ಉಳಿಸಿ, ಉಳಿಸಿ ಮನೆ ಬೆಳಗಿಸಿ


Team Udayavani, Feb 20, 2017, 3:45 AM IST

Home-Improvement.jpg

ಇತ್ತೀಚಿನ ದಿನಗಳಲ್ಲಿ ಸೋಲಾರ್‌ ಅಳವಡಿಸಿ ನೀರು ಕಾಯಿಸಿಕೊಳ್ಳುವುದು ಜನಪ್ರಿಯವಾಗುತ್ತಿದ್ದರೂ, ಬೆಳಕಿಗೆ ನಾವು ಇಂದಿಗೂ ಅತಿ ಹೆಚ್ಚು ವಿದ್ಯುತ್‌ ಶಕ್ತಿಗೆ ಮೊರೆಹೋಗುತ್ತಿದ್ದೇವೆ.  ಕೆಲವರ್ಷಗಳ ಹಿಂದೆ ಎಲೆಕ್ಟ್ರಿಕ್‌ ಗೀಸರ್‌ ಬಳಸಿದರೆ ಬರುತ್ತಿದ್ದಷ್ಟು ಭಾರಿ ವಿದ್ಯುತ್‌ ಬಿಲ್‌ ಈಗ ಬರಿ ಫ್ಯಾನ್‌ ಹಾಗೂ ದೀಪಗಳ ಬಳಕೆಯಿಂದಲೇ ಬರುತ್ತಿದೆ. ಹಾಗಾಗಿ ಮನೆಯ ದೀಪದ ವ್ಯವಸ್ಥೆಯನ್ನೂ ಸ್ವಲ್ಪ ಕಾಳಜಿಯಿಂದ ಮಾಡಿ, ವಿದ್ಯುತ್‌ ಉಳಿತಾಯ ಮಾಡುವುದು ಅನಿವಾರ್ಯವಾಗಿದೆ. ದಿನದ ಹೊತ್ತು ಸಾಂಪ್ರದಾಯಿಕ ಮೂಲಗಳ ಪ್ರಕಾರ ಬೆಳಕು ಪಡೆಯುವುದರ ಜೊತೆಗೆ ರಾತ್ರಿಯ ಹೊತ್ತೂ ಕೂಡ ಸಾಕಷ್ಟು ಬೆಳಕನ್ನು ವಿಶೇಷ ವಿನ್ಯಾಸಗಳ ಮೂಲಕ ಪಡೆಯಬಹುದು.

ಬೆಳಕು ಪ್ರತಿಫ‌ಲಿಸುವ ಬಣ್ಣಗಳು
ಸಾಮಾನ್ಯವಾಗಿ ಮನೆಯನ್ನು ತಂಪಾಗಿರಿಸಿಲು, ಸೂರಿನ ಮೇಲೆ ಗಾಜಿನ ಸಣ್ಣ ಸಣ್ಣ ಗೋಲಿಗಳನ್ನು ಒಳಗೊಂಡ ಬಣ್ಣವನ್ನು ಬಳಿದು, ಅದು ಸೂರ್ಯನ ಶಾಖವನ್ನು ದಿನದ ಹೊತ್ತು ರಿಫ್ಲೆಕ್ಟ್ ಮಾಡಿ, ಮನೆಯೊಳಗೆ ನೇರವಾಗಿ ಸೂರ್ಯನ ಶಾಖಬಾರದಂತೆ ಮಾಡಲಾಗುತ್ತದೆ. ನಾವು ಇಂಥ ಬಣ್ಣವನ್ನು ಮನೆಯ ಕಿಟಕಿಯ ಜಾಂಬ್‌ ಅಂದರೆ ಅಕ್ಕ ಪಕ್ಕ ಫ್ರೆಂಮ್‌ ಅನ್ನು ಸಿಗಿಸಲು ಇರುವ ಸ್ಥಳದ ಉಳಿದ ಭಾಗದಲ್ಲಿ ಬಳಿದರೆ,  ಇದು ಮನೆಯ ಹೊರಗಿನ ಬೆಳಕನ್ನು ಒಳಗೆ ಪ್ರತಿಫ‌ಲಿಸಿ, ಒಳಾಂಗಣ ಸಾಕಷ್ಟು ಪ್ರಕಾಶವಾಗಿರಲು ಸಹಾಯಕಾರಿ. ಇದೇ ರೀತಿಯಲ್ಲಿ, ಕಿಟಕಿಯ ಸಜಾjಗಳಿಗೂ, ಅವುಗಳ ಕೆಳಬಾಗದಲ್ಲಿಯೂ ಈ ಮಾದರಿಯ ಪ್ರತಿಫ‌ಲಿಸುವ ಬಣ್ಣ ಬಳಿದರೆ, ಮನೆಯ ಒಳಾಂಗಣ ಸಾಕಷ್ಟು ಬೆಳಗಿದಂತೆ ಇರುತ್ತದೆ. ಹಾಗೂ ಹೆಚ್ಚಿನ ಕೃತಕ ಬೆಳಕನ್ನು ದಿನದ ಹೊತ್ತು ಬಯಸುವುದಿಲ್ಲ.

ಇಕ್ಕಟ್ಟಾದ ಓಣಿಗಳಲ್ಲಿ ಬೆಳಕಿನ ವ್ಯವಸ್ಥೆ

ಮಳೆನೀರು ಹಾಗೂ ಎರಚಲು ಮನೆಯ ಒಳಗೆ ಬರಬಾರದು ಎಂದು ಕಿಟಕಿಗಳಿಗೆ  ಸಜಾj ಹಾಕುವುದು ಇದ್ದದ್ದೇ. ಓಪನ್‌ ಸ್ಪೇಸ್‌ ಕಡಿಮೆ ಇದ್ದರೂ ಕೂಡ ಒಂದು ಇಲ್ಲ ಒಂದೂವರೆ ಅಡಿ ಸಜ್ಜ ಹಾಕುವುದು ರೂಢಿಯಲ್ಲಿದೆ. ಮೊದಲೇ ಇಕ್ಕಟ್ಟಾದ ಸ್ಥಳದಲ್ಲಿ, ಹೊರಚಾಚುಗಳನ್ನು ಕೊಟ್ಟು, ಅದರ ಕೆಳಗೆ ಕಿಟಕಿಗಳನ್ನು ಇಟ್ಟರೆ, ಸಹಜವಾಗೇ ಮನೆಯೊಳಗೆ ಬರುವ ಬೆಳಕು ಕಡಿಮೆಯಾಗಿಬಿಡುತ್ತದೆ. ಹಾಗಾಗಿ ನಾವು ಅನಿವಾರ್ಯವಾಗಿ ವಿದ್ಯುತ್‌ ದೀಪದ ಮೊರೆ ದಿನದ ಹೊತ್ತೂ ಹೋಗುವಂತಾಗುತ್ತದೆ. ಇದನ್ನು ತಡೆಯಲು, ಕಿಟಕಿಯ ಮೇಲೆ ಕಲಾತ್ಮಕ ವಿನ್ಯಾಸಗಳಲ್ಲಿ ಸಿಗುವ ಕ್ಲೆಜಾಲಿಗಳನ್ನು ಅಂದರೆ ಸುಟ್ಟ ಜೇಡಿಮಣ್ಣಿನ ಜಾಲರಿಯಂತಿರುವ ನಾಲ್ಕಾರು ಬ್ಲಾಕ್‌ಗಳನ್ನು ಜೊಡಿಸಿ. ಮಳೆಮ ಜೋರಾಗಿ ಬಂದಾಗ ನೀರು ಎರಚಲು ಹೊಡೆಯುವ ಸಾಧ್ಯತೆ ಇರುವುದರಿಂದ, ಹೊರಮುಖಕ್ಕೆ ಗ್ಲಾಸ್‌ ಹಾಕಿದರೆ ಮೆಂಟನನ್ಸ್‌ ಕಡಿಮೆ ಆಗುವುದರ ಜೊತೆಗೆ ಬೆಳಕಿಗೆ ಯಾವುದೇ ಅಡಚಣೆ ಆಗುವುದಿಲ್ಲ.

ಕಿಟಕಿಯ ವಿನ್ಯಾಸ
ಮನೆಗೆ ಕಿಟಕಿಗಳನ್ನು ವಿನ್ಯಾಸ ಮಾಡುವಾಗ ಅದು ಉದ್ದಕ್ಕೆ ಇದ್ದರೆ ಚೆಂದವಾಗಿ ಕಾಣುತ್ತದೋ ಇಲ್ಲ ಅಗಲವಾಗಿ ಇರುವುದು ಒಳ್ಳೆಯದೋ ಎಂಬುದರ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಂಡರೂ ಯಾವ ಮಾದರಿಯವು ಹೆಚ್ಚು ಬೆಳಕನ್ನು ವರ್ಷದ ಬಹುತೇಕ ಕಾಲ ಮನೆಯೊಳಗೆ ನೀಡುತ್ತದೆ? ಎಂಬುದರ ಬಗ್ಗೆ ನಾವು ಹೆಚ್ಚು ಚಿಂತಿಸುವುದಿಲ್ಲ. ಕಿರಿದಾದ ಕೋಣೆಗಳಲ್ಲಿ ಅಗಲ ಕಡಿಮೆ ಇರುವ ಆದರೆ ಎತ್ತರವಾಗಿರುವ ಕಿಟಕಿಗಳು ಹೆಚ್ಚು ಸೂಕ್ತ. 

ಇಂಥ ಸ್ಥಳಗಲ್ಲಿ ಅಗಲದ ಕಿಟಕಿಗಳನ್ನು ಇಟ್ಟರೆ, ಕಿರಿದಾದ ರೂಮುಗಳಲ್ಲಿ ಕ್ರಮೇಣ ಪೀಠೊಪಕರಣಗಳು ಕಿಟಕಿಗಳ ಮುಂದೆಯೇ ಬಂದು ಕೂತು, ಬೆಳಕಿಗೆ ಅಡ್ಡಿ ಮಾಡಬಹುದು.  ಆದುದರಿಂದ, ನಿಮ್ಮ ರೂಮ್‌ ಕಡೇಪಕ್ಷ ಹತ್ತು ಅಡಿಗೆ ಹನ್ನೆರಡು ಅಡಿಯಷ್ಟಾದರೂ ವಿಸ್ತೀರ್ಣವಾಗಿದ್ದರೆ, ಉದ್ದದ ಅಂದರೆ ನಾಲ್ಕರಿಂದ ಆರು ಅಡಿಯಷ್ಟು ಅಗಲದ ಕಿಟಕಿಯನ್ನು ಇಟ್ಟುಕೊಳ್ಳಬಹುದು. ರೂಮುಗಳು ಇದಕ್ಕಿಂತ ಕಿರಿದಾಗಿದ್ದರೆ, ನಮ್ಮ ಮನೆಯ ಫ‌ರ್ನಿಚರ್‌ ವಿನ್ಯಾಸ ನೋಡಿಕೊಂಡು, ಪೀಠೊಪಕರಣ ಬಾರದ ಸ್ಥಳದಲ್ಲಿ ಅಂದರೆ ಓಡಾಡಲು ಬಿಟ್ಟುಕೊಂಡಿರುವ ಸರ್ಕುÂಲೇಷನ್‌ ಸ್ಪೇಸ್‌ನಲ್ಲಿ, ಉದ್ದನೆಯ ಕಿಟಕಿಯನ್ನು ಇಡುವುದು ಸೂಕ್ತ.

ಕಿಟಕಿ ಇಡಲು ಸೂಕ್ತ ಸ್ಥಳ
ಮನೆ ವಿನ್ಯಾಸ ಮಾಡುವಾಗಲೇ ಪೀಠೊಪಕರಣಗಳ ಸ್ಥಳಗಳನ್ನು ನಿರ್ಧರಿಸಿದರೆ, ಕಿಟಕಿಗಳನ್ನು ಇಡಲು ಅನುಕೂಲಕರ. ನಂತರ ನಾವು ಈ ಫ‌ರ್ನಿಚರ್‌ ಬಳಸಿ ನಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸುವ ಕಾರಣ, ಎಲ್ಲಿ ಬೇಕೋ ಅಲ್ಲಿ ಸಾಕಷ್ಟು ಬೆಳಕು ಬರುವಂತೆ ಮಾಡಿಕೊಳ್ಳಬಹುದು. ಹಾಗೆಯೇ ಬೆಳಕು ಅಷ್ಟೊಂದು ಬೇಡವಾದ ಸ್ಥಳದಲ್ಲಿ, ಕಡಿಮೆಯೂ ಮಾಡಬಹುದು. ವಾರ್ಡ್‌ರೋಬ್‌ ಹಾಗೂ ಮಂಚದ ಮಧ್ಯೆ ಉದ್ದನೆಯ ಕಿಟಕಿ ಇಟ್ಟರೆ, ಬಟ್ಟೆಯ ಬಣ್ಣ ಇತ್ಯಾದಿ ನೋಡಲು ಅನುಕೂಲಕರ ಅಗಿರುವಂತೆಯೇ, ಮಂಚದ ಮೇಲೆ ಹೆಚ್ಚು ಬೆಳಕು ಬೀಳುವುದಿಲ್ಲ. ಅದೇ ನೀವು ಮಂಚದ ಹಿಂದೆ ಉದ್ದದ ಕಿಟಕಿಯನ್ನು ಇಟ್ಟರೆ, ಅತಿ ಹೆಚ್ಚು ಬೆಳಕು ದಿನದ ಹೊತ್ತು ಇಲ್ಲಿಯೇ ಅನಗತ್ಯವಾಗಿ ಬಿದ್ದು, ಎಂದಾದರೂ ರಜೆ ದಿನ ಸ್ವಲ್ಪ ಹೊತ್ತು ಮಲಗೋಣ ಎಂದರೆ, ಪ್ರಖರವಾದ ಬೆಳಕೇನು, ಕೆಲವೊಮ್ಮೆ ಬಿಸಿಲೂ ಕೂಡ ಮುಖದ ಮೇಲೆಯೇ ಬೀಳುವ ಸಾಧ್ಯತೆ ಇರುತ್ತದೆ.  

ಲಿಂಗ್‌ ರೂಮಿನಲ್ಲೂ ಕೂಡ ಕಿಟಕಿಗಳನ್ನು ವಿನ್ಯಾಸ ಮಾಡಬೇಕಾದರೆ, ನಾವು ಟೀಯನ್ನು ಎಲ್ಲಿ ಇಡುತ್ತೇವೆ? ಎಂಬುದನ್ನು ಆಧರಿಸಿ ನಿರ್ಧರಿಸಬೇಕು. ದೊಡ್ಡ ಕಿಟಕಿಯ ಮುಂದೆ ಇಲ್ಲ ತೀರ ಪಕ್ಕದಲ್ಲಿ  ಟೀವಿ ಬಂದರೆ, ಗ್ಲೆàರ್‌- ತೀವ್ರತರವಾದ ಬೆಳಕಿನ ಪ್ರಹಾರವಾಗಿ, ಟೀ ಪರದೆ ಸ್ಪಷ್ಟವಾಗಿ ಕಾಣದೆ ಇರಬಹುದು. ಆಗ ನಾವು ಅನಿವಾರ್ಯವಾಗಿ ಟೀಯನ್ನು ಹೆಚ್ಚು ಪ್ರಖರವಾಗಿ ಕಾಣುವಂತೆ ಸೆಟ್ಟಿಂಗ್‌ ಮಾಡಬೇಕಾಗುತ್ತದೆ. ಇದು ಹೆಚ್ಚು ವಿದ್ಯುತ್‌ ಖರ್ಚಾಗುವಂತೆ ಮಾಡಬಹುದು. ಜೊತೆಗೆ ಸಾಮಾನ್ಯವಾಗಿ, ಟೀವಿಯ ಅಕ್ಕಪಕ್ಕದಲ್ಲಿ, ಶೋಗೆ, ನಾಲ್ಕಾರು ಸುಂದರ ಕಲಾಕೃತಿಗಳನ್ನು ಇಡುವ ಪರಿಪಾಠ ಇರುವುದರಿಂದ, ನಮ್ಮ ಟೀವಿಯ ಗಾತ್ರದ ನಂತರ, ಒಂದೆರಡು ಅಡಿ ಖಾಲಿ ಜಾಗ, ಕ್ಯುರಿಯೋಗಳನ್ನು ಇಡುವ ಶೆಲ್ಫ್- ಸೈಡ್‌ಬೋರ್ಡ್‌ ವಿನ್ಯಾಸ ಮಾಡಲು ಸಹಾಯಕಾರಿಯಾಗುವಂತೆ ನೋಡಿಕೊಳ್ಳಬೇಕು. 

ಟಾಯ್ಲೆಟ್‌ನಲ್ಲಿ ನೈಸರ್ಗಿಕ ಬೆಳಕು
ಬೆಳಕು ಬೀಳದ ಸ್ಥಳದಲ್ಲಿ ವೃದ್ಧಿಯಾಗುವ ಅನೇಕ ಕ್ರಿಮಿ ಕೀಟಗಳು ಪ್ರಖರವಾದ ಬೆಳಕು ಬೀಳುವ ಜಾಗದಲ್ಲಿ ನಿಷ್ಕ್ರಿಯವಾಗುತ್ತವೆ. ಆದುದರಿಂದ ಸಾಮಾನ್ಯವಾಗಿ ಬಾತ್‌ ರೂಮುಗಳಿಗೆ ನೀಡುವ ವೆಂಟಿಲೇಟರ್‌ಗಳು ಸಾಲುವುದಿಲ್ಲ ಎಂದಾದರೆ, ಈ ವೆಂಟಿಲೇಟರ್‌ಗಳ ಮೇಲೆಯೂ ಅಂದರೆ ಸುಮಾರು ಏಳೂವರೆ ಅಡಿಯಿಂದ ಸೂರಿನ ಕೆಳಗಿನ ಮಟ್ಟದವರೆಗೂ ಟೆರ್ರಾಕೋಟ ಜಾಲಿ ಬ್ಲಾಕ್‌ಗಳನ್ನು ಅಳವಡಿಸಬಹುದು. ಮಳೆ ನೀರು ಸಾಮಾನ್ಯವಾಗಿ ಈ ಜಾಲಿ ಬ್ಲ್ಯಾಕ್‌ಗಳಿಂದ ಒಳಗೆ ಬರುವುದಿಲ್ಲ. ಹಾಗೇನಾದರೂ ಬಂದರೂ ಟಾಯ್ಲೆಟ್‌ ಆದಕಾರಣ ಹೆಚ್ಚಿನ ಕಿರಿಕಿರಿ ಇರುವುದಿಲ್ಲ. ಹೆಚ್ಚು ನೀರು ಎರಚಲಾಗಿ ಒಳಬರುತ್ತಿದ್ದರೆ, ಈ ಜಾಲಿಗಳಿಗೆ ಹೊರಗಿನಿಂದ- ಲೂವರ್ – ಅಡ್ಡ ಪಟ್ಟಿಗಳ ಪರದೆಯನ್ನು ಅಳವಡಿಸಬಹುದು.

ಮಾತಿಗೆ – 98441 32826

– ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.