ಸಿಂಪಲ್ಲಾಗೊಂದ್‌ ಲಿಪ್‌ ಸ್ಟೋರಿ


Team Udayavani, Jul 18, 2017, 3:50 AM IST

nenapu-simple-aagond-lip–s.gif

ಅವನ ಹೆಸರು ರಮಣ ಅಂತಿಟ್ಕೊಳ್ಳಿ. ಮದುವೆ ವಯಸ್ಸು. ಅಪ್ಪ ಅಮ್ಮ ನೋಡಿದ, ತಾನೂ ಮೆಚ್ಚಿದ ಚೆಂದುಳ್ಳಿ ಚೆಲುವೆ ರಾಧಾಳನ್ನು ಒಪ್ಪಿ ಮದುವೆಯಾದ. ಒಂದು ತಿಂಗಳು ಭುವಿಯೇ ಸ್ವರ್ಗದಂತಿತ್ತು. ಇವರ ಕರ್ಮ, ಮುಂದಿನ ತಿಂಗಳೇ ಆಷಾಢಮಾಸ. ಒಂದು ತಿಂಗಳು ಅತ್ತೆ ಸೊಸೆ ಒಂದೇ ಕಡೆ ಇರುವಂತಿಲ್ಲ. ಹಾಗೆಂದು ಅಮ್ಮನನ್ನು ಹೊರ ಕಳಿಸಲಾದೀತೇ? ಶಾಸ್ತ್ರ ಶಾಸ್ತ್ರವೇ. ರಮಣ ಹ್ಯಾಪು ಮೋರೆ ಹಾಕಿಕೊಂಡು ಪತ್ನಿಯನ್ನು ತವರು ಮನೆಗೆ ಬಿಟ್ಟುಬಂದ.
ಹಗಲೆಲ್ಲ ಆಫೀಸು, ಗೆಳೆಯರು, ಸುತ್ತಾಟ ಹೇಗೋ ನಡೆಯುತ್ತಿತ್ತು. ರಾತ್ರಿಯಾಗುತ್ತಿದ್ದಂತೆ ರಾಧಾ ಕಣ್ಣ ಮುಂದೆ ಕಿಂಕಿಣಿ ನಾದಗೈಯುತ್ತಿದ್ದಳು. ರುಚಿ ಕಂಡ ಬೆಕ್ಕು, ಮನಸೆಂಬ ಮರ್ಕಟ ಸಿಗ್ನಲ್‌ ಜಂಪ್‌ ಮಾಡಿದ ಬ್ರೇಕ್‌ಫೇಲ್‌ ಗಾಡಿಯಂತಾಗಿತ್ತು. ಈಗಿನಂತೆ ಆಗ ಟಿ.ವಿ., ಮೊಬೈಲ್‌, ಇಂಟರ್‌ನೆಟ್‌ ಯಾವುದೂ ಇರಲಿಲ್ಲ. ರೇಡಿಯೋ, ಪತ್ರಿಕೆ, ನಾಟಕ, ಸಿನಿಮಾ ಅಷ್ಟೆ.

ಅಂಚೆಯಣ್ಣನೇ ಗತಿಯೆಂದು ರಮಣ, ಪತ್ನಿಗೆ ಕೇವಲ 8 ಪುಟಗಳಷ್ಟು ದೀರ್ಘ‌ವಾದ ಪತ್ರ ಬರೆದ. ಅದರಲ್ಲಿ ತನ್ನ ವಿರಹೋತ್ಕಂಠಿತ ಪರಿಸ್ಥಿತಿ, ಅಬ್ಬೇಪಾರಿತನ ಎಲ್ಲವನ್ನೂ ವರ್ಣಿಸಿದ. ಕೊನೆಗೊಂದು ಗ್ಲಾಮರ್‌ ಟಚ್‌ ಕೊಟ್ಟರೆ ಹೇಗೆ ಎಂದು ಮನ ಮಂಥಿಸಿದ.

ಆಗೆಲ್ಲ ವಾರಪತ್ರಿಕೆಗಳಲ್ಲಿ ಲಿಪ್‌ಸ್ಟಿಕ್‌ ಕಂಪನಿಯೊಂದು ತನ್ನ ಜಾಹೀರಾತಿನಲ್ಲಿ ಜವ್ವನೆಯ ಸುಂದರ ತುಟಿಗಳನ್ನು ಮಾತ್ರ ದೊಡ್ಡದಾಗಿ ಪ್ರಕಟಿಸಿ ತನ್ನ ಲಿಪ್‌ಸ್ಟಿಕ್‌ ಬಗ್ಗೆ ಹೇಳಿಕೊಳ್ಳುತ್ತಿತ್ತು. ರಮಣ, ಆ ತುಟಿಗಳನ್ನು ಮಾತ್ರವೇ ಕತ್ತರಿಸಿ ಪತ್ರದ ಕೊನೆಯಲ್ಲಿ ಅಂಟಿಸಿ ಹೀಗೆಂದು ಬರೆದ -

“ನನ್ನ ಚಿಣಿಮಿಣಿ, ನೀನು ಇಲ್ಲಿಗೆ ಬರುವವರೆಗೂ ಈ ತುಟಿಗಳು ನನ್ನವೇ ಎಂದು ಭಾವಿಸಿ ದಿನಕ್ಕೆ ನೂರು ಬಾರಿ ಚುಂಬಿಸುತ್ತಿರು. ಅಂಥದ್ದೇ ಇನ್ನೊಂದು ಸೆಟ್‌ ನನ್ನ ಬಳಿಯಿದೆ. ನಾನೂ ನಿತ್ಯ ನೂರು ಪಪ್ಪಿ ಕೊಡುತ್ತೇನೆ. ಬೇಗ ಪತ್ರ ಬರೆ…’ಈ ಪತ್ರವನ್ನು ಅಂಟಿಸಿ ಡಬ್ಬಿಗೆ ಹಾಕಿದ. ವಾರವಾದರೂ ಪತ್ನಿಯಿಂದ ಉತ್ತರವೇ ಬರಲಿಲ್ಲ. ಇವನಿಗೋ ವಿರಹಾ ನೂರು ನೂರು ತರಹಾ. ಕಡೆಗೆ ವೇದನೆ ತಡೆಯಲಾರದೇ ಅತ್ತೆ ಮನೆಗೆ ಓಡಿದ. ಪತ್ನಿ ಸಿಕ್ಕಳು, ಪತ್ರದ ಸುಳಿವಿಲ್ಲ. ಕೇಳಿದರೆ ಅವಳಿಗೂ ಏನೂ ಗೊತ್ತಿಲ್ಲ. ಅರೆ! ಯಾರ ಕೈ ಸೇರಿತಪ್ಪಾ ಆ ಪ್ರಣಯ ಪತ್ರ ಅಂತ ಪೀಕಲಾಟ ಶುರುವಾಯಿತು ರಮಣನಿಗೆ. 3 ದಿನಗಳ ನಂತರ ತವರಿನಿಂದ ಬಂದ ರಾಧಾಳ ತಮ್ಮ ರಾಜೇಶ, ರಮಣನ ಕೈಗೆ ಪತ್ರ ಕೊಟ್ಟು ನಗುತ್ತಾ ಹೇಳಿದ. “ಭಾವ, ತುಟಿಗಳು ತುಂಬಾ ಚೆನ್ನಾಗಿವೆ, ನಿಮ್ಮ ತುಟಿಗಳನ್ನು ನಿಮಗೇ ಒಪ್ಪಿಸುತ್ತಿದ್ದೇನೆ ತಗೊಳ್ಳಿ’.

ಆ ಪತ್ರ ಹೋಗಬೇಕಿದ್ದುದು  Harapanahalliಗೆ, ಅಂಚೆ ಮಹನೀಯರು ಮಧ್ಯದ pa ನೋಡದೇ ಹಾರನಹಳ್ಳಿಗೆ ಕಳಿಸಿದ್ದರು. ಬೇಲೂರು, ಹಾಸನ, ಶ್ರವಣಬೆಳಗೊಳಗಳನ್ನೆಲ್ಲ ಸಂದರ್ಶಿಸಿ ಹರಿದು ಎಲ್ಲಾ ಬಟ್ಟಂಬಯಲಾದ ಪತ್ರವನ್ನು ಬಹುಷಃ ಜಿಲ್ಲೆಯ ಇಡೀ ಅಂಚೆ ಇಲಾಖೆಯೇ ಓದಿತ್ತೋ ಏನೋ! ಕೊನೆಗೂ ರಮಣನ ತುಟಿಗಳು ಅವನ ಕೈ ಸೇರಿದ್ದವು!.

– ಕೆ. ಶ್ರೀನಿವಾಸರಾವ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.