ಯದ ಮೂಲಕ ಜನಮನ ತಲುಪಿ ಪ್ರಸಾರವಾದವು. ನಾವು ಕೂಡ ವಚನಗಳನ್ನು ಓದಿ ಅವುಗಳನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ವಚನ ಸಾಹಿತ್ಯ ರಚನೆ ಮಾಡುವಂತಹ ಶಕ್ತಿ ಯುವ ಜನರಿಗೆ ಬರಬೇಕು ಎಂದರು. ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಮಹಾಂತಪ್ಪಗಳು ಈ ನಾಡು ಕಂಡ ಮಹಾನ್‌ ಚೇತನರು. 

ಶ್ರೀ ಮೃತ್ಯುಂಜಯಪ್ಪಗಳ ಕಾರುಣ್ಯದ ಶಿಶುವಾಗಿ ಪರಮ ಶಿಷ್ಯರಾಗಿ ಸಾತ್ವಿಕ ಬದುಕನ್ನು ಸಾಗಿಸಿ ಸ್ವಾಮಿತ್ವಕ್ಕೆ ಒಂದು ಅಪೂರ್ವ ಮಾದರಿಯಾಗಿದ್ದರು. ಅವರ ಆಶಯದಂತೆ ಇಂದು ಕೂಡ ಶ್ರೀ ಮಠವು ಅದೇ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದೆ. ಮುಂಬರುವ ಜನೇವರಿಯಲ್ಲಿ ಶ್ರೀಮಠವು ಶತಮಾನ ಆಚರಿಸಿಕೊಳ್ಳುತ್ತಿದ್ದು, ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿಯವರ ಮಾರ್ಗದರ್ಶನಲ್ಲಿ ಮಹತ್ವದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಯಾವುದೇ ಸೌಲಭ್ಯ ಹೊಂದಿರದ ಈ ನಾಡಿನಲ್ಲಿ ಶ್ರೀ ಮೃತ್ಯುಂಜಯಪ್ಪಗಳು ಮುರುಘಾಮಠದಲ್ಲಿ ಜ್ಞಾನ ಹಾಗೂ ಅನ್ನ ದಾಸೋಹ ನೆರವೇರಿಸಿ  ಅನೇಕರಿಗೆ ಶಿಕ್ಷಣ ನೀಡುವುದಲ್ಲದೇ ಜ್ಞಾನದ ಹಸಿವನ್ನು ನೀಗಿಸಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ ಕಾಯಕ ದಾಸೋಹದ ಮಹತ್ವದ ಅರಿವನ್ನು ನಾಡಿಗೂ ಪರಿಚಯಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದರು. 

ಸಾನ್ನಿಧ್ಯ ವಹಿಸಿದ್ದ ಫಕೀರೇಶ್ವರ ಸಂಸ್ಥಾನ ಮಠದ ಫಕೀರಸಿದ್ದರಾಮ ಸ್ವಾಮೀಜಿ ಮಾತನಾಡಿ, ಮಹಾಂತಪ್ಪಗಳು ಮಾತೃ ಹೃದಯಿಯಾಗಿದ್ದರು. ಗುರುಭಕ್ತಿ, ಲಿಂಗನಿಷ್ಠೆ, ಜಂಗಮ ದಾಸೋಹಕ್ಕೆ ಹೆಸರುವಾಸಿಯಾಗಿದ್ದರು. ಮೃತ್ಯುಂಜಯಪ್ಪಗಳದ್ದು ಅಲ್ಲಮಪ್ರಭುವಿನ ಗಾಂಭಿರ್ಯದ ನಿಲುವು. ಆದರೆ ಮಹಾಂತಪ್ಪಗಳದ್ದು ಬಸವಣ್ಣನವರಂತೆ ಸದುವಿನಯ ತುಂಬಿದ ಭಕ್ತಿ ಪಾರಮ್ಯದ ನಿಲುವಾಗಿತ್ತು ಎಂದರು. 

ಮಲ್ಲಿಕಾರ್ಜುನ ಸ್ವಾಮೀಜಿ, ಗುದೆಶ್ವರ ಸ್ವಾಮೀಜಿ, ಡಾ| ಶಂಭುಲಿಂಗ ಹೆಗಡಾಳ  ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರು, ನಾಗರಾಜ ದ್ಯಾಮನಕೊಪ್ಪ, ಡಾ| ವೀರಣ್ಣ ರಾಜೂರ, ನಾಗರಾಜ ಪಟ್ಟಣಶೆಟ್ಟಿ ಇದ್ದರು. ಡಾ| ಮಲ್ಲು ಗಾಣಗೇರ ನಿರೂಪಿಸಿ, ಸ್ವಾಗತಿಸಿದರು. ಸಮಾರಂಭದಲ್ಲಿ ದಾಸೋಹಿಗಳನ್ನು ಹಾಗೂ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.  

ಟಾಪ್ ನ್ಯೂಸ್

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.