ಪದೇ ಪದೇ ಭುಜದ ಕೀಲುಗಳು ಜಾರುವುದು


Team Udayavani, Feb 19, 2017, 3:45 AM IST

Key-hole-surgery.jpg

ಹಿಂದಿನ ವಾರದಿಂದ –  2) ಶಸ್ತ್ರಚಿಕಿತ್ಸೆ: ಹೆಚ್ಚಿನ ಯುವ ರೋಗಿಗಳು ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿರುವವರು ತಮ್ಮ ಭುಜಗಳನ್ನು ಸ್ಥಿರಗೊಳಿಸಲು ಅಥವಾ ಭುಜಗಳಿಗೆ ಸಾಮರ್ಥ್ಯ ತುಂಬಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುವುದು.  ಹೆಚ್ಚಾಗಿ ಅನುಸರಿಸುವ ಶಸ್ತ್ರಚಿಕಿತ್ಸಾ ಕ್ರಮಗಳು ಅಂದರೆ:
 
1. ಆಥ್ರೋìಸ್ಕೋಪಿಕ್‌ 
ಬ್ಯಾಂಕಾರ್ಟ್‌ ರಿಪ್ಯಾರ್‌ 
(ಕೀ-ಹೋಲ್‌ ಶಸ್ತ್ರಚಿಕಿತ್ಸೆ) 

ಮೂರು ಸಣ್ಣ ರಂಧ್ರಗಳ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. ಬ್ಯಾಂಕಾರ್ಟ್‌ ರಿಪ್ಯಾರ್‌ನಲ್ಲಿ ಕಳಚಿಕೊಂಡ ಕ್ಯಾಪುÕಲೋ-ಲ್ಯಾಬ್ರಲ್‌ ಭಾಗವನ್ನು ಗ್ಲೆನಾಯ್ಡಗೆ ಜೋಡಿಸುತ್ತಾರೆ. ಅದೇ ಸಮಯದಲ್ಲಿ ಕ್ಯಾಪುÕಲಾರ್‌ ಶಿಫ್ಟ್ (ಸಡಿಲ ಕ್ಯಾಪುÕಲ್‌ ಅನ್ನು ಬಿಗಿಗೊಳಿಸುವುದು) ಪ್ರಕ್ರಿಯೆಯನ್ನು ನಡೆಸುವುದೂ ಸಹ ಸಾಧ್ಯವಿದೆ. ಆಥ್ರೋìಸ್ಕೋಪಿಕ್‌ ತಂತ್ರಜಾnನದ ಪ್ರಯೋಜನ ಅಂದರೆ ಅದರ ಕಡಿಮೆ ಛೇದನಕಾರಿ ಸ್ವರೂಪ. ಇದರಿಂದಾಗಿ ಶಸ್ತ್ರಚಿಕಿತ್ಸೆಯ ತೊಂದರೆ ಮತ್ತು ಆಸ್ಪತ್ರೆವಾಸದ ಅವಧಿಯೂ ಕಡಿಮೆ. ಇಷ್ಟು ಮಾತ್ರ ಅಲ್ಲದೆ ಈ ಶಸ್ತ್ರಚಿಕಿತ್ಸೆಯಲ್ಲಿ ಭುಜದ ಕೀಲುಗಳನ್ನು ಸಂಪೂರ್ಣವಾಗಿ ನೋಡಬಹುದು ಮತ್ತು ಈ ಮೂಲಕ ಜಾರುವಿಕೆಗೆ ಕಾರಣ ಆಗಬಹುದಾದ ಇನ್ನಿತರ ಕಾರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು. 

2. ತೆರೆದ  ಬ್ಯಾಂಕಾರ್ಟ್‌ ರಿಪ್ಯಾರ್‌
ತೆರೆದ ಶಸ್ತ್ರಚಿಕಿತ್ಸೆಯ ಮೂಲಕ ಬ್ಯಾಂಕಾರ್ಟ್‌ ರಿಪ್ಯಾರ್‌ ಮತ್ತು ಕ್ಯಾಪುÕಲಾರ್‌ ಶಿಫ್ಟ್ ಪ್ರಕ್ರಿಯೆಗಳನ್ನೂ ಸಹ ನಡೆಸಬಹುದು, ಇಲ್ಲಿ ಭುಜದ ಮುಂಭಾಗದಲ್ಲಿ 3 -5 ಸೆಂ .ಮೀ ಉದ್ದದ ಒಂದು ಛೇದನ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಕೊನೆಯ ಹಂತದಲ್ಲಿ ಸರಿಪಡಿಸಬೇಕಿರುವ ಸಬ್‌-ಕ್ಯಾಪ್ಯುಲರಿ ಸ್ನಾಯುವಿನ ಉದ್ದಕ್ಕೂ ಛೇದನವನ್ನು ಮಾಡುತ್ತಾರೆ. 

3. ಮೂಳೆಗಳ ಶಸ್ತ್ರಚಿಕಿತ್ಸೆ  
(Bony operations)

ವಿಶೇಷವಾಗಿ ಮೂಳೆ ನಷ್ಟವಾಗಿರುವ ಪ್ರಕರಣಗಳಲ್ಲಿ ಅಥವಾ ವಿಶೇಷ ಹಿಲ್‌- ಸ್ಯಾಶಸ್‌ ಹಾನಿಯ ಪ್ರಕರಣಗಳಲ್ಲಿ ಬ್ಯಾಂಕರ್ಟ್‌ ರಿಪ್ಯಾರ್‌ ಒಂದನ್ನೇ ಮಾಡಿದರೆ ಅದು ಸಂಪೂರ್ಣ ಪ್ರಯೋಜನಕಾರಿ ಆಗದು. ಇಂತಹ ಸಂದರ್ಭದಲ್ಲಿ ಬ್ರಿಸ್ಟೋ-ಲತರ್ಜೆಟ್‌ ಪ್ರಕ್ರಿಯೆಯನ್ನು ( ಗ್ಲೆನಾಯ್ಡ ವೈಕಲ್ಯಕ್ಕೆ ಕಾರ್ಕಾಯ್ಡ ಪ್ರಕ್ರಿಯೆಯನ್ನು ವರ್ಗಾಯಿಸುವುದು) ಅಥವಾ ಹಿಲ್‌- ಸ್ಯಾಶಸ್‌ ಹಾನಿಗೆ ಮೂಳೆ ಕಸಿಯ ಪ್ರಕ್ರಿಯೆಯನ್ನು ನಡೆಸಬೇಕಾಗುವುದು. ಈ ಪ್ರಕ್ರಿಯೆಗಳಿಗೆ ತೆರೆದ ಶಸ್ತ್ರಚಿಕಿತ್ಸೆ ಆವಶ್ಯಕ. 

ಶಸ್ತ್ರಚಿಕಿತ್ಸಾ ನಂತರದ ಕ್ರಮಗಳು
ಆಥ್ರೋìಸ್ಕೋಪಿಕ್‌ ಬ್ಯಾಂಕಾರ್ಟ್‌ ರಿಪ್ಯಾರ್‌ ಸಂದರ್ಭದಲ್ಲಿ ರೋಗಿಯು ಶಸ್ತ್ರಚಿಕಿತ್ಸೆಯಾದ ದಿನವೇ ಅಥವಾ ಮಾರನೆಯ ದಿನ ಆಸ್ಪತ್ರೆಯನ್ನು ಬಿಡಬಹುದು. ತೆರೆದ ಶಸ್ತ್ರಚಿಕಿತ್ಸೆ ಆಗಿದ್ದರೆ ಶಸ್ತ್ರಚಿಕಿತ್ಸೆ ಆದ 2-3 ದಿನಗಳ ಅನಂತರ ಆಸ್ಪತ್ರೆಯನ್ನು ಬಿಡಬಹುದು. ಭುಜವನ್ನು ಚಲನರಹಿತಗೊಳಿಸಬೇಕು. ದಬ್ಬೆಯ ಮೂಲಕ ತೋಳನ್ನು ಮೇಲೆ, ಕೆಳಗೆ ಮತ್ತು ಅತ್ತಿತ್ತ ಆಡದಂತೆ  ಚಲನರಹಿತ ಸ್ಥಿತಿಯಲ್ಲಿ ಇರಿಸಬೇಕು. ಶಸ್ತ್ರಚಿಕಿತ್ಸೆಯ ವಿವಿಧ ಮತ್ತು ಸರಿಪಡಿಸುವಿಕೆಯಿಂದ ಗಳಿಸಿದ ಸಾಮರ್ಥ್ಯವನ್ನು ಅವಲಂಬಿಸಿಕೊಂಡು 3-6 ವಾರಗಳ ವರೆಗೆ ತೋಳನ್ನು ದಬ್ಬೆಯ ಮೂಲಕ ಚಲನರಹಿತ ಸ್ಥಿತಿಯಲ್ಲಿ ಇರಿಸಬೇಕಾಗುವುದು. ಶಸ್ತ್ರಚಿಕಿತ್ಸೆ ಆದ 2-3 ವಾರಗಳ ಅನಂತರ ಪೆಂಡ್ಯುಲಮ್‌ ವ್ಯಾಯಾಮವನ್ನು ಅರಂಭಿಸುತ್ತಾರೆ. ಶಸ್ತ್ರಚಿಕಿತ್ಸೆಯಾದ 6 ವಾರಗಳ ಅನಂತರ ಸಂಪೂರ್ಣ ರೀತಿಯ ಚಲನೆಯ ವ್ಯಾಯಾಮ ಮತ್ತು ಭುಜಕ್ಕೆ ಸಾಮರ್ಥ್ಯವನ್ನು ಕೊಡುವ ವ್ಯಾಯಾಮವನ್ನು ಆರಂಭಿಸಲಾಗುವುದು. 

ಒಬ್ಬ ವ್ಯಕ್ತಿಯು ಯಾವಾಗ 
ತನ್ನ ದೈನಂದಿನ ಚಟುವಟಿಕೆ 
ಮತ್ತು ಕ್ರೀಡಾ ಚಟುವಟಿಕೆಗಳಿಗೆ 
ಮರಳಬಹುದು?

ಶಸ್ತ್ರಚಿಕಿತ್ಸೆಯಾದ ಅನಂತರ ಯಾವುದೇ ವ್ಯಕ್ತಿಯು ಶಸ್ತ್ರಚಿಕಿತ್ಸಾ ಪೂರ್ವ ಸ್ಥಿತಿಯನ್ನು ಗಳಿಸಲು ಅಥವಾ ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಲು ಒಟ್ಟಾರೆ 2-3 ತಿಂಗಳುಗಳ ಸಮಯ ಬೇಕಾಗುತ್ತದೆ. ಕ್ರೀಡಾಳುಗಳಿಗೆ ಅವರು ನಿರ್ವಹಿಸುವ ಮತ್ತು ಭಾಗವ ಹಿಸುವ ಕ್ರೀಡೆಗಳನ್ನು ಮತ್ತು ಸ್ಪರ್ಧಾ ಮಟ್ಟವನ್ನು ಅವಲಂಬಿಸಿಕೊಂಡು ತಮ್ಮ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು 3-4 ತಿಂಗಳು ಮತ್ತು ಅದಕ್ಕಿಂತಲೂ ಹೆಚ್ಚು ಸಮಯ ಬೇಕಾಗಬಹುದು. 

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.