ಟಾಕ್‌ಟೈಮ್‌ ಹಂಗೆಲ್ಲ ಕದಿಯಂಗಿಲ್ಲ ಸ್ವಾಮಿ…


Team Udayavani, Jun 19, 2017, 6:04 PM IST

talktime.jpg

ಭಾರತದಲ್ಲಿ ಈಗ ಯಾರಲ್ಲಿ ಇಲ್ಲ ಮೊಬೈಲ್‌? ಒಂದೇ ಒಂದು ಮೊಬೈಲ್‌ ಹೊಂದಿರುವವರು ಈ ದಿನಗಳಲ್ಲಿ ಬಡತನದ ರೇಖೆಗಿಂತ ಕೆಳಗಿರುವವರು! ದೂರವಾಣಿ ಕ್ಷೇತ್ರದ ಅಧಿಕೃತ ನಿಯಂತ್ರಕ ಸಂಸ್ಥೆ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್‌ 2017ರಲ್ಲಿನ ಭಾರತದ ಟೆಲಿಕಾಂ ಸಂಪರ್ಕಗಳ ಸಂಖ್ಯೆ 1,198.89 ಮಿಲಿಯನ್‌. 695.99 ಮಿಲಿಯನ್‌ ನಗರದಲ್ಲಿ ಮತ್ತು ಉಳಿದ 502.90 ಮಿಲಿಯನ್‌ ಸಂಪರ್ಕ ಗ್ರಾಮೀಣ ಭಾಗದಲ್ಲಿದೆ. ದೇಶದ ದೂರವಾಣಿ ದಟ್ಟಣೆಯನ್ನು ಶೇ. 93.23 ಎಂದು ಗುರುತಿಸಲಾಗಿದೆ. ಜನಸಂಖ್ಯೆಯ ಅನುಗುಣವಾಗಿ ನಗರದ ಟೆಲಿ ಡೆನ್ಸಿಟಿ ಶೇ. 172.28 ಅಂದರೆ ಇಲ್ಲಿನ ಪ್ರತಿ ಒಬ್ಬರಲ್ಲಿ ಒಂದಕ್ಕಿಂತ ಹೆಚ್ಚು ಮೊಬೈಲ್‌ ಸಂಪರ್ಕ ಇದೆ! ಗ್ರಾಮೀಣ ಭಾಗದಲ್ಲಿ ಶೇ. 57.02ರ ಟೆಲಿ ದಟ್ಟಣೆ ಇದೆ.

ಹಾಗಾಗಿಯೇ ಟೆಲಿಕಾಂ ಸೇವಾದಾತರ ಆದಾಯ ಸಹಸ್ರ ಕೋಟಿಗಳಲ್ಲಿ ಇದೆ. ಆದರೂ ಈ ಕ್ಷೇತ್ರದಲ್ಲಿ ದೂರವಾಣಿ ಗ್ರಾಹಕರಿಗೆ ನಡೆಯುತ್ತಿರುವ ವಂಚನೆ ದೊಡ್ಡ ಪ್ರಮಾಣದ್ದೇ. ಭಾರತೀಯರು ಮಾತು ಪ್ರಿಯರು. ಟಾಕ್‌ಟೈಮ್‌ ನಮ್ಮಲ್ಲಿ ಕರಗಿದಷ್ಟು ಬೇರೆ ದೇಶದಲ್ಲಿ ಕರಗಲಿಕ್ಕಿಲ್ಲ. ಆದರೆ ಇದೇ ವೇಳೆ ನಾವು ಟೆಲಿಕಾಂ ಕಂಪನಿಗಳು ಕಾನೂನು ಉಲ್ಲಂ ಸಿ ಮಾಡುವ ಗ್ರಾಹಕ ವಂಚನೆ ವಿರುದ್ಧ ಮಾತನಾಡಬೇಕಿತ್ತು. ದುರದೃಷ್ಟವಶಾತ್‌ ನಮಗೆ ಕಾನೂನುಗಳೇ ಗೊತ್ತಿಲ್ಲ.
ಟ್ರಾಯ್‌ ನಿಜಕ್ಕೂ ಗ್ರಾಹಕ ಹತ್ತು ಹಲವಾರು ನಿರ್ದೇಶನಗಳನ್ನು ಹೊರಡಿಸಿದೆ. ಇವುಗಳನ್ನು ಟೆಲಿಕಾಂ ಕಂಪನಿಗಳು ಪಾಲಿಸುವುದು ಕಡ್ಡಾಯ. ಜನ ಆಗ್ರಹಿಸುತ್ತಿಲ್ಲ ಎಂಬ ಕಾರಣಕ್ಕೆ ಮೋಸ ನಡೆಯುತ್ತಲೇ ಇದೆ. ಮೊಬೈಲ್‌ ಇರುವ ನೀವೂ ಮಾತನಾಡಿ. ಆದರೆ ಅನ್ಯಾಯದ ವಿರುದ್ಧವೂ ಮಾತನಾಡಿ ಎಂಬ ಸಲಹೆಯೊಂದಿಗೆ ಕೆಲವು ಕಾನೂನುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಹಂಗೆಲ್ಲ ಕದಿಯಂಗಿಲ್ಲ ಸ್ವಾಮಿ
ಮೊಬೈಲ್‌ ಗ್ರಾಹಕರು ಈ ಸಂಕಷ್ಟವನ್ನು ಎದುರಿಸಬಹುದು. ಯಾವುದೋ ಅಪರಿಚಿತ ನಂಬರ್‌ನಿಂದ ಮಿಸ್ಡ್ ಕಾಲ್‌ ಬರುತ್ತದೆ. ಮಾನವ ಸಹಜ ಕುತೂಹಲ, ಆ ನಂಬರ್‌ಗೆ ತಿರುಗಿ ನೀವೇ ಕರೆ ಮಾಡುತ್ತೀರಿ. ಆ ಕಡೆಯಿಂದ ಕರೆ ಸ್ವೀಕಾರವಾದ ಶಬ್ದ ಬಿಟ್ಟರೆ ಮತ್ತೇನೂ ಕೇಳದು. ಹಲೋ… ಹಲೋ… ಎಂದು ಕರೆ ಕತ್ತರಿಸುತ್ತೀರಿ. ಆದರೆ ಕೇವಲ ಒಂದು ನಿಮಿಷದೊಳಗಿನ ಈ ಕರೆಗೆ ನಿಮಗೆ ಬರೋಬ್ಬರಿ 80 ರೂ. ಟಾಕ್‌ಟೈಮ್‌ನಲ್ಲಿ ಖರ್ಚು ತೋರಿಸಲಾಗುತ್ತದೆ. ಕಿತಾಪತಿ ಮಾಡಿ ಹೊಡೆಸಿಕೊಂಡವರಂತೆ ನಾವು ಸುಮ್ಮನಾಗುತ್ತೇವೆ. 
ಯಾರ ಬಳಿ ಈ ನಷ್ಟದ ಮಾತನ್ನೂ ಹೇಳುವುದಿಲ್ಲ.

ಟ್ರಾಯ್‌ ಕಾನೂನಿನ ಪ್ರಕಾರ ಪ್ರತಿ ಚಂದಾದಾರನೂ ಯಾವುದೇ ಒಂದು ಪ್ಲಾನ್‌ಅನ್ನು ಆಯ್ಕೆ ಮಾಡಿಕೊಂಡಾಗ ಅದರ ಕರೆ ವೆಚ್ಚದ ವಿವರಗಳನ್ನು ಸೇವಾ ಕಂಪನಿ ಒದಗಿಸಬೇಕು. ಈ ಆಪರಿಚಿತ ಕರೆಗೆ ಯಾವ ದರ ಅನ್ವಯವಾಯಿತು ಎಂಬುದನ್ನು ಚಂದಾದಾರನಿಗೆ ತಿಳಿಸಲೇಬೇಕಾಗುತ್ತದೆ. ಅದು ಒಂದು ಅಂತಾರಾಷ್ಟ್ರೀಯ ಕರೆ ಎಂದಾದರೂ ಯಾವುದೇ ದೇಶಕ್ಕೆ, ನಿಮಿಷಕ್ಕೆ 80 ರೂ.ಗಳ ದುಬಾರಿ ದರ ಯಾವುದೇ ಪ್ಲಾನ್‌ನಲ್ಲಿಲ್ಲ. ಹಾಗಾಗಿ ಈ ರೀತಿ ಶುಲ್ಕ ಪಡೆಯುವುದು ಕಾನೂನು ಬಾಹಿರ.

ಹೋಗಲಿ, ಈ ಕರೆ ಸಾಮಾನ್ಯ ಕರೆಯಲ್ಲ. ಪ್ರೀಮಿಯಂ ಬೆಲೆಯ ಕರೆ. ಹಾಗಾಗಿ ಅದಕ್ಕೆ ದುಬಾರಿ ದರ ಎಂದು ವಾದಿಸುವವರಿರಬಹುದು. ಟ್ರಾಯ್‌ 2012ರ ಏಪ್ರಿಲ್‌ 20ರಂದು ಟಿಟಿಓ ಆದೇಶಕ್ಕೆ ತಂದಿರುವ 51ನೇ ತಿದ್ದುಪಡಿ ( ನಂ. 301-26/2011-ಇಆರ್‌) ಪ್ರಕಾರ ಪ್ರೀಮಿಯರ್‌ ರೇಟ್‌ ಸರ್ವೀಸ್‌ ಕರೆ ದರ ಗ್ರಾಹಕನ ವಾಸ್ತವ ಸ್ಥಳೀಯ ಕರೆ ದರದ ನಾಲ್ಕು ಪಟ್ಟು ಮಾತ್ರ ಜಾಸ್ತಿ ಇರಲು ಅವಕಾಶವಿದೆ. ಸಾಮಾನ್ಯವಾಗಿ ನಿಮಿಷಕ್ಕೆ ಗರಿಷ್ಟ ಒಂದು ರೂ. ಎಂದರೂ ಆ ಕರೆ ವೆಚ್ಚ ನಾಲ್ಕು ರೂ. ದಾಟಬಾರದಿತ್ತಲ್ಲ? ಎಸ್‌ಎಂಎಸ್‌ಗೂ ಇದೇ ಕಟ್ಟುಪಾಡಿದೆ.

ಈ ಹಿನ್ನೆಲೆಯಲ್ಲಿ ಟ್ರಾಯ್‌ ಫೋನ್‌ ಬುಕ್‌ನಲ್ಲಿ ನಂಬರ್‌ಗಳನ್ನು ಸಂರಕ್ಷಿಸುವಾಗ ಪ್ರತಿ ಹತ್ತು ಅಂಕಿಗಳ ಮೊಬೈಲ್‌ ನಂಬರ್‌ಗೆ ಮುನ್ನ +91 ಸೇರಿಸಿಯೇ “ಸೇವ್‌’ ಮಾಡಲು ಸೂಚಿಸುತ್ತದೆ. ಯಾವುದೇ ಅನಾಮಿಕ ಫೋನ್‌ಗೆ ಕರೆ ಮಾಡುವಾಗಲೂ ಈ ತಂತ್ರ ಬಳಸಲು ಸೂಚಿಸುತ್ತದೆ. ದೂರವಾಣಿ ಸಂಖ್ಯೆಯ ಮೊದಲು 00 ಬಳಸುವುದು ಅಥವಾ ಕೇವಲ + ಬಳಸುವುದು ಸರಿಯಲ್ಲ. ಆಗ ಕರೆ, ಎಸ್‌ಎಂಎಸ್‌ ಮಾಡಿದಾಗ ಅಂತಾರಾಷ್ಟ್ರೀಯ ಕರೆ ದರ ಬಿದ್ದರೂ ಅಚ್ಚರಿ ಇಲ್ಲ. +91 ಹಾಕಿ ಸಂರಕ್ಷಿಸುವುದರಿಂದ ಒಂದೊಮ್ಮೆ ನೀವು ರೋಮಿಂಗ್‌ನಲ್ಲಿದ್ದಾಗಲೂ ಯಾವುದೇ ನಂಬರ್‌ಗೆ ಫೋನ್‌ ಬುಕ್‌ ಬಳಸಿಯೇ ಕರೆ ಮಾಡಬಹುದು. ನೆನಪಿರಲಿ, ಪ್ರೀ ಪೇಯ್ಡ ಗ್ರಾಹಕ ಕೂಡ ತಾನು ಈ ಹಿಂದಿನ ಆರು ತಿಂಗಳಿನೊಳಗೆ ಕರೆ ಮಾಡಿದ ವಿವರ ಪಟ್ಟಿಯನ್ನು ಪಡೆಯಬಹುದು. ಸೇವಾ ಕಂಪನಿ ಗರಿಷ್ಟ 50 ರೂ. ಶುಲ್ಕ ವಿಧಿಸಬಹುದಷ್ಟೇ.

ಕಾಡುವ ಎಸ್‌ಎಂಎಸ್‌ ಕಾಟ ತಪ್ಪದಿದ್ದರೆ?
ರಾಷ್ಟ್ರೀಯ ಅನಪೇಕ್ಷಿತ ಕರೆ ಸ್ಥಗಿತ ಯೋಜನೆ ಎನ್‌ಡಿಎನ್‌ಸಿ ಹೆಚ್ಚು ಪರಿಣಾಮಕಾರಿಯಾಗಿದೆ. 1909ಗೆ ಕರೆ ಅಥವಾ ಎಸ್‌ಎಂಎಸ್‌ ಮಾಡಿ ನಮಗೆ ಬೇಕಾದ ಮಾದರಿಯ ಕಮರ್ಷಿಯಲ್‌ ಕರೆಯನ್ನು ಮಾತ್ರ ಸ್ವೀಕರಿಸಬಹುದು. ಯಾವುದೂ ಬೇಡ ಅಂದುಕೊಂಡವರು ಶೂನ್ಯವನ್ನು ಆಯ್ಕೆ ಮಾಡಿದರಾಯಿತು. ಈ ವ್ಯವಸ್ಥೆ ಪ್ರಭಾವಯುತ ಎಂಬುದು ಕೇಂದ್ರ ಸರ್ಕಾರದ  ಆಂಬೋಣ. ಆದರೆ ಹಲವು ಮೊಬೈಲ್‌ ಗ್ರಾಹಕರ ಅನುಭವ ಬೇರೆ, ಕಹಿ!

ಹೀಗಾದರೆ ಏನು ಮಾಡಬೇಕು? ನೋಂದಣಿಯ ನಂತರೂ ಅನಪೇಕ್ಷಿತ ಕರೆ, ಎಸ್‌ಎಂಎಸ್‌ ಬಂದರೆ 1909ಗೆ ಕರೆ ಮಾಡಿ, ಅನಪೇಕ್ಷಿತ ಕರೆಯ ನಂಬರ್‌(140ನಿಂದ ಆರಂಭವಾಗುತ್ತದೆ) ಹಾಗೂ ದಿನ ಮತ್ತು ಸಮಯವನ್ನು ತಿಳಿಸಬೇಕು. ಕರೆ ಬಂದ ಮೂರು ದಿನದೊಳಗೆ ದೂರು ದಾಖಲಾಗಬೇಕು. ಎಸ್‌ಎಂಎಸ್‌ ಮೂಲಕವೂ ದೂರು ಸಲ್ಲಿಕೆ ಸಾಧ್ಯ. ಆಗ 1909ಗೆ COMP>< TEL NOXXXXXXXX >

ಎನ್‌ಡಿಎನ್‌ಸಿ ವೆಬ್‌ಸೈಟ್‌ನಲ್ಲಿ ucc complaint registration status ಪೋರ್ಟ್‌ನಲ್ಲಿ ದೂರಿನ ಸ್ಥಿತಿಗತಿಯನ್ನು ಪರಿಶೀಲಿಸಬಹುದು.

ಬಂದಿದೆ ನೋಡಿ ಟಿಸಿಸಿಎಂಎಸ್‌, ದೂರು ದಾಖಲು ಸುಲಭ!
ದೂರವಾಣಿ ಚಂದಾದಾರರು ದೂರು ನೀಡುವುದು ಎಲ್ಲಿ? ಇದು ಸಾಮಾನ್ಯವಾಗಿ ಎಲ್ಲ ಮೊಬೈಲ್‌ ಕಂಪನಿಗಳ ಅಥವಾ ಸ್ಥಿರ ದೂರವಾಣಿ ಬಳಕೆದಾರರ ಪ್ರಶ್ನೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ಒಂದು ಪ್ರಯತ್ನವನ್ನು ಮಾಡಿದೆ. ದೂರವಾಣಿ ಗ್ರಾಹಕರ ದೂರು ಮೇಲ್ವಿಚಾರಣಾ ವ್ಯವಸ್ಥೆ ಎಂದು ಕರೆಯಲಾಗಿರುವ ಇದು ಅಂತಜಾìಲ ತಾಣದ ಮೂಲಕ ಕೊಡುವಂತದು. www.tccms.gov.in ಈ ವೆಬ್‌ಸೈಟ್‌ ಅನ್ನು ಟ್ರಾಯ್‌ ಆರಂಭಿಸಿದೆ. 

ತುಂಬಾ ಸರಳವಾದ, ಅಷ್ಟೇ ಉಪಯುಕ್ತವಾದ ಅಂತಜಾìಲ ತಾಣವಿದು. ಇಲ್ಲಿರುವ ಕ್ವೆ„ರಿ ಫ್ರಂ ಕನ್ಸೂಮರ್‌ ಅಕ್ಷರಗಳ ಮೇಲೆ ಕ್ಲಿಕ್‌ ಮಾಡಿದರೆ ಒಂದು ಮಾಹಿತಿ ಪುಟ ತೆರೆಯುತ್ತದೆ. ಇಲ್ಲಿ ನಮ್ಮ ಮೊಬೈಲ್‌/ ಸ್ಥಿರ ದೂರವಾಣಿ ಕಂಪನಿ, ರಾಜ್ಯ, ಜಿಲ್ಲೆ ಕೊಟ್ಟರೆ ನಾವು ದೂರು ಕೊಡಬೇಕಾದ ದೂರವಾಣಿ ಸಂಖ್ಯೆಗಳು, ಇ ಅಂಚೆ ವಿಳಾಸ ಮೊದಲಾದವು ಲಭ್ಯ. ಒಂದೊಮ್ಮೆ ದೂರು ಕೊಟ್ಟವರೂ ಕೂಡ ಇಲ್ಲಿಗೆ ತೆರಳಿ ಈಗಾಗಲೇ ದೂರು ಕೊಟ್ಟಿದ್ದೀರಾ ಎಂಬ ಭಾಗದಲ್ಲಿ ಹೋದರೆ ನಾವು ಮುಂದೆ ಹೋಗಬಹುದಾದ ಸಂಬಂಧಿಸಿದ ಕಂಪನಿಯ ವೆಬ್‌ ತಾಣಕ್ಕೇ ಅದು ಕರೆದುಕೊಂಡು ಹೋಗುತ್ತದೆ. ಮತ್ತೆ ಬೇಕಿದ್ದರೆ ಅಲ್ಲಿ ಆ ಕಂಪನಿಯ ಮೇಲ್ಮನ ಪ್ರಾಧಿಕಾರದ ಸಂಪರ್ಕ ವಿವರ ಕೂಡ ಲಭ್ಯ.

ಟ್ರಾಯ್‌ ಹಲವು ನಿರ್ದೇಶನ ಗ್ರಾಹಕ ಪರ!
ಭಾರತದ ದೂರವಾಣಿ ನಿಯಂತ್ರಣ ಆಯೋಗ ಮೊಬೈಲ್‌ ಕ್ಷೇತ್ರದಲ್ಲಿ ಬಳಕೆದಾರರ ಪರವಾಗಿ ಸೇವಾ ಕಂಪನಿಗಳಿಗೆ ಆದೇಶ, ನಿರ್ದೇಶನಗಳನ್ನು ನೀಡುವಲ್ಲಿ ಯಾವತ್ತೂ ಕರ್ನಾಟಕದ ಬರ ಪರಿಸ್ಥಿತಿ ತಂದಿಲ್ಲ. ಹಲವು ನಿರ್ದೇಶನಗಳು ಜಾರಿಗೆ ಬಂದಿಲ್ಲ ಎನ್ನುವುದರ ಂದೆ ಎಚ್ಚೆತ್ತ ಗ್ರಾಹಕರ ಬರದೆ, 2012ರಲ್ಲಿಯೇ ಟ್ರಾಯ್‌ ತಂದ ಹೊಸ ಹೊಸ ನಿರ್ದೇಶನಗಳು ಹೆಚ್ಚು ಪ್ರಭಾವಯುತವಾಗಿದೆ. 

– ಪೂರ್ವ ಪಾವತಿ ಬಳಕೆದಾರರಿಗೆ ಒಂದು ಭಾವನೆ ಇದೆ. ಟಾಕ್‌ಟೈಮ್‌ ಹಾಕಿಸಿಕೊಂಡು ಮಾತನಾಡಿದ ಮೇಲೆ ಆ ಬಗ್ಗೆ ನಾವಾಗಲಿ, ಕಂಪನಿಯಾಗಲಿ ಚಿಂತಿಸುವುದಿಲ್ಲ. ಊಹೂn, ಬಿಲ್‌ ಬರದಿರಬಹುದು. ಒಂದೊಮ್ಮೆ ಗ್ರಾಹಕ ಕೇಳಿದರೆ ಮಾಡಿದ ಎಲ್ಲ ಕರೆಗಳ ಪೂರ್ಣ ವರ, ಎಸ್‌ಎಂಎಸ್‌ಗಳ ಸಂಖ್ಯೆ ಹಾಗೂ ಅದಕ್ಕೆ ತಗುಲಿದ ವೆಚ್ಚ, ಮೌಲ್ಯವರ್ಧಿತ ಸೇವೆ ಪಡೆದಿದ್ದರೆ ಆ ಎಲ್ಲ ಮಾಹಿತಿ, ಪ್ರೀಮಿಯಮ್‌ ಬೆಲೆಯ ಸೇವೆ ಪಡೆದಿದ್ದರೆ ಆ ಬಗ್ಗೆ ಮತ್ತು ರೋಮಿಂಗ್‌ ಬಾಬತ್ತಿನ ವಿವರಗಳನ್ನು ನೀಡಲೇಬೇಕು. ಚಂದಾದಾರನಿಗೆ ಗರಿಷ್ಟ 50 ರೂ. ಶುಲ್ಕ ವಿಧಿಸಲು ಅವಕಾಶವಿದೆ. ವಿನಂತಿ ಸ್ವೀಕರಿಸಿದ 30 ದಿನಗಳೊಳಗೆ ಈ ಮಾಹಿತಿ ಗ್ರಾಹಕನಿಗೆ ತಲುಪಿರಬೇಕು. ಈ ತರದ ಮಾಹಿತಿ ಹಿಂದಿನ ಆರು ತಿಂಗಳವರೆಗಿನದಾದರೆ ಮಾತ್ರ ಲಭ್ಯ. (ಟಿಸಿಪಿಆರ್‌, ಜನವರಿ 6, 2012)

– ಕನಿಷ್ಟ ಆರು ತಿಂಗಳಿಗೊಮ್ಮೆಯಾದರೂ ಮೊಬೈಲ್‌ ಕಂಪನಿಗಳು ಒಂದು ಪ್ರಾದೇಶಿಕ ಭಾಷೆಯ ಹಾಗೂ ಒಂದು ಇಂಗ್ಲೀಷ್‌ ದಿನಪತ್ರಿಕೆಯಲ್ಲಿ ತನ್ನ ಎಲ್ಲಾ ಟ್ಯಾರಿಫ್ ಪ್ಲಾನ್‌ಗಳ ವರವನ್ನು ಒದಗಿಸಲೇಬೇಕು. (ನಿರ್ದೇಶನ ನಂ. 301-14/2010-ಇಆರ್‌, ಜನವರಿ 16, 2012)

– ಎಲ್ಲ ಸೇವಾದಾತರೂ 10 ರೂ. ಬೆಲೆಯ ಒಂದು ಟಾಪ್‌ಅಪ್‌ ಅವಕಾಶವನ್ನು ಚಂದಾದಾರರಿಗೆ ಒದಗಿಸಲೇಬೇಕು. ಹಾಗೆಂದು ಇದರಲ್ಲಿ ಟಾಕ್‌ಟೈಮ್‌ ಮೌಲ್ಯವನ್ನು ವಿಪರೀತ ಆಡಳಿತಾತ್ಮಕ ವೆಚ್ಚವೆಂದು ಮನಸೋ ಇಚ್ಚೆ ಕಸಿಯುವಂತಿಲ್ಲ. 20 ರೂ. ಒಳಗಿನ ಟಾಪ್‌ಅಪ್‌ಗೆ ಗರಿಷ್ಟ 2 ರೂ. ನಂತರದ ಎಲ್ಲವಕ್ಕೆ ಪರಮಾವಧಿ ಮೂರು ರೂ. (ಟಿಟಿಓ 50ನೇ ತಿದ್ದುಪಡಿ, ನಂ. 301-24/2012-ಇಆರ್‌, ಏಪ್ರಿಲ್‌ 19, 2012)

– ಬ್ರಾಡ್‌ಬ್ಯಾಂಡ್‌ ಗ್ರಾಹಕರ ಪರ ನಿಂತಿರುವ ಟ್ರಾಯ್‌, ನಿಗದಿತ ಡಾಟಾ ಪ್ಲಾನ್‌ ಪಡೆದವರಿಗೆ ಶೇ. 80 ಹಾಗೂ ಶೇ. 100 ಮಿತಿ ತಲುಪಿದಾಗ ಸೂಕ್ತ ಮಾತಿ ನೀಡುವ ವ್ಯವಸ್ಥೆ ಮಾಡಲು ಸೂಚಿಸಿದೆ.

ಇಲ್ಲಿನ ಮಾಹಿತಿಗಳು ಅಪಾರ ಆದೇಶ, ನಿರ್ದೇಶನಗಳ ಒಂದು ಪುಟ್ಟ ಭಾಗ ಮಾತ್ರ. ಮತ್ತೂಮ್ಮೆ ಇನ್ನಷ್ಟು ಮೊಬೈಲ್‌ ಗ್ರಾಹಕ ಪರ ಮಾಹಿತಿಗಳ ಗುತ್ಛವನ್ನೂ ನಿರೀಕ್ಷಿಸುತ್ತಿರಿ.

ಏನಿದು ಟ್ರಾಯ್‌?
ನಂಬಿ, ಭಾರತದ ಕೆಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಕೇಂದ್ರ ವಿದ್ಯುತ್‌ ಕಾಯ್ದೆಯಡಿ ಜಾರಿಗೆ ಬಂದಿರುವ ವಿದ್ಯುತ್‌ ನಿಯಂತ್ರಣ ಆಯೋಗವೆಂಬ ಸ್ವಾಯತ್ತ ವ್ಯವಸ್ಥೆಯನ್ನು ಹೆಸರಿಸಬಹುದು. ಕರ್ನಾಟಕದಲ್ಲಿಯೇ ಕೆಇಆರ್‌ಸಿ ತನ್ನ ನಿಷ್ಪಕ್ಷಪಾತ ವರ್ತನೆಯಿಂದ ದೇಶದಲ್ಲಿ ಹೆಸರುವಾಸಿ. ಎಸ್ಕಾಂ, ಕೆಪಿಟಿಸಿಎಲ್‌ನ ಅಂಧಾದುಂಧಿಗೆ ಕಡಿವಾಣ ಹಾಕಿ, ಬಳಕೆದಾರರ ಪರ ನಿಂತಿರುವುದರಿಂದ ಕೆಇಆರ್‌ಸಿ ಎಲ್ಲರಿಗೂ ತಿಳಿದಿದೆ. ಇದೇ ರೀತಿ ದೂರವಾಣಿ ಕ್ಷೇತ್ರದಲ್ಲಿ ನಿಯಮಗಳನ್ನು ರೂಪಿಸುವ ಜವಾಬ್ದಾರಿ ಭಾರತೀಯ ಟೆಲಿಕಾಂ ನಿಯಂತ್ರಣ ಆಯೋಗದ್ದು. ಪುಟ್ಟದಾಗಿ ಕರೆಯುವುದಾದರೆ ಟ್ರಾಯ್‌.

ಇದೀಗ ಟ್ರಾಯ್‌ ಅಸ್ಥಿತ್ವಕ್ಕೆ ಬಂದು ಎರಡು ದಶಕ ಸಂದಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು 1997ರಲ್ಲಿ. ಅದೇ ವರ್ಷ ನೀತಿ ನಿರೂಪಕ ಸಂಸ್ಥೆಯಾಗಿ ಟ್ರಾಯ್‌ನ್ನು ಸ್ಥಾಪಿಸಲಾಯಿತು. ದೂರವಾಣಿ ಕ್ಷೇತ್ರದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತ ಟ್ರಾಯ್‌ 2004ರ ಜನವರಿ ಒಂಭತ್ತರಲ್ಲಿ ಸರ್ಕಾರ ತಂದ ಇನ್ನೊಂದು  ಪ್ರಕಟನೆಯ ಮೂಲಕ ಕೇಬಲ್‌ ಟೆಲಿಷನ್‌ ಕ್ಷೇತ್ರವನ್ನು ನಿರ್ವಸುವ ಹೆಚ್ಚುವರಿ ಕೆಲಸ ಪಡೆಯಿತು. ಪ್ರತಿಯೊಬ್ಬ ದೂರವಾಣಿ, ಡಿಷ್‌ ಗ್ರಾಹಕರು ಟ್ರಾಯ್‌ ಬಗ್ಗೆ, ಅದರ ಆದೇಶ, ನಿರ್ದೇಶನಗಳ ಬಗ್ಗೆ ಮಾತಿ ತಿಳಿದಿರಬೇಕು. ಇದು ಟೆಲಿಕಾಂ ಕ್ಷೇತ್ರದಲ್ಲಿ ಕಾಲಕಾಲಕ್ಕೆ ತರಲು ಹೊರಟ ಮಾರ್ಪಾಡುಗಳ ಕುರಿತು ಜನರ ಅಭಿಪ್ರಾಯವನ್ನೂ ಕೇಳಿ ಅಳವಡಿಸಿಕೊಳ್ಳಲು ಸಿದ್ಧದೆ. ಈ ಎಲ್ಲ ಮಾತಿಗೆ http://www.trai.gov.in/ ವೆಬ್‌ ಮಾಹಿತಿ ನೀಡುತ್ತದೆ. ಫೇಸ್‌ಬುಕ್‌ ನೋಡಿದಂತೆ ಇದರತ್ತಲೂ ನಿಯುತವಾಗಿ ಕಣ್ಣು ಹಾಯಿಸಿ!

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.