ಬಾಯಿಯ ಆರೋಗ್ಯ,ಸಾಮಾನ್ಯ ದೇಹಾರೋಗ್ಯಗಳ ನಡುವಣ ಸಂಬಂಧ


Team Udayavani, May 13, 2018, 6:00 AM IST

Mouth-health,.jpg

ಬಾಯಿ ಮತ್ತು ದೇಹ ಒಂದರಲ್ಲೊಂದು ಹಾಸುಹೊಕ್ಕಾಗಿ ಇರುವಂಥವುಗಳು. ಬಾಯಿಯ ಕಳಪೆ ಆರೋಗ್ಯವು – ಅಸಮರ್ಪಕ ಜಗಿಯುವಿಕೆ ಮತ್ತು ಅಸಮರ್ಪಕ ತಿನ್ನುವ ಸಾಮರ್ಥ್ಯಗಳಿಂದಾಗಿ ದೇಹಕ್ಕೆ ಪೌಷ್ಟಿಕಾಂಶ ಪೂರೈಕೆಯ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲದೆ ನೋವಿನ ಅನುಭವ, ಆಗಿರುವ ನಷ್ಟದ ಬಗ್ಗೆ ಮುಜುಗರ, ಬಣ್ಣಗೆಟ್ಟ ಅಥವಾ ಹಾನಿಗೀಡಾದ ಹಲ್ಲುಗಳಿಂದಾಗಿ ವ್ಯಕ್ತಿಯ ದೈನಿಕ ಜೀವನ, ಆತ್ಮವಿಶ್ವಾಸ ಮತ್ತು ಒಟ್ಟಾರೆ ಸೌಖ್ಯದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುವುದು ಅಥವಾ ಹಲ್ಲಿನ ಮೇಲೆ ಲೋಳೆಯ ನಿಕ್ಷೇಪಕ್ಕೆ ಪ್ರತಿಕ್ರಿಯೆಯಾಗಿ ಹಲ್ಲುಗಳ ಪೂರಕ ಜೀವಕೋಶಗಳು (ಹಲ್ಲುಗಳನ್ನು ಅವುಗಳ ಸ್ಥಾನದಲ್ಲಿ ಹಿಡಿದಿರಿಸುವ ವಸಡು ಎಲುಬುಗಳು) ವ್ಯಕ್ತಪಡಿಸುವ ಊತ ಪ್ರಕ್ರಿಯೆಗಳೇ ಪರಿದಂತ ಕಾಯಿಲೆಗಳು. ಹೃದ್ರೋಗಗಳು, ಮಧುಮೇಹ, ಪ್ರತಿಕೂಲ ಪ್ರಸೂತಿ ಫ‌ಲಿತಾಂಶ ಮತ್ತು ಆಸ್ಟಿಯೊಪೊರೊಸಿಸ್‌ನಂತಹ ದೇಹವ್ಯವಸ್ಥೆಗೆ ಸಂಬಂಧಿಸಿದ ಅನೇಕ ಸ್ಥಿತಿಗಳ ಜತೆಗೆ ಪರಿದಂತ ಕಾಯಿಲೆಗಳು ನಿಕಟ ಸಂಬಂಧ ಹೊಂದಿವೆ. 

ವಸಡಿನಲ್ಲಿ ಉರಿಯೂತವನ್ನು ಉಂಟು ಮಾಡುವ ಬ್ಯಾಕ್ಟೀರಿಯಾವು ರಕ್ತ ಪರಿಚಲನೆಯ ಜತೆಗೆ ಸೇರಿಕೊಂಡು ಭ್ರೂಣವನ್ನು ತೊಂದರೆಗೀಡು ಮಾಡ ಬಲ್ಲದು, ಇದು ಅವಧಿಪೂರ್ವ ಪ್ರಸವ ಮತ್ತು ಜನನ ಕಾಲದಲ್ಲಿ ಶಿಶು ಕಡಿಮೆ ತೂಕ ಹೊಂದಿರುವುದಕ್ಕೆ ಕಾರಣವಾಗುವುದು ಸಂಭಾವ್ಯ. 

ಇನ್‌ಫೆಕ್ಟಿವ್‌ ಎಂಡೊಕಾಡೈìಟಿಸ್‌ನಂತಹ ಹೃದ್ರೋಗಗಳನ್ನು ಹೊಂದಿರುವ ರೋಗಿಗಳ ಅಪಧಮನಿಗಳ ಒಳಭಿತ್ತಿಯಲ್ಲಿ ನಿಕ್ಷೇಪಗೊಳ್ಳುವ ಸಾಮರ್ಥ್ಯವನ್ನು ಪರಿದಂತೀಯ ಸೂಕ್ಷ್ಮಜೀವಿಗಳು ಹೊಂದಿವೆ. ಬಾಯಿಯ ಬ್ಯಾಕ್ಟೀರಿಯಾಗಳು ರಕ್ತ ಪ್ರವಾಹವನ್ನು ಪ್ರವೇಶಿಸುವ ಹಾಗೂ ಹಾನಿಗೀಡಾದ ಹೃದಯದ ಕವಾಟಗಳ ಒಳಭಿತ್ತಿಯಲ್ಲಿ ನಿಕ್ಷೇಪಗೊಳ್ಳುವ ಅಪಾಯ, ವಿಶೇಷವಾಗಿ ದಂತಚಿಕಿತ್ಸಾ ಪ್ರಕ್ರಿಯೆಗಳನ್ನು ನಡೆಸುವಾಗ, ಹೆಚ್ಚಾಗಿದೆ. ಆದರೆ, ಹೃದಯ ಕವಾಟಗಳಲ್ಲಿ ಪರಿದಂತೀಯ ಸೂಕ್ಷ್ಮಜೀವಿಗಳಿಂದ ನೇರ ಸೋಂಕು ಉಂಟಾಗುವ ಸಾಧ್ಯತೆಗಳು ಅಥವಾ ಪರಿದಂತೀಯ ಉರಿಯೂತ ಪೂರಕ ಸ್ಥಿತಿಯು ದೇಹದ ಇತರ ಭಾಗಗಳಲ್ಲಿ ಊತವನ್ನು ಉಂಟುಮಾಡುವುದರ ನಡುವೆ ವ್ಯತ್ಯಾಸವನ್ನು ಕಂಡುಕೊಳ್ಳಲು ಹಾಲಿ ಸಂಶೋಧನೆಗಳು ಸಾಕಷ್ಟು ಮಾಹಿತಿಯನ್ನು ಒದಗಿಸುವುದಿಲ್ಲ.

ಗರ್ಭಿಣಿ ಮಹಿಳೆಯರಲ್ಲಿ ವಸಡಿನ ಕಾಯಿಲೆಗಳು ಇರುವುದು ಹಾಗೂ ಕಡಿಮೆ ದೇಹ ತೂಕ ಹೊಂದಿರುವ ಶಿಶುವಿನ ಅವಧಿಪೂರ್ವ ಜನನದ ನಡುವೆ ಸಂಭಾವ್ಯ ಸಂಬಂಧದ ಬಗ್ಗೆ ಸಾಕಷ್ಟು ಸಂಶೋಧನಾತ್ಮಕ ಸಾಕ್ಷ್ಯಗಳು ಲಭ್ಯವಾಗುತ್ತಿವೆ. ವಸಡಿನಲ್ಲಿ ಉರಿಯೂತವನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳು ರಕ್ತಪ್ರವಾಹದಲ್ಲಿ ಸೇರಿಕೊಂಡು ಭ್ರೂಣದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿ ಅವಧಿಪೂರ್ವ ಪ್ರಸವ ಹಾಗೂ ಶಿಶುವಿನ ಕಡಿಮೆ ಜನನ ಕಾಲದ ದೇಹತೂಕಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಇದಲ್ಲದೆ, ಬಾಯಿಯ ಒಳಭಾಗದಲ್ಲಿರುವ ಸೂಕ್ಷ್ಮಜೀವಿಗಳು ಶ್ವಾಸಾಂಗವನ್ನೂ ಸೇರಿಕೊಂಡು ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದಾಗಿದೆ; ಆದರೆ ಈ ವಿಚಾರವನ್ನು ನಿಶ್ಶಂಕಾಸ್ಪದವಾಗಿ ಶ್ರುತಪಡಿಸಲು ಇನ್ನಷ್ಟು ಸಂಶೋಧನೆಯ ಅಗತ್ಯವಿದೆ.

ಮಧುಮೇಹ ಮತ್ತು ಪೆರಿಯೊಡೋಂಟೈಟಿಸ್‌ ಕಾಯಿಲೆಗಳು ಪರಸ್ಪರ ದ್ವಿಮುಖ ಸಂಬಂಧ ಹೊಂದಿರುವುದನ್ನು ಸಮರ್ಥಿಸುವ ಸಂಶೋಧನಾತ್ಮಕ ಸಾಕ್ಷ್ಯಗಳು ಲಭ್ಯವಾಗುತ್ತಿವೆ. ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣ ಅಸಮರ್ಪಕ ಸ್ಥಿತಿಯಲ್ಲಿರುವ ರೋಗಿಗಳು ಪರಿದಂತೀಯ ಕಾಯಿಲೆಗಳಿಗೆ ಪದೇಪದೇ ಮತ್ತು ಹೆಚ್ಚು ತೀವ್ರವಾಗಿ ಒಳಗಾಗುವ ಸಾಧ್ಯತೆಗಳು ಹೆಚ್ಚು; ಅಲ್ಲದೆ ಅಂತಹ ರೋಗಿಗಳು ಮಧುಮೇಹ ನಿಯಂತ್ರಣದಲ್ಲಿರುವ ರೋಗಿಗಳಿಗಿಂತ ಹೆಚ್ಚು ಕ್ಷಿಪ್ರವಾಗಿ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ, ಮಧುಮೇಹ ರೋಗಿಗಳಲ್ಲಿ ಪರಿದಂತೀಯ ಜೀವಕೋಶಗಳ ದೀರ್ಘ‌ಕಾಲಿಕ ಊತವು ಇನ್ಸುಲಿನ್‌ ಪ್ರತಿರೋಧ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಇದರಿಂದಾಗಿ ರೋಗಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿಕೊಳ್ಳುವುದು ಕಷ್ಟವಾಗುತ್ತದೆ. ಮಧುಮೇಹವು ವಸಡಿನ ಕಾಯಿಲೆಗಳು, ಹಲ್ಲುಕುಳಿಗಳು, ಹಲ್ಲು ನಷ್ಟ, ಬಾಯಿ ಒಣಗುವಿಕೆ ಮತ್ತು ಇತರ ಅನೇಕ ಬಾಯಿಯ ಸೋಂಕುಗಳು ಉಂಟಾಗುವ ಅಪಾಯವನ್ನು ಮಧುಮೇಹ ಹೆಚ್ಚಿಸುತ್ತದೆ. ಓರಲ್‌ ಕ್ಯಾಂಡಿಡಯಾಸಿಸ್‌ ಎಂಬ ಬಾಯಿಯ ಶಿಲೀಂಧ್ರ ಸೋಂಕು ಮಧುಮೇಹ ಹೊಂದಿರುವ ಅದರಲ್ಲೂ ಕೃತಕ ದಂತಪಂಕ್ತಿಗಳನ್ನು ಅಳವಡಿಸಿಕೊಂಡಿರುವ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯು ಅಧಿಕವಾಗಿ ಕಂಡುಬರುತ್ತದೆ. ಇದು ಬಿಳಿ (ಅಥವಾ ಕೆಲವೊಮ್ಮೆ ಕೆಂಪು) ಕಲೆಗಳನ್ನು ಬಾಯಿಯಲ್ಲಿ ಉಂಟು ಮಾಡುತ್ತದೆ, ಇವು ಹುಣ್ಣಾಗಿ, ವ್ರಣವಾಗಿ ನಾಲಗೆಯಲ್ಲಿ ನೋವು, ಉರಿಗೆ ಕಾರಣವಾಗುತ್ತವೆ. ಬಾಯಿಯಲ್ಲಿ ಜೊಲ್ಲಿನ ಸ್ರಾವ ಕುಂಠಿತವಾಗುವುದು ಮತ್ತು ಜೊಲ್ಲಿನಲ್ಲಿ ಗುÉಕೋಸ್‌ ಪ್ರಮಾಣ ಹೆಚ್ಚುವುದು ಗುಳ್ಳೆಯಂತಹ ಶಿಲೀಂಧ್ರ ಸೋಂಕಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ. 
 
ಇಡಿಯ ದೇಹಕ್ಕೆ ಬಾಯಿ ಒಂದರ್ಥದಲ್ಲಿ ಕಿಟಕಿ ಇದ್ದಂತೆ; ಪೌಷ್ಟಿಕಾಂಶ ಕೊರತೆಯಂತಹ ಸಾಮಾನ್ಯ ದೇಹಾರೋಗ್ಯ ಸಮಸ್ಯೆಗಳ ಬಗ್ಗೆ ಚಿಹ್ನೆಗಳನ್ನು ಒದಗಿಸುತ್ತದೆ, ಬಾಯಿಯ ಹಾನಿಗಳು ಎಚ್‌ಐವಿ ಸೋಂಕಿನ ಮೊದಲ ಚಿಹ್ನೆಗಳಾಗಿರಬಹುದು, ಆಪೊ¤ಸ್‌ ಹುಣ್ಣುಗಳು ಕೆಲವೊಮ್ಮೆ ಜಠರ/ ಕರುಳಿನ ಕಾಯಿಲೆಗಳ ಹೊರಚಿಹ್ನೆಗಳಾಗಿರುತ್ತವೆ, ಬಣ್ಣಗೆಟ್ಟ ಮತ್ತು ರಕ್ತಸ್ರಾವ ಸಹಿತ ವಸಡುಗಳು ಸಾಂದರ್ಭಿಕವಾಗಿ ರಕ್ತದಲ್ಲಿ ಇರುವ ಸಮಸ್ಯೆಗಳ ಸಂಕೇತವಾಗಿರುತ್ತವೆ ಹಾಗೂ ಕೆಳ ದವಡೆಯಲ್ಲಿ ಎಲುಬು ನಷ್ಟವು ಸ್ಕೆಲೆಟಲ್‌ ಆಸ್ಟಿಯೊಪೊರೊಸಿಸ್‌ನ ಪ್ರಾಥಮಿಕ ಚಿಹ್ನೆಯಾಗಿರಬಲ್ಲುದು. ದೇಹದಲ್ಲಿ ಉಪಸ್ಥಿತವಿರುವ ಅನೇಕ ದ್ರವ್ಯಗಳನ್ನು (ಉದಾಹರಣೆಗೆ, ಆಲ್ಕೊಹಾಲ್‌, ನಿಕೊಟಿನ್‌, ಅಫೀಮು, ಮಾದಕ ವಸ್ತುಗಳು, ಹಾರ್ಮೋನುಗಳು, ಪಾರಿಸರಿಕ ವಿಷಕಾರಿಗಳು, ಆ್ಯಂಟಿಬಾಡಿಗಳು) ಜೊಲ್ಲಿನಲ್ಲಿ ಕಂಡುಕೊಳ್ಳಬಹುದು. ಇದಲ್ಲದೆ, ಡಿಕಂಜೆಸ್ಟೆಂಟ್‌ಗಳು, ಆ್ಯಂಟಿಹಿಸ್ಟಾಮಿನ್‌ಗಳು, ನೋವು ನಿವಾರಕಗಳು, ಡಿಯೂರೆಟಿಕ್‌ಗಳು ಮತ್ತು ಆ್ಯಂಟಿಡಿಪ್ರಸೆಂಟ್‌ಗಳು ಜೊಲ್ಲಿನ ಸ್ರಾವವನ್ನು ಕುಂಠಿತಗೊಳಿಸಬಹುದಾಗಿವೆ. 

ಬಾಯಿಯ ಆರೋಗ್ಯವು ಸಾಮಾನ್ಯ ಆರೋಗ್ಯ ಮತ್ತು ಒಟ್ಟು ದೈಹಿಕ ಕ್ಷೇಮಕ್ಕೆ ಅತಿ ಪ್ರಾಮುಖ್ಯವಾಗಿದೆ. ಸಂಪೂರ್ಣ ಆರೋಗ್ಯವನ್ನು ಸಾಧಿಸಬೇಕೆಂದಾದರೆ ಬಾಯಿಯ ಆರೋಗ್ಯ ಅತಿ ಮುಖ್ಯ; ಅದನ್ನು ಪ್ರತ್ಯೇಕ, ದೂರದ ಅಥವಾ ನಗಣ್ಯ ಎಂದು ಪರಿಗಣಿಸಕೂಡದು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಊಟಗಳ ನಡುವೆ ಕಡಿಮೆ ಸಕ್ಕರೆಯಂಶ ಇರುವ ಸಮತೋಲಿತ ಆಹಾರ ಸೇವನೆ, ನಿಯಮಿತವಾಗಿ ದಂತವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಧೂಮಪಾನದಂತಹ ಇನ್ನಿತರ ಅಪಾಯಕಾರಕಗಳನ್ನು ವರ್ಜಿಸುವ ಸರಳ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಕಾರ್ಯವಿಧಾನಗಳಿಂದ ನಮ್ಮನ್ನು ನಾವು ಅನೇಕ ಬಾಯಿಯ ಮತ್ತು ದೇಹವ್ಯವಸ್ಥೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು. ಇದರ ಜತೆಗೆ, ಬಾಯಿಯ ಸೋಂಕುಗಳು ಮತ್ತು ನಿರ್ದಿಷ್ಟ ಅನಾರೋಗ್ಯಗಳ ನಡುವೆ ಇರುವ ಸಂಬಂಧಗಳು ಶ್ರುತಪಡುತ್ತಿದ್ದು; ಇದು ಈ ಸಂಬಂಧಗಳು ಹಾಗೂ ಅವುಗಳ ನಡುವಣ ಅಂತರ್‌ನಿಹಿತ ಕಾರ್ಯರೀತಿಯ ನಿರ್ದಿಷ್ಟತೆಯನ್ನು ಇನ್ನಷ್ಟು ಚೆನ್ನಾಗಿ ಕಂಡುಕೊಳ್ಳುವುದಕ್ಕೆ ತೀವ್ರಗತಿಯ ಸಂಶೋಧನೆಯ ಅಗತ್ಯವನ್ನು ಒತ್ತಿಹೇಳುತ್ತದೆ.

– ಡಾ| ನಿಶು ಸಿಂಗ್ಲಾ,   
ಸಾರ್ವಜನಿಕ ದಂತಶಾಸ್ತ್ರೀಯ ಆರೋಗ್ಯ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.

ಟಾಪ್ ನ್ಯೂಸ್

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.