ಇಂತಹ ಕೃತ್ಯ ಮರುಕಳಿಸದಿರಲಿ ಬೇಕು ಮಕ್ಕಳ ರಕ್ಷಣೆಗೆ ಕಾನೂನು

Team Udayavani, Sep 11, 2017, 9:06 AM IST

11-PTI-4.jpg

12 ವರ್ಷಕ್ಕಿಂತ ಕೆಳಗಿನ ಮಕ್ಕಳೇ ಹೆಚ್ಚಾಗಿ ಲೈಂಗಿಕ ಕಿರುಕುಳದ ಬಲಿಪಶು ಆಗುತ್ತಾರೆ ಎನ್ನುತ್ತದೆ  ವರದಿ. ಈ ಪ್ರಾಯದ ಹೆಣ್ಣು ಮಕ್ಕಳಷ್ಟೆ ಅಪಾಯ ಗಂಡು ಮಕ್ಕಳಿಗೂ ಇದೆ.

ಹರ್ಯಾಣದ ಗುರುಗ್ರಾಮದಲ್ಲಿರುವ ರಾಯನ್‌ ಇಂಟರ್‌ನ್ಯಾಶನಲ್‌ ಶಾಲೆಯಲ್ಲಿ ಎರಡನೇ ತರಗತಿಯ ಬಾಲಕನನ್ನು ಶಾಲೆಯ ಶೌಚಾಲಯದೊಳಗೆ ಕತ್ತು ಸೀಳಿ ಕೊಂದಿರುವ ಭೀಕರ ಕೃತ್ಯ ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳವುಂಟು ಮಾಡಿದೆ. ತಂದೆ ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ತಲುಪುವಷ್ಟರಲ್ಲಿ ಮಗನ ಸಾವಿನ ಸುದ್ದಿ ಬಂದಿದೆ. ಎಂದಿನಂತೆ ಶಾಲೆಗೆ ಬಂದ ಕೂಡಲೇ ಶೌಚಾಲಯಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದ 7 ವರ್ಷದ ಮುಗ್ಧ ಮಗುವಿಗೆ ಅಲ್ಲಿ ಸಾವು ತನಗಾಗಿ ಕಾಯುತ್ತಿದೆ ಎಂದು ತಿಳಿದಿರಲಿಲ್ಲ. ಶೌಚಾಲಯದೊಳಗೆ ಮಗುವಿನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ದುಷ್ಕರ್ಮಿ ಬಳಿಕ ಕತ್ತು ಸೀಳಿ ಹಾಕಿದ್ದಾನೆ. ಗೋಡೆ ಹಿಡಿದು ತೆವಳಿಕೊಂಡು ಹೊರಗೆ ಬರಲು ಪ್ರಯತ್ನಿಸಿ ವಿಫ‌ಲಗೊಂಡ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಇನ್ನೋರ್ವ ವಿದ್ಯಾರ್ಥಿ ನೋಡಿದ್ದಾನೆ. ಈ ಘಟನೆ ಶಾಲೆಗಳು ಮಕ್ಕಳ ಪಾಲಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ದೇಶ ವಿದೇಶಗಳಲ್ಲಿ 300ಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳನ್ನು ಹೊಂದಿರುವ ದೊಡ್ಡ ಸಂಸ್ಥೆ ರಾಯನ್‌ ಗ್ರೂಪ್‌. ಕೆಲ ಸಮಯದ ಹಿಂದೆ ದಿಲ್ಲಿಯಲ್ಲಿರುವ ಇದೇ ಸಂಸ್ಥೆಯ ಶಾಲೆಯಲ್ಲಿ 6 ವರ್ಷ ಮಗು ನೀರಿನ ಟಾಂಕಿಗೆ ಬಿದ್ದು ಮೃತಪಟ್ಟಿತ್ತು. ಇದೊಂದೇ ಅಲ್ಲ, “ಪ್ರತಿಷ್ಠಿತ’ ಹಣೆಪಟ್ಟಿ ಹಚ್ಚಿಕೊಂಡು ಪೋಷಕರಿಂದ ದುಬಾರಿ ಶುಲ್ಕ ಕೀಳುವ ಶಾಲೆಗಳಲ್ಲಿ ಭದ್ರತಾ ವ್ಯವಸ್ಥೆ ನಿರೀಕ್ಷಿತ ಮಟ್ಟದಲಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿರುತ್ತದೆ. 

ಗುರುಗ್ರಾಮ ಎಂದಲ್ಲ ಶಾಲಾ ಮಕ್ಕಳು ಲೈಂಗಿಕ, ದೈಹಿಕ ಕಿರುಕುಳಕ್ಕೆ ತುತ್ತಾಗುತ್ತಿರುವ ವರದಿಗಳು ನಿತ್ಯ ಎಂಬಂತೆ ಬರುತ್ತಿರುತ್ತದೆ. ಅಪರಿಚಿತರು ಮಾತ್ರವಲ್ಲದೆ ಪರಿಚಿತರು ಕೂಡ ಮಕ್ಕಳ ಪಾಲಿಗೆ ಶತ್ರುಗಳಾಗಿ ಪರಿಣಮಿಸುತ್ತಾರೆ. ವರ್ಲ್ಡ್ ವಿಶನ್‌ ಇಂಡಿಯಾ ಎಂಬ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಪ್ರತಿ ಮೂವರಲ್ಲಿ ಒಂದು ಮಗು ಲೈಂಗಿಕ ಕಿರುಕುಳಕ್ಕೆ ಗುರಿಯಾಗುತ್ತಿದೆ. 12 ವರ್ಷಕ್ಕಿಂತ ಕೆಳಗಿನ ಮಕ್ಕಳೇ ಹೆಚ್ಚಾಗಿ ಲೈಂಗಿಕ ಕಿರುಕುಳದ ಬಲಿಪಶುಗಳಾಗುತ್ತಾರೆ. ಈ ಪ್ರಾಯದ ಹೆಣ್ಣು ಮಕ್ಕಳಷ್ಟೆ ಅಪಾಯ ಗಂಡು ಮಕ್ಕಳಿಗೂ ಇದೆ. ಶಿಸ್ತು ಕಲಿಸಲು ಮತ್ತು ಹದ್ದುಬಸ್ತಿನಲ್ಲಿಡಲು ಮಕ್ಕಳನ್ನು ಹೊಡೆದು, ಬಡಿದು ಬೆದರಿಸುವುದು ಇಲ್ಲವೇ ಆಮಿಷಗಳನ್ನು ಒಡ್ಡುವುದು ಮಕ್ಕಳು ಸುಲಭವಾಗಿ ಕಾಮುಕರ ತುತ್ತಾಗಲು ಕಾರಣ ಎನ್ನುವುದು ಮನಶಾÏಸ್ತ್ರಜ್ಞರ ಅಭಿಪ್ರಾಯ. ಬಹುತೇಕ ಪ್ರಕರಣಗಳಲ್ಲಿ ಮಕ್ಕಳನ್ನು ಹೆದರಿಸಿ ಇಲ್ಲವೇ ಆಮಿಷಗಳನ್ನೊಡಿ ಬುಟ್ಟಿಗೆ ಹಾಕಿಕೊಳ್ಳಲಾಗುತ್ತದೆ. ಮಕ್ಕಳ ಸ್ವಭಾವದಲ್ಲಾಗುತ್ತಿರುವ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವುದರಿಂದ ಮತ್ತು ಎಲ್ಲವನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣವನ್ನು ರೂಪಿಸುವುದರಿಂದ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಪಾರು ಮಾಡಬಹುದು. ರಾಂಚಿಯಲ್ಲಿ ಎಲ್ಲ ಖಾಸಗಿ ಶಾಲೆಗಳು ಮಕ್ಕಳನ್ನು ಶೋಷಣೆಯಿಂದ ಪಾರು ಮಾಡುವ ಸಲುವಾಗಿ ವಿಶೇಷ ಕೌನ್ಸೆಲಿಂಗ್‌ ತಂಡಗಳನ್ನು ರಚಿಸಲಾಗಿದೆ. ಮಕ್ಕಳಿಗೆ ಉತ್ತಮ ಸ್ಪರ್ಷ ಯಾವುದು ಕೆಟ್ಟ ಸ್ಪರ್ಷ ಯಾವುದು ಎನ್ನುವುದನ್ನು ಕಲಿಸಿಕೊಡುತ್ತಾರೆ. ಕರ್ನಾಟಕ ಸರಕಾರ ಖಾಸಗಿ ಶಾಲೆಗಳು ಎಲ್ಲ ಸಿಬ್ಬಂದಿ ಹೆಸರು ಹಾಗೂ ವಿವರಗಳನ್ನು ಸಮೀಪದ ಪೊಲೀಸ್‌ ಠಾಣೆಗೆ ನೀಡುವುದನ್ನು ಕಡ್ಡಾಯಗೊಳಿಸಿದೆ.  1974ಲ್ಲಿ ಘೋಷಿಸಲಾದ ರಾಷ್ಟ್ರೀಯ ಶಿಶು ನೀತಿಯಲ್ಲಿ ಮಕ್ಕಳನ್ನು ದೇಶದ ಅತಿ ಅಮೂಲ್ಯ ಸೊತ್ತು ಎಂದು ಬಣ್ಣಿಸಲಾಗಿದೆ. ಆದರೆ ಈ ಸೊತ್ತನ್ನು ಸಂರಕ್ಷಿಸಲು ನಾವು ವಹಿಸುವ ಕಾಳಜಿ ಮಾತ್ರ ಅತ್ಯಲ್ಪ. 2007ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಶೋಷಣೆ ಕುರಿತು ಅಧ್ಯಯನವೊಂದನ್ನು ನಡೆಸಿ ಶಾಲೆಯಲ್ಲಿ, ಮನೆಯಲ್ಲಿ ಮತ್ತು ಸಮಾಜದಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಲು ಹಲವಾರು ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳು ಕಡತದಲ್ಲೇ ಉಳಿದಿದ್ದು, 10 ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವುದು ರಾಯನ್‌ ಶಾಲೆಯ ಪ್ರಕರಣದಿಂದ ಮತ್ತೂಮ್ಮೆ ಸಾಬೀತಾಗಿದೆ. ಇಷ್ಟೆಲ್ಲ ಆದರೂ ಶಾಲೆಗಳಲ್ಲಿ ಮಕ್ಕಳ ಸುರಕ್ಷೆಗಾಗಿ ಪ್ರತ್ಯೇಕ ಕಾನೂನು ರಚಿಸಬೇಕೆಂಬ ಅರಿವು ಮೂಡಿಲ್ಲ ಎನ್ನುವುದು ದುರಂತ.

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.