ಅಡಿಗಡಿಗೆ ಅಡಿಗರ ನೆನಪು


Team Udayavani, Feb 18, 2017, 4:43 PM IST

55446.jpg

ಒಂದು ಜನಾಂಗದ ಕಣ್ತೆರೆಸಿದ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಗೋಪಾಲಕೃಷ್ಣ ಅಡಿಗ. ಇದು ಅವರ ಜನ್ಮಶತಮಾನೋತ್ಸವದ ವರ್ಷ. ಆ ನೆಪದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ಇಂದು ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಅಡಿಗರ ಸಾಹಿತ್ಯ ಕುರಿತು ಚರ್ಚೆ, ಪುಸ್ತಕ ಬಿಡುಗಡೆ ಹಾಗೂ ಗೀತಗಾಯನದ ಮೂಲಕ ಆ ಶ್ರೇಷ್ಠ ಕವಿಯನ್ನು ನೆನಪಿಸಿಕೊಳ್ಳಲಾಗುತ್ತಿದೆ.

ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನವ್ಯಕಾವ್ಯ ಮತ್ತು ನವ್ಯಸಾಹಿತ್ಯ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ ಅದನ್ನು ಪರಾಕಾಷ್ಠೆಗೆ ಒಯ್ದದ್ದು ಅಡಿಗರ ಹೆಚ್ಚುಗಾರಿಕೆ. ಅವರು, ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ದಕ್ಕಲು ಕಾರಣರಾದವರು. ಇದೇ ಕಾರಣಕ್ಕೆ ಅವರನ್ನು ಯುಗಪ್ರವರ್ತಕ ಕವಿ, ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದೆಲ್ಲಾ ಕರೆಯಲಾಯಿತು. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರೆ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ, ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ವಿಮಶಾì ಕ್ಷೇತ್ರದಲ್ಲೂ ಪ್ರಬುದ್ಧತೆ ತಂದ ಅಡಿಗರು, “ಸಾಕ್ಷಿ’ ಎಂಬ, ಸಾಹಿತ್ಯಿಕ ಬರಹಗಳಿಗೇ ಮೀಸಲಾಗಿದ್ದ ಪತ್ರಿಕೆಯನ್ನು ಸುಮಾರು 20 ವರ್ಷಗಳ ಕಾಲ ನಡೆಸಿದರು. ಆ ಪತ್ರಿಕೆಯ ಮೂಲಕ ಹೊಸ ಸಂವೇದನೆಯನ್ನು, ಹೊಸ ಲೇಖಕರನ್ನು ಪೋ›ತ್ಸಾಹಿಸಿದರು.

ಸುಮಾರು ಎರಡು ದಶಕದ ಕಾಲ ಕನ್ನಡ ಕಾವ್ಯಲೋಕದ “ಸ್ಟಾರ್‌’ ಆಗಿದ್ದುದು ಅಡಿಗರ ಹೆಚ್ಚುಗಾರಿಕೆ. ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು… ಎಂದು ಬರೆದ ಅಡಿಗರ ಕಾವ್ಯ ಮತ್ತು ಅವರು ಬೆಳೆಸಿದ ಸಾಹಿತ್ಯ ಪರಂಪರೆಯನ್ನು ಮೆಚ್ಚಿದ ಯುವ ಸಾಹಿತಿಗಳ ಸಂಖ್ಯೆ ದೊಡ್ಡದಾಗಿಯೇ ಇತ್ತು.

ಯು.ಆರ್‌. ಅನಂತಮೂರ್ತಿ, ಎ.ಕೆ. ರಾಮಾನುಜನ್‌, ಪಿ. ಲಂಕೇಶ್‌, ನಿಸಾರ್‌ ಅಹಮದ್‌, ಕೆ.ವಿ. ತಿರುಮಲೇಶ್‌, ತೇಜಸ್ವಿ, ಲಕ್ಷಿ¾àನಾರಾಯಣ ಭಟ್ಟ, ಶ್ರೀಕೃಷ್ಣ ಆಲನಹಳ್ಳಿ, ರಾಮಚಂದ್ರ ಶರ್ಮ, ಗಿರಡ್ಡಿ ಗೋವಿಂದರಾಜ, ಚಂಪಾ, ಸಿದ್ಧಲಿಂಗ ಪಟ್ಟಣಶೆಟ್ಟಿ, ಜಿ.ಎಚ್‌. ನಾಯಕ, ಕ.ವೆಂ. ರಾಜಗೋಪಾಲ, ಎಂ.ಎನ್‌. ವ್ಯಾಸರಾವ್‌, ನಾ. ಮೊಗಸಾಲೆ… ಇವರೆಲ್ಲಾ ಅಡಿಗರ ಕಾವ್ಯದಿಂದ ಪ್ರಭಾವಿತರಾದವರು. ಅಂದರೆ ಅಡಿಗರು ಆರಂಭಿಸಿದ ಕಾವ್ಯಪರಂಪರೆ ಎಷ್ಟು ಶಕ್ತವಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

“ಯಾವ ಮೋಹನ ಮುರಳಿ ಕರೆಯಿತು’, “ಮುರಿದುಬಿದ್ದ ಕೊಳಲು ನಾನು’, “ಕಟ್ಟುವೆವು ನಾವು ಹೊಸ ನಾಡೊಂದನು’, ‘ಶ್ರೀರಾಮ ನವಮಿಯ ದಿವಸ’, “ನಿನಗೆ ನೀನೇ ಗೆಳೆಯ…’ ಇವು ಅಡಿಗರ ಶ್ರೇಷ್ಠ ಪದ್ಯಗಳಲ್ಲಿ ಕೆಲವು.

ಇದು ಅಡಿಗರ ಜನ್ಮಶತಮಾನೋತ್ಸವದ ವರ್ಷ. ಈ ನೆಪದಲ್ಲಿ, ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀಕಷ್ಣರಾಜ ಪರಿಷನ್ಮಂದಿರದಲ್ಲಿ ಫೆ. 18ರ ಶನಿವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅಡಿಗರ ಸ್ಮರಣೆಯ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆಯುವ ಈ ಕಾರ್ಯಕ್ರಮವನ್ನು ಹೆಸರಾಂತ ಕವಿ, ನಾಡೋಜ ನಿಸಾರ್‌ ಅಹಮದ್‌ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಹಿರಿಯ ಕವಿ ಲಕ್ಷಿ¾àನಾರಾಯಣ ಭಟ್ಟ ಭಾಗವಹಿಸಲಿದ್ದಾರೆ.

ಅಂದು ಮಧ್ಯಾಹ್ನ 12ರಿಂದ 1.30ರವರೆಗೆ ಅಡಿಗರ ಗದ್ಯ ಸಾಹಿತ್ಯ ಕುರಿತು ಸಂವಾದ ಗೋಷ್ಠಿ ಇದೆ. ಎಸ್‌. ದಿವಾಕರ್‌, ಎಚ್‌. ದಂಡಪ್ಪ, ಎಚ್‌.ಎಸ್‌.ಎಂ. ಪ್ರಕಾಶ್‌ ಹಾಗೂ ಕೆ. ಸತ್ಯನಾರಾಯಣ ಭಾಗವಸುವ ಈ ಸಂವಾದದ ನಿರ್ವಹಣೆ ಶೂದ್ರ ಶ್ರೀನಿವಾಸ ಅವರದು. ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಿ ಸುಮತೀಂದ್ರ ನಾಡಿಗ ವಹಿಸಲಿದ್ದಾರೆ.

ಮಧ್ಯಾಹ್ನ 2.45ರಿಂದ ಅಡಿಗರ ಕಾವ್ಯ ಕುರಿತ ಸಂವಾದವಿದೆ. ಪ್ರಸಿದ್ಧ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಪೊ›. ಅಬ್ದುಲ್‌ ಬಷೀರ್‌, ಎಂ.ಎಸ್‌. ಆಶಾದೇ, ವಿಕ್ರಂ ಹತ್ವಾರ್‌ ಹಾಗೂ ಚಿತ್ತಯ್ಯ ಪೂಜಾರ್‌ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 4.15ರಿಂದ 5.15ರವರೆಗೆ ಉಪಾಸನಾ ಮೋಹನ್‌ ಮತ್ತು ತಂಡದವರಿಂದ ಗೋಪಾಲಕೃಷ್ಣ ಅಡಿಗರ ಭಾವಗೀತೆಗಳ ಗಾಯನವೂ ಇದೆ. ಇದೇ ಸಂದರ್ಭದಲ್ಲಿ “ಅಂಕಿತ ಪುಸ್ತಕ’ ಪ್ರಕಟಿಸಿರುವ “ಗೋಪಾಲಕೃಷ್ಣ ಅಡಿಗ ಕವಿ-ಕಾವ್ಯ ಪರಿಚಯ’ ಕೃತಿಯೂ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.