ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕೆಲವು ಬದಲಾವಣೆಗಳು 


Team Udayavani, Jun 5, 2017, 12:45 PM IST

Sukanaya.jpg

ಇದು ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲಾದ ಒಂದು ವಿಶಿಷ್ಟ ಯೇಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುವಂತಹ ಒಂದು ಯೋಜನೆ.  10 ವರ್ಷಗಳ ಒಳಗಿನ ವಯಸ್ಸಿನ ಹೆಣ್ಣು ಮಕ್ಕಳಿರುವವರಿಗೆ ಸುಕನ್ಯಾ ಸಮೃದ್ಧಿ ಒಂದು ವರದಾನವೇ ಸರಿ. ಹೆಣ್ಣು ಮಕ್ಕಳು ಇರುವವರು ಈ ನಿಟ್ಟಿನಲ್ಲಿ ಯೋಚಿಸುವುದು ಉತ್ತಮ.

ಮೋದಿ ಸರಕಾರದ ಆಶೋತ್ತರಗಳಲ್ಲಿ ಒಂದಾದ “ಭೇಟಿ ಬಚಾವೋ, ಭೇಟಿ ಪಡಾವೋ’ ಯೋಜನೆ ಅಂಗವಾಗಿ ಕೇಂದ್ರ ಸರಕಾರ ಮೈನರ್‌ ಹೆಣ್ಣು ಮಕ್ಕಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ “ಸುಕನ್ಯಾ ಸಮೃದ್ಧಿ’ ಯೋಜನೆಯನ್ನು 2 ಡಿಸೆಂಬರ್‌ 2014ರಂದು ಬಿಡುಗಡೆ ಮಾಡಿದೆ. ಈ  ಯೋಜನೆಯು 18.5.2016ರ ಗಜೆಟ್‌ ಪ್ರಕಟನೆ ಮೂಲಕ ಕೆಲವು ಮುಖ್ಯ ಬದಲಾವಣೆಗಳನ್ನು ಕಂಡಿದೆ. ಈ ಬದಲಾವಣೆಗಳನ್ನು ಒಳಗೊಂಡಂತೆ ಸ್ಕೀಮಿನ ಕೆಲ ವಿವರ ಈ ಕಳಗಿನಂತಿವೆ.
 
ಇದೊಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್‌ ಮತ್ತು ಸರಕಾರಿ ಬ್ಯಾಂಕ್‌ಗಳಲ್ಲಿ ಇದರ ಖಾತೆ ತೆರೆಯಬಹುದು. ಈ ಖಾತೆಯನ್ನು ಹೆತ್ತವರು ಅಥವಾ ರಕ್ಷಕರು ತೆರಯಬಹುದು. ಹೆತ್ತವರು/ರಕ್ಷಕರು ಕೇವಲ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು. ಆದರೆ, ಅವಳಿ/ತ್ರಿವಳಿ ಹೆರಿಗೆಯಾಗಿದ್ದಲ್ಲಿ ಮೂರನೆಯ ಹೆಣ್ಣು ಮಗುವಿಗೂ ಖಾತೆ ತೆರೆಯಬಹುದು. ಒಂದು ಹೆಣ್ಣು ಮಗುವಿನ ಮೇಲೆ ದೇಶಾದ್ಯಂತ  ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ. 

ಈ ಖಾತೆಯನ್ನು ಬ್ಯಾಂಕ್‌ನಿಂದ ಪೋಸ್ಟಾಫೀಸಿಗೂ ಹಾಗೂ ತದ್ವಿರುದ್ಧ ಗತಿಯಲ್ಲೂ ಯಾವುದೇ ಶುಲ್ಕವಿಲ್ಲದೆ ವರ್ಗಾಯಿಸಬಹುದು.  

ವಯೋಮಿತಿ: ಖಾತೆ ತೆರೆಯುವಾಗ ಹೆಣ್ಣು ಮಗುವಿಗೆ 10 ವರ್ಷ  ಮೀರಿರಬಾರದು. (ಆದರೆ, ಸ್ಕೀಮು ಆರಂಭದ (2.12.1014) ವರ್ಷ ಮಾತ್ರವೇ ಹಿಂದಿನ ಒಂದು ವರ್ಷದಲ್ಲಿ 10 ತುಂಬಿದವರಿಗೂ ವಿಶೇಷ ರಿಯಾಯಿತಿಯಾಗಿ ಈ ಖಾತೆಯನ್ನು ತೆರೆಯುವ ಅನುಮತಿ ನೀಡಲಾಗಿತ್ತು. ಅಂದರೆ 2 ಡಿಸೆಂಬರ್‌ 2013ರಿಂದ 1 ಡಿಸೆಂಬರ್‌ 2014ರಲ್ಲಿ 10 ತುಂಬಿದವರು. ಆದರೆ, ಈಗ ರಿಯಾಯಿತಿ ಇಲ್ಲ. )

ಪೌರತ್ವ: ಭಾರತೀಯ ಪೌರತ್ವಕ್ಕೆ ಮಾತ್ರ ಅನ್ವಯವಾಗುವ ಈ ಖಾತೆಯನ್ನು ಬೇರೆ ದೇಶದ ಪೌರತ್ವ ಪಡೆದೊಡನೆ ಮುಚ್ಚಬೇಕು
ಖಾತೆ ಬದಲಾವಣೆ: ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ಅನಂತರ ಹೆಣ್ಣು ಮಗು ಸ್ವತಃ ಚಲಾಯಿಸಬಹುದು. ಇದಕ್ಕಾಗಿ ಒಂದು ಪಾಸ್‌ ಬುಕ್‌ ನೀಡಲಾಗುತ್ತದೆ. 

ಖಾತೆಯ ಅವಧಿ: ಈ ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷಗಳ ವರೆಗೆ. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 15 (ಮೊದಲು 14 ಇತ್ತು) ವರ್ಷಗಳು ಮಾತ್ರ. 21 ವರ್ಷಗಳ ಬಳಿಕೆ ಖಾತೆಯ ಮೇಲೆ ಯಾವುದೇ ಬಡ್ಡಿ ಸಿಗಲಾರದು. (ಈ ಬದಲಾವಣೆ ಮೊದಲು ಖಾತೆ ಮುಂದುವರಿಸಬಹುದಿತ್ತು, ಹಾಗೂ ಬಡ್ಡಿ ಸಿಗುತ್ತಲಿತ್ತು)

ಕಂತು: ಕನಿಷ್ಠ ರೂ. 1000ದೊಂದಿಗೆ  ಈ ಖಾತೆ ಆರಂಭ ಮಾಡಬಹುದು. ಆ ಬಳಿಕ ವಾರ್ಷಿಕ ಗರಿಷ್ಠ ರೂ. 150000ವನ್ನು ಖಾತೆಗೆ ಕಟ್ಟಬಹುದು. ಗರಿಷ್ಠ ಮಿತಿ ಮೀರಿ ಠೇವಣಿ ಮಾಡಿದರೆ ಆ ಹೆಚ್ಚುವರಿ ಮೊತ್ತದ ಮೇಲೆ ಬಡ್ಡಿ ಸಿಗಲಾರದು. ಅಲ್ಲದೆ ಆ ಮೊತ್ತವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು. ಈ ಖಾತೆಗೆ ವಾರ್ಷಿಕ ಕನಿಷ್ಠ ಠೇವಣಿಯ ಮಿತಿ ರೂ. 1000. ಯಾವುದೇ ವರ್ಷ ಈ ಕನಿಷ್ಠ ಠೇವಣಿ ಕಟ್ಟದೇ ಇದ್ದಲ್ಲಿ ಅದನ್ನು ವಾರ್ಷಿಕ ರೂ. 50ರ ತಪ್ಪು ದಂಡದೊಂದಿಗೆ 15 ವರ್ಷಗಳ ಅವಧಿ ವರೆಗೂ ಈ ರೀತಿ ತಪ್ಪು ದಂಡ ಕಟ್ಟಿ ಒಂದು ನಿಷ್ಕ್ರಿಯ ಖಾತೆ ಊರ್ಜಿತಗೊಳಿಸದಿದ್ದಲ್ಲಿ ಆ ಖಾತೆಯಲ್ಲಿ ಆರಂಭದಿಂದ ಮಾಡಿದ ಎಲ್ಲ ಠೇವಣಿಗಳ ಮೇಲೂ ಎಸ್‌.ಬಿ. ಖಾತೆಯ ಬಡ್ಡಿ ದರ ಮಾತ್ರವೇ ಸಿಕ್ಕೀತು. ಇದೊಂದಿ ಕರಾಳ ಕಾಯಿದೆ.  ಈ ಕಾಯಿದೆ ಪ್ರಕಾರ ಒಮ್ಮೆ ತೆರೆದ ಸುಕನ್ಯಾ ಸಮೃದ್ಧಿ ಖಾತೆಯನ್ನು ಮಧ್ಯದಲ್ಲಿ ಶಾಶ್ವತವಾಗಿ ಕೈಬಿಡಬಾರದು. ಒಂದೊಮ್ಮೆ ಕಂತು ಕಟ್ಟುವುದು ಬಿಟ್ಟು ಹೋದರೂ ಅದನ್ನು ಕೂಡಲೇ ತಪ್ಪುದಂಡ ಕಟ್ಟಿ ಜೀವಂತವಾಗಿಸಿಕೊಳ್ಳಬೇಕು. ಈ ಕಾಯಿದೆ ಅಪವಾದವೆಂದರೆ ಮಗುವಿನ ಹೆತ್ತವರ/ರಕ್ಷಕರ ಮೃತ್ಯು ಸಂಭವಿಸಿದ ಸಂದರ್ಭ (ಮಾತ್ರ) ಖಾತೆಯ ಮಧ್ಯದಲ್ಲಿ ಶಾಶ್ವತವಾಗಿ ನಿಷ್ಕ್ರಿಯ ವಾದರೂ ಮಾಮೂಲಿ ಬಡ್ಡಿ ಸಿಗುತ್ತದೆ. 

ಪಾವತಿ: ಮೊದಲು ನಗದು, ಚೆಕ್‌ ಅಥವಾ ಡಿಡಿ ಮೂಲಕ ಮಾತ್ರ ಸಾಧ್ಯವಿದ್ದ ಪಾವತಿ ಈಗ ವಿದ್ಯುನ್ಮಾನ ಪಾವತಿಯ ಮೂಲಕವೂ ಸಾಧ್ಯವಾಗಿದೆ. 

ಬಡ್ಡಿದರ: ಅಂಚೆಯ ಸಣ್ಣ ಉಳಿತಾಯದಲ್ಲಿ ಪ್ರತಿ ತ್ತೈಮಾಸಿಕ ಅವಧಿಗೆ ಬಡ್ಡಿ ದರಗಳನ್ನು ಪೂರ್ವಭಾವಿಯಾಗಿ ಘೋಷಿಸುವ ಕಾನೂನು ಬಂದಿದೆ. ಹಾಗೆಯೇ ಈ ಸ್ಕೀಮಿನ ಬಡ್ಡಿ ದರವೂ ಪ್ರತಿ ತ್ತೈಮಾಸಿಕ ವರ್ಷ ಬದಲಾಗುತ್ತದೆ. ಸದ್ಯಕ್ಕೆ ಘೋಷಿತ  ವಾರ್ಷಿಕ ಬಡ್ಡಿ ದರ ಶೇ. 8.4 ಇದು ಪಿ.ಪಿ.ಎಫ್. (ಶೇ. 7.9) 5 ವರ್ಷದ ಎನ್‌ಎಸ್‌ಸಿ (ಶೇ. 7.9) ಹಾಗೂ ಎಂಐಎಸ್‌ (ಶೆ. 7.6) ಗಳಿಗಿಂತ ಜಾಸ್ತಿ. ಸೀನಿಯರ್‌ ಸಿಟಿಜನ್‌ ಸ್ಕೀಮಿನಲ್ಲಿ ಮಾತ್ರ ಅಂಚೆ ಇಲಾಖೆ ಶೇ. 8.4 ಬಡ್ಡಿ ದರ ನೀಡುತ್ತದೆ. ಪ್ರತಿ ತ್ತೈಮಾಸಿಕ ಘೋಷಿತವಾದ ಬಡ್ಡಿ ದರ ಆ ತ್ತೈಮಾಸಿಕಕ್ಕೆ ಮಾತ್ರವೇ ಅನ್ವಯವಾಗುತ್ತದೆ-ಮುಂದಿನ ತ್ತೈಮಾಸಿಕಕ್ಕೆ ಪುನಃ ಹೊಸ ಬಡ್ಡಿ ದರ. ಆದರೆ, ಈ ತ್ತೈಮಾಸಿಕವಾಗಿ ಅನ್ವಯವಾಗುವ ಬಡ್ಡಿಯನ್ನು ವಾರ್ಷಿಕವಾಗಿ ವರ್ಷಾಂತ್ಯದಲ್ಲಿ ಮಾತ್ರವೇ ಕ್ರೆಡಿಟ್‌ ಮಾಡಲಾಗುತ್ತದೆ. ಮತ್ತದು ವಾರ್ಷಿಕವಾಗಿಯೇ ಚಕ್ರೀಕೃತಗೊಳ್ಳುತ್ತದೆ. ಪ್ರತಿ ತಿಂಗಳ 10ನೇ ತಾರೀಕಿನ ಹಾಗೂ ಮಾಸಾಂತ್ಯದ ನಡುವಿನ ಕನಿಷ್ಠ ಬ್ಯಾಲೆನ್ಸ್‌ ಮೊತ್ತದ ಮೇಲೆ ಆ ತಿಂಗಳಿನ ಬಡ್ಡಿ ಲೆಕ್ಕ ಹಾಕಲಾಗುತ್ತದೆ. 

ಅವಧಿಪೂರ್ವ ಹಿಂಪಡೆತ: ಪಿಪಿಎಫ್ ಖಾತೆಯಂತೇ ಇಲ್ಲೂ ಅವಧಿಪೂರ್ವ ಹಿಂಪಡೆತ ಮಾಡಬಹುದು.  ಖಾತೆದಾರಳ ಉಚ್ಚ ಶಿಕ್ಷಣದ ಸಂದರ್ಭ ನಿಮಿತ್ತ ಖಾತೆಯಲ್ಲಿ ಹಿಂದಿನ ವರ್ಷಾಂತ್ಯದಲ್ಲಿದ್ದ ಮೊತ್ತದ ಶೇ. 50 ಭಾಗ ಹಿಂಪಡೆಯಬಹುದು. ಆದರೆ, ಇದಕ್ಕಾಗಿ ಅವಳಿಗೆ 18 ತುಂಬಿರಬೇಕಾದುದು ಅವಶ್ಯ ಅಥವಾ ಹತ್ತನೇ ತರಗತಿ ತೇರ್ಗಡೆ ಆಗಿರಬೇಕಾಗಿರುತ್ತದೆ. ಈ ಸಂದರ್ಭ ವಿದ್ಯಾಭ್ಯಾಸ ಹಾಗೂ ಪೀಸಿನ ಸಂಪೂರ್ಣ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಒಂದೇ ಏಟಿಗೆ ಅಥವಾ ಕಂತು ಕಂತಾಗಿ ಈ ಸೌಲಭ್ಯ ಬಳಸಿಕೊಳ್ಳಬಹುದು. ಇದರಲ್ಲಿ ಪಿಪಿಎಫ್ನಂತೆ ಸಾಲ ಸೌಲಭ್ಯ ಇಲ್ಲ. 

ಅವಧಿಪೂರ್ವ ಮುಕ್ತಾಯ: 18 ತುಂಬಿ ಮದುವೆ ಆಗುವ ಸಂದರ್ಭದಲ್ಲಿ ಮಾತ್ರ ಈ ಖಾತೆಯನ್ನು ಅವಧಿಪೂರ್ವ ಮುಕ್ತಾಯಗೊಳಿಸಿ ಸಂಪೂರ್ಣ ದುಡ್ಡನ್ನು ವಾಪಾಸು ಪಡೆದು ಕೊಳ್ಳಲು ಬರುತ್ತದೆ. ಮದುವೆಯ 1 ತಿಂಗಳು ಮೊದಲು ಅಥವಾ 3 ತಿಂಗಳು ಅನಂತರದ ಅವಧಿಯೊಳಗೆ ಮುಕ್ತಾಯ ನಡೆಯತಕ್ಕದ್ದು. ಈ ಮೊದಲು ಮದುವೆ ಕಾರಣಕ್ಕೆ ಸೇ. 50 ಹಿಂಪಡೆತ ಸೌಲಭ್ಯ ಮಾತ್ರ ಇದ್ದಿದ್ದು, ಈಗ ಶೇ. 100 ಮುಕ್ತಾಯದ ಸೌಲಭ್ಯ ನೀಡಲಾಗಿದೆ. 

ಕರ ವಿನಾಯಿತಿ: ಈ ಯೋಜನೆಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಕರ ವಿನಾಯಿತಿ ಘೋಷಿಸಲಾಗಿದೆ. ಅಂದರೆ ಪಿಪಿಎಫ್, ವಿಮೆ, 5 ವರ್ಷದ ಬ್ಯಾಂಕ್‌ ಎಫ್ಡಿ, ಎನ್‌ಎಸ್‌ಸಿ ಇತ್ಯಾದಿ ಯೋಜನೆಗಳ ಒಟ್ಟಾರೆ ಮಿತಿ ರೂ. 15,0000ದ ಒಳಗೆ ಇದನ್ನೂ ಸೇರಿಸಿಕೊಳ್ಳಲಾಗಿದೆ. 

ಅದಲ್ಲದೆ, ಪಕ್ಕಾ ಪಿಪಿಎಫ್ ಶೈಲಿಯಲ್ಲಿಯೇ ಇದರಲ್ಲಿ ಬರುವ ಬಡ್ಡಿಯ ಮೇಲೂ ಯಾವುದೇ ರೀತಿಯ ಕರ ಇರು ವುದಿಲ್ಲ. ಅಂದರೆ ಪ್ರತಿ ವರ್ಷ ಖಾತೆಗೆ ಸೇರಿಸಲಾಗುವ ಬಡ್ಡಿಯ ಮೇಲಾಗಲಿ ಅಥವಾ ಮೆಚ್ಯುರಿಟಿಯ ಸಂದರ್ಭ ಹಿಂಪಡೆಯುವ ಮೊತ್ತಕ್ಕಾಗಲಿ ಯಾವುದೇ ರೀತಿಯ ಆದಾಯ ಕರ ಇರುವುದಿಲ್ಲ. ಇದೊಂದು exempt-exempt-exempt ಮಾದರಿಯ  ಮೂರು ಹಂತಗಳಲ್ಲಿ ಕರ ವಿನಾಯಿತಿ ನೀಡುವ ಕಾಮಧೇನು. 

ವಿಶ್ಲೇಷಣೆ: ಇದು ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸ ಲಾದ ಒಂದು ವಿಶಿಷ್ಟ ಯೇಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುವಂತಹ ಒಂದು ಯೋಜನೆ. ಅವಧಿಯ ದೃಷ್ಟಿಯಿಂದಲೂ ದೀರ್ಘ‌ಕಾಲಕ್ಕೆ ಧನ ಸಂಚಯ ಮಾಡುವಂತಹ ಯೋಜನೆ. 

ಬಡ್ಡಿ ದರವೂ ಅತ್ಯುತ್ತಮವಾಗಿದೆ. ಪಿಪಿಎಫ್ ಖಾತೆ ಗಿಂತಲೂ ಜಾಸ್ತಿ ಬಡ್ಡಿ ನೀಡುವುದು ಇದರ ವಿಶೇಷತೆ. ವಾರ್ಷಿಕ ಶೇ. 8.4 ಬಡ್ಡಿ ಇನ್ಯಾವ ಸಾಧಾರಣ ಖಾತೆಗಳಲ್ಲೂ ಲಭ್ಯವಿಲ್ಲ . (ಸೀನಿಯರ್‌ ಸಿಟಿಜನ್‌ ಖಾತೆಯಲ್ಲಿ ಮಾತ್ರ ಶೇ. 8.4 ದೊರಕುತ್ತದೆ. ) ಈ ನಿಟ್ಟಿನಲ್ಲಿ ಸರಕಾರ ಉತ್ತಮ ಯೋಜನೆಯನ್ನೇ ಹಾಕಿಕೊಂಡಿದೆ. 

ಒಟ್ಟಿನಲ್ಲಿ 10 ವರ್ಷಗಳ ಒಳಗಿನ ವಯಸ್ಸಿನ ಹೆಣ್ಣು ಮಕ್ಕಳಿರುವವರಿಗೆ ಸುಕನ್ಯಾ ಸಮೃದ್ಧಿ ಒಂದು ವರದಾನವೇ ಸರಿ. ಹೆಣ್ಣು ಮಕ್ಕಳು ಇರುವವರು ಈ ನಿಟ್ಟಿನಲ್ಲಿ ಯೋಚಿಸುವುದು ಉತ್ತಮ. ಹೆಣ್ಣು ಮಕ್ಕಳ ಇಲ್ಲದವರು ಕೂಡ ಈ ನಿಟ್ಟಿನಲ್ಲಿ ಯೋಜಿಸುವುದು ಉತ್ತಮ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.