ಬ್ರಾಂಕಯಲ್‌ ಆಸ್ತಮಾ


Team Udayavani, Jun 11, 2017, 3:16 PM IST

Asthma-Inhaler-vs.jpg

– ಹಿಂದಿನ ವಾರದಿಂದ 18. ಇನ್‌ಹೇಲರ್‌ ಉಪಯೋಗಿಸುವ ವಿವಿಧ ಹಂತಗಳು ಯಾವುವು?
ಎಂಡಿಐ:
ಉಪಯೋಗಿಸುವುದು ಹೀಗೆ:
– ಇನ್‌ಹೇಲರ್‌ನ ಮುಚ್ಚಳ ತೆರೆದು ಚೆನ್ನಾಗಿ ಕುಲುಕಿ. 
– ಎದ್ದು ನಿಂತು ಉಸಿರು ಹೊರಗೆ ಬಿಡಿ. 
– ಇನ್‌ಹೇಲರ್‌ನ ಬಾಯ್ತುದಿಯನ್ನು ನಿಮ್ಮ ಬಾಯಿಯೊಳಗೆ ಇರಿಸಿಕೊಳ್ಳಿ. 
– ನಿಧಾನವಾಗಿ ಉಸಿರು ಎಳೆದುಕೊಳ್ಳಿ. 
– ಉಸಿರು ಒಳತೆಗೆದುಕೊಳ್ಳಲು ಆರಂಭಿಸಿದಾಗ ಇನ್‌ಹೇಲರ್‌ನ ಮೇಲ್ಭಾಗವನ್ನು ಅದುಮಿ ಉಸಿರು ಹಿಡಿದು ತೆಗೆದುಕೊಳ್ಳುವುದನ್ನು ಮುಂದುವರಿಸಿ.
– ಬಾಯಿಯನ್ನು ಮುಚ್ಚಿ 10 ಸೆಕೆಂಡುಗಳ ಕಾಲ ಉಸಿರು ತಡೆ ಹಿಡಿಯಿರಿ 
– ಈಗ ಉಸಿರು ಹೊರಬಿಡಿ. ಈ ಹಂತಗಳನ್ನು ಸರಿಯಾಗಿ ಸಂಯೋಜಿಸಿ ಅನುಸರಿಸಲಾರದವರಿಗಾಗಿ ಸ್ಪೇಸರ್‌ ಉಪಯೋಗಿಸಲಾಗುತ್ತದೆ. 

ಡಿಪಿಐ: 
ಈ ಇನ್‌ಹೇಲರ್‌ ಬಳಸುವಾಗ ನೀವು ನಿಮ್ಮ ಉಸಿರಾಟವನ್ನು ಮತ್ತು ಇನ್‌ಹೇಲರ್‌ನ ಮೇಲ್ಭಾಗ ಒತ್ತಿ ಹಿಡಿಯುವುದನ್ನು ಸಂಯೋಜಿಸಿ ಅನುಸರಿಸಬೇಕಾಗಿಲ್ಲ. ಏಕೆಂದರೆ, ಇದರಲ್ಲಿ ನೀವು ಆಳವಾಗಿ, ವೇಗವಾಗಿ ಉಸಿರು ತೆಗೆದುಕೊಂಡಾಗ ಇದರಲ್ಲಿ ಔಷಧಿ ಬಿಡುಗಡೆಯಾಗುತ್ತದೆ. ಇದು ಕೆಲವರಿಗೆ ಸುಲಭವಾಗುತ್ತದೆಯಾದರೂ ಇನ್ನು ಕೆಲವರಿಗೆ ಕಷ್ಟವಾಗಿ ಕಾಣಬಹುದು. ಮೀಟರ್‌ಡ್‌ -ಡೋಸ್‌ ಇನ್‌ಹೇಲರ್‌ಗಳಲ್ಲಿಯಾದರೆ, ನೀವು ಮೊದಲು ಉಸಿರನ್ನು ಪೂರ್ಣವಾಗಿ ಹೊರಬಿಟ್ಟು ಇನ್‌ಹೇಲರನ್ನು ಬಾಯೊಳಗಿಟ್ಟು ಆಮೇಲೆ ಉಸಿರು ಹೊರಬಿಡಬೇಕಾಗುತ್ತದೆ. 

ನಿಮ್ಮ ಲಕ್ಷಣಗಳನ್ನು ಆಧರಿಸಿ ವೈದ್ಯರು ಯಾವುದೇ ಒಂದು ವಿಧದ ಇನ್‌ಹೇಲರನ್ನು ನಿಮಗೆ ಶಿಫಾರಸು ಮಾಡುತ್ತಾರೆ ಮತ್ತು ಯಾವುದು ನಿಮಗೆ ಹೆಚ್ಚು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಇನ್‌ಹೇಲರನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ವೈದ್ಯರು ಅಥವಾ ಕರ್ತವ್ಯದಲ್ಲಿರುವ ದಾದಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಚೆಕ್‌- ಅಪ್‌ ಸಂದರ್ಭದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ನಿಮ್ಮ ಆಸ್ತಮಾ ನಿಯಂತ್ರಣಕ್ಕೆ ಬಾರದೆ ಇರುವ ಸಂದರ್ಭದಲ್ಲಿ ನೀವು ಇನ್‌ಹೇಲರನ್ನು ಸರಿಯಾಗಿ ಉಪಯೋಗಿಸುವಿರೋ ಎಂಬುದನ್ನು ಅವರು ಪರೀಕ್ಷಿಸಬಹುದು. 

19. ನೆಬ್ಯುಲೈಸರ್‌ ಉಪಯೋಗಿಸ ಬೇಕಾಗುತ್ತದೆಯೇ?
ಸಮರ್ಪಕವಾಗಿ ಸಂಯೋಜನೆಗೊಂಡ ಇನ್‌ಹೇಲರ್‌ ಚಿಕಿತ್ಸೆಯು ನೆಬ್ಯುಲೈಸೇಶನ್‌ ಚಿಕಿತ್ಸೆಯಷ್ಟೇ ಪರಿಣಾಮಕಾರಿಯಾಗುವುದನ್ನು ಅಧ್ಯಯನಗಳು ಶ್ರುತಪಡಿಸಿವೆ. ಅಲ್ಲದೆ, ನೆಬ್ಯುಲೈಸರ್‌ಗಳು ಎಲ್ಲ ಕಾಲದಲ್ಲೂ ಜತೆಗಿರಿಸಿಕೊಳ್ಳಬಹುದಾದ, ಎಲ್ಲೆಡೆಗೂ ಒಯ್ಯಬಹುದಾದ ಸಣ್ಣ ಉಪಕರಣಗಳಲ್ಲ; ಅವುಗಳಿಗೆ ಸತತ ವಿದ್ಯುತ್‌ ಸಂಪರ್ಕ ಬೇಕು, ಆರ್ಥಿಕವಾಗಿಯೂ ಮಿತವ್ಯಯಿಯಲ್ಲ. ಎಂಡಿಐ ಮತ್ತು ಡಿಪಿಐಗಳು ಉಪಯೋಗಿಸಲು ಸುಲಭ, ಸಣ್ಣ ಸಾಧನಗಳು ಮತ್ತು ಶುದ್ಧತೆಯನ್ನು ಕಾಪಾಡಿಕೊಳ್ಳಲು ಸುಲಭ. 

20. ನಿಮ್ಮಷ್ಟಕ್ಕೆ ನೀವೇ ಮಾಡಿಕೊಳ್ಳಬಹುದಾದದ್ದು
– ನಿಮ್ಮ ಆಸ್ತಮಾ ಸಮಸ್ಯೆಯ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ತಿಳಿದುಕೊಂಡಿರುವುದು
– ನಿಮ್ಮಲ್ಲಿ ಆಸ್ತಮಾ ಲಕ್ಷಣಗಳನ್ನು ಪ್ರಚೋದಿಸುವ ಅಂಶಗಳ ಬಗ್ಗೆ ತಿಳಿದಿರುವುದು
– ನಿಮ್ಮ ಔಷಧಿಗಳನ್ನು ನಿಯ ಮಿತವಾಗಿ ತೆಗೆದುಕೊಳ್ಳುವುದು ಮತ್ತು ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದು.
– ನಿಮ್ಮ ಆಸ್ತಮಾ ಲಕ್ಷಣಗಳ ಮೇಲೆ ನಿಯಂತ್ರಣ ಸಾಧಿಸಲು ಆದಷ್ಟು ಕ್ಷಿಪ್ರವಾಗಿ ಕಾರ್ಯತತ್ಪರರಾಗುವುದು. 

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.