ಹೆಲೋ ಡಾಕ್ಟರ್‌: ಮತ್ತೆ ಕರೆದಿದೆ ಕೆಪಿಎಸ್ಸಿ…


Team Udayavani, Aug 22, 2017, 10:13 AM IST

22-JOSH-7.jpg

ಪೂರ್ತಿ 5 ವರ್ಷ (ಎಂ.ಡಿ ಪದವಿ ಕೂಡ ಆಗಿರುತ್ತೋ ಅನ್ನೋದಾದ್ರೆ ಪೂರ್ತಿ ಏಳೆಂಟು ವರ್ಷ) ಕಷ್ಟಪಟ್ಟು ಓದಿದ ವೈದ್ಯಕೀಯ ಅಧ್ಯಯನದಿಂದ ತೃಪ್ತಿ ಸಿಗುವುದು ಒಂದು ಸ್ಪಷ್ಟ ಉದ್ಯೋಗ ಸಿಕ್ಕಾಗಲೇ. ಎಂಬಿಬಿಎಸ್‌ ಬಳಿಕ ನಿರ್ದಿಷ್ಟ ವಿಷಯದಲ್ಲಿ (ಕಣ್ಣು, ಕಿವಿ, ದಂತ, ಹೃದಯ ಇತ್ಯಾದಿ) ಎಂ.ಡಿ. ಮಾಡಿ ತಜ್ಞರೆನಿಸಿಕೊಂಡ ನಂತರ ನರ್ಸಿಂಗ್‌ ಹೋಂ ತೆರೆಯಬೇಕೇ ಅಥವಾ ಅಲ್ಲಲ್ಲಿ ವೈದ್ಯಕೀಯ ಕಾಲೇಜು, ಅಧ್ಯಯನ ಕೇಂದ್ರಗಳನ್ನು ಸುತ್ತುತ್ತಾ ಉಪನ್ಯಾಸ ನೀಡಬೇಕೇ ಎಂಬ ಗೊಂದಲ ಮೂಡುತ್ತದೆ. ಕೆಲವೊಮ್ಮೆ ವಿದೇಶಿ ನೌಕರಿಗೆ ಮನಸ್ಸು ಹಂಬಲಿಸುವುದೂ ಇದೆ. ಇದೆಲ್ಲಕ್ಕಿಂತ ಸರಕಾರಿ ವಲಯದ ಉದ್ಯೋಗವೇ ಮಿಗಿಲೆಂಬುದು ಸಾರ್ವತ್ರಿಕ ಅಭಿಮತ. ಅಂಥ ಕನಸಿಗೆ ಒತ್ತಾಸೆಯಾಗಿ ಕರ್ನಾಟಕ ಲೋಕಸೇವಾ ಆಯೋಗವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದಿಂದ ತಜ್ಞ ವೈದ್ಯರು, ಸಾಮಾನ್ಯ ವೈದ್ಯಾಧಿಕಾರಿಯಾಗಲು ಒಟ್ಟು 1,430 ಹುದ್ದೆಗಳಿಗೆ ಅವಕಾಶ ಕಲ್ಪಿಸಿದೆ…

“ವೈದ್ಯಕೀಯ ಸೇವೆಗಾಗಿ ಎಷ್ಟು ದಿನ ಖಾಸಗಿ ನರ್ಸಿಂಗ್‌ ಹೋಂಗಳನ್ನು ಬದಲಾಯಿಸೋದು? ನನಗಂತೂ ಬೇಜಾರಾಗಿ ಹೋಗಿದೆಯಪ್ಪಾ. ಯಾವುದಾದರೊಂದು ನೆಲೆ ನಿಲ್ಲುವ, ಗಟ್ಟಿ ಆಫ‌ರ್‌ ಸಿಕ್ಕರೆ ಸಾಕು. ಒಂದು ಕಡೆ ಆರಾಮಾಗಿ ಇದ್ದು ಬಿಡುತ್ತೇನೆ’, “ನರ್ಸಿಂಗ್‌ ಕಾಲೇಜು, ಖಾಸಗಿ ಆಸ್ಪತ್ರೆ ಜೊತೆಗೆ ಕ್ಲಿನಿಕ್‌ ಇವೆಲ್ಲಾ ಓಡಾಡೋಷ್ಟರಲ್ಲಿ ಕಾಲು ಬಿದ್ದೇ ಹೋಗುತ್ತೆ. ದಿನದಲ್ಲಿ ಸ್ವಲ್ಪವೂ ಫ್ರೀ ಟೈಮೇ ಸಿಗಲ್ಲಾ, ಸರ್ಕಾರಿ ಕೆಲ್ಸನಾದ್ರೂ ಸಿಕ್ಕಿದ್ರೆ ಚೆನ್ನಾಗಿರುತ್ತಿತ್ತು’… ಹೀಗೆಲ್ಲ ಅಂದುಕೊಳ್ಳುವ ಯುವ ವೈದ್ಯರ ಸಮೂಹವಿದೆ. ಎಂಜಿನಿಯರ್, ಕ್ಲರ್ಕ್ಸ್, ಅಕೌಂಟೆಂಟ್ಸ್‌… ಮುಂತಾದವರಿಗೆ ಇರುವಷ್ಟು ಫ್ರೀ ಟೈಮ್‌ ನಮಗೆ ಇಲ್ಲವೇ ಇಲ್ಲ. ಖಾಸಗಿ ಆಸ್ಪತ್ರೇನ ಯಾಕಾದ್ರೂ ಸೇರಿದ್ದೋ ಎಂಬ ಸಂಕಟ ಇವರದ್ದು. ಸರ್ಕಾರಿ ಆಸ್ಪತ್ರೇಲಿ ಕೆಲಸ ಸಿಕ್ಕಿದ್ದಿದ್ರೆ.. ಎಂಬುದು ಇವರ ಕನವರಿಕೆ. ಅಂಥವರಿಗೆ ಈಗ ಕೆಪಿಎಸ್ಸಿಯಿಂದ ಭರ್ಜರಿ ಆಫ‌ರ್‌ ಇದೆ. ಜನರಲ್‌ ಮೆಡಿಸಿನ್‌, ಜನರಲ… ಸರ್ಜರಿ ಸೇರಿದಂತೆ ಒಟ್ಟು 1430 ತಜ್ಞ ವೈದ್ಯರು ಮತ್ತು ಸಾಮಾನ್ಯ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಇದು ಸದಾವಕಾಶ.

ಯಾವ್ಯಾವ ಹುದ್ದೆಗಳಿವೆ?
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಜನರಲ್ ಮೆಡಿಸಿನ್‌) – 257
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಜನರಲ್ ಸರ್ಜರಿ) – 101
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಪ್ರಸೂತಿ ಮತ್ತು ಸ್ತ್ರೀರೋಗ) – 167
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಕಿವಿ, ಮೂಗು, ಗಂಟಲು) – 59
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಚರ್ಮರೋಗ) – 79
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಅರಿವಳಿಕೆ) – 99
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಮಕ್ಕಳ ತಜ್ಞರು) – 158
ಹಿರಿಯ ವೈದ್ಯಾಧಿಕಾರಿ/ ತಜ್ಞರು (ನೇತ್ರ) – 80
ಹಿರಿಯ ವೈದ್ಯಾಧಿಕಾರಿ/ ತಜ್ಞರು (ಕೀಲು, ಮೂಳೆರೋಗ) – 31
ಹಿರಿಯ ವೈದ್ಯಾಧಿಕಾರಿ/ ತಜ್ಞರು (ರೇಡಿಯಾಲಜಿಸ್ಟ್‌) – 34
ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು- 365.
ಒಟ್ಟು 1430 ಹುದ್ದೆಗಳು. 
ಇದರಲ್ಲಿ ಬ್ಯಾಕ್‌ಲಾಗ್‌ ಮತ್ತು ಮೂಲ ವೃಂದಗಳಿಗೆ ಹುದ್ದೆಗಳನ್ನು ವಿಂಗಡನೆ ಮಾಡಲಾಗಿದೆ.

ವಯೋಮಿತಿ, ವಿದ್ಯಾರ್ಹತೆ, ವೇತನ
– ಅಭ್ಯರ್ಥಿಯು ಕನಿಷ್ಠ 21ರಿಂದ ಗರಿಷ್ಠ 42 ವರ್ಷ ವಯೋಮಿತಿ ಹೊಂದಿರಬೇಕು.
– ಪರಿಶಿಷ್ಟ ಜಾತಿ ಮತ್ತು ವರ್ಗ, ಪ್ರವರ್ಗಕ್ಕೆ 5 ವರ್ಷ, ದಿವ್ಯಾಂಗರು ಮತ್ತು ವಿಧವೆಯರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ.
– ತಜ್ಞ ವೈದ್ಯರ ಹುದ್ದೆಗೆ ಎಂಬಿಬಿಎಸ್‌ ಡಿಗ್ರಿಯೊಂದಿಗೆ ಸ್ನಾತಕೋತ್ತರ ಪದವಿ, ಆಯಾ ಪ್ರಾವೀಣ್ಯತಾ ವಿಷಯದ ಬಗ್ಗೆ ಪ್ರಮಾಣೀಕೃತ ವಿವಿ ಪ್ರಮಾಣ ಪತ್ರ ಪಡೆದಿರಬೇಕು.
– ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಪ್ರಮಾಣೀಕೃತ ವಿವಿಯಲ್ಲಿ ಎಂಬಿಬಿಎಸ್‌ ಜೊತೆಗೆ ಗ್ರಾಮೀಣ ಭಾಗದಲ್ಲಿ ಕನಿಷ್ಠ ಆರು ವರ್ಷ ಸೇವೆ ಸಲ್ಲಿಸಿರಬೇಕು.
– ಹಿರಿಯ ವೈದ್ಯಾಧಿಕಾರಿ/ ತಜ್ಞ ವೈದ್ಯ ಹುದ್ದೆಗೆ ಪ್ರತಿ ತಿಂಗಳಿಗೆ 30,400- 51,300 ರು. ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ 28,100 – 50,100 ರುಪಾಯಿ ಸೇವಾ ಗೌರವಧನವನ್ನು ಸರಕಾರ ನಿಗದಿ ಮಾಡಿದೆ.

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. http://www.kpscapps2.com/kpsc_medical_2017//ಅಂತರ್ಜಾಲ ಪರದೆಯಲ್ಲಿ ನಿಯಮಗಳನ್ನು ಓದಿದ ಬಳಿಕ ನ್ಯೂ ರಿಜಿಸ್ಟ್ರೇಷನ್‌ ಆಯ್ಕೆ ಮಾಡಿಕೊಳ್ಳಬೇಕು. ಮತ್ತೂಂದು ಪರದೆಯಲ್ಲಿ ಮೊದಲ, ಮಧ್ಯದ, ಕೊನೆಯ ಹೆಸರು, ತಂದೆ ತಾಯಿ, ಸಂಗಾತಿ ಹೆಸರು, ಜನ್ಮದಿನಾಂಕ, ಲಿಂಗ, ಆಧಾರ್‌ ಸಂಖ್ಯೆ, ಮೊಬೈಲ… ಸಂಖ್ಯೆ, ಇ-ಮೇಲ್‌ ವಿಳಾಸ ದೃಢೀಕರಿಸಿ ಸೆಕ್ಯುರಿಟಿ ಕೋಡ್‌ ನಮೂದಿಸಿ. “ಘೋಷ ವಾಕ್ಯವನ್ನು ಒಪ್ಪುತ್ತೇನೆ’ ಎಂದು ಆಯ್ಕೆ ಮಾಡಿ ಮುಂದಿನ ಪರದೆಗೆ ಹೋಗಿ, ಅಲ್ಲಿ ಅಂಚೆ ವಿಳಾಸ, ಶಾಶ್ವತ ಅಂಚೆ ವಿಳಾಸವನ್ನು ನಮೂದಿಸಿ ಸಬ್ಮಿಟ್‌ ಮಾಡಿ. ಆಗ ಇನ್ನೊಂದು ಪರದೆ ಮೂಡುತ್ತದೆ. ಅಲ್ಲಿ ನೀವು ಹೊಂದಲಿರುವ ಹುದ್ದೆ ಆಯ್ಕೆ ಮಾಡಿಕೊಳ್ಳಿ. ಬಳಿಕ ಬರುವ ಪರದೆಯಲ್ಲಿ ಅಗತ್ಯ ದಾಖಲೆ (ಭಾವಚಿತ್ರ, ಸಹಿಚಿತ್ರ, ದಾಖಲೆಗಳ ಪಿಡಿಎಫ್ ಫೈಲ್‌)ಗಳನ್ನು ತುಂಬಿ. ಈಗ ಮೂಡಿದ ಪರದೆಯಲ್ಲಿ ನಿಮ್ಮ ವಿದ್ಯಾರ್ಹತೆ ಸಂಬಂಧಿತ ಅಂಕ ಗಳಿಕೆ ವಿಷಯವಾಗಿ ಸ್ಪಷ್ಟವಾಗಿ ನಮೂದಿಸಿ ಒಪ್ಪಿಗೆ ಸೂಚಿಸಿ, ಮಗದೊಂದು ಪರದೆಯಲ್ಲಿ ಮೀಸಲಾತಿ ಕುರಿತು ಎಸ್‌/ ನೋ ಆಯ್ಕೆಗಳಿರುತ್ತವೆ. ಸರಿಯಾದದ್ದನ್ನು ಆಯ್ಕೆ ಮಾಡಿ ಸೇವ್‌, ಕಂಟಿನ್ಯೂ ಮಾಡಿ. ಇಲ್ಲಿ ಆಧಾರ್‌ ಕಾರ್ಡ್‌, ಎಸ್ಸೆಸ್ಸೆಲ್ಸಿ, ಕಾನ್ವಕೇಷನ್‌, ಪದವಿ ಅಂಕಪಟ್ಟಿ, ಎಮ್‌ಸಿಐ, ಕೆಎಂಸಿ ಇತರ ದಾಖಲೆ ಪ್ರತಿಗಳನ್ನು ಅಪ್‌ಲೋಡ್‌ ಮಾಡಿ. ಘೋಷವಾಕ್ಯಕ್ಕೆ ಒಪ್ಪಿಗೆ ಸೂಚಿಸಿ, ಚಲನ್‌ ಡೌನ್‌ಲೋಡ್‌ ಮಾಡಿ. ಅಂಚೆ ಕಚೇರಿಯಲ್ಲಿ ಹಣ ಪಾವತಿಸಿ ರಸೀದಿ ಪಡೆಯಿರಿ.

ಸಾಮಾನ್ಯ ಅಭ್ಯರ್ಥಿಗಳು 300 ರು. ಪರಿಶಿಷ್ಟ ಅಭ್ಯಥಿಗಳೂ 150 ರು. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಕೆಗೆ ಸೆ.11 ಕಡೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಅ. 12 ಕೊನೆ ದಿನ. 
ಹೆಚ್ಚಿನ ಮಾಹಿತಿಗೆ: http://www.kpscapps2.com/kpsc_medical_2017/notification.pdf ಸಂಪರ್ಕಿಸಿ.

ಎನ್‌. ಅನಂತನಾಗ್‌

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.