ಆದಾಯ ಕರ ರಿಟರ್ನ್ಸ್ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 31


Team Udayavani, Jun 26, 2017, 3:45 AM IST

TAX-24.jpg

ವಿತ್ತ ವರ್ಷ 2016-17, ಮಾರ್ಚ್‌ 31, 2017ರಂದು ಕೊನೆಗೊಂಡಿದ್ದು, ಆ ವರ್ಷದ ಆದಾಯ ಮತ್ತು ಕರದ ಬಗ್ಗೆ ಕರ ಹೇಳಿಕೆ ಅಥವಾ ರಿಟರ್ನ್ಸ್ ಫೈಲಿಂಗ್‌ ಇದೇ ಜುಲೈ 31 2017ರ ಒಳಗಾಗಿ ಮಾಡಬೇಕಾಗಿದೆ. ಯಾವುದೇ ಗೊಂದಲವಿಲ್ಲದೆ ಈ ಬಾರಿಯ ಕರಹೇಳಿಕೆಯನ್ನು ಇದರ ಅನುಸಾರ ಸಲ್ಲಿಸಿಬಿಡಿ. 

ಮೊತ್ತಮೊದಲನೆಯದಾಗಿ ಸರ್ವರೂ ಈ ಒಂದು ಅಂಶವನ್ನು ಸರಿಯಾಗಿ ಮನನ ಮಾಡಿಕೊಳ್ಳಿ. ಮೊನ್ನೆ ಫೆಬ್ರವರಿಯಲ್ಲಿ ಘೋಷಣೆಯಾದ ಬಜೆಟ್ಟಿನ ಅಂಶಗಳು ಸದ್ರಿ ಕರಸಲ್ಲಿಕೆಗೆ ಅನ್ವಯವಾಗುವುದಿಲ್ಲ. (ಫೆಬ್ರವರಿ 2017ರಲ್ಲಿ ಘೋಷಣೆಯಾದ ಬಜೆಟ್‌ ವಿತ್ತೀಯ ವರ್ಷ 2017-18 ಅಂದರೆ ಅಸೆಸೆಟ್‌ ವರ್ಷ 2018-19ಕ್ಕೆ ಅನ್ವಯವಾಗುತ್ತದೆ.) ಸದ್ರಿ ರಿಟರ್ನ್ ಫೈಲಿಂಗ್‌ ವಿತ್ತೀಯ ವರ್ಷ 2016-17 ಅಂದರೆ ಅಸೆಸೆಟ್‌ ವರ್ಷ 2017-18ಕ್ಕೆ ಸಂಬಂಧಪಟ್ಟದ್ದಾಗಿದೆ. ಇದಕ್ಕೆ ಅನ್ವಯವಾಗುವ ಬಜೆಟ್‌ 2016ರಲ್ಲಿ ಘೋಷಿತವಾದದ್ದು. ಈ ಸರಳ ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಸಾವಿರಾರು ಜನ ಗೊಂದಲಕ್ಕೆ ಒಳಗಾಗಿ ಮಂಡೆಬಿಸಿ ಮಾಡಿಕೊಂಡು ನಿದ್ದೆಗೆಡುತ್ತಿದ್ದಾರೆ.  
 
ಈಗ ಒಬ್ಟಾತ ವ್ಯಕ್ತಿಯ ಆದಾಯದ ಹಲವು ಮೂಲಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳೋಣ:

1. ಸಂಬಳದ ಆದಾಯ: ಉದ್ಯೋಗದಾತರು ಸಂಬಳದ ವಿವಿಧ ಭಾಗಗಳನ್ನು ಕರಾರ್ಹ ಮತ್ತು ಕರಮುಕ್ತವೆಂದು ವಿಂಗಡಿಸಿ ಪ್ರತಿಯೊಬ್ಬರಿಗೂ ಅನ್ವಯಿಸುವಂತೆ ತೆರಿಗೆಯನ್ನು ಸಂಪೂರ್ಣವಾಗಿ ಕಡಿದೇ ಸಂಬಳ ನೀಡುತ್ತಾರೆ. ಫಾರ್ಮ್ 16 ನಮೂನೆಯಲ್ಲಿ ಸಂಬಳ ಹಾಗೂ ಕರದ (ಟಿಡಿಎಸ್‌) ಎಲ್ಲ ವಿವರಗಳನ್ನು ಕೊಟ್ಟಿರುತ್ತಾರೆ. 
 
2. ಗೃಹ ಸಂಬಂಧಿ ಆದಾಯ: ನಿಮಗೆ ಮನೆ/ಮನೆಗಳು ಇದ್ದರೆ ಅದರಿಂದ ಬರುವ ಆದಾಯವು ಈ ವಿಭಾಗದಲ್ಲಿ ಬರುತ್ತದೆ. ಸೆಕ್ಷನ್‌ 24ರ ಪ್ರಕಾರ ಸ್ವಂತ ವಾಸದ ಮನೆಯಿದ್ದಲ್ಲಿ ಆದಾಯ ಶೂನ್ಯವಾದರೂ ಅದರ ಮೇಲೆ ಪಡೆದ ಗೃಹಸಾಲದ ಬಡ್ಡಿಯನ್ನು ವಾರ್ಷಿಕ ರೂ. 2,00,000ವರೆಗೆ ಕಳೆಯಬಹುದಾಗಿದೆ. ಅಂದರೆ ತತ್ಪರಿಣಾಮವಾಗಿ, ಸಂಬಳ ಅಥವಾ ಇನ್ನಿತರ ಆದಾಯದಿಂದ ರೂ. 2,00,000 ಅನ್ನು ಕಳೆಯಬಹುದಾಗಿದೆ. ಅಲ್ಲದೆ, ಬಾಡಿಗೆಗೆ ನೀಡಿದ ಮನೆಯಿದ್ದರೆ ಅದರ ಮೇಲೆ ನೀಡುವ ಬಡ್ಡಿಯನ್ನು ಯಾವುದೇ ಮಿತಿ ಇಲ್ಲದೆ ಕಳೆಯಲ್ಪಡುತ್ತದೆ. ಆದರೆ ಬರುವ/ಬರತಕ್ಕ ಬಾಡಿಗೆಯನ್ನು ಆದಾಯವಾಗಿ ತೆಗೆದುಕೊಳ್ಳಬೇಕು. ಮುನಿಸಿಪಲ್‌ ಟ್ಯಾಕ್ಸ್‌ ಹಾಗೂ ನಿವ್ವಳ ಬಾಡಿಗೆಯ ಶೇ.30ದಷ್ಟು ನಿರ್ವಹಣಾ ವೆಚ್ಚವನ್ನು ಆದಾಯದಿಂದ ಕಳೆಯಬಹುದಾಗಿದೆ. 

ಅದಲ್ಲದೆ, ಸೆಕ್ಷನ್‌ 80ಇಇ ಪ್ರಕಾರ 2016-17ನೆಯ ವಿತ್ತೀಯ ವರ್ಷದಲ್ಲಿ ವಿತ್ತೀಯ ಸಂಸ್ಥೆಯಿಂದ ಸಾಲ ಪಡಕೊಂಡು ತಮ್ಮ ಪ್ರಪ್ರಥಮ ಮನೆಯನ್ನು ಮಾಡಿಕೊಂಡಿದ್ದಲ್ಲಿ ಅಂತಹ ಸಾಲದ ಬಡ್ಡಿಯ ಮೇಲೆ ಹೆಚ್ಚುವರಿ ರೂ.50,000 ವಾರ್ಷಿಕ ರಿಯಾಯಿತಿಯನ್ನು ನೀಡಲಾಗು ತ್ತದೆ. ಇದಕ್ಕೆ ಸಾಲದ ಮೊತ್ತ ರೂ. 35 ಲಕ್ಷದ ಒಳಗೆ ಹಾಗೂ ಮನೆಯ ಒಟ್ಟು ಬೆಲೆ ರೂ. 50 ಲಕ್ಷದ ಒಳಗೆ ಇರಬೇಕು. ಆ ಬಳಿಕ ಈ ಸ್ಕೀಮು ರ¨ªಾಗಿದ್ದರೂ 2016-17ರಲ್ಲಿ ಒಮ್ಮೆ ಪಡಕೊಂಡ ಸೌಲಭ್ಯವನ್ನು ಸಾಲ ತೀರುವವರೆಗೆ ಮುಂದುವರಿಸಿಕೊಂಡು ಹೋಗಬಹುದಾಗಿದೆ. 

ಇತರ ಆದಾಯ: ಇಲ್ಲಿ ಇತರ ಮೂಲಗಳಿಂದ ಬರುವ ಆದಾಯ  ಮುಖ್ಯವಾಗಿ ಬಡ್ಡಿ/ಡಿವಿಡೆಂಡುಗಳ  ಆದಾಯ – ಬರುತ್ತದೆ. ಇದರಲ್ಲಿ ಪಿಪಿಎಫ್ ಬಡ್ಡಿ, ಷೇರು ಹಾಗೂ ಮ್ಯೂಚುವಲ್‌ ಫ‌ಂಡಿನ ಡಿವಿಡೆಂಡುಗಳು ಸೆಕ್ಷನ್‌ 10 ಪ್ರಕಾರ ಕರಮುಕ್ತವಾಗಿವೆ. ಎಸ್‌ಬಿ ಬಡ್ಡಿಯು ಸೆಕ್ಷನ್‌ 80ಟಿಟಿಎ ಪ್ರಕಾರ ವಾರ್ಷಿಕ ರೂ. 10,000ದವರೆಗೆ ಕರಮುಕ್ತವಾಗಿದೆ. ಉಳಿದಂತೆ ಎಫ್ಡಿ ಮತ್ತಿತರ ಬಡ್ಡಿಗಳ ಮೇಲೆ ತೆರಿಗೆ ಇದೆ. ಬ್ಯಾಂಕ್‌ ನೀಡುವ 16ಎ ಫಾರ್ಮಿನಲ್ಲಿ ಬಡ್ಡಿ ಆದಾಯ ಹಾಗೂ ಟಿಡಿಎಸ್‌ ವಿವರಗಳು ಇರುತ್ತವೆ.

ಬಿಸಿನೆಸ್‌ ಆದಾಯ: ಇದರಡಿಯಲ್ಲಿ ಬಿಸಿನೆಸ್‌ನಿಂದ ಎಲ್ಲ ಖರ್ಚುಗಳನ್ನೂ ಕಳೆದು ಬರುವ ಲಾಭಾಂಶವನ್ನು ಆದಾಯವಾಗಿ ತೆಗೆದುಕೊಳ್ಳತಕ್ಕದ್ದು. ಇದು ಸರಳವಾದ ವಿಚಾರವಲ್ಲ. ಇದನ್ನು ಪ್ರತ್ಯೇಕವಾಗಿ ನೋಡಬೇಕು.

ಕ್ಯಾಪಿಟಲ್‌ ಗೈನ್ಸ್‌: ಇದು ಹೂಡಿಕೆಯಿಂದ ಬರುವ ಆದಾಯ ವಲ್ಲ. ಬದಲಾಗಿ ಹೂಡಿಕೆಯನ್ನೇ ಮಾರಿದಾಗ ಬರುವ ಧನವೃದ್ಧಿ. ಇದಕ್ಕೆಕರವನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತದೆ. ಅದನ್ನಿಲ್ಲಿ ಕೊಟ್ಟಿಲ್ಲ. 

ಒಟ್ಟು ಸಮಗ್ರ ಆದಾಯ: ಕರ ಇಲಾಖೆಯ ಪ್ರಕಾರ ಗ್ರಾಸ್‌ ಟೋಟಲ್‌ ಇನ್‌ಕಮ್‌ ಅಥವಾ ಒಟ್ಟು ಸಮಗ್ರ ಆದಾಯ ಎಲ್ಲ ಮೂಲಗಳಿಂದ, ಅಂದರೆ ಓರ್ವ ವ್ಯಕ್ತಿಯ ಸಂಬಳದ ಆದಾಯ, ಗೃಹಸಂಬಂಧಿ ಆದಾಯ, ಬಿಸಿನೆಸ್‌ ಆದಾಯ, ಇತರ ಆದಾಯ ಹಾಗೂ ಕ್ಯಾಪಿಟಲ್‌ ಗೈನ್ಸ್‌ ಆದಾಯಗಳನ್ನು ಒಳಗೊಂಡಿರುತ್ತದೆ. ಜಿಟಿಐನಿಂದ ಹಲವು ಕರವಿನಾಯಿತಿಗಳನ್ನು ಕಳೆಯಬಹುದಾಗಿದೆ. 

ಕರವಿನಾಯಿತಿಗಳು (ಚಾಪ್ಟರ್‌ 6ಎ): ಈ ಕೆಳಗಿನ ಸೆಕ್ಷನ್‌ಗಳ ಅಡಿಯಲ್ಲಿ ಮಾಡಿದ ಹೂಡಿಕೆಗೆ ವಿನಾಯಿತಿಗಳನ್ನು ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಆ ವರ್ಷದ ಒಟ್ಟು ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.

ಸೆಕ್ಷನ್‌ 80 ಸಿ: (1)ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡ್‌-ಸ್ವಂತ ಇಚ್ಛೆಯಿಂದ ವಾಲಂಟರಿಯಾಗಿ ಪಿ.ಎಫ್.ಗೆ ನೀಡಿದ್ದು ಸಹಿತ. (2)ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌. (3) ಸ್ವಂತ, ಮಕ್ಕಳ ಜೀವ ವಿಮೆಯ ವಾರ್ಷಿಕ ಪ್ರೀಮಿಯಂ – ನಿಗದಿತ ಮಿತಿಯೊಳಗೆ (4)ಇಬ್ಬರು ಮಕ್ಕಳ ಶಾಲಾ ಟ್ಯೂಶನ್‌ ಫೀ (ಬೇರೆ ಯಾವುದೇ ಫೀಸ್‌ ಆಗುವುದಿಲ್ಲ, ಟ್ಯೂಶನ್‌ ಫೀ ಮಾತ್ರ). (5)ಅಂಚೆ ಕಚೇರಿಯ ಎನ್‌.ಎಸ್‌.ಸಿ. ಮತ್ತದರ ಬಡ್ಡಿಯ ಮರುಹೂಡಿಕೆ. (6)ಯುಲಿಪ್‌ ಪ್ರೀಮಿಯಂ. (7)ಗೃಹಸಾಲದ ಮರುಪಾವತಿಯಲ್ಲಿ (ಇಎಂಐ) ಅಸಲು ಭಾಗ (ಬಡ್ಡಿ ಬಿಟ್ಟು) (8)ಮನೆ ಖರೀದಿಯ ರಿಜಿಸ್ಟ್ರೇಶನ್‌, ಸ್ಟಾಂಪ್‌ ಡ್ನೂಟಿ ವೆಚ್ಚಗಳು (9) Equity Linked Savings Scheme (E.L.S.S)  ನಾಮಾಂಕಿತ ಮ್ಯೂಚುವಲ್‌ ಫ‌ಂಡ್‌ (ಎಲ್ಲ ಅಲ್ಲ) (10) ಮ್ಯೂಚುವಲ್‌ ಫ‌ಂಡ್‌ಗಳ ಪೆನÒನ್‌ ಪ್ಲಾನ್‌ಗಳು (UTI-RBP, Franklin Templeton-TIPP ಮತ್ತು ಇದೀಗ Reliance Retirement Fund) (11) ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರನೋಂದಾಯಿತ ಎಫ್.ಡಿ.  (11)ಅಂಚೆ ಕಚೇರಿಯ ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ  5 ವರ್ಷದ್ದು (12) ಸುಕನ್ಯಾ ಸಮೃದ್ಧಿ ಯೋಜನೆ

80 ಸಿಸಿಸಿ:  ಎಲ್‌ಐಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನÒನ್‌ ಪ್ಲಾನುಗಳು

80 ಸಿಸಿಡಿ (1): ನ್ಯಾಶನಲ್‌ ಪೆನ್ಶನ್‌ ಸ್ಕೀಂ (ಎನ್‌ಪಿಎಸ್‌) 

ಸೆಕ್ಷನ್‌ 80ಸಿಸಿಇ: ಸೆಕ್ಷನ್‌ 80 ಸಿ, 80ಸಿಸಿಸಿ, 80ಸಿಸಿಡಿ: ಈ ಮೂರೂ ಸೇರಿಸಿ ಒಟ್ಟು ಹೂಡಿಕೆ ಮಿತಿಯಾದ ರೂ. 1.5 ಲಕ್ಷವನ್ನು ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.

ಆದರೆ ಹೊಸ ಸೆಕ್ಷನ್‌ 80ಸಿಸಿಡಿ (1ಬಿ) ಅಡಿಯಲ್ಲಿ ಮೇಲಿನ ರೂ. 1.5 ಲಕ್ಷವಲ್ಲದೆ ಹೆಚ್ಚುವರಿ ರೂ. 50,000 ಮಿತಿಯ ಎನ್‌ಪಿಎಸ್‌ ಯೋಜನೆಯ ಹೂಡಿಕೆಗೆ ಆದಾಯ ಕರ ವಿನಾಯಿತಿ ಲಭ್ಯ. 
  
ಸೆಕ್ಷನ್‌ 80ಸಿಸಿಜಿ: ರಾಜೀವ್‌ ಗಾಂಧಿ ಇಕ್ವಿಟಿ ಸೇವಿಂಗ್‌ ಸ್ಕೀಮಿನಲ್ಲಿ(ಆರ್‌ಜಿಎಸ್‌ಎಸ್‌) ಜೀವನದಲ್ಲಿ ಪ್ರಪ್ರಥಮ ಬಾರಿ ಇಕ್ವಿಟಿ ಹೂಡಿಕೆಗೆ ಇಳಿಯುವವರಿಗಾಗಿ 3 ವರ್ಷದ ಲಾಕ್‌-ಇನ್‌ ಇರುವ ಈ ಸ್ಕೀಮಿ ನಲ್ಲಿ ರೂ. 50,000ವರೆಗೆ ನಮೂದಿತ ಷೇರು/ಮ್ಯೂಚುವಲ್‌ ಫ‌ಂಡುಗಳಲ್ಲಿಹೂಡುವ ಅವಕಾಶ. ಅದರ ಶೇ.50 ಅಂದರೆ ರೂ. 25,000ವನ್ನು ಆದಾಯದಿಂದ ನೇರವಾಗಿ ಕಳೆಯುವ ಅವಕಾಶ. ಇದು ಒಟ್ಟು ಆದಾಯ ರೂ. 12 ಲಕ್ಷದ ಒಳಗಿನವರಿಗೆ ಮಾತ್ರ ಲಭ್ಯ ಮತ್ತು ಈ ಹೂಡಿಕೆಯನ್ನು ಸತತವಾಗಿ 3 ವರ್ಷಗಳ ಕಾಲ ಮಾಡಬಹುದು. 

80ರ ಇತರ ಸೆಕ್ಷನ್‌ಗಳು: ಸೆಕ್ಷನ್‌ 80 ಡಿ (ಸ್ವಂತ, ಕುಟುಂಬ, ಹೆತ್ತವರ ಮೆಡಿಕಲ್‌ ಇನ್ಶೂರೆನ್ಸ್‌ ಪ್ರೀಮಿಯಂಗಾಗಿ), ಸ್ವಂತ/ಕುಟುಂಬ ಮಿತಿ ರೂ. 25,000, ಹೆತ್ತವರಿಗೆ ಪ್ರತ್ಯೇಕ ಮಿತಿ ರೂ. 25,000. ವರಿಷ್ಠರಿಗೆ ಮಿತಿ ರೂ. 30,000. ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನೂ ಇದು ಹೊಂದಿರುತ್ತದೆ. ಇಂತಹ ವಿಮೆ ಇಲ್ಲದ 80 ಮೀರಿದ ಹಿರಿಯ ನಾಗರಿಕರು ಈ ಮಿತಿಯನ್ನು ವೈದ್ಯಕೀಯ ವೆಚ್ಚಕ್ಕೆ ಉಪಯೋಗಿಸಬಹುದು.

ಸೆಕ್ಷನ್‌ 80 ಡಿಡಿ ಅವಲಂಬಿತರಿಗೆ ಅಂಗವೈಕಲ್ಯದ (40%-80%) ಚಿಕಿತ್ಸೆಗಾಗಿ ಮೆಡಿಕಲ್‌ ಮಿತಿ ರೂ. 75,000, ತೀವ್ರ ಊನಕ್ಕೆ (80%) ರೂ. 1,25,000 ಖರ್ಚು ಅಥವಾ ನೋಂದಾಯಿತ ಡೆಪಾಸಿಟ್‌.

ಸೆಕ್ಷನ್‌ 80 ಡಿಡಿಬಿ ಕ್ಯಾನ್ಸರ್‌, ಏಡ್ಸ್‌, ನ್ಯೂರೋ ಇತ್ಯಾದಿ ಕೆಲವು ವಿಶೇಷ ಅನಾರೋಗ್ಯಗಳಿಗಾಗಿ. ಮಿತಿ ರೂ. 40,000, ವರಿಷ್ಠರಿಗೆ ರೂ. 60,000 ಹಾಗೂ 80 ದಾಟಿದ ಅತಿವರಿಷ್ಠರಿಗೆ ರೂ. 80,000.

ಸೆಕ್ಷನ್‌ 80 ಇ ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ, ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ. ಸಾಲವು ಕರವಿನಾಯತಿ ಬಯಸುವವರ ಹೆಸರಿನಲ್ಲಿ ಇರಬೇಕಾದ್ದು ಮುಖ್ಯ.

ಸೆಕ್ಷನ್‌ 80 ಜಿ (ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ 50% ಅಥವಾ 100% ಸರಕಾರ ನಿಗದಿಪಡಿಸಿದಂತೆ, ಸಂಬಳದ 10% ಮೀರದಂತೆ)

ಸೆಕ್ಷನ್‌ 80 ಜಿಜಿ (ನಿರ್ದಿಷ್ಟ ನಗರಗಳಲ್ಲಿ, ಎಚ್‌.ಆರ್‌.ಎ. ಪಡೆಯದವರಿಗೆ) ಬಾಡಿಗೆ ರಿಯಾಯಿತಿ ಮಿತಿ ರೂ. 60,000 (ಕೆಲ ಶರತ್ತುಗಳು ಅನ್ವಯ).

ಸೆಕ್ಷನ್‌ 80 ಜಿಜಿಎ (ವೈಜ್ಞಾನಿಕ ಸಂಶೋಧನೆ ಅಥವ ಗ್ರಾಮಾಭಿವೃದ್ಧಿಗಾಗಿ ನೀಡಿದ ದಾನ. ಮಿತಿ, ದಾನದ 100%)ಸೆಕ್ಷನ್‌ 80 ಯು (ಸ್ವಂತ ಅಂಗ ವೈಕಲ್ಯದ ಚಿಕಿತ್ಸೆಗಾಗಿ. ಮಿತಿ ರೂ. 75,000, ಗಂಭೀರ ಊನಕ್ಕೆ ರೂ. 1,25,000) ಸೆಕ್ಷನ್‌ 80 ಸಿಸಿಡಿ(2) ಎನ್‌ಪಿಎಸ್‌ ನಲ್ಲಿ ಉದ್ಯೋಗದಾತ ನೀಡಿದ ಪಾಲು, ಸಂಬಳದ 10%ಕ್ಕೆ ಮೀರದಂತೆ.

ಟೋಟಲ್‌ ಇನ್‌ಕಂ: ಗ್ರಾಸ್‌ ಟೋಟಲ್‌ ಇನ್‌ಕಂನಿಂದ ಈ ಎಲ್ಲ ವಿನಾಯಿತಿಗಳನ್ನು ಕಳೆದು ಬರುವ ಮೊತ್ತವೇ ಟೋಟಲ್‌ ಇನ್‌ಕಂ. ಅದರ ಮೇಲೆ ಆದಾಯ ಕರವು ಕೆಳಗಿನ ಟೇಬಲ್‌ ಪ್ರಕಾರ ಅನ್ವಯವಾಗುತ್ತದೆ. 

ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.