ಅನಾರೋಗ್ಯ ಮತ್ತು ಕರ ವಿನಾಯಿತಿ


Team Udayavani, Jan 30, 2017, 3:45 AM IST

Untitled-1.jpg

ಅನಾರೋಗ್ಯ, ವೈಕಲ್ಯ ಇತ್ಯಾದಿ ತೊಂದರೆಗಳನ್ನು ಸಶಕ್ತವಾಗಿ ಎದುರಿಸಲು ಮಾಡುವ ವೆಚ್ಚಕ್ಕೆ ಆದಾಯಕರ ಇಲಾಖೆಯ ವತಿಯಿಂದಲೂ ಬೆಂಬಲವಿದೆ ಎಂಬುದು ಹಲವರಿಗೆ ಗೊತ್ತಿಲ್ಲ. ಮೆಡಿಕಲ್‌ ವೆಚ್ಚಕ್ಕೆ ಹಲವಾರು ರೀತಿಯಲ್ಲಿ ಆದಾಯಕರ ಇಲಾಖೆ ರಿಯಾಯಿತಿ ನೀಡುತ್ತದೆ. ಇದನ್ನು ಅರಿಯದೆ ಒಂದೆಡೆ ಅವಲಂಬಿತರ ಮೆಡಿಕಲ್‌ ವೆಚ್ಚವನ್ನೂ ಭರಿಸಿ ಇನ್ನೊಂದೆಡೆ ತಮ್ಮ ಕರ ವಿನಾಯತಿಗಾಗಿ 1.5 ಲಕ್ಷ ರೂ. ಡೆಪಾಸಿಟ್‌ ಮಾಡಲೂ ಹೆಣಗಾಡುತ್ತಾ ದಿನ ದೂಡುವವರಿದ್ದಾರೆ. 

ಬದುಕು ಎಂದರೆ ನೀರ ಮೇಲಣ ಗುಳ್ಳೆ. ಒಂದು ದಿನ ಟಪ್‌ ಅಂತ ಒಡೆದು ಆವಿಯಾಗುವುದು ಎಂಬುದೇನೋ ಸರಿ. ಆದರೆ ಹಾಗೆ ಹರಿಕತೆ ಮಾಡಿಕೊಂಡು ಕೈ ಕಟ್ಟಿ ಕುಳಿತಿರಬಾರದಲ್ಲ? ಗುಳ್ಳೆ ಒಡೆಯುವ ತನಕ ಬದುಕಲ್ಲಿ ಬರುವ ಕಷ್ಟ ನಷ್ಟಗಳನ್ನು, ಆಗುವ ಅರ್ಥ-ಅನರ್ಥಗಳನ್ನು ಹೇಗೋ ಸಂಭಾಳಿಸಿಕೊಂಡು ಹೋಗಬೇಕಲ್ಲ? ಜೀವನವೇ ಒಂದು ಸವಾಲಾಗಿ ಬರುವಾಗ ಒದಗಿಬರುವ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕು. ರೋಗ ರುಜಿನಗಳಿಗೆ ಸೂಕ್ತ ಶುಶ್ರೂಷೆ ನೀಡಿಜೀವನ ಮೌಲ್ಯವನ್ನು ಎತ್ತರಿಸಬೇಕು.

ಅನಾರೋಗ್ಯ, ವೈಕಲ್ಯ ಇತ್ಯಾದಿ ತೊಂದರೆಗಳನ್ನು ಸಶಕ್ತವಾಗಿ ಎದುರಿಸಲು ಮಾಡುವ ವೆಚ್ಚಕ್ಕೆ ಆದಾಯಕರ ಇಲಾಖೆಯ ವತಿಯಿಂದಲೂ ಬೆಂಬಲವಿದೆ ಎಂಬುದು ಹಲವರಿಗೆ ಗೊತ್ತಿಲ್ಲ. ಮೆಡಿಕಲ್‌ ವೆಚ್ಚಕ್ಕೆ ಹಲವಾರು ರೀತಿಯಲ್ಲಿ ಆದಾಯಕರ ಇಲಾಖೆ ರಿಯಾಯಿತಿ ನೀಡುತ್ತದೆ. ಇದನ್ನು ಅರಿಯದೆ ಒಂದೆಡೆ ಅವಲಂಬಿತರ ಮೆಡಿಕಲ್‌ ವೆಚ್ಚವನ್ನೂ ಭರಿಸಿ ಇನ್ನೊಂದೆಡೆ ತಮ್ಮ ಕರ ವಿನಾಯತಿಗಾಗಿ 1.5 ಲಕ್ಷ ರೂ. ಡೆಪಾಸಿಟ್‌ ಮಾಡಲೂ ಹೆಣಗಾಡುತ್ತಾ ದಿನ ದೂಡುವವರಿದ್ದಾರೆ. ಇದು ಹಲವರನ್ನು ವಿಪರೀತ ಆರ್ಥಿಕ ಸಂಕಷ್ಟಕ್ಕೆ ಗುರಿ ಮಾಡುತ್ತದೆ. ಅಂತಹ ವಿಶೇಷ ಸಂದರ್ಭಗಳಲ್ಲಿ ಮೆಡಿಕಲ್‌ ಕಾರಣಕ್ಕೆ ಸಿಗುವ ಕರ ವಿನಾಯಿತಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಬಹುತೇಕರಿಗೆ ಯಾವ ಡೆಪಾಸಿಟ್ಟೂ ಮಾಡುವ ಅಗತ್ಯ ಬರುವುದಿಲ್ಲ.

ಈ ಕೆಳಗಿನ ಸೆಕ್ಷನ್ನುಗಳನ್ನು ಸ್ವಲ್ಪ ಕೂಲಂಕಷವಾಗಿ ಅಧ್ಯಯನ ಮಾಡಿ: 
ವೈದ್ಯಕೀಯ ಸಂಬಂಧಿತ ಸೆಕ್ಷನ್ನುಗಳು:
1. ಅರೋಗ್ಯ ವಿಮಾ ಪ್ರೀಮಿಯಂ ಮೇಲೆ ವಿನಾಯಿತಿ (ಸೆಕ್ಷನ್‌ 80 B):

    ಸ್ವಂತ, ಪತಿ/ಪತ್ನಿ ಮತ್ತು ಅವಲಂಬಿತ ಮಕ್ಕಳ ಆರೋಗ್ಯ ವಿಮೆಗಾಗಿ ಕಟ್ಟಿದ ಪ್ರೀಮಿಯಂ ವಾಸ್ತವಿಕ ಮೊತ್ತಕ್ಕೆ 
ವಾರ್ಷಿಕ 25,000 ರೂ. ಮಿತಿಯೊಳಗೆ ಕರ ವಿನಾಯಿತಿ ದೊರಕುತ್ತದೆ. ಇವರೊಳಗೆ ಯಾರೊಬ್ಬರೂ 60 ವಯಸ್ಸು ಮೀರಿದ ಹಿರಿಯ ನಾಗರಿಕರಾಗಿದ್ದಲ್ಲಿ ಈ ಮಿತಿ ವಾರ್ಷಿಕ 30,000 ರೂ. ಆಗಿರುತ್ತದೆ.

    ಅದಲ್ಲದೆ ತೆರಿಗೆದಾರನ ಹೆತ್ತವರ ಆರೋಗ್ಯ ವಿಮಾ ಪ್ರೀಮಿಯಂಗೆ ಕೂಡ ಪ್ರತ್ಯೇಕ 25,000 ರೂ. ವಿಮಾ ಪ್ರೀಮಿಯಂ ಪಾವತಿ ಮಾಡದಂತಹ ಅಂದರೆ ಮೆಡಿಕಲ… ವಿಮೆ ಇಲ್ಲದವರು) ತಮ್ಮ ಸಂಪೂರ್ಣ ಮಿತಿಯನ್ನು ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು. ಈ ರೀತಿ ಸ್ವಂತ ಕುಟುಂಬ ಹಾಗೂ ಹೆತ್ತವರನ್ನು ವಿಮೆಗೆ ಒಳಪಡಿಸಿ ವಾರ್ಷಿಕ 50,000-60,000ದ ವರೆಗೆ ಕರ ವಿನಾಯಿತಿ ಪಡಕೊಳ್ಳಬಹುದು. ಸಂಬಂಧಿತ ಬಿಲ್‌/ರಶೀದಿಗಳನ್ನು ತೆಗೆದಿರಿಸಿ.

2. ವಿಭಿನ್ನ ಸಾಮರ್ಥ್ಯದ ಅವಲಂಬಿತರ ವೈದ್ಯಕೀಯ ಚಿಕಿತ್ಸೆ ಸಹಿತ ಪಾಲನೆ (ಸೆಕ್ಷನ್‌ 80DD):
    ಈ ಸೆಕ್ಷನ್ನಿನಲ್ಲಿ ತೆರಿಗೆ ನೀಡುವ ವ್ಯಕ್ತಿಗೆ ತನ್ನ ಮೇಲೆ ಅವಲಂಭಿತ ರಾಗಿಯಾರಾದರು ವಿಭಿನ್ನ ಸಾಮರ್ಥ್ಯದ (gbdohg) ಇದ್ದಲ್ಲಿ ತಾನು ಕಟ್ಟುವ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದೆ. ಇಲ್ಲಿ ಡಿಸೆಬಿಲಿಟಿ ಅವಲಂಬಿತರಿಗೆ ಇರುತ್ತದೆ ಹಾಗೂ ತೆರಿಗೆ ವಿನಾಯಿತಿ ಅವರ ಪಾಲಕರಿಗೆ ಲಭಿಸುತ್ತದೆ.

    ಅವಲಂಬಿತರ ವೈದ್ಯಕೀಯ (ನರ್ಸಿಂಗ್‌ ಸಹಿತ), ತರಬೇತಿ ಮತ್ತು ಪುನರ್ವಸತಿಗಾಗಿ ಖರ್ಚು ಮಾಡಿದ ಮೊತ್ತ ಅಥವಾ ಅವರ ಪಾಲನೆಯ ಉದ್ದೇಶದಿಂದಲೇ ಚಾಲ್ತಿಯಲ್ಲಿರುವ ವಿಮಾ ಪಾಲಿಸಿಗಳಿಗೆ ಕಟ್ಟಿದ ಮೊತ್ತ- ಇವುಗಳು ಪಾಲಕರ ಕರ ವಿನಾಯತಿಗೆ ಅರ್ಹವಾಗಿರುತ್ತದೆ. ಈ ಸಲುವಾಗಿಯೇ ಜೀವನ್‌ ಆಧಾರ್‌ ಎಂಬ ಪಾಲಿಸಿಯನ್ನು ಎಲ್ಲೆ„ಸಿಯು ಮಾರುಕಟ್ಟೆಗೆ ತಂದಿದೆ.  ಈ ಸೆಕ್ಷನ್‌ ಸೌಲಭ್ಯವು ಅಂಗವಿಕಲತೆಯಲ್ಲದೆ ಆಟಿಸಂ, ಸೆರೆಬ್ರಲ್‌ ಪಾಲ್ಸಿ ಮತ್ತು ಮಲ್ಟಿಪಲ್‌ ಡಿಸೇಬಿಲಿಟಿ ಪೀಡಿತ ಅವಲಂಬಿಗಳುಳ್ಳವರಿಗೂ ಈಗ ಲಭ್ಯ.

    ಈ ಸೆಕ್ಷನ್‌ ಪ್ರಕಾರ 40%-80% ಊನ ಉಳ್ಳವರ ಸಂದರ್ಭದಲ್ಲಿ ವಾರ್ಷಿಕರೂ 75,000 ರೂ.ಗಳನ್ನು ನೇರವಾಗಿ ಪಾಲಕರ ಆದಾಯದಿಂದ ಕಳೆಯಬಹುದಾಗಿದೆ. 80%ಕ್ಕೂ ಜಾಸ್ತಿ ಊನವುಳ್ಳ ಅವಲಂಬಿತರು ಇರುವವರಿಗೆ ವಿನಾಯತಿಯ ಈ ಮೊತ್ತ ವಾರ್ಷಿಕರೂ 1,25,000 ರೂ. ಆಗಿದೆ. ಅರ್ಹ ತೆರಿಗೆದಾರರ ನಿಜವಾದ ವೆಚ್ಚ ಈ ಮಿತಿಗಿಂತ ಎಷ್ಟೇ ಕಡಿಮೆ/ಜಾಸ್ತಿ ಆಗಿದ್ದರೂ ಪರವಾಗಿಲ್ಲ; ಈ ಪರಿಸ್ಥಿತಿ ಇದ್ದರೆ ಆಯಿತು, ಶೇಕಡಾವಾರು ಊನತೆಯ ಅನುಸಾರ ವಿನಾಯಿತಿಯ ಸಂಪೂರ್ಣ ಮಿತಿಯನ್ನು ಅವರು ಪಡೆದುಕೊಳ್ಳಬಹುದು. ಅವಲಂಬಿತರ ಪಾಲನೆಯೂ ಸೇರಿರುವ ಕಾರಣ ವಾಸ್ತವಿಕ ಖರ್ಚಿನ ಮಿತಿ ಈ ಸೆಕ್ಷನ್ನಿಗೆ ಇಲ್ಲ ಎನ್ನುವುದು ಅತ್ಯಂತ ಗಮನಾರ್ಹ ವಿಚಾರ.

    ಇಂತಹ ಪರಿಸ್ಥಿತಿಯನ್ನು ಪ್ರಮಾಣಪಡಿಸಲು ನಿಗದಿತ ನಮೂನೆಯಲ್ಲಿ ಜಿಲ್ಲಾ ಸರ್ಜನ್‌ (ಸರಕಾರಿ) ಅವರ ಪ್ರಮಾಣ ಪತ್ರ ಕಡ್ಡಾಯವಾಗಿ ಅಗತ್ಯ. ಅದರ ಜತೆಗೆ ಚಿಕಿತ್ಸೆಯ ಬಿಲ್‌, ಇನ್ಶೂರನ್ಸ್‌ ರಶೀದಿಗಳನ್ನು ಇಟ್ಟುಕೊಂಡರೆ ಉತ್ತಮ. ಬೇಕೇಂದೇನೂ ಕಡ್ಡಾಯವಿಲ್ಲ. ಒಂದು ಪ್ರಮಾಣ ಪತ್ರದ ವಾಯಿದೆ/ಅರ್ಹತೆ ಕಳೆದುಹೋದಲ್ಲಿ ಇನ್ನೊಂದು ಹೊಸ ಪ್ರಮಾಣ ಪತ್ರ ಪಡೆದುಕೊಳ್ಳುವುದು ಅಗತ್ಯ. ವಾಯಿದೆ ಕಳೆದ ಪ್ರಮಾಣ ಪತ್ರದ ಮೇರೆಗೆ ಕರ ವಿನಾಯಿತಿ ನೀಡಲಾಗುವುದಿಲ್ಲ.

    ಈ ಸೌಲಭ್ಯಕ್ಕಾಗಿ ಅವಲಂಬಿತರು ಎಂದರೆ ತೆರಿಗೆದಾರನ/ಳ ಪತ್ನಿ/ಪತಿ, ಮಕ್ಕಳು, ಹೆತ್ತವರು, ಸಹೋದರ/ಸಹೋದರಿಯರು ಎಂದು ಕಟ್ಟುನಿಟ್ಟಾಗೆ ನಿರ್ದೇಶಿಸಲಾಗಿದೆ. ಬೇರಾವುದೇ ರೀತಿಯ ಸಂಬಂಧಿಗಳು ಅವಲಂಬಿತರಾದರೂ (ಉದಾ: ಅಜ್ಜ/ಅಜ್ಜಿ, ಸೊಸೆ/ಅಳಿಯ, ಮೊಮ್ಮಕ್ಕಳು) ಈ ಸೌಲಭ್ಯಕ್ಕೆ ಅನರ್ಹರಾಗುತ್ತಾರೆ. ಆದರೆ, ಒಂದು ಹಿಂದೂ ಅವಿಭಕ್ತ ಕುಟುಂಬದ (ಊಗಈ) ಸಂದರ್ಭದಲ್ಲಿ ಯಾವುದೇ ಅವಲಂಬಿತ ಸದಸ್ಯರ ಮೇರೆಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

3. ಸ್ವಂತ ವಿಭಿನ್ನ ಸಾಮರ್ಥ್ಯವುಳ್ಳವರಿಗೆ ರಿಯಾಯತಿ (ಸೆಕ್ಷನ್‌ 80 w):
    ಮೇಲೆ ತಿಳಿಸಿದ ಊನತೆಗಳು ಸ್ವತಃ ತೆರಿಗೆದಾರನಿಗೇ ಇದ್ದಲ್ಲಿ ಈ ಸೆಕ್ಷನ್‌ ಅಡಿಯಲ್ಲಿ ಮೇಲೆ ತಿಳಿಸಿದ ಮೊತ್ತಗಳ ರಿಯಾಯಿತಿ ಸಿಗುತ್ತವೆ. ವಿಮಾ ಪಾಲಿಸಿಗಳ ಸೌಲಭ್ಯ ಇಲ್ಲಿ ಲಾಗೂ ಆಗುವುದಿಲ್ಲ. ಜಿಲ್ಲಾ ಸರ್ಜನ್‌ ಪ್ರಮಾಣ ಪತ್ರಅಗತ್ಯ.

4.  ಸ್ವಂತ ಮತ್ತು ಅವಲಂಬಿತರ ವೈದ್ಯಕೀಯ ಚಿಕಿತ್ಸೆ (ಸೆಕ್ಷನ್‌ 80 B):
    ತೆರಿಗೆದಾರನ ಸ್ವಂತಕ್ಕೆ ಮತ್ತು ಮೇಲೆ ತಿಳಿಸಿದಂತಹ ಸಂಬಂಧವುಳ್ಳ ಅವಲಂಬಿತರಿಗೆ ಕೆಲವು ನಿರ್ದಿಷ್ಟ ಕಾಯಿಲೆಗಳಿದ್ದರೆ ಅದರ ಚಿಕಿತ್ಸೆಗಾಗಿ ಮಾಡಿದ ವಾಸ್ತವಿಕ ಖರ್ಚು – ಅಥವಾ 40,000 ರೂ. ಯಾವುದು ಕಡಿಮೆಯೋ ಅದು- ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಖರ್ಚು 60 ವರ್ಷ ಮೀರಿದ ಓರ್ವ ಹಿರಿಯ ನಾಗರಿಕರ ಮೇಲೆ ಮಾಡಿದ್ದಾದರೆ ಈ ಮಿತಿಯು 60,000  ರೂ. ಆಗಿರುತ್ತದೆ ಹಾಗೂ 80 ವರ್ಷ ದಾಟಿದ ಅತಿ ವರಿಷ್ಠರಿಗೆ 80,000 ರೂ.

    ಈ ಸೌಲಭ್ಯಕ್ಕೆ ಮಾಡಿದ ಖರ್ಚಿನ ಪುರಾವೆಯಾಗಿ ಬಿಲ್ಲುಗಳನ್ನು ತೆಗೆದಿರಿಸುವುದು ಅತ್ಯಗತ್ಯ ಮತ್ತು ಜತೆಜತೆಗೆ ಅನಾರೋಗ್ಯದ ಪುರಾವೆಯಾಗಿ ಒಬ್ಬ ಸರಕಾರಿ ಆಸ್ಪತ್ರೆಯ ತತ್ಸಂಬಂಧಿತ ತಜ್ಞ ವೈದ್ಯರ ಪ್ರಮಾಣ ಪತ್ರವೂ ಅಗತ್ಯ. 

    ಈ ಸೆಕ್ಷನ್‌ ಕೆಲವು ನಿಗದಿತ ಗಂಭೀರ ಕಾಯಿಲೆಗಳಿಗೆ ಮಾತ್ರ ಲಭ್ಯ. ಈ ಪಟ್ಟಿಯಲ್ಲಿ 40% ಮೀರಿದ ನರ ಸಂಬಂಧಿ (ಡಿಮೆನ್ಶಿಯ, ಪಾರ್ಕಿನ್‌ಸನ್ಸ್‌, ಇತ್ಯಾದಿ) ಕಾಯಿಲೆಗಳು, ಹಾನಿಕಾರಕ ಕ್ಯಾನ್ಸರ್‌, ಉಲ್ಬಣಗೊಂಡ ಏಡ್ಸ್‌, ಕ್ರೋನಿಕ್‌ ರೀನಲ್‌ ಸಮಸ್ಯೆ, ರಕ್ತ ಸಂಬಂಧಿ ಹೀಮೋಫಿಲಿಯ, ಥಲಸೇಮಿಯಾ ಇತ್ಯಾದಿ ಕಾಯಿಲೆಗಳು ಸೇರಿಸಲ್ಪಟ್ಟಿವೆ.

5. ನೌಕರರ ವೈದ್ಯಕೀಯ ಸೌಲಭ್ಯ (ಸೆಕ್ಷನ್‌ 17(2)):
    ಹೆಚ್ಚಿನ ಕಂಪೆನಿಗಳು ತಮ್ಮ ನೌಕರರಿಗೆ ಮೆಡಿಕಲ್‌ ಅಲೋವೆನ್ಸ್‌ ನೀಡುತ್ತವೆ. ಅಂತಹ ಸಂದರ್ಭಗಳಲ್ಲಿ ಒಬ್ಬ ನೌಕರತನ್ನ ಸ್ವಂತ ಮತು ¤ಕುಟುಂಬಕ್ಕಾಗಿ ಖರ್ಚು ಮಾಡಿದ ವಾಸ್ತವಿಕ ವೆಚ್ಚಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದರ ವಾರ್ಷಿಕ ಮಿತಿ ಗರಿಷ್ಠ ರೂ. 15,000. ಇದಕ್ಕಾಗಿ ಮೆಡಿಕಲ್‌ ಬಿಲ್‌ಗ‌ಳನ್ನು ತೆಗೆದಿರಿಸಿ ಕಂಪೆನಿಗೆ ತೋರಿಸತಕ್ಕದ್ದು. ಇದು ನೌಕರಿಯಲ್ಲಿರುವವರಿಗೆ ನೀಡಿರುವ ವಿಶೇಷ ಸೌಲಭ್ಯ.

    ಈ ರೀತಿ ಅನಾರೋಗ್ಯದ ಮತ್ತು ವಿಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ಕೊಡಮಾಡಿದ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಂಡರೆ ಕರ ಯೋಜನೆ ಸಫ‌ಲವಾದೀತು. ಮೇಲೆ ಕಾಣಿಸಿದ ಎಲ್ಲ ಸಂದರ್ಭಗಳಲ್ಲೂ ಕರವಿನಾಯತಿ ಎಂದರೆ ಅರ್ಹ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆಯುವುದು. ನೌಕರರು ಈ ವಿವರಗಳನ್ನು ಸಂಸ್ಥೆಗೆ ನೀಡಿದರೆ ಸಂಬಳದಿಂದ ಟಿಡಿಎಸ್‌ ಕಡಿತವಾಗುವ ಮುನ್ನವೇ ಈ ರಿಯಾಯಿತಿ ಪಡೆಯಬಹುದಾಗಿದೆ. ಆ ರೀತಿ ಮಾಡಲಾಗದವರು ಮತ್ತು ಸಂಬಳೇತರ ಇತರ ವರ್ಗದವರು ಈ ರಿಯಾಯಿತಿಯನ್ನುರಿಟರ್ನ್ ಫೈಲ್‌ ಮಾಡುವ ಸಂದರ್ಭದಲ್ಲೂ ಪಡಕೊಳ್ಳಬಹುದು.

ಗಮನಿಸಿ: ಆದಾಯ ತೆರಿಗೆಯಲ್ಲಿ ವಿನಾಯಿತಿ ಎಂದೊಡದೆ ಜನಪ್ರಿಯವಾಗಿ 80ಸಿ ಎಂದು ಕರೆಯಲ್ಪಡುವ ಸೆಕ್ಷನ್‌ 
ಅಡಿಯಲ್ಲಿ ಸಿಗುವ 1.50 ಲಕ್ಷ ರೂ. ಮಿತಿಯುಳ್ಳ ಹೂಡಿಕೆ ಆಧಾರಿತ ತೆರಿಗೆ ವಿನಾಯಿತಿಯೇ ಎಲ್ಲರ ಮನಸ್ಸಿಗೆ ಬರುತ್ತದೆ. ಆ 80ಸಿ ಅಡಿಯಲ್ಲಿ ಪಿಪಿಎಫ್, ಇಪಿಎಫ್, ಜೀವ ವಿಮೆ, ಪಂಚವಾರ್ಷಿಕ ಎಫ್ಡಿ, ಎನ್‌ ಎಸ್‌ ಸಿ, ಇಎಲ… ಎಸ್‌ ಎಸ್‌ ಮಾದರಿಯ ಮ್ಯೂಚುವಲ… ಫ‌ಂಡ್‌, ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಮ…, ಮಕ್ಕಳ ಶಾಲಾ ಟ್ಯೂಷನ… ಫೀಸ್‌, ಮನೆ ನೋಂದ‌ಣಿಯ ಫೀಸ್‌ ಇತ್ಯಾದಿಗಳು ಬರುತ್ತವೆ. ಸದ್ರಿ ಅನಾರೋಗ್ಯ ಸಂಬಂಧಿಸಿದ ಮೇಲ್ಕಾಣಿಸಿದ ಎಲ್ಲ ವಿನಾಯಿತಿಗಳೂ 80ಸಿ ಸೆಕ್ಷನ್‌ ಹೊರತಾಗಿದೆ. ಅಂದರೆ ಸೆಕ್ಷನ್‌ 800ಸಿ ಅಡಿಯಲ್ಲಿ 1.5 ಲಕ್ಷ ರೂ. ವಿನಾಯಿತಿ ಪಡೆದ ಬಳಿಕವೂ ಹೆಚ್ಚುವರಿಯಾಗಿ ಈ ವಿನಾಯಿತಿಗಳನ್ನು ಪಡೆಯಬಹುದಾಗಿದೆ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.