ಆಗಲಿದೆ ಎನ್‌.ಪಿ.ಎಸ್‌.ಗೂ ‘FATCA’ ನೋಂದಣಿ ಕಡ್ಡಾಯ


Team Udayavani, May 29, 2017, 11:31 AM IST

FATCA-29-5.jpg

ಅಮೆರಿಕದ ನಿವಾಸಿಗಳ ಭಾರತೀಯ ಆದಾಯದ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡಬೇಕು ಭಾರತ. ಭಾರತದ ನಿವಾಸಿಗಳ ಅಮೆರಿಕದ ಆದಾಯದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಬೇಕು ಅಮೆರಿಕ. ಇದು ಕಾಳಧನ ಹೊರ ತೆಗೆಯಲು ಮಾಡಿಕೊಂಡ ಒಡಂಬಡಿಕೆ.

ನೀವು ಮ್ಯೂಚುವಲ್‌ ಫ‌ಂಡುಗಳಲ್ಲಿ ಹೂಡಿಕೆ ಮಾಡಿದವರಾಗಿದ್ದರೆ ಈ ಫ‌ಟ್ಕಾ ಎಂಬ ಜಂತುವನ್ನು ಬಹಳ ಹತ್ತಿರದಿಂದ ಬಲ್ಲವರಾಗಿರುತ್ತೀರಿ. ಅಮೆರಿಕ ಸರಕಾರ ಅರೆದ ಈ ಫ‌ಟ್ಕಾ ಎಂಬ ಮಸಾಲೆಯ ಗ್ರಹಚಾರ ಮತ್ತೂಮ್ಮೆ ಈಗ ನಮ್ಮ ನಿಮ್ಮ ಎನ್‌.ಪಿ.ಎಸ್‌. ಖಾತೆಗೆ ವಕ್ಕರಿಸಿದೆ. ಈ ಹಿಂದೆ ಎನ್‌.ಪಿ.ಎಸ್‌.ಗಾಗಿ 30.4.2017 ಒಳಗೆ ಫ‌ಟ್ಕಾ ನೋಂದಣಿ ಮಾಡಿಸಿಕೊಳ್ಳದಿದ್ದಲ್ಲಿ  ಖಾತೆ ನಿಷ್ಕ್ರಿಯವಾಗುತ್ತದೆಂಬ ಸೂಚನೆಯನ್ನು ಸರಕಾರ ಹೊರಡಿಸಿದ್ದರೂ, ಬಳಿಕ ಹಿಂಪಡೆದು ಕೊಂಡಿತ್ತು. ಈಗ ಆನ್‌-ಲೈನ್‌ ಆಗಿ ನೋಂದಣಿ ಸೌಲಭ್ಯ ಕರುಣಿಸಿದ್ದರೂ ಕೊನೆಯ ದಿನಾಂಕ ನಿಷ್ಕ್ರಿಯತೆ ಇತ್ಯಾದಿ ಯಾವುದೇ ವಿವರಗಳನ್ನು ನೀಡಿಲ್ಲ. ಆದರೂ ಆದಷ್ಟು ಬೇಗನೆ ಇದನ್ನೂ ಮಾಡಿಸಿಕೊಳ್ಳುವುದು ಉತ್ತಮ. ಶೀಘ್ರವೇ ಇದು ಕಡ್ಡಾಯವಾಗಲಿದೆ. ಅಮೆರಿಕ 2010ರಲ್ಲಿ ಮಾಡಿದ ಕಾನೂನಿನ ಫ‌ಲವಾಗಿ FATCA(Foreign Account Tax Compliance Act) ಕಾನೂನನ್ನು ಭಾರತ ಸಹಿತ ಜಗತ್ತಿನಾದ್ಯಂತ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಏನಿದು ಫ‌ಟ್ಕಾ?: ಅಮೆರಿಕದ ನಿವಾಸಿಗಳು ಅಮೆರಿಕ‌ದ ಹೊರಗೆ ಹೂಡಿಕೆ ಮಾಡಿದರೆ ಅದರಿಂದ ಬಂದ ಆದಾಯದ ಮೇಲೂ ಅಮೆರಿಕದಲ್ಲಿ ಕರಕಟ್ಟಬೇಕೆಂಬ ಕಾನೂನು. (ಇಂಥ ಕಾನೂನು ಭಾರತದಲ್ಲಿಯೂ ಇದೆ) ಆದರೆ ಹಲವರು ವಿದೇಶಿ ಹೂಡಿಕೆಯನ್ನು ಮರೆಮಾಚಿ ಕರಕಟ್ಟದೆ ತಣ್ಣನೆ ಕುಳಿತು ಬಿಡುತ್ತಾರೆ. ಅಂಥವರಲ್ಲಿ ನಮ್ಮ ಎನ್ನಾರೈಗಳೂ ಸೇರಿದ್ದಾರೆ. ಅಮೆರಿಕದ ನಿವಾಸಿಗಳಾದ ಅವರು ಭಾರತದಲ್ಲಿ ಬೇಕಾಬಿಟ್ಟಿ ಶೇರು/ಮ್ಯೂಚುವಲ್‌ ಫ‌ಂಡ್‌/ಭೂಮಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿ ಅಮೆರಿಕದ ಕಾನೂನಿನ ಕಣ್ಣು ತಪ್ಪಿಸಿ ಅಲ್ಲಿ ತೆರಿಗೆ ಕಟ್ಟುತ್ತಿಲ್ಲ. ತಮ್ಮ ನಿವಾಸಿಗಳು ಈ ರೀತಿ ವಿದೇಶಿ ಆದಾಯವನ್ನು ಅಡಗಿಸುವುದನ್ನು ಕಂಡು ಹಿಡಿಯಲು ಅಮೆರಿಕ ಭಾರತ ಸಹಿತ ಹಲವಾರು ರಾಷ್ಟ್ರಗಳೊದನೆ ಒಡಂಬಡಿಕೆ ಮಾಡಿಕೊಂಡಿದೆ. ಆ ಪ್ರಕಾರ ಭಾರತ ಅಮೆರಿಕದ ನಿವಾಸಿಗಳ ಭಾರತೀಯ ಆದಾಯದ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡಬೇಕು. ಹಾಗೆಯೇ ಅಮೆರಿಕ ಭಾರತದ ನಿವಾಸಿಗಳ ಅಮೆರಿಕದ ಆದಾಯದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಲಿರುವುದು. ಇದು ಕಾಳಧನ ಹೊರ ತೆಗೆಯಲು 11 ಏಪ್ರಿಲ್‌ರಿಂದ ಮಾಡಿಕೊಂಡ ಒಡಂಬಡಿಕೆ.

ಫ‌ಟ್ಕಾ ನೋಂದಣಿ: ಫ‌ಟ್ಕಾ ನೋಂದಣಿಯನ್ನು ಪೇಪರ್‌ ಅರ್ಜಿ ಮೂಲಕ ಎನ್‌.ಪಿ.ಎಸ್‌. ಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು. ಕಾರ್ವಿ, ಕ್ಯಾಮ್ಸ್ ಇತ್ಯಾದಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿದರೆ ಅಲ್ಲೇ ಫಾರ್ಮ್ ತುಂಬಿ ಸುಲಭವಾಗಿ ಈ ನೋಂದಣಿ ಮಾಡಬಹುದು. ಕುಳಿತಲ್ಲೇ ಆನ್‌-ಲೈನ್‌ ಆಗಿ ಮಾಡುವ ವ್ಯವಸ್ಥೆಯೂ ಇದೆ.  

ಆನ್‌-ಲೈನ್‌ನಲ್ಲಿ ನೋಂದಣಿ ಮಾಡಿಸಲು ಹೀಗೆ ಮಾಡಿ:
1. ನಿಮ್ಮ  ಎನ್‌.ಪಿ.ಎಸ್‌. ಖಾತೆಗೆ www.cra-nsdl.com ಭೇಟಿ ನೀಡಿ. ಅಲ್ಲಿ ಯೂಸರ್‌ ಐಡಿ (ಪ್ರಾಣ್‌ ನಂಬರ್‌) ಹಾಗೂ ಪಾಸ್‌ ವರ್ಡ್‌ ಬಳಸಿಕೊಂಡು ಲಾಗ್‌-ಇನ್‌ ಆಗಿ. ಈಗಾಗಲೇ ಆನ್‌-ಲೈನ್‌ ರಿಜಿಸ್ಟರ್‌ ಆದವರಿಗೆ  ಮಾತ್ರ ಲಾಗ್‌-ಇನ್‌ ಆಗಲು ಸಾಧ್ಯ. ರಿಜಿಸ್ಟರ್‌ ಆಗಿಲ್ಲದವರು ಮೊದಲು ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು.

2. ಈಗ ಅತ್ಯಂತ ಎಡಬದಿಯಲ್ಲಿ ಕಾಣಸಿಗುವ ಟ್ರಾನ್ಸಾಕ್ಷನ್‌ ಮೆನು ಒತ್ತಿರಿ. ಅಲ್ಲಿ ಅತ್ಯಂತ ಕೆಳಗೆ, ಕೊನೆಗೆ ಬರುವ ಆಯ್ಕೆಯಾದ ಫ‌ಟ್ಕಾ ಸೆಲ್ಫ್ ಸರ್ಟಿಫಿಕೇಶನ್‌ ಒತ್ತಿರಿ.

3. ಈಗ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ಪ್ರಾಣ್‌ ನಂಬರ್‌, ಹೆಸರು, ಹುಟ್ಟಿದ ದೇಶ, ಪೌರತ್ವದ ದೇಶ, ಕರನಿಮಿತ್ತ ವಾಸ್ತವ್ಯದ ದೇಶ, ಅಮೆರಿಕದ ಪ್ರಜೆ ಹೌದು/ಅಲ್ಲ ಎನ್ನುವ ವಿವರ ತುಂಬಬೇಕು. ಅವು ಈಗಾಗಲೇ ತುಂಬಿರುತ್ತವಾದ್ದರಿಂದ ಅವನ್ನು ದೃಢೀಕರಿಸಿದರೆ ಸಾಕು. ಕೆಳಗೆ ಡಿಕ್ಲರೇಶನ್‌ ಬರುತ್ತದೆ. ಕ್ಲಿಕ್‌ ಮಾಡಿ ಸಬ್ಮಿಟ್‌ ಒತ್ತಿ.

4. ಒಟಿಪಿ ತುಂಬುವ ಪುಟ ಬರುತ್ತದೆ. ನಿಮ್ಮ ನೋಂದಾಯಿತ ಫೋನಿಗೆ ಎಸ್ಸೆಮ್ಮೆಸ್‌ ಮೂಲಕ ಒಟಿಪಿ ಬರುತ್ತದೆ. ಅದನ್ನು ಒಟಿಪಿ ಪುಟದಲ್ಲಿ ತುಂಬಿ, ಸಬ್ಮಿಟ್‌ ಬಟನ್‌ ಒತ್ತಿ.

5. ನೋಂದಣಿ ಪೂರ್ಣಗೊಂಡು ದೃಢೀಕರಣ ಕಾಣಿಸುತ್ತದೆ. ಒಂದು ವೇಳೆ ನಿಮ್ಮ ಜನ್ಮ ಸ್ಥಾನ, ಪೌರತ್ವ, ಕರ ನಿಮಿತ್ತ ವಾಸ ಸ್ಥಾನ ಭಾರತದ ಹೊರತಾಗಿ ಬೇರೆ ದೇಶವಾಗಿದ್ದಲ್ಲಿ ಆನ್‌-ಲೈನ್‌ ಆಗಿ ಈ ನೋಂದಣಿ ಮಾಡತಕ್ಕದ್ದಲ್ಲ. ಅದಕ್ಕಾಗಿ ಪ್ರತ್ಯೇಕವಾಗಿ ಆನ್‌-ಲೈನ್‌ ಆಗಿ ಲಭ್ಯವಿರುವ ಅರ್ಜಿ ನಮೂನೆಯಲ್ಲಿ ಕೇಳಿದ ವಿವರಗಳನ್ನು ತುಂಬಿ ಸಿ.ಆರ್‌.ಎ. ವಿಳಾಸಕ್ಕೆ ರವಾನಿಸತಕ್ಕದ್ದು.

ಎನ್‌.ಪಿ.ಎಸ್‌. ಖಾತೆ ತೆರೆಯುವುದು ಹೇಗೆ?: ಎನ್‌.ಪಿ.ಎಸ್‌. ಅನ್ನು ಪಿಒಪಿ ಕೇಂದ್ರಗಳಲ್ಲಿ ತೆರೆಯಬಹುದು. ಪೊಯಿಂಟ್‌ ಆಫ್ ಪ್ರಸೆನ್ಸ್‌ಅಥವಾ ಪಿಒಪಿ ಎಂದು ಕರೆಯಲಾಗುವ ಈ ಸೇವಾ ಕೇಂದ್ರಗಳು ದೇಶದ ಬಹುತೇಕ ಎಲ್ಲ ಸರಕಾರಿ/ಖಾಸಗಿ ಬ್ಯಾಂಕ್‌ಗಳಲ್ಲಿ, ಪೋಸ್ಟಾಫೀಸಿನಲ್ಲಿ, ಕಾರ್ವಿ/ಕ್ಯಾಮ್ಸ್‌ನಂತಹ ಸೇವಾ ಕೇಂದ್ರಗಳಲ್ಲಿ ಇವೆ. ಈ ಸಂಸ್ಥೆಗಳು ತಮ್ಮ ಎಲ್ಲ ಬ್ರಾಂಚ್‌ಗಳಲ್ಲೂ ಸೇವಾ ಕೇಂದ್ರಗಳನ್ನು ತೆರೆದಿರದಿದ್ದರೂ ಮುಖ್ಯ ಪಟ್ಟಣಗಳ ಮುಖ್ಯ ಬ್ರಾಂಚ್‌ಗಳಲ್ಲಿ ಎನ್‌ಪಿಎಸ್‌ ಖಾತೆ ತೆರೆಯುವ ಸೌಲಭ್ಯ ನೀಡುತ್ತವೆ. ಈ ಬಗ್ಗೆ ವಿಚಾರಿಸಿ ನಿಮಗೆ ಅನುಕೂಲವಾದೆಡೆ ಎನ್‌ಪಿಎಸ್‌ ಖಾತೆಗೆ ಅರ್ಜಿ ಗುಜರಾಯಿಸಬಹುದು.

ಫಾರ್ಮ್/ದಾಖಲೆಗಳು: ಎನ್‌ಪಿಎಸ್‌ ಖಾತೆಗೆ ಅಗತ್ಯವಾದ ಎಲ್ಲ ಫಾರ್ಮ್ಗಳು ಬ್ಯಾಂಕ್‌ಗಳ ವೆಬ್‌ಸೈಟ್‌ ಅಥವಾ ಎನ್‌ಪಿಎಸ್‌ಸಿಆರ್‌ಎ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಖಾತೆ ತೆರೆಯಲು ಸಿಎಸ್‌ಆರ್‌-1 ಫಾರ್ಮ್ ಅನ್ನು ಹೂಡಿಕೆಗೆ ಎನ್‌ಸಿಐಎಸ್‌ ಫಾರ್ಮ್ ಅನ್ನೂ ಬಳಸಬೇಕು. ಖಾತೆ ತೆರೆಯಲು ಈ ಕೆಳಗಿನ ದಾಖಲೆಗಳು ಅಗತ್ಯ:
1) ಸೂಕ್ತವಾಗಿ ತುಂಬಿದ ಅರ್ಜಿ, ಫೋಟೋ ಸಹಿತ
2) ವಿಳಾಸ ಪುರಾವೆ
3) ಪ್ಯಾನ್‌ ಕಾರ್ಡ್‌ ಪ್ರತಿ
4) ಬ್ಯಾಂಕ್‌ ಪುರಾವೆ (18-60 ವರ್ಷದ ಎಲ್ಲಾ ಭಾರತೀಯರು ಈ ಖಾತೆ ತೆರೆಯಬಹುದು.) 

ಪ್ರಾಣ್‌: ಒಂದು ಎನ್‌ಪಿಎಸ್‌ ಖಾತೆ ವಿಶಿಷ್ಟವಾದ ಪರ್ಮನೆಂಟ್‌ ರಿಟೈರ್‌ವೆುಂಟ್‌ ಅಕೌಂಟ್‌ ನಂಬರ್‌(ಪಿಆರ್‌ಎಎನ್‌)ನಿಂದ ಗುರುತಿಸಲ್ಪಡುತ್ತದೆ. ನಿಮ್ಮ ಖಾತೆ ತೆರೆದೊಡನೆ ನಿಮಗೆ ಒಂದು ಪ್ರಾಣ್‌ ಕಿಟ್‌ ಬರುತ್ತದೆ. ಅದರಲ್ಲಿ ನಿಮ್ಮ ಪ್ರಾಣ್‌ ಕಾರ್ಡ್‌ ಹಾಗೂ ಎಲ್ಲ ಮಾಹಿತಿಗಳ ಕರಪತ್ರಗಳು ಇರುತ್ತವೆ. ಇದು ನಿಮ್ಮ ಖಾತೆಯ ಯುನಿಕ್‌ ನಂಬರ್‌.  ಒಬ್ಟಾತ ಇನ್ನೊಂದು ಖಾತೆಯನ್ನು ತನ್ನ ಹೆಸರಿನಲ್ಲಿ ತೆರೆಯುವಂತಿಲ್ಲ. ಆದರೆ ಈ ನಂಬರ್‌ ಮೂಲಕ ದೇಶದೆಲ್ಲೆಡೆ ಯಾವ ಪಿಒಪಿಯ ಮೂಲಕವಾದರೂ ಪೆನ್ಷನ್‌ ಖಾತೆಯನ್ನು ಬಳಸಬಹುದು, ವರ್ಗಾಯಿಸಬಹುದು. 

ವಾರ್ಷಿಕ ದೇಣಿಗೆ: ಎನ್‌ಪಿಎಸ್‌ನಲ್ಲಿ ಎರಡು ಉಪಖಾತೆಗಳಿರುತ್ತವೆ. ಕಡ್ಡಾಯವಾದ ಟೈರ್‌-1 ಖಾತೆಯಲ್ಲಿ ವಾರ್ಷಿಕ ಕನಿಷ್ಠ ರೂ. 6000 ಅನ್ನು 1 ಅಥವಾ ಹಲವು ಕಂತುಗಳಲ್ಲಿ ಕಟ್ಟುತ್ತಾ ಮುಂದುವರಿಯಬಹುದು. ಒಂದು ಕಂತಿಗೆ ಕನಿಷ್ಠ ಮಿತಿ ರೂ. 500. ವಾರ್ಷಿಕ ದೇಣಿಗೆ ಗರಿಷ್ಟ ಮಿತಿ ಇಲ್ಲ ಆದರೆ ಕರ ವಿನಾಯಿತಿಗೆ ಮಾತ್ರ ವಿನಾಯಿತಿ ಇರುತ್ತದೆ. ಐಚ್ಛಿಕವಾದ ಒಂದು ಎಸ್‌ಬಿ ಖಾತೆ ಹೋಲುವ ಟೈರ್‌-2 ಖಾತೆಯಲ್ಲಿ ವಾರ್ಷಿಕ ಕನಿಷ್ಠ 1 ದೇಣಿಗೆ ಮತ್ತು ವರ್ಷಾಂತ್ಯದಲ್ಲಿ ಕನಿಷ್ಠ ಉಳಿಕೆ ರೂ. 2,000 ಹೊಂದಿರಬೇಕು. ಕನಿಷ್ಠ ವಾರ್ಷಿಕ ದೇಣಿಗೆ ನೀಡದ ಖಾತೆಗಳನ್ನು ಫ್ರೀಜ್‌ ಮಾಡಲಾಗುತ್ತದೆ.ನಂತರ ಬಾಕಿ ಪಾವತಿ – ಪೆನಾಲ್ಟಿ ತೆತ್ತು ಅಂತಹ ಖಾತೆಗಳನ್ನು ಪುನಃ ಓಪನ್‌ ಮಾಡಬೇಕಾಗುತ್ತದೆ. 

ಸ್ಕೀಮುಗಳು: ನಿಮ್ಮ ಹೂಡಿಕೆಯ ಗರಿಷ್ಠ ಶೇ. 50 ಇಂಡೆಕ್ಸ್‌ ಶೇರುಗಳಲ್ಲೂ (E), ಉಳಿದದ್ದನ್ನು ಸ್ಥಿರ ಆದಾಯದ ಕಾರ್ಪೋರೇಟ್‌ ಸಾಲಪತ್ರ(C) ಹಾಗೂ ಸರಕಾರಿ ಸಾಲಪತ್ರಗಳಲ್ಲಿ (G) ನೀವು ನಿರ್ದೇಶಿಸಿದ ಪ್ರಮಾಣದಲ್ಲಿ ಹೂಡುತ್ತಾರೆ. ಖಾತೆ ತೆರೆಯುವ ವ್ಯಕ್ತಿ ತನ್ನ ರಿಸ್ಕ್ ಧಾರಣೆ ಆಧರಿಸಿ ಬೇಕೆನಿಸಿದ ಅನುಪಾತ ಆಯ್ದುಕೊಳ್ಳಬೇಕು. ಇವೆಲ್ಲವನ್ನೂ ಬಳಿಕ ಬೇಕಾದಂತೆ ಬದಲಾಯಿಸಬಹುದು. ಉ ಆಯ್ಕೆಯಲ್ಲಿ ಇಂಡೆಕ್ಸ್‌ ಶೇರುಗಳಲ್ಲಿ ಅದೇ ಅನುಪಾತದಲ್ಲಿ ಹೂಡಿಕೆ ಮಾಡಲಾಗುತ್ತದೆ. ಮ್ಯೂಚುವಲ್‌ ಫ‌ಂಡುಗಳಂತೆ ತಮಗೆ ಬೇಕಾದ ಶೇರುಗಳಲ್ಲಿ ತೊಡಗಿಸುವ ಸ್ವಾತಂತ್ರ್ಯ ಎನ್‌ಪಿಎಸ್‌ ನಿರ್ವಾಹಕರಿಗೆ ಇರುವುದಿಲ್ಲ. ನಿಮ್ಮ ಆಯ್ಕೆಯ ಬದಲಾಗಿ ಸ್ವಯಂಚಾಲಿತ ಆಯ್ಕೆ ನಮೂದಿಸಿದರೆ ನಿಮ್ಮ ವಯೋಮಾನ ಅನುಸರಿಸಿ ಅವರೇ ಒಂದು ಪೂರ್ವ ನಿಗದಿತ ಕೋಷ್ಟಕದ ಪ್ರಕಾರ ಹೂಡಿಕೆ ಮಾಡುತ್ತಾರೆ. ವಯಸ್ಸು ಏರಿದಂತೆ ಇಕ್ವಿಟಿ ಕಡಿಮೆಯಾಗಿ ಡೆಟ್‌ ಜಾಸ್ತಿಯಾಗುವ ಸೂತ್ರವನ್ನು ಇದರಲ್ಲಿ ಪಾಲಿಸುತ್ತಾರೆ.

ಫ‌ಂಡ್‌ ನಿರ್ವಹಣೆ: ಇದರಲ್ಲಿ ಶೇಖರಗೊಂಡ ದುಡ್ಡಿನ ಹೂಡಿಕೆಯ ಜವಾಬ್ದಾರಿ ಮಾತ್ರ UTI, ICICI, LIC, HDFC  SBI, Kotak Mahindra, Reliance ಕಂಪೆನಿಗಳ ಪೆನ್ಷನ್‌ ಫ‌ಂಡ್‌ಹೌಸ್‌ಗಳಿಗೆ ನೀಡಲಾಗಿದೆ. ಅರ್ಜಿ ಸಮಯದಲ್ಲಿ ಫ‌ಂಡು ನಿರ್ವಾಹಕರನ್ನು ಆಯ್ದುಕೊಳ್ಳುವ ಹಕ್ಕು ನಿಮಗಿದೆ. ಅದನ್ನು ಆಮೇಲೆ ಬದಲಿಸಲೂಬಹುದು; ಆದರೆ ವರ್ಷಕ್ಕೆ ಒಂದೇ ಬಾರಿ.

ಪ್ರತಿಫ‌ಲ: ಮ್ಯೂಚುವಲ್‌ ಫ‌ಂಡ್‌ ರೀತಿಯಲ್ಲೇ ನಡೆಯುವ ಈ ಯೋಜನೆಗೆ ಯಾವುದೇ ಗ್ಯಾರಂಟಿ ಪ್ರತಿಫ‌ಲ ಇಲ್ಲ. ಅಂತಿಮ ಪ್ರತಿಫ‌ಲ ಮಾರುಕಟ್ಟೆ ಆಧಾರದಲ್ಲಿ ಫ‌ಂಡ್‌ ಬೆಳವಣಿಗೆ ಹೊಂದಿರುತ್ತದೆ. ಮೂರು ರೀತಿಯ ಫ‌ಂಡುಗಳಿಗೂ ಪ್ರತ್ಯೇಕ ಪ್ರತಿಫ‌ಲ ಇರುತ್ತದೆ. ಕಳೆದ 5 ವರ್ಷಗಳ ಸಾಧನೆಯನ್ನು ನೋಡಿದರೆ ಎನ್‌ಪಿಎಸ್‌ ವಾರ್ಷಿಕ ಶೇ. 10-13 ಪ್ರತಿಫ‌ಲ ನೀಡಿದ್ದನ್ನು  ಕಾಣಬಹುದು.  ಆದರೆ ಇದು ಸಂಪೂರ್ಣವಾಗಿ ಮಾರುಕಟ್ಟೆಯ ಹಿಡಿತದಲ್ಲಿದ್ದು ಹಿಂದಿನ ಪ್ರತಿಫ‌ಲ ಮುಂಬರುವ ಪ್ರತಿಫ‌ಲಗಳ ಮುನ್ಸೂಚನೆಯಲ್ಲ ಎಂಬುದನ್ನು ಅರಿಯಬೇಕು.

– ಜಯದೇವ ಪ್ರಸಾದ ಮೊಳೆಯಾರ ;  [email protected]

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.