ಔಷಧ ಚೋದಿತ ಮೂತ್ರಪಿಂಡ ಕಾಯಿಲೆಗಳು


Team Udayavani, Apr 16, 2017, 3:10 PM IST

kidney-diseases-16.jpg

ಹಿರಿಯರಲ್ಲಿ ಔಷಧ ಚೋದಿತ ಮೂತ್ರಪಿಂಡಗಳ ನಂಜೇರುವಿಕೆಯ ಸಂಭಾವ್ಯತೆ ಶೇ.66ರಷ್ಟು ಪ್ರಮಾಣದಲ್ಲಿರುತ್ತದೆ. ಹಿರಿಯರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು ಇತ್ಯಾದಿ ಕಾಯಿಲೆಗಳಿಗೆ ತುತ್ತಾಗಿರುವ ಸಾಧ್ಯತೆಗಳು ಹೆಚ್ಚಿದ್ದು, ಹೀಗಾಗಿ ಅವರು ಅನೇಕ ಬಗೆಯ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಅನಿವಾರ್ಯವಾಗಿರುವುದೇ ಇದಕ್ಕೆ ಕಾರಣ. 

ಮೂತ್ರಪಿಂಡಗಳಲ್ಲಿ ನಂಜೇರುವಿಕೆಗೆ ಕಾರಣವಾಗುವ ಬಹುತೇಕ ಔಷಧಗಳು ಒಂದಕ್ಕಿಂತ ಹೆಚ್ಚು ರೋಗಶಾಸ್ತ್ರೀಯ ಕಾರ್ಯವ್ಯವಸ್ಥೆಯ ಮೂಲಕ ನಂಜೇರುವಿಕೆಯ ಪರಿಣಾಮಗಳನ್ನು ಉಂಟು ಮಾಡುತ್ತವೆ. ಮೂತ್ರಪಿಂಡದ ಶೋಧಿಸುವಿಕೆಯ ಸಾಮರ್ಥ್ಯದಲ್ಲಿ ಬದಲಾವಣೆ (ಇಂಟ್ರಾಗ್ಲಾಮರುಲಾರ್‌ ಹೀಮೊಡೈನಾಮಿಕ್ಸ್‌), ಟ್ಯೂಬ್ಯುಲಾರ್‌ ಸೆಲ್‌ಗ‌ಳಲ್ಲಿ ನಂಜೇರುವಿಕೆ (ಟ್ಯೂಬ್ಯುಲಾರ್‌ ಸೆಲ್‌ ಟಾಕ್ಸಿಸಿಟಿ), ಉರಿಯೂತ, ಹರಳುಗಳಿಂದ ಮೂತ್ರಪಿಂಡದ ಸೂಕ್ಷ್ಮ ಭಾಗಗಳಿಗೆ ಗಾಯವುಂಟಾಗುವುದು (ಕ್ರಿಸ್ಟಲ್‌ ನೆಫೊÅಪತಿ), ಸ್ನಾಯುಗಳು ಹಾನಿಗೀಡಾಗಿ ಮೂತ್ರಪಿಂಡಗಳಿಗೆ ಹಾನಿಕರವಾದ ಪ್ರೊಟೀನ್‌ಗಳನ್ನು ಸ್ರವಿಸುವುದು (ರಾಬೊxಮೇಯೋಲಿಸಿಸ್‌) ಮತ್ತು ಮೂತ್ರಪಿಂಡಗಳ ಸೂಕ್ಷ್ಮ ರಕ್ತನಾಳಗಳಲ್ಲಿ ತಡೆ ಉಂಟಾಗುವುದು (ತ್ರೊಂಬೊಟಿಕ್‌ ಮೈಕ್ರೊಆ್ಯಂಜಿಯೊಪಥಿ) ಇವುಗಳಲ್ಲಿ ಕೆಲವು. ದುರದೃಷ್ಟವಶಾತ್‌, ಮೂತ್ರಪಿಂಡಗಳಲ್ಲಿ ನಂಜೇರುವಿಕೆಗೆ ಕಾರಣವಾಗಬಲ್ಲ ಅನೇಕ ಅಂಶಗಳು, ಔಷಧಗಳು ಇಂದು ಜನಸಾಮಾನ್ಯರಿಗೆ ಔಷಧ ಅಂಗಡಿಗಳಲ್ಲಿ ನೇರವಾಗಿ ಲಭ್ಯವಾಗುತ್ತಿವೆ. ಔಷಧ ಅಂಗಡಿಗಳು ಮತ್ತು ಯಾವುದೇ ಫ‌ುಡ್‌ ಸ್ಟೋರ್‌ಗಳಲ್ಲಿ ಲಭ್ಯವಾಗುವ ಗಿಡಮೂಲಿಕೆ ಔಷಧಿಗಳು, ನೈಸರ್ಗಿಕ ಎಂದು ಹೇಳಿಕೊಳ್ಳುವ ಔಷಧ ಅಥವಾ ಆಹಾರ ಸಾಮಗ್ರಿಗಳು, ಅನೇಕ ಪೌಷ್ಟಿಕಾಂಶ ಪೂರಕ ಆಹಾರಗಳು ಮೂತ್ರಪಿಂಡಗಳ ನಂಜೇರುವಿಕೆಗೂ ಕಾರಣವಾಗಬಲ್ಲವು. ಇದಕ್ಕಿಂತಲೂ ಅಪಾಯಕಾರಿಯಾದದ್ದೇನೆಂದರೆ, ವಿವಿಧ ಉತ್ಪನ್ನಗಳಲ್ಲಿ ಇರಬಹುದಾದ ಆದರೆ, ಲೇಬಲ್‌ಗ‌ಳಲ್ಲಿ ನಮೂದಾಗಿರದ ಕಲಬೆರಕೆಗಳು ಮತ್ತು ರಾಸಾಯನಿಕ ಅಂಶಗಳು ಇನ್ನಷ್ಟು ಹಾನಿ ಉಂಟು ಮಾಡಬಲ್ಲವು.

ಮೂತ್ರಪಿಂಡಗಳ ಮೇಲೆ ಔಷಧಗಳಿಂದ ಉಂಟಾಗುವ ದುಷ್ಪರಿಣಾಮಗಳು ಕೆಲವು ರೋಗಿಗಳು ಮತ್ತು ನಿರ್ದಿಷ್ಟ ವೈದ್ಯಕೀಯ ಸನ್ನಿವೇಶಗಳಲ್ಲಿ ಬಹು ಸಾಮಾನ್ಯವಾಗಿರುತ್ತವೆ. ಜೀವಕೋಶಗಳ ದ್ರವಾಂಶ ನಷ್ಟ (ಎಕ್ಸ್‌ಟ್ರಾ ಸೆಲ್ಯುಲಾರ್‌ ವಾಲ್ಯೂಮ್‌ ಡೆಪ್ಲಿಶನ್‌), ಸೋಂಕಿಗೆ ಅತಿ ಪ್ರತಿಕ್ರಿಯೆ (ಸೆಪ್ಸಿಸ್‌), ಮೂತ್ರಪಿಂಡಗಳ ವೈಕಲ್ಯ, ಹೃದ್ರೋಗಗಳು, ಮಧುಮೇಹ ಅಥವಾ ರೇಡಿಯೊ ಕಾಂಟ್ರಾಸ್ಟ್‌ ಏಜೆಂಟ್‌ಗಳಿಗೆ ಈ ಮುನ್ನ ತೆರೆದುಕೊಂಡ ಮಕ್ಕಳು ಅಥವಾ ಶಿಶುಗಳು ಔಷಧ ಚೋದಿತ ಮೂತ್ರಪಿಂಡಗಳ ನಂಜೇರುವಿಕೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಮೂತ್ರಪಿಂಡಗಳು ದೇಹದ್ರವಗಳನ್ನು ಶೋಧಿಸುವ ಗ್ಲಾಮರುಲಾರ್‌ ಫಿಲೆóàಶನ್‌ ರೇಟ್‌ (ಜಿಎಫ್ಆರ್‌) ಕಡಿಮೆ ಇರುವ ರೋಗಿಗಳು, ಹೃದ್ರೋಗಗಳು, ಸೋಂಕುಗಳಿಗೆ ಅತಿ ಪ್ರತಿಕ್ರಿಯೆ ಮತ್ತು ದೇಹದ್ರವ ನಷ್ಟವಾಗುವಂತಹ ಅನಾರೋಗ್ಯ ಹೊಂದಿರುವವರು ಔಷಧಗಳಿಂದ ಮೂತ್ರಪಿಂಡಗಳ ನಂಜೇರುವಿಕೆಗೆ ತುತ್ತಾಗುವ ಸಾಧ್ಯತೆ ಅತಿ ಹೆಚ್ಚಿರುತ್ತದೆ. 

ಮೂತ್ರಪಿಂಡಗಳ ನಂಜೇರುವಿಕೆಗೆ ಕಾರಣವಾಗುವ ಸಾಮಾನ್ಯ ಔಷಧಗಳು ಮತ್ತು ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡುವ ಪ್ರಕ್ರಿಯೆ: 

ಮೂತ್ರಪಿಂಡಗಳ ನಂಜೇರುವಿಕೆಗೆ ಕಾರಣವಾಗಬಲ್ಲ ಔಷಧಗಳ ಪಟ್ಟಿ ಉದ್ದವಾಗಿದೆ. ಅವುಗಳಲ್ಲಿ ಸಾಮಾನ್ಯವಾದವುಗಳೆಂದರೆ:
-ಅನಾಲೆjಸಿಕ್ಸ್‌
-ಖನ್ನತೆ ಪರಿಹಾರಕ ಔಷಧಿಗಳು ಅಥವಾ ಚಿತ್ತ ಸ್ಥಿರಕಾರಿ ಔಷಧಿಗಳು
-ಆ್ಯಂಟಿ ಹಿಸ್ಟಾಮಿನ್‌ಗಳು
-ಆ್ಯಂಟಿ ಮೈಕ್ರೊಬಿಯಲ್‌ಗ‌ಳು
-ಆ್ಯಂಟಿರಿಟ್ರೊವೈರಲ್‌ಗ‌ಳು
-ಬೆಂಝೊಡಯಾಝಪೈನ್‌ಗಳು
-ಕ್ಯಾಲ್ಸಿನ್ಯೂರಿನ್‌ ಇನ್‌ಹಿಬಿಟರ್‌ಗಳು
-ಕಾರ್ಡಿಯೊವಾಸ್ಕಾಲಾರ್‌ ಏಜೆಂಟ್‌ಗಳು
-ಕೀಮೋಥೆರಾಪ್ಯುಟಿಕ್‌ಗಳು
-ಡಿಯೂರಿಟಿಕ್‌ಗಳು
-ಮಾದಕ ದ್ರವ್ಯಗಳು

ಅಮೈನೊಗ್ಲೆ„ಕೊಸೈಡ್‌ ಆ್ಯಂಟಿಬಯಾಟಿಕ್‌ಗಳು, ಸ್ಟಿರಾಯ್ಡ ರಹಿತ ಉರಿಯೂತ ತಡೆ ಔಷಧಿಗಳು (ಎನ್‌ಎಸ್‌ಎಐಡಿಗಳು), ಕಾಂಟ್ರಾಸ್ಟ್‌ ಏಜೆಂಟ್‌ಗಳು ಮತ್ತು ಆ್ಯಂಜಿಯೊಟೆನ್ಶನ್‌ ಕನ್‌ವರ್ಟಿಂಗ್‌ ಎನ್‌ಝೈಮ್‌ ಇನ್‌ಹಿಬಿಟರ್‌ಗಳು (ಎಸಿಇಐಗಳು) ರೋಗಿಗಳಲ್ಲಿ ಮೂತ್ರಪಿಂಡಗಳ ಕ್ಷಿಪ್ರ ಹಾನಿ ಉಂಟು ಮಾಡುವ ಸಾಮಾನ್ಯ ಔಷಧಿಗಳಾಗಿವೆ.  ಮಧುಮೇಹ ಮತ್ತು ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆಗಳ ಸಂದರ್ಭದಲ್ಲಿ ಕಾಂಟ್ರಾಸ್ಟ್‌ ಏಜೆಂಟ್‌ (ಎಕ್ಸ್‌ಡೇ, ಸ್ಕ್ಯಾನ್‌ನಂತಹ ದೇಹದ ಒಳದರ್ಶನವನ್ನು ಸ್ಪಷ್ಟವಾಗಿಸಲು ಬಳಸುವ ಜೆಲ್‌ನಂತಹ ಲೇಪನ ಔಷಧಗಳು) ಗಳಿಂದ ಉಂಟಾಗುವ ಮೂತ್ರಪಿಂಡ ನಂಜೇರುವಿಕೆಯ ಅಪಾಯ ಅತಿ ಹೆಚ್ಚಾಗಿದೆ. 

ಆ್ಯಂಪಿಸಿಲಿನ್‌, ಸಿಪ್ರೊಫ್ಲೊಕ್ಸಾಸಿನ್‌, ಸಲೊ#ನಾಮೈಡ್‌ಗಳು, ಆ್ಯಸಿಕ್ಲೊವಿರ್‌, ಗಾನ್ಸಿಕ್ಲೊವಿರ್‌, ಮೆಥೊಟ್ರೆಕ್ಸೇಟ್‌ ಮತ್ತು ಟ್ರಯಮ¤ರೀನ್‌ನಂತಹ ಔಷಧಗಳು ಮೂತ್ರಪಿಂಡಗಳ ಸೂಕ್ಷ್ಮ ಅವಯವಗಳಲ್ಲಿ ಹರಳುಗಟ್ಟುವ ಕ್ರಿಸ್ಟಲ್‌ ನೆಫೊÅಪತಿಗೆ ಕಾರಣವಾಗುತ್ತವೆ. ಯೂರಿಕ್‌ ಆ್ಯಸಿಡ್‌ ಹಾಗೂ ಕ್ಯಾಲ್ಸಿಯಂ ಪಾಸೆ#àಟ್‌ ಹರಳುಗಳು ಉಂಟಾಗುವ ಮೂಲಕ ಕೀಮೋಥೆರಪಿಯೂ ಕ್ರಿಸ್ಟಲ್‌ ನೆಫೊÅಪತಿಗೆ ಕಾರಣವಾಗುತ್ತದೆ. ಸ್ಟಾಟಿನ್‌ಗಳು ಮತ್ತು ಮದ್ಯಪಾನವೂ ಸ್ನಾಯುಗಳ ಜೀವಕೋಶ (ಮ್ಯೊಸೈಟ್‌)ಗಳ ಮೇಲೆ ವಿಷಕಾರಿ ಪರಿಣಾಮ ಬೀರುವ ಮೂಲಕ ರಾಬೊxಮೇಯೋಲಿಸಿಸ್‌ ಉಂಟು ಮಾಡಬಲ್ಲುದು. ಸೈಕ್ಲೊನ್ಪೊರಿನ್‌, ಮಿಟೊಮೈಸಿನ್‌ – ಸಿ ಮತ್ತು ಕ್ವಿನಾೖನ್‌ನಂತಹ ಆ್ಯಂಟಿಪ್ಲೇಟ್‌ಲೆಟ್‌ ಏಜೆಂಟ್‌ ಔಷಧಿಗಳು ತ್ರೊಂಬೊಟಿಕ್‌ ಮೈಕ್ರೊಆ್ಯಂಜಿಯೊಪತಿಗೆ ಕಾರಣವಾಗುತ್ತವೆ. 

ಟ್ಯೂಬ್ಯುಲಾರ್‌ ಸೆಲ್‌ ನಂಜೇರುವಿಕೆ ಮತ್ತು ಅಕ್ಯೂಟ್‌ ಇಂಟರ್‌ಸ್ಟೀಶಿಯಲ್‌ ನೆಫೊÅಪತಿಗೆ ಕಾರಣವಾಗುವ ಔಷಧಿಗಳಲ್ಲಿ ಅಮಿನೊಗ್ಲೆ„ಕೊಸೈಡ್‌ಗಳು, ಆ್ಯಂಫೊಟೆರಿಸಿನ್‌ಬಿ, ಸಿಸ್ಪಾ$Éಟಿನ್‌, ಬೆಟಾ ಲಾಕ್ಟಾಮ್ಸ್‌, ಕ್ವಿನೊಲೋನ್ಸ್‌, ರಿಫಾಂಪಿನ್‌, ಸಲೊ#ನಮೈಡ್‌ಗಳು, ವಾಂಕೊಮೈಸಿನ್‌, ಅಸಿಕ್ಲೊವಿರ್‌ ಮತ್ತು ಕಾಂಟ್ರಾಸ್ಟ್‌ ಏಜೆಂಟ್‌ಗಳು ಸೇರಿವೆ. ಈ ಏಜೆಂಟ್‌ಗಳು ಮೈಟೊಕಾಂಡ್ರಿಯಾ ಕಾರ್ಯವ್ಯವಸ್ಥೆಗೆ ಅಡೆತಡೆ ಒಡ್ಡುವ ಮೂಲಕ ಮತ್ತು ಟ್ಯೂಬ್ಯುಲಾರ್‌ ಜೀವಕೋಶಗಳಲ್ಲಿ ಜೀವದ್ರವ ಚಲನೆಯನ್ನು ವ್ಯತ್ಯಯಗೊಳಿಸುವ ಮೂಲಕ ಹಾಗೂ ವಿಷಾಂಶ ಮತ್ತು ಫ್ರೀ ರ್ಯಾಡಿಕಲ್‌ಗ‌ಳ ಒತ್ತಡ ವೃದ್ಧಿಗೆ ಕಾರಣವಾಗಿ ಮೂತ್ರಪಿಂಡಗಳಲ್ಲಿರುವ ಟ್ಯೂಬ್ಯುಲಾರ್‌ ಜೀವಕೋಶಗಳಿಗೆ ಗಾಯ, ಹಾನಿ ಉಂಟು ಮಾಡುತ್ತವೆ. ಆಸಿಟಾಮಿನೊಫಿನ್‌, ಆಸ್ಪಿರಿನ್‌, ಡಿಯೂರಿಟಿಕ್ಸ್‌ ಮತ್ತು ಲಿಥಿಯಮ್‌ಗಳ ದೀರ್ಘ‌ಕಾಲಿಕ ಬಳಕೆಯಿಂದ ಫೈಬೊÅಸಿಸ್‌ ಮತ್ತು ಮೂತ್ರಪಿಂಡದ ಸೂಕ್ಷ್ಮ ಅವಯವಗಳಲ್ಲಿ ಗಾಯ ಉಂಟಾಗಿ ದೀರ್ಘ‌ಕಾಲಿಕ ಇಂಟರ್‌ಸ್ಟೀಶಿಯಲ್‌ ನೆಫ್ರೈಟಿಸ್‌ ತಲೆದೋರಬಲ್ಲುದು. 

ಔಷಧಿ ಚೋದಿತ ಮೂತ್ರಪಿಂಡ ಕಾಯಿಲೆಗಳು ತಲೆದೋರಿರುವ ರೋಗಿಗಳು ಮೂತ್ರದಲ್ಲಿ ಅತಿ ಕಡಿಮೆ ಯೂರಿಯಾ ಬಿಡುಗಡೆಯಾಗುವ ಕ್ಷಿಪ್ರ ಸಮಸ್ಯೆ (ಅಲಿಗೂರಿಕ್‌ ಎಆರ್‌ಎಫ್), ರಕ್ತದಲ್ಲಿ ಅತಿ ಕಡಿಮೆ ಪೊಟ್ಯಾಸಿಯಂ ಇರುವ ಹೈಪೊಕಲೆಮಿಯಾ, ಸೋಡಿಯಂ ಮತ್ತು ದ್ರವಾಂಶ ತ್ಯಜಿಸದೆ ಉಳಿದು ಕೊಂಡಿರುವಿಕೆ, ಅಧಿಕ ರಕ್ತದೊತ್ತಡ, ಮೂತ್ರದಲ್ಲಿ ಅಧಿಕ ಪ್ರೊಟೀನ್‌ ವಿಸರ್ಜನೆ, ಜ್ವರ, ಚರ್ಮದಲ್ಲಿ ದದ್ದುಗಳೇಳುವಿಕೆ, ಇಸ್ನೊಫೀಲಿಯಾ ಇತ್ಯಾದಿ ಚಿಹ್ನೆಗಳನ್ನು ಹೊಂದಿರುತ್ತಾರೆ. 

ವೈದ್ಯರು ವಯಸ್ಕರಿಗೆ ಕಾಕ್‌ಕ್ರಾಫ್ಟ್ – ಗಾಲ್ಟ್ ಫಾರ್ಮುಲಾ ಅಥವಾ ಮಕ್ಕಳಿಗೆ ಶ್ವಾಸ್‌ ಫಾರ್ಮುಲಾ ಅನ್ವಯ ಔಷಧಿಯ ಪ್ರಮಾಣಗಳನ್ನು ನಿರ್ಧರಿಸಬೇಕು. ಅಲ್ಲದೆ, ವೈದ್ಯರು ಯಾವುದೇ ಹೊಸ ಔಷಧಿಯನ್ನು ಶಿಫಾರಸು ಮಾಡುವಾಗ ರೋಗಿಯ ಆಹಾರಾ ಭ್ಯಾಸದಲ್ಲಿ ಆಗಿರುವ ಬದಲಾವಣೆ
ಗಳನ್ನು ಗಮನಕ್ಕೆ ತೆಗೆದುಕೊಂಡು ಮೂತ್ರಪಿಂಡ ಕಾರ್ಯನಿರ್ವ ಹಣೆಯನ್ನು ವಿಶ್ಲೇಷಿಸಬೇಕು ಹಾಗೂ  ರೋಗಿಯ ಮೂತ್ರಪಿಂಡಗಳ ಸ್ಥಿತಿಗತಿಯನ್ನು ಪರಿಗಣಿಸಬೇಕು. 

ಪತ್ತೆ ಮತ್ತು ಕ್ಷಿಪ್ರ ಮಧ್ಯಪ್ರವೇಶ
ಬಹುತೇಕ ಔಷಧಿ ಚೋದಿತ ಮೂತ್ರಪಿಂಡ ವೈಕಲ್ಯ ಪ್ರಕರಣಗಳನ್ನು ಸರಿಪಡಿಸಬಹುದಾಗಿದೆ. ವೈಕಲ್ಯವನ್ನು ಕ್ಷಿಪ್ರವಾಗಿ ಗುರುತಿಸಿ, ಅದಕ್ಕೆ ಕಾರಣವಾದ ಔಷಧಿಗಳನ್ನು ಸ್ಥಗಿತಗೊಳಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆ ಸುಸ್ಥಿತಿಗೆ ಮರಳುತ್ತದೆ. 

ಯಾವುದೇ ಔಷಧಿ ಸೇವನೆ ಆರಂಭವಾದ ಬಳಿಕ ಸೀರಮ್‌ ಕ್ರಿಯಾಟಿನಿನ್‌ ಪ್ರಮಾಣ ಹೆಚ್ಚಿರುವುದು ಕಂಡುಬಂದು ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿ ಕುಸಿತ ಉಂಟಾಗಿರುವುದು ಸ್ಪಷ್ಟಪಟ್ಟರೆ ಔಷಧಿ ಚೋದಿತ ಮೂತ್ರಪಿಂಡ ಹಾನಿಯ ಸಂಭಾವ್ಯತೆ ಎದ್ದುಕಾಣುತ್ತದೆ. 

ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ವೈಫ‌ಲ್ಯ ಅಥವಾ ಕುಸಿತದ ಲಕ್ಷಣಗಳು ಕಂಡುಬಂದ ಕೂಡಲೇ ರೋಗಿಯು ಸೇವಿಸುತ್ತಿರುವ ಔಷಧಿಗಳಲ್ಲಿ ದುಷ್ಪರಿಣಾಮ ಬೀರುವ ಅಂಶಗಳು ಇವೆಯೇ ಎಂಬುದನ್ನು ಪರಿಶೀಲಿಸಬೇಕು. ಅನೇಕ ಔಷಧಿಗಳಿದ್ದು, ಇತ್ತೀಚೆಗಿನವರೆಗೆ ರೋಗಿಯ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವಾದರೆ, ಇತ್ತೀಚೆಗೆ ಸೇರ್ಪಡೆಯಾದ ಔಷಧಿಯಲ್ಲಿ ದುಷ್ಪರಿಣಾಮ ಬೀರಬಲ್ಲ ಅಂಶಗಳು ಇರುವ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಆ ಬಳಿಕ ರಕ್ತದೊತ್ತಡವನ್ನು ನಿಭಾಯಿಸುವುದು, ದೇಹದಲ್ಲಿ ಸೂಕ್ತ ಪ್ರಮಾಣದ ದ್ರವಾಂಶ ಇರುವಂತೆ ನೋಡಿಕೊಳ್ಳುವುದು ಮತ್ತು ತಾತ್ಕಾಲಿಕವಾಗಿ ಎಲ್ಲ ಸಂಭಾವ್ಯ ಮೂತ್ರಪಿಂಡ ನಂಜುಕಾರಿಗಳನ್ನು ಸ್ಥಗಿತಗೊಳಿಸುವ ಮೂಲಕ ಮೂತ್ರಪಿಂಡಗಳಿಗೆ ಇನ್ನಷ್ಟು ಹಾನಿ ಉಂಟಾಗುವುದನ್ನು ತಡೆಯುವತ್ತ ದೃಷ್ಟಿ ಹರಿಸಬೇಕು. 

ಮೂತ್ರಪಿಂಡಗಳು ನಮ್ಮ ದೇಹದ ಅತ್ಯಮೂಲ್ಯವಾದ ಅಂಗ. ಯಾವುದೇ ಔಷಧಿಯನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಜತೆಗೆ ಸಮಾಲೋಚಿಸಿ!

ಔಷಧಗಳ ಮಿತಿಮೀರಿದ ಬಳಕೆ ಮತ್ತು ಔಷಧಗಳು ಅದರಲ್ಲೂ ವಿಶೇಷವಾಗಿ ಸ್ಟಿರಾಯ್ಡ ರಹಿತ ಉರಿಯೂತ ತಡೆ ಔಷಧಿಗಳು (ಎನ್‌ಎಸ್‌ಎಐಡಿಗಳು) ಮತ್ತು ಆ್ಯಂಟಿ ಬಯಾಟಿಕ್‌ನಂತಹ ಔಷಧಗಳು ವೈದ್ಯರ ಶಿಫಾರಸು ಇಲ್ಲದೆ ಔಷಧ ಅಂಗಡಿಗಳಲ್ಲಿ ನೇರವಾಗಿ ಲಭ್ಯವಾಗುತ್ತಿರುವುದರಿಂದ ಔಷಧಗಳಿಂದ ಉಂಟಾಗುವ ಮೂತ್ರಪಿಂಡಗಳ ನಂಜೇರುವಿಕೆಯ ಪ್ರಕರಣಗಳು ಹೆಚ್ಚುತ್ತಿವೆ. 

ಈ ಪರಿಸ್ಥಿತಿಯು ಅಪಾಯಕಾರಿಯಾಗಿ ಪರಿಣಮಿಸಬಹುದು ಹಾಗೂ ಆಸ್ಪತ್ರೆಗೆ ದಾಖಲಿಸುವುದರ ಸಹಿತ ಬಹುವಿಧ ಚಿಕಿತ್ಸೆಗಳು ಇದನ್ನು ಪರಿಹರಿಸಲು ಅಗತ್ಯವಾಗಬಹುದು.

ಪರಿಚಯ
ಔಷಧಗಳಿಂದ ಉಂಟಾಗುವ ನೆಫೊÅಟಾಕ್ಸಿಸಿಟಿ ಅಥವಾ ಮೂತ್ರಪಿಂಡಗಳಲ್ಲಿ ನಂಜೇರುವಿಕೆ ಒಂದು ಅತಿ ಸಾಮಾನ್ಯ ಪರಿಸ್ಥಿತಿಯಾಗಿದ್ದು, ಮೂತ್ರಪಿಂಡಗಳ ಮೇಲೆ ಅನೇಕ ಅನಪೇಕ್ಷಣೀಯ ರೋಗಶಾಸ್ತ್ರೀಯ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅಪಾಯಕಾರಿ ಔಷಧಗಳ ನೇರ ಅಥವಾ ಪರೋಕ್ಷ ಪರಿಣಾಮವಾಗಿ ಉಂಟಾದ ಮೂತ್ರಪಿಂಡ ಕಾಯಿಲೆಗಳು ಎಂದು ಇದನ್ನು ವ್ಯಾಖ್ಯಾನಿಸುತ್ತಾರೆ. 

ಮುನ್ನೆಚ್ಚರಿಕೆ ಕ್ರಮಗಳು
ಶಿಫಾರಸು ಮಾಡಲಾದ ಔಷಧಿಗಳ ಸುರಕ್ಷಿತತೆಯನ್ನು ಖಾತರಿಪಡಿಸಿಕೊಳ್ಳುವುದು, ಅವುಗಳ ಸಂಭಾವ್ಯ ಮೂತ್ರಪಿಂಡ ನಂಜು ಪರಿಣಾಮಗಳ ಬಗ್ಗೆ ನಿಗಾ ವಹಿಸುವುದು ಮತ್ತು ರೋಗಿಯ ಮೂತ್ರಪಿಂಡ ನಂಜೇರುವಿಕೆಯ ಅಪಾಯಾಂಶಗಳನ್ನು ಸರಿಪಡಿಸುವುದು ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸೇರಿವೆ. 

-ಔಷಧೀಯ ಚಿಕಿತ್ಸೆಯನ್ನು ಆರಂಭಿಸುವುದಕ್ಕೆ ಮುನ್ನ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು, ಅಂದರೆ ನಿರ್ಜಲೀಕರಣ ಆಗಿರಬಾರದು. ಸಾಧ್ಯವಿದ್ದಾಗಲೆಲ್ಲ ಮೂತ್ರಪಿಂಡ ನಂಜುಕಾರಕ ಔಷಧಗಳ ಬಳಕೆಯನ್ನು ತಡೆಯಬೇಕು. 

-ಮೂತ್ರಪಿಂಡ ನಂಜುಕಾರಿ ಏಜೆಂಟ್‌ಗಳ ಬಳಕೆಯನ್ನು ಆರಂಭಿಸುವುದಕ್ಕೆ ಮುನ್ನ ಇಂಟ್ರಾವಾಸ್ಕಾಲಾರ್‌ ಡಿಪ್ಲೆಶನ್‌ ಅನ್ನು ಸಮರ್ಪಕಗೊಳಿಸಿ ಮೂತ್ರಪಿಂಡಗಳಲ್ಲಿ ದ್ರವಾಂಶಗಳ ಚಲನೆ ಮತ್ತು ಶೋಧಿಸುವಿಕೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. 

-ಸಾಧ್ಯವಿದ್ದಾಗಲೆಲ್ಲ ಔಷಧಿಗಳನ್ನು ಬಾಯಿಯ ಮೂಲಕವೇ ನೀಡಬೇಕು ಹಾಗೂ ಅತಿ ಕಡಿಮೆ ಪರಿಣಾಮಕಾರಿ ಡೋಸೇಜ್‌ ಅಥವಾ ಪ್ರಮಾಣವನ್ನು ಸಾಧ್ಯವಿದ್ದಷ್ಟು ಕಡಿಮೆ ಅವಧಿಯ ಚಿಕಿತ್ಸೆಯಾಗಿ ನೀಡಬೇಕು. 

-ಔಷಧಿಯ ಪ್ರಮಾಣವು ಶಿಫಾರಸು ಮಾಡಲಾದ ಚಿಕಿತ್ಸಾ ವಲಯದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. 

-ದೀರ್ಘ‌ಕಾಲಿಕ ನೋವು ಹೊಂದಿರುವ ರೋಗಿಗಳಿಗೆ ಅಸಿಟಾಮಿನೋಫಿನ್‌ನಂತಹ ಅತಿ ಕಡಿಮೆ ಪ್ರೊಸ್ಟಾಗ್ಲಾಂಡಿನ್‌ ಕ್ರಿಯಾತ್ಮಕತೆ ಹೊಂದಿರುವ ಕಡಿಮೆ ನಂಜುಕಾರಿ ಅನಾಲೆjಸಿಕ್‌ ಔಷಧಿಗಳನ್ನು ನೀಡಬೇಕು ಮತ್ತು ಚಿಕಿತ್ಸೆಯನ್ನು ಸಾಧ್ಯವಿದ್ದಷ್ಟು ಕಡಿಮೆ ಅವಧಿಗೆ ಸೀಮಿತಗೊಳಿಸಬೇಕು. 

-ಮೂತ್ರಪಿಂಡ ನಂಜೇರುವಿಕೆಯ ಲಕ್ಷಣ ಕಂಡುಬಂದ ಕೂಡಲೇ ಮೂತ್ರಪಿಂಡ ನಂಜುಕಾರಿ ಔಷಧಿಯ ಬಳಕೆಯನ್ನು ಸ್ಥಗಿತಗೊಳಿಸಿ ಅಥವಾ ಪ್ರಮಾಣವನ್ನು ತಗ್ಗಿಸಿ. ಔಷಧಿ ಚಿಕಿತ್ಸೆಯ ಸಂದರ್ಭದಲ್ಲಿ ಮೂತ್ರಪಿಂಡಗಳ ಕಾರ್ಯಚಟುವಟಿಕೆ ಮತ್ತು ದೇಹದ್ರವದಲ್ಲಿ ಔಷಧಿಯ ಸಾಂದ್ರತೆಯ ಬಗ್ಗೆ ನಿಗಾ ವಹಿಸಬೇಕು. 

-ಈಗಾಗಲೇ ಮೂತ್ರಪಿಂಡಗಳ ಅನಾರೋಗ್ಯ, ಅಸಮರ್ಪಕ ಕಾರ್ಯನಿರ್ವಹಣೆ, ಹೃದಯ ವೈಫ‌ಲ್ಯ ಅಥವಾ ಮಧುಮೇಹ ಹೊಂದಿರುವ ರೋಗಿಗಳಿಗೆ ಕಡಿಮೆ ಓಸೊ¾ಲಾರ್‌ ಕಾಂಟ್ರಾಸ್ಟ್‌ ಏಜೆಂಟ್‌ ಅನ್ನು ಅತಿ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು. 

-ಸಾದಾ ಸಲೈನ್‌ ಅಥವಾ ಸೋಡಿಯಂ ಬೈಕಾಬೊìನೇಟ್‌ ಒದಗಣೆಯ ಮೂಲಕ ದೇಹದಲ್ಲಿ ದ್ರವಾಂಶ ಪ್ರಮಾಣ ಸಾಕಷ್ಟು ಇರುವಂತೆ ನೋಡಿಕೊಳ್ಳಬೇಕು. 

– ಡಾ| ಸುಶಾಂತ್‌ ಕುಮಾರ್‌,   
ಕನ್ಸಲ್ಟಂಟ್‌ ನೆಫ್ರಾಲಜಿಸ್ಟ್‌ ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

8

Measles: ದಡಾರ

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.