ಇರೋ ಒಂದೇ ಜನುಮಾನಾ ನಿನ್ನ ಹೆಗಲ ಮೇಲೆ ಕಳೆಯಬೇಕು!

Team Udayavani, Apr 25, 2017, 3:45 AM IST

obbanti–jeeva-mullur-X.jpg

 ಒಬ್ರನ್ನೊಬ್ರು ಮೀರೋವಷ್ಟು ಧೈರ್ಯ ಇದ್ರೂ ಪ್ರೀತೀನ ಹೇಳ್ಕೊಳ್ಳೋಕೆ ಯಾಕ್‌ ಇಷ್ಟು ಹೆದರಿಕೊಳ್ತಿದ್ದೀವಿ? ಒಬ್ಬರಿಗೊಬ್ರು “ಐ ಹೇಟ್‌ ಯೂ’ ಅಂತ ಸಾವಿರಕ್ಕೂ ಹೆಚ್ಚು ಬಾರಿ ಹೇಳ್ಕೊಂಡಿರೋ ನಾವು, ಒಂದೇ ಒಂದು ಸಾರಿ “ಐ ಲವ್‌ ಯೂ’ ಅಂತ ಹೇಳ್ಳೋಕಾಗೆª ಯಾಕ್‌ ಹೀಗ್‌ ಬದುಕಿಗೆ ಹೆದರಿ ಸಾಯ್ತಾ ಇದೀವಿ! 

ಮೊನ್ನೆ ನಾನು ನೀನು ರಾಮಕೃಷ್ಣ ಆಶ್ರಮದ ಬಂಡೆ ಮೇಲೆ, ಮಧ್ಯೆ ಮೂರಡಿ ಗ್ಯಾಪ್‌ ಬಿಟ್ಟು ಇಟ್ಟು ಕೂತಿದ್ವಿ… ನಮ್ಮಿಬ್ಬರ ಮಧ್ಯೆ ಮಾತು ಶುರುವಾಗೇ ಇರ್ಲಿಲ್ಲ. ಆದರೆ ಮನಸ್ಸುಗಳ ಮಧ್ಯೆ ಮಾತು ನಿಂತೇ ಇರ್ಲಿಲ್ಲ. ಅವು ಕಮ್ಯೂನಿಕೇಟ್‌ ಮಾಡ್ತಾನೇ ಇದುÌ. ಬಾಯ್ಬಿಟ್‌ ಹೇಳ್ಳೋ ಧೈರ್ಯ ಇಬ್ರಿಗೂ ಇರ್ಲಿಲ್ಲ. 

ನಿಂಗೆ ನೆನಪಿದೆಯಾ? ಒಮ್ಮೆ ಆರು ತಿಂಗಳು ಲಕ್ನೋದಲ್ಲಿ ಪ್ರಾಜೆಕ್ಟ್ ಅಂತ ಹೇಳಿ ಟಿಕೆಟ್‌ ಬುಕ್‌ ಮಾಡಿದ್ದ ನೀನು, ಅರ್ಧ ದಾರಿ ತನಕ ಹೋಗಿ ವಾಪಸ್‌ ಬಂದು… ಏನೇನೋ ನೆಪ ಹೇಳಿ ಮಾರನೇ ದಿನವೇ ನನ್ನ ಭೇಟಿ ಮಾಡಿದ್ದೆ. ಆಗ ನಾನ್‌ ನಿನ್ನ ಆಡ್ಕೊಂಡ್‌ ನಕ್ಕಿದ್ದೆ! ನೀನು ದೂರ ಹೋದ್ಮೇಲೇ ನಂಗೆ ಗೊತ್ತಾಗಿದ್ದು… ನಾನು ಮಾತಾಡ್ತಾ ಮಾತಾಡ್ತಾ ನಿನ್ನ ಮೌನಕ್ಕೆ ಯಾವತ್ತೋ ಸೋತು ಹೋಗಿದ್ದೀನಿ ಅಂತ. “ಜಾಸ್ತಿ ಇಷ್ಟ ಆಗ್ಬೇಡಿ!’ ಅಂತ ನೀನು ಅವಾಗವಾಗ ಹೇಳ್ತಿದ್ದ ಮಾತಿನ ಅರ್ಥ ಸಿಕ್ಕಿತ್ತು. ಅಪ್ಪ ಹಾಸಿಗೆ ಹಿಡಿದಿದ್ದಾರೆ, ಮದ್ವೆ ಆಗು ಅಂತ ಹಟ ಹಿಡಿದಿದ್ದಾರೆ.. ಅವ್ರ ಗೋಳಾಟ ನೋಡೋಕಾಗ್ತಿಲ್ಲ. ನೀವು ನೋಡಿದ್‌ ಹುಡುಗಿನೇ.. ಮದ್ವೆ ಮಾಡ್ಕೊಳ್ತೀನಿ ಅಂತ ಮಾತು ಕೊಟ್ಟಿದ್ದೀನಿ’ ಅಂತ ನೀನು ಹೇಳಾªಗ ನಿನ್ನ ಕಣ್ಣಂಚಲ್ಲಿ ನೀರಿತ್ತು. “ಮದ್ವೆ ಆಗು. ನಿಂಗೇನ್‌ ಕಷ್ಟ?’ ಅಂತ ನಾನು ಅದೆಷ್ಟು ಸುಲಭವಾಗಿ ಹೇಳಿºಟ್ಟಿದ್ದೆ! ಆದ್ರೆ ನೀನು ಮರೆಯಾಗಿದ್ದೇ ತಡ ನಾನು ಸಣ್ಣ ಮಗುವಿನ ಥರ ಅತ್ಕೊಂಡು ಹೋಗಿºಟ್ಟಿದ್ದೆ!

ಮೊದಮೊದಲು ಇದೇನು ಪ್ರೇಮಾನೋ? ಓವರ್‌ ಸ್ನೇಹಾನೋ? ಅನ್ನೋ ಅನುಮಾನ ಕಾಡ್ತಿತ್ತು! ಆದ್ರೆ ಈಗ ಗೊತ್ತಾಗಿದೆ. ಇದು ಪ್ರೇಮವಷ್ಟೇ ಅಲ್ಲ, ಎಂದಿಗೂ ದಕ್ಕಿಸಿಕೊಳ್ಳಲಾರದ ಅಸಹಾಯಕ ಪ್ರೇಮ ಅಂತ! ನಿನ್ನಂಥ ಸನ್ಯಾಸಿ ಮನುಷ್ಯನ ಎದೇಲಿ ಪ್ರೀತಿ ಚಿಗುರೋ ಹಾಗೆ ಮಾಡಿದ ಹುಡುಗಿ ನಾನು, ಅನ್ನೋ ಹೆಮ್ಮೆ ಇದೆ. ನಿನ್ನ ಕುಟುಂಬದ ಸಮಸ್ಯೆ ಮಧ್ಯೆ ನಾನೆಲ್ಲಿ ನಲುಗಿ ಹೋಗ್ತಿàನೋ ಅಂತ ನೀನು ನಿನ್ನ ಪ್ರೀತೀನ ಹೇಳ್ಕೊàಳ್ಳೋಕೂ ಆಗೆªà, ಬಿಡೋಕೂ ಆಗೆªà ಒದ್ದಾಡ್ತಾ ಇರೋದನ್ನ ನೋಡಿದ್ರೆ ಗಿಲ್ಟ್ ಕೂಡ ಆಗ್ತಿದೆ.

ಒಬ್ರನ್ನೊಬ್ರು ಮೀರೋÕವಷ್ಟು ಧೈರ್ಯ ಇದ್ರೂ ಪ್ರೀತೀನ ಹೇಳ್ಕೊಳ್ಳೋಕೆ ಯಾಕ್‌ ಇಷ್ಟು ಹೆದರಿಕೊಳ್ತಿದ್ದೀವಿ? ಒಬ್ರುಗೊಬ್ರು “ಐ ಹೇಟ್‌ ಯೂ’ ಅಂತ ಸಾವಿರಕ್ಕೂ ಹೆಚ್ಚು ಬಾರಿ ಹೇಳ್ಕೊಂಡಿರೋ ನಾವು, ಒಂದೇ ಒಂದು ಸಾರಿ “ಐ ಲವ್‌ ಯೂ’ ಅಂತ ಹೇಳ್ಳೋಕಾಗೆª ಯಾಕ್‌ ಹೀಗ್‌ ಬದುಕಿಗೆ ಹೆದರಿ ಸಾಯ್ತಾ ಇದೀವಿ! ಒನ್‌ ಸೈಡ್‌ ಲವ್ವು, ಟೂ ಸೈಡ್‌ ಲವ್ವು.. ಇವೆಲ್ಲಕಿಂತ ಹೇಳ್ಕೊಳ್ಳೋಕ್‌ ಆಗದೇ ಇರೋ ಟೂ ಸೈಡೆಡ್‌ ಲವ್‌ಗೆ  ಶಕ್ತಿ ಜಾಸ್ತಿ! ಅಲ್ವಾ? ಅದ್ರಲ್ಲೂ ಒಂದು ಮಟ್ಟಿಗಿನ ಪ್ರಬುದ್ಧತೆ ಬಂದ್ಮೇಲೆ ಪ್ರೀತಿ ಹೇಳ್ಕೊಳ್ಳೋದು ತುಂಬಾ ಕಷ್ಟ! ನಿನ್ನ ಗುರಿ ಏನು ಅಂತ ನಿಂಗೆ ಮತ್ತೆ ನನ್ನ ಗುರಿ ಏನು ಅಂತ ನಂಗೆ ಸ್ಪಷ್ಟತೆಯಿದೆ. ಆದ್ರೆ ಈ ಪ್ರೀತಿಗೆ ಅದ್ಯಾವೂª ಗೊತ್ತಿಲ್ಲ… ಎಲ್ಲವನ್ನೂ ಬದಿಗಿಟ್ಟು ಜೀವನಪೂರ್ತಿ ಜೊತೆಗ್‌ ಇರಬೇಕು ಅನ್ಸುತ್ತೆ. 

ಧೈರ್ಯ ಮಾಡಿ ನಾನು ಈ ಪತ್ರ ಬರೀತಾ ಇದ್ದೀನಿ. ನಾನು ನಿನ್ನನ್ನು ಕಳ್ಕೊàತೀನಿ ಅಂತ ನಂಬೋಕೆ ನನ್ನ ಮನಸ್ಸು ಮತ್ತು ಮೆದುಳು ಎರಡೂ ಸಿದ್ದವಿಲ್ಲ. ಇಲ್ಲಿ ಕೇಳ್ಳೋ ಹುಡ್ಗಾ… ನಮಗಿರೋದು ಒಂದೇ ಜನ್ಮ. ಅದನ್ನ ನಾನು ನಿನ್ನ ಹೆಗಲ ಮೇಲೇ ಕಳೀಬೇಕು! ನಮ್ಮಿಬ್ಬರ ನೋವು ನಲಿವುಗಳು ಒಂದೇ ಆಗಿರಬೇಕು. ನಮ್ಮ ಲಾಂಗೆಸ್ಟ್‌ ಬಂಧನದ ಕಥೇನ ನಮ್ಮ ಕಂದಮ್ಮನಿಗೆ ಜೋಡಿಯಾಗಿ ಹೇಳ್ಬೇಕು.. ಸಾವಿರ ಸಮಸ್ಯೆ ಬರಲಿ, ಒಟ್ಟಿಗೆ ಎದುರಿಸೋಣ. ಏನಂತೀಯ?

ಇತೀ.. ಈ ಪತ್ರಕ್ಕೆ ನಿನ್ನ ಕಣ್ಣೀರನ್ನು ಬಿಟ್ಟು ಉತ್ತರ ಬಯಸುವವಳು

– ನಂದಿನಿ ನಂಜಪ್ಪ

ಟಾಪ್ ನ್ಯೂಸ್

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.