ಹಾಲ್‌ ಟಿಕೆಟ್‌ಗೇ ಟಿಕೆಟ್‌ ಕೊಟ್ಟ ಕಥೆ!


Team Udayavani, Jul 18, 2017, 3:50 AM IST

josh-page-4.gif

ನಾನು ಪದವಿಯಲ್ಲಿ ಓದುತ್ತಿದ್ದ ಸಂದರ್ಭ. ಎಕ್ಸಾಮ್‌ಗಳು ಸಮೀಪಿಸಿದ್ದವು ಸೆಮ್‌ ಪೂರ್ತಿ ಹುಡುಗಾಟದಲ್ಲಿ ಕಾಲ ಕಳೆದ ನಮಗೆ ಪರೀಕ್ಷೆ ಒಂದು ರೀತಿಯಲ್ಲಿ ಮೂರನೆಯ ಮಹಾಯುದ್ಧದಂತೆ ಕಾಣುತ್ತಿತ್ತು. ಓದಲು ಕುಳಿತರೆ ಆರು ವಿಷಯಗಳ ಪೈಕಿ ಮೂರು ವಿಷಯಗಳೂ ಮುಗಿಯುತ್ತಿರಲಿಲ್ಲ. ಎಕನಾಮಿಕ್ಸ್‌ನಲ್ಲಿ ಬರುವ ಸಿದ್ಧಾಂತಗಳು ಏನು ಮಾಡಿದರೂ ತಲೆ ಸೇರುತ್ತಿರಲಿಲ್ಲ. ಪರೀಕ್ಷೆಯ ದಿನ ಒಂದು ಚೀಟಿಯಲ್ಲಿ ಎಲ್ಲ ಸಿದ್ಧಾಂತಗಳನ್ನು ಬರೆದುಕೊಂಡು ಸಾಕ್ಸ್‌ನಲ್ಲಿ ಇಟ್ಟುಕೊಂಡು ಪರೀûಾ ಹಾಲ್‌ಗೆ ಹೋದೆ. ಸೂಪರ್‌ವೈಸರ್‌ ತುಂಬಾ ಸ್ಟ್ರಿಕ್ಟ್ ಆಗಿದ್ದರು. ಉತ್ತರ ಪತ್ರಿಕೆಯನ್ನು ಕೊಟ್ಟ ನಂತರ ಹಾಲ್‌ಟಿಕೆಟ್‌ನಲ್ಲಿ ಸಹಿ ಮಾಡುತ್ತಾ ಎಲ್ಲ ವಿದ್ಯಾರ್ಥಿಗಳ ಹತ್ತಿರ ಕಾಪಿ ಚೀಟಿ ಹುಡುಕುತ್ತಿದ್ದರು. ಸಿಕ್ಕರೆ ಪೇಪರ್‌ ಕಸಿದುಕೊಳ್ಳುವುದಾಗಿ ಬೆದರಿಕೆ ಹಾಕಿದರು.

ಒಂದು ವೇಳೆ ಕಾಪಿ ಸಿಕ್ಕರೆ ಎಲ್ಲ ಹುಡುಗಿಯರ ಮುಂದೆ ಅವಮಾನವಾಗುತ್ತದೆ. ಅದಕ್ಕೇ ಕಾಪಿಗಿಂತ ಮಾನ ಮುಖ್ಯ ಎಂದುಕೊಂಡು ಸಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ಚೀಟಿಯನ್ನು ಕಿಟಕಿಯಿಂದ ಹೊರಗೆ ಎಸೆದು ಬಿಟ್ಟೆ. ನನ್ನ ಸರದಿ ಬಂದಾಗ ಸೂಪರ್‌ವೈಸರ್‌ “ಹಾಲ್‌ಟಿಕೆಟ್‌ ಕೊಡು’ ಎಂದರು. 

ಎದೆಯ ಜೇಬಿನಲ್ಲಿ ಇಟ್ಟುಕೊಂಡಿದ್ದ ಹಾಲ್‌ಟಿಕೆಟ್‌ ತೆಗೆದು  ಅವರ ಕೈಗೆ ಕೊಟ್ಟೆ. ಅವರು ಸಿಟ್ಟಿನಿಂದ ನನ್ನನ್ನೇ ದುರುದುರು ನೋಡಲು ಶುರುಮಾಡಿದರು. ಯಾಕೆ ಹೀಗೆ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದಾರೆ ಅಂತ ಮೊದಲು ಗೊತ್ತಾಗಲಿಲ್ಲ. ಮರುಕ್ಷಣವೇ- ನಾನು ಅವರ ಕೈಗಿತ್ತ ಹಾಲ್‌ಟಿಕೆಟನ್ನು ಮುಂದೆ ಹಿಡಿದರು. ನೋಡಿದರೆ, ಅದು ಕಾಪಿ ಚೀಟಿಯಾಗಿತ್ತು. ಏನಾಗಿತ್ತು ಅಂದರೆ ಪರೀಕ್ಷೆಯ ಗಡಿಬಿಡಿಯಲ್ಲಿ ಕಾಪಿ ಚೀಟಿ ಹಾಗೂ ಹಾಲ್‌ ಟಿಕೆಟನ್ನು ನಾನು ಇಡಬೇಕಿದ್ದ ಜಾಗ ಅದಲುಬದಲಾಗಿತ್ತು. ಪರಿಣಾಮ, ನಾನು ನನ್ನ ಕಿಸೆಯಿಂದ ಹಾಲ್‌ ಟಿಕೆಟ್‌ ಅಂದುಕೊಂಡು  ಕಾಪಿ ಚೀಟಿಯನ್ನು ಅವರ ಕೈಯಲ್ಲಿಟ್ಟಿದ್ದೆ. ಅಂದರೆ, ಈ ಮೊದಲು ಚೂರು ಚೂರು ಮಾಡಿ ಹೊರಗೆ ಎಸೆದಿದ್ದು ಹಾಲ್‌ ಟಿಕೆಟ್‌ ಅಂತ ಕನ್‌ಫ‌ರ್ಮ್ ಆಯಿತು. ಎಕ್ಸಾಮ್‌ಗೆ ಅವಸರದಿಂದ ಬರುವಾಗ ಈ ರೀತಿಯಾದ ಗೊಂದಲವಾಗಿತ್ತು. ನಂತರ ಸೂಪರ್‌ವೈಸರ್‌ ಬಳಿ ಕ್ಷಮೆ ಕೇಳಿದೆ. ಆವತ್ತು ಹೇಗೋ ಮಾಫಿ ಸಿಕ್ಕಿತು.

– ಮಹಾಂತೇಶ ದೊಡವಾಡ, ಬೆಳಗಾವಿ

ಟಾಪ್ ನ್ಯೂಸ್

1-qewqwqewq

Netizens; 10ನೇ ತರಗತಿ ಪರೀಕ್ಷೆ ಟಾಪರ್‌ ಟ್ರೋಲ್‌: ನೆಟ್ಟಿಗರಿಂದ ತರಾಟೆ

congress

Controversy;ಪಿಎಂ ಮೋದಿ ವಿರುದ್ಧ ಕಾಂಗ್ರೆಸ್‌ ಲಕ್ಷ ಸಹಿ ಅಭಿಯಾನ

1-ewewqqweqweewq

Hong Kong ಎವರೆಸ್ಟ್‌, ಎಂಡಿಎಚ್‌ ಮಸಾಲೆ ಬ್ಯಾನ್‌

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

court

West Bengal: 25,753 ಶಿಕ್ಷಕರ ನೇಮಕ ರದ್ದು

UGC

CUET-NET ಅಂಕಗಳ ಸಾಮಾನ್ಯೀಕರಣ ಇಲ್ಲ: ಯುಜಿಸಿ ಮುಖ್ಯಸ್ಥ

kejriwal 2

Kejriwal ಬಿಡುಗಡೆಗೆ ಪಿಐಎಲ್‌: ವಿದ್ಯಾರ್ಥಿಗೆ 75,000 ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qewqwqewq

Netizens; 10ನೇ ತರಗತಿ ಪರೀಕ್ಷೆ ಟಾಪರ್‌ ಟ್ರೋಲ್‌: ನೆಟ್ಟಿಗರಿಂದ ತರಾಟೆ

congress

Controversy;ಪಿಎಂ ಮೋದಿ ವಿರುದ್ಧ ಕಾಂಗ್ರೆಸ್‌ ಲಕ್ಷ ಸಹಿ ಅಭಿಯಾನ

1-ewewqqweqweewq

Hong Kong ಎವರೆಸ್ಟ್‌, ಎಂಡಿಎಚ್‌ ಮಸಾಲೆ ಬ್ಯಾನ್‌

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

court

West Bengal: 25,753 ಶಿಕ್ಷಕರ ನೇಮಕ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.