Updated at Sun,28th May, 2017 12:28AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗುರುವಿನೊಂದಿಗೇ ಇದ್ದು ಬಿಡಿ!

ಗುರುವನ್ನು, ಅತ್ಯಂತ ಚೆನ್ನಾಗಿ ಹೇಗೆ ಉಪಯೋಗಿಸುವುದು? ನೋಡಿ, ನಾವು ನಿಮಗೊಂದು ಆಟದ ಕಾರನ್ನು ಕೊಟ್ಟರೆ ಅದನ್ನು ಹೇಗೆ ಉಪಯೋಗಿಸುವುದು, ಅದನ್ನು ಹೇಗೆ ಚಲಿಸುವಂತೆ ಮಾಡುವುದು ಎಂಬುದು ನಿಮಗೆ ಗೊತ್ತು. ನಿಜವಾದ ಕಾರನ್ನು ಕೊಟ್ಟರೂ ಅದನ್ನು ಚಲಿಸಿ ಆನಂದಪಡುವುದು ನಿಮಗೆ ಗೊತ್ತು. ಆದರೆ ನಾನು ನಿಮಗೊಂದು ಬಾಹ್ಯಾಕಾಶ ನೌಕೆಯನ್ನು ಕೊಟ್ಟರೆ ನಿಮಗೆ ಅದರ ತಲೆಬುಡ ಅರ್ಥವಾಗುವುದಿಲ್ಲ. ಅಲ್ಲವೆ? ಅದರಂತೆ ಗುರುವು ನಿಮ್ಮನ್ನು ಅಸ್ತಿತ್ವದ ಈಗಿನ ಆಯಾಮದ ಹೊರಗೆ ಒಯ್ಯುವ ಒಂದು ವಾಹನದಂತೆ. ಅವನನ್ನು ನಾವು ಬಾಹ್ಯಾಕಾಶ ನೌಕೆ ಎಂದು ಕರೆಯುವ. ನಿಮಗೆ ಅದರ ಉಪಯೋಗದ ರೀತಿ ಗೊತ್ತಿಲ್ಲ. ಅದನ್ನು ನಿರ್ವಹಿಸುವ ವಿಧಾನವೂ ಗೊತ್ತಿಲ್ಲ. ಬೇರೆ ಆಯಾಮಕ್ಕೆ ನಿಮ್ಮನ್ನು ಒಯ್ಯುವ ವಾಹನವನ್ನು ನಿರ್ವಹಿಸುವ ರೀತಿ ನಿಮಗೆ ಗೊತ್ತಿಲ್ಲ. ಆದ್ದರಿಂದ ಅದನ್ನು ಉಪಯೋಗಿಸುವುದಕ್ಕೆ ಪ್ರಯತ್ನಿಸಬೇಡಿ, ಅದರ ಸಂಗಡ ಇರುವುದನ್ನು ಕಲಿಯಿರಿ. ಬಾಹ್ಯಾಕಾಶ ನೌಕೆಯ ವಲಯದೊಳಗೆ ಇರುವುದನ್ನು ನೀವು ಕಲಿತರೆ ಅದು ಎಲ್ಲಿಗೆ ಹೋದರೂ ನಿಮ್ಮನ್ನು ಅಲ್ಲಿಗೆ ಒಯ್ಯುತ್ತದೆ. ಅಲ್ಲವೆ? ಆದ್ದರಿಂದ ಗುರುವಿನೊಂದಿಗೆ ಇರಿ. ಅವನನ್ನು ಉಪಯೋಗಿಸಬೇಡಿ. ಹಾಗೆ ಮಾಡಿದರೆ ಅದೊಂದು ದೊಡ್ಡ ಪ್ರಮಾದವಾಗುತ್ತದೆ. ಶತಮಾನಗಳಿಂದಲೂ ಗುರುವನ್ನು ಉಪಯೋಗಿಸುವ ಈ ಗುರುತರ ಪ್ರಮಾದವನ್ನು ಲಕ್ಷಗಟ್ಟಲೆ ಸಾಧಕರು ಮಾಡುತ್ತಲೇ ಬಂದಿದ್ದಾರೆ.

ನಾನು ಕೇದಾರದಿಂದ ಹಿಂತಿರುಗಿ ಬರುತ್ತಿದ್ದಾಗ ಒಬ್ಬ ಮುಗ್ಧ ಯುವಕನನ್ನು ಭೇಟಿಯಾದೆ. ಅವನು ತನ್ನ ಗುರುವಿನೊಂದಿಗೆ ಎಂಟು ವರ್ಷಗಳು ಇದ್ದ. ಆದರೆ ಅವನು ಯಾವ ಸಾಧನೆಯನ್ನೂ ಮಾಡಲಾಗಲಿಲ್ಲ. ಅವನು ಹೇಳಿದ್ದ ನಾನು ಸುಮ್ಮನೆ ಅವರ ಸೇವೆ ಮಾಡುತ್ತಾ ಕಾಯುತ್ತಿದ್ದೇನೆ. ಅವರು ಸಾಧನೆಯನ್ನು ಹೇಳಿಕೊಟ್ಟಾಗ ಮಾಡುತ್ತೇನೆ. ಈಗ ನಾನು ಅವರೊಂದಿಗೆ ಇದ್ದೇನೆ. ಅವರು ಹೇಳಿದ್ದನ್ನು ಮಾಡುತ್ತೇನೆ. ಅಡಿಗೆ ಮಾಡುತ್ತೇನೆ, ಕಸ ಗುಡಿಸುತ್ತೇನೆ, ಮನೆ ಸ್ವಚ್ಚ ಮಾಡುತ್ತೇನೆ ಮತ್ತು ಕಾಯುತ್ತೇನೆ. ಅವನಿಗೆ ಖಂಡಿತ ಜಾnನದ ಅರಿವಾಗುತ್ತದೆ. ಅದರಲ್ಲಿ ಸಂಶಯವಿಲ್ಲ. ಈ ರೀತಿ ಇದ್ದ ವ್ಯಕ್ತಿ ನಿಜವಾಗಿಯೂ ಬುದ್ಧಿವಂತ, ಮೂರ್ಖನಲ್ಲ.
 


More News of your Interest

Trending videos

Back to Top