ರೈಟ್ಸ್‌ ಇಶ್ಯೂಸ್‌ ಮತ್ತು ಪಿಎಫ್ಒ


Team Udayavani, May 8, 2017, 12:14 AM IST

Sensex-650.jpg

ಒಂದೊಂದು ಕಂಪೆನಿಗೂ ತನ್ನದೇ ಕಾರಣಗಳಿರುತ್ತವೆ. ಅವುಗಳಲ್ಲಿ ಮುಖ್ಯವೆಂದರೆ ಈ ಕಂಪೆನಿಗಳು ಈ ಹೊಸ ಧನರಾಶಿಯನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತವೆ ಎಂದು ತಿಳಿದುಕೊಳ್ಳುವುದು.

ಕಳೆದ ವಾರದ ಕಾಕು ಓದಿದವರಾದ ನೀವೀಗ ಬೋನಸ್‌ ಎಂಬ ಡಿಕ್ಷನರಿ ಶಬ್ದದ ಧ್ವನ್ಯಾರ್ಥದಿಂದಲೇ ಆನಂದತುಂದಿಲರಾದ ಜನತೆಯ ಮೇಲೆ ದೋಂಡುರಂಗ್‌ ಪಾಂಡುರಂಗ್‌ ಟೋಪಿವಾಲಾ ಕಂಪೆನಿ ಮಾಡಿದ ಮೋಡಿಯನ್ನು ಕೂಲಂಕಷವಾಗಿ ಅರಿತವರಾಗಿದ್ದೀರಿ. ಇನ್ನೀಗ, ಅದೇ ಕಂಪೆನಿಯನ್ನೇ ಮತ್ತೂಮ್ಮೆ ತೆಗೆದುಕೊಳ್ಳಿ. ಬೋನಸ್‌ ಹಂಚಿ ಅಜರಾಮರನಾದ ಬಿರ್ಸ ಮತ್ತಾರು ತಿಂಗಳುಗಳಲ್ಲಿ ಒಂದಕ್ಕೊಂದು (1:1) ಸೂಪರ್‌ಡ್ಯೂಪರ್‌ ರೈಟ್ಸ್‌ ಇಶ್ಯೂ ಘೋಷಿಸಿ ಮಾರುಕಟ್ಟೆಯ ಬೆಳ್ಳಿಪರದೆಯಲ್ಲಿ ಮತ್ತೂಮ್ಮೆ ಮಿಂಚುತ್ತಾನೆ. ಕಂಪೆನಿಗೆ ಹೂಡಿಕೆಗಾಗಿ ಹೆಚ್ಚುವರಿ ದುಡ್ಡು ಬೇಕಾದಲ್ಲಿ ಇರುವ ಶೇರುದಾರರಿಗೆ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ಹೊಸ ಶೇರುಗಳನ್ನು ನೀಡುವುದೇ ಈ ರೈಟ್ಸ್‌ ಆಫ‌ರ್‌. ಇದು ಸದ್ಯದ ಶೇರುದಾರರಿಗೆ ಮಾತ್ರ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಈ ಬಿರ್ಸ ಮಗೆ ಒಂದು ಶೇರಿಗೆ ಸದ್ಯದ ಮಾರುಕಟ್ಟೆಯ ಬೆಲೆ 80 ರೂ. ಆದರೂ ಅದಕ್ಕಿಂತ ಶೇ.50 ಕಡಿಮೆ ಬೆಲೆಗೆ, ಅಂದರೆ ರೂ. 40ಕ್ಕೆ ಒಂದಕ್ಕೊಂದು ಶೇರುಗಳನ್ನು ಪ್ರಸ್ತುತ ಶೇರುದಾರರಿಗೆ ಕೊಡುವುದಾಗಿ ಘೋಷಿಸಿ ಜನರ ಕಣ್ಮನಗಳಲ್ಲಿ ಡಬ್ಬಲ್‌ ಬಿರ್ಸನಾಗುತ್ತಾನೆ. ಮಾರುಕಟ್ಟೆಯಲ್ಲಿ ರೂ. 80 ಇರುವ ಶೇರು ಈಗ ರೂ. 40ಕ್ಕೆ! ಜನರ ಆನಂದಕ್ಕೆ ಪಾರವೇ ಇಲ್ಲ. ಮಗನನ್ನು ಹಾಡಿ ಹೊಗಳುತ್ತಾರೆ. ಮೊದಲು ಬೋನಸ್‌ ಆಮೇಲೆ ರೈಟ್ಸ್‌ ಆಫ‌ರ್‌! ಇನ್ನೇನು ಬೇಕು? ಬಿರ್ಸದೇವನ ಮೂರ್ತಿಯಿಟ್ಟು ಮಂದಿರ ಕಟ್ಟುವುದೊಂದೇ ಬಾಕಿ. 

ಆದರೆ, ರೈಟ್ಸ್‌ ಬಳಿಕ ಕಂಪೆನಿಯ ಬ್ಯಾಲನ್ಸ್‌ ಶೀಟ್‌ನ ಸ್ವರೂಪ ಹೇಗಾಗಿದೆ ಅಂತ ಒಮ್ಮೆ ನೋಡಿ:
ಶೇರು ಕ್ಯಾಪಿಟಲ್‌= 200 ಕೋಟಿ (ರೂ. 10 ಮುಖ ಬೆಲೆಯ 20 ಕೋಟಿ ಶೇರುಗಳು) ಶೇರೊಂದರ ರೂ.10ರಂತೆ ರೈಟ್ಸ್‌ ಇಶ್ಯೂ= 800 ಕೋಟಿ (ರೂ. 10 ಮುಖ ಬೆಲೆಯ 20 ಕೋಟಿ ಶೇರುಗಳು) ಶೇರೊಂದರ ರೂ.40ರಂತೆ) ರಿಸರ್ವ್ಸ್ = 0 ಒಟ್ಟು ಇಕ್ವಿಟಿ= 1000 ಕೋಟಿ (ರೂ. 10 ಮುಖ ಬೆಲೆಯ 40 ಕೋಟಿ ಶೇರುಗಳು) ಶೇರೊಂದರ ರೂ. 25 ಆದಂತಾಯಿತು. ಮೊದಲಿದ್ದ ರೂ.10 ಮತ್ತು ಈಗ ಕೊಟ್ಟ ರೂ.40ರ ಸರಾಸರಿಯೇ ರೂ. 25. ಶೇರು ಮೌಲ್ಯದಲ್ಲಿ ಬೇರೇನೂ ವ್ಯತ್ಯಾಸವಾಗಲಿಲ್ಲ. 10 ಮತ್ತು 40ರ ಎರಡು ಶೇರಿನ ಬದಲಾಗಿ ಸರಾಸರಿ 25ರ ಎರಡು ಶೇರು ಈಗ ಕೈಯಲ್ಲಿರುತ್ತದೆ ಅಷ್ಟೆ. ಮುಖ್ಯವಾಗಿ ನಾವು ಕೊಟ್ಟ ದುಡ್ಡೇ ಇಕ್ವಿಟಿಯನ್ನು ತುಂಬಿದೆ ಹೊರತು ಬೇರೇನೂ ಹುಟ್ಟುವಳಿಯ ಕಾರ್ಯಕ್ರಮ ನಡೆದಿಲ್ಲ. ಆಂತರಿಕವಾಗಿ ಶೇರಿನ ಮೌಲ್ಯ ನಾವು ಹಾಕಿದ ಹೊಸ ದುಡ್ಡಿನಷ್ಟೇ ಇಕ್ವಿಟಿ ಹೆಚ್ಚಳವಾಗಿದೆ. ಬೇರೇನೂ ಆಗಿಲ್ಲ.

ಈ ಶೇರಿನ ಮಾರುಕಟ್ಟೆಯ ಬೆಲೆಯಲ್ಲಿ ಏನಾಗುತ್ತದೆ ಅಂತ ನೋಡೋಣ: ಮಾರುಕಟ್ಟೆಯ ಬೆಲೆಯಿಂದ ಕಡಿಮೆ ಬೆಲೆಗೆ ರೈಟ್ಸ್‌ ಕೊಡುವುದೇ ಸಾಮಾನ್ಯ ಜನರಿಗೆ ಏನೋ ಭಾರೀ ರಿ ಬೆನಿಫಿಟ್‌ ಸಿಕ್ಕಿದ ಭ್ರಮೆ ಹುಟ್ಟಿಸುತ್ತದೆ. 80 ರೂಪಾಯಿಗೆ ನಡೆಯುತ್ತಿರುವ ಶೇರು ಈಗ 40 ರೂಪಾಯಿಗಳಿಗೆ ಸಿಗುತ್ತದೆ ಎಂಬ ಭ್ರಮೆ! ಆದರೆ ವಾಸ್ತವದಲ್ಲಿ, ಜಾಸ್ತಿ ಶೇರು ಬಿಡುಗಡೆಯಾಗಿ ಶೇರು ಮೌಲ್ಯ ಕಡಿಮೆಯಾದ ಕಾರಣಕ್ಕೆ ಮಾರುಕಟ್ಟೆ ಬೆಲೆಯೂ ಇಳಿಯುತ್ತದೆ. ಶೇರೊಂದರ 80ರೂ ಇದ್ದ ಮಾರುಕಟ್ಟೆಯ ಬೆಲೆಗೆ ಈಗ-ಜನತೆ ಹಾಕಿದ ರೂ. 40 ಸೇರಿಕೊಂಡು – ಎರಡು ಶೇರು ಕೈಯಲ್ಲಿ ಇರುತ್ತದೆ. ಅಂದರೆ ಒಟ್ಟು ರೂ. 120ಕ್ಕೆ 2 ಶೇರು. ಇದೀಗ ಶೇರೊಂದರ ರೂ. 60 ಹೊಸ ಮಾರುಕಟ್ಟೆ ಬೆಲೆಯಾಗುತ್ತದೆ. ಇದು ಅನಾಲಿಸ್ಟ್‌ಗಳು ಮಾಡುವ ವೈಜ್ಞಾನಿಕ ಲೆಕ್ಕಾಚಾರ. ಮೇಲ್ನೋಟಕ್ಕೆ ಮಾರುಕಟ್ಟೆಯ ಬೆಲೆಯಿಂದ ಕಡಿಮೆಗೆ ರೈಟ್ಸ್‌ ಶೇರು ಸಿಕ್ಕಿದಂತೆ ಕಂಡರೂ ರೈಟ್ಸ್‌ ಬಿಡುಗಡೆಯಾದ ತತ್‌ಕ್ಷಣ ಮಾರುಕಟ್ಟೆ ಅಷ್ಟರಮಟ್ಟಿಗೆ ಕುಸಿಯುತ್ತದೆ. ಈ ರೈಟ್ಸ್‌ ಕೂಡ ಬೋನಸ್‌ನಂತೆಯೇ ಯಾವುದೇ ಮೌಲ್ಯವರ್ಧನೆಯಿಲ್ಲದ ಒಂದು ಅಕೌಂಟಿಂಗ್‌ ಬಾಬ್ತು. ಬೋನಸ್ಸಿನಲ್ಲಿ ಯಾವುದೇ ಹೊಸ ಹೂಡಿಕೆ ಬರುವುದಿಲ್ಲ. ಆದರೆ ಇಲ್ಲಿ ಕಂಪೆನಿಗಳಿಗೆ ಅಗತ್ಯಕ್ಕೆ ತಕ್ಕಂತೆ ಹೊಸ ಹೂಡಿಕೆ ಬರುತ್ತದೆ. ಅದೇ ಮುಖ್ಯ ವ್ಯತ್ಯಾಸ.

ಹೂಡಿಕೆದಾರರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದರೂ ಈ ಆಫ‌ರ್‌ಗಳನ್ನು ಖರೀದಿಸಲೇಬೇಕಾಗುತ್ತದೆ. ಇದೊಂದು ವಿಚಿತ್ರ ಪ್ರಸಂಗ- ಕೊಂಡವರಿಗೆ ಯಾವುದೇ ವಿಶೇಷ ಪ್ರಯೋಜನವಾಗುವುದಿಲ್ಲವಾದರೂ ಕೊಳ್ಳದೆ ಹಾಗೇ ಸುಮ್ಮನೆ ಬಿಟ್ಟವರಿಗೆ ನಷ್ಟವಂತೂ ಖಂಡಿತ. ಅಂತಹವರ ಬಳಿ ಹಳೆಯ ರೂ.10ಕ್ಕೆ ಕೊಂಡ, ಮೊದಲು ರೂ. 80 ಇದ್ದ ಒಂದು ಶೇರು ಈಗ ರೈಟ್ಸ್‌ ಕೇ ಬಾದ್‌ ರೂ. 60 ಆಗಿ ಅಣಕಿಸುತ್ತಾ ಇರುತ್ತದೆ. ಅವರಿಗೆ ಶೇರೊಂದರ ರೂ. 20 ನಷ್ಟ. ಹೊಸದಾಗಿ ರೂ. 40ಕ್ಕೆ ಕೊಂಡ ಎರಡನೆಯ ಶೇರುಗಳು ಇಲ್ಲವಾದ ಕಾರಣ ಎಲ್ಲರಿಗೂ ಸಿಗುವ ಸರಾಸರಿಯ ಲಾಭದ ಅವಕಾಶ ಪಡೆಯದವರಾಗಿತ್ತಾರೆ. ಅದು ಅವರ ಬದಲಿಗೆ ಅದನ್ನು ಪಡೆದುಕೊಳ್ಳುವವರ ಕೈಸೇರುತ್ತದೆ. 

ಆದ್ದರಿಂದ ಪ್ರತಿಬಾರಿ ರೈಟ್ಸ್‌ ಬಂದಾಗಲೂ ಅದನ್ನು ಪಡೆಯಲೇ ಬೇಕಾಗುತ್ತದೆ ಅಥವಾ ಆ ಆಫ‌ರ್‌ ಅನ್ನು ಮಾರುಕಟ್ಟೆಯಲ್ಲಿ ಮಾರಿ ಅದರ ಮೇಲಿರುವ ಪ್ರೀಮಿಯಂ ಅನ್ನು ಪಡೆಯಬೇಕಾಗುತ್ತದೆ. 40 ರೂ.ಗೆ ಸಿಗುವ ಬಳಿಕ 60 ರೂ. ಬೆಲೆಯಾಗಲಿರುವ ಈ ರೈಟ್ಸ್‌ ಆಫ‌ರ್‌ಗೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ರೂ. 20 ಆಗಬಹುದು. ರೈಟ್ಸ್‌ ಶೇರುಗಳನ್ನು ಕೊಳ್ಳಲು ಮನಸ್ಸಿಲ್ಲದವರು ಅವರ ಹಕ್ಕನ್ನು ಮಾರಿ ನಗದಾಗಿಸಬಹುದು. ಅಷ್ಟೂ ಮಾಡದೆ ಆಫ‌ರ್‌ ಅನ್ನು ಖಾಲಿ ಬಿಟ್ಟವರಿಗೆ ನಷ್ಟ. ಈ ಕಾರಣಕ್ಕಾಗಿಯೂ ರೈಟ್ಸ್‌ ಆಫ‌ರ್‌ ಅನ್ನು ಹೆಚ್ಚಾಗಿ ಯಾರೂ ಬಿಟ್ಟು ಬಿಡುವುದಿಲ್ಲ. ಇದರಿಂದಾಗಿಯೂ ಕಂಪೆನಿಗಳಿಗೆ ಧನ ಸಂಗ್ರಹಿಸಲು ಸುಲಭವಾಗುತ್ತದೆ. ಧನ ಸಂಗ್ರಹಿಸುವ ಖರ್ಚು ವೆಚ್ಚಗಳೂ ಹೊಸ ಆಫ‌ರ್‌ಗಿಂತ ಸ್ವಲ್ಪ ಕಡಿಮೆಯಾಗುತ್ತದೆ.

Follow on Public Offer(FPO): ಮಾರುಕಟ್ಟೆಯಲ್ಲಿ ಹೂಡಿಕೆಗಾಗಿ ಧನ ಸಂಗ್ರಹ ಮಾಡುವುದಕ್ಕೆ ಇದು ಇನ್ನೊಂದು ಮಾರ್ಗ.  ಪ್ರಪ್ರಥಮ ಬಾರಿಗೆ ಮಾರುಕಟ್ಟೆಯಲ್ಲಿ ಶೇರು ನೀಡಿ ಹೂಡಿಕೆಗಾಗಿ ಧನ ಸಂಗ್ರಹಕ್ಕೆ ಹೊರಟರೆ ಅದನ್ನು Initial Public Offer (IPO) ಅನ್ನುತ್ತಾರಾದರೆ ಆ ಬಳಿಕ ಮಾರುಕಟ್ಟೆಯಲ್ಲಿ ನೀಡುವ ಶೇರುಗಳಿಗೆ Follow-on Public Offer (FPO) ಎನ್ನುತ್ತಾರೆ. ಇದು ಯಾರಿಗಾದರೂ ಸಿಗಬಹುದಾದಂತಹ ಆಫ‌ರ್‌. ಕೇವಲ ಸದ್ಯದ ಶೇರುದಾರರಿಗೆ ಸಿಗುವಂತಹ ರೈಟ್ಸ್‌ ಆಫ‌ರ್‌ ಅಲ್ಲ. ಅಷ್ಟು ಬಿಟ್ಟರೆ ರೈಟ್ಸ್‌ಗೂ FPOಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಎರಡೂ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ಸಿಗುವಂತಹ ಹೊಸ ಶೇರುಗಳು. ರೈಟ್ಸ್‌ ಇಶ್ಯುನಲ್ಲಿ ರೈಟ್ಸ್‌ ಕೊಳ್ಳದವರಿಗೆ /ಕನಿಷ್ಟ ಆ ಹಕ್ಕನ್ನು ಮಾರುಕಟ್ಟೆಯಲ್ಲಿ ಮಾರದೆ ಹಾಗೇ ಸುಮ್ಮನೆ ಕುಳಿತವರಿಗೆ ನಷ್ಟ ಎಂದು ಹೇಳಿದೆವಷ್ಟೆ? ಅದೇ ರೀತಿಯಲ್ಲಿ ನಷ್ಟಗಳು ಇಲ್ಲೂ ನಡೆಯುತ್ತವೆ. ಊಕOದಲ್ಲೂ ಅದು ಬಂದಾಗ ಅರ್ಜಿ ಹಾಕದೇ ಅಥವಾ ಹಾಕಿದರೂ ಸಿಗದೇ ಇರುವ ಸದ್ಯದ ಶೇರುದಾರರಿಗೆ ನಷ್ಟ. ಸದ್ಯದ ಶೇರುದಾರರಲ್ಲದೆ ಹೊಸದಾಗಿ ಕಂಪೆನಿಗೆ ಪ್ರವೇಶ ಮಾಡುವವರಿಗೆ ಶೇರು ಸಿಕ್ಕಿದಾಗ ಅಂಥವರಿಗೆ ಆ ಲಾಭ ಹೋಗುತ್ತದೆ.
* * *

ಬೋನಸ್‌ ಮತ್ತು ಶೇರು ವಿಭಜನೆ ಒಂದಕ್ಕೊಂದು ಸಂಬಂಧವಿಟ್ಟುಕೊಂಡಂತೆಯೇ, ರೈಟ್ಸ್‌ ಮತ್ತು FPO ಕೂಡ ಒಂದಕ್ಕೊಂದು ಸಂಬಂಧವಿರಿಸಿಕೊಂಡಿವೆ. ಬೋನಸ್‌ ಮತ್ತು ಶೇರು ವಿಭಜನೆ ಹೂಡಿಕೆಯಲ್ಲಿ ಯಾವುದೇ ವ್ಯತ್ಯಾಸವನ್ನೂ ಉಂಟು ಮಾಡದೆ ಪ್ರತಿ ಶೇರಿನ ಮೌಲ್ಯವನ್ನು ಕುಗ್ಗಿಸುವ ಕೆಲಸ ಮಾಡಿದರೆ ರೈಟ್ಸ್‌ ಮತ್ತು FPOಗಳೆರಡೂ ಹೊಸ ಶೇರು ಕ್ಯಾಪಿಟಲ್‌ ಸಂಗ್ರಹಿಸುವ ಕೆಲಸ ಮಾಡುತ್ತವೆ. ಅವೆರಡೂ ಸುಮಾರಾಗಿ ಒಂದೇ ಆದರೆ ಕಂಪೆನಿಗಳು ಅವೆರಡರನ್ನು ಯಾವ ಸಂದರ್ಭಗಳಲ್ಲಿ ಹೇಗೆ ಉಪಯೋಗಿಸಿಕೊಳ್ಳುತ್ತವೆ? ಇಧಮಿತ್ಥಂ ಎಂದು ಹೇಳುವ ಹಾಗಿಲ್ಲ.  ಕೆಲವು ಕಂಪೆನಿಗಳು ರೈಟ್ಸ್‌ ಆಫ‌ರ್‌ ಅನ್ನು ಧನ ಸಂಗ್ರಹಕ್ಕೆ ಸುಲಭದ ದಾರಿ ಎಂಬ ಕಾರಣಕ್ಕೆ ಉಪಯೋಗಿಸಿಕೊಳ್ಳಬಹುದು. ಪಬ್ಲಿಕ್‌ ಆಫ‌ರ್‌ ಮಾಡಿದರೆ ಅದಕ್ಕೆ ರೆಸ್ಪಾನ್ಸ್‌ ಕಡಿಮೆಯಾದೀತೋ ಎಂಬ ಭೀತಿ ಕಾಡುತ್ತಿರಬಹುದು /ಪಬ್ಲಿಕ್‌ ಆಫ‌ರ್‌ ಮಾಡಿ ಸದ್ಯದ ಶೇರುದಾರರಿಗೆ ಅಪಚಾರ ಮಾಡಬಾರದು ಎಂಬ ಆದರ್ಶಕ್ಕಾಗಿ ಮಾಡುತ್ತಿರಬಹುದು/ಪ್ರಚಾರ-ಖರ್ಚು ಕಡಿಮೆ ಎಂದು ರೈಟ್ಸ್‌ ಇಶ್ಯೂ ಮಾಡುತ್ತಿರಬಹುದು… ಹೀಗೆ ಒಂದೊಂದು ಕಂಪೆನಿಗೆ ತನ್ನದೇ ಕಾರಣಗಳಿರುತ್ತವೆ. ಮುಖ್ಯವೆಂದರೆ ಈ ಕಂಪೆನಿಗಳು ಈ ಹೊಸ ಧನರಾಶಿಯನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತವೆ ಎನ್ನುವುದು.

ಹೂಡಿಕೆಯ ಮಾಪನ ಅದರ ಮಾರ್ಗವನ್ನನುಸರಿಸಿ ಆಗಿರದೆ ಅದರ ಉದ್ದೇಶಕ್ಕನುಗುಣವಾಗಿ ಆಗಬೇಕಲ್ಲವೆ? ಕೆಲವು ಕಂಪೆನಿಗಳು ತಮ್ಮ ಸಾಲದ ಹೊರೆಯನ್ನು ತಪ್ಪಿಸುವ ಸಲುವಾಗಿ ಶೇರು ಇಶ್ಯೂ ಮಾಡುತ್ತವೆ. ಅಂತಹ ಸಂದರ್ಭಗಳಲ್ಲಿ ಕಂಪೆನಿ ಆ ಸಾಲಗಳ ಮೇಲೆ ನೀಡುತ್ತಿರುವ ಬಡ್ಡಿಯಂಶದಷ್ಟು ಮಾತ್ರ ಉಳಿತಾಯವಾದೀತು. ಅದು ಸೇರಿಕೊಂಡು ಅಂತಿಮವಾಗಿ ಕಂಪೆನಿಯ ಲಾಭದಲ್ಲಿ ಎಷ್ಟು ವೃದ್ಧಿಯಾದೀತು ಎಂಬುದನ್ನು ನೋಡಬೇಕು. ಇನ್ನು ಕೆಲವು ಕಂಪೆನಿಗಳು ಬಿಸಿನೆಸ್‌ ವಿಸ್ತರಣೆಗಾಗಿ ಬಯಸುತ್ತಿರಬಹುದು. ಆ ಸಂದರ್ಭಗಳಲ್ಲಿ ಅಂತಹ ಚಟುವಟಿಕೆಗಳಿಂದ ಆಗಬಹುದಾದ ದೀರ್ಘ‌ಕಾಲಿಕ ಪರಿಣಾಮಗಳತ್ತ ಜಾಸ್ತಿ ಗಮನ ಕೊಟ್ಟು ಹೂಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ಅದು ರೈಟೆ? FPOವೇ? ಇತ್ಯಾದಿ ಗೌಣ ಧ್ವನ್ಯಾರ್ಥ ಪೀಡಿತ ಆಕರ್ಷಣೆಗಳಿಂದ ವಿಚಲಿತರಾಗಬಾರದು.

– ಜಯದೇವ ಪ್ರಸಾದ ಮೊಳೆಯಾರ ;  [email protected]

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.