ಇಂಗ್ಲಿಷ್‌ ವಿಂಗ್ಲಿಷ್‌ ಕತೆಗಳು


Team Udayavani, Oct 17, 2017, 8:45 AM IST

17-15.jpg

ಮೋಹಕ ಭಾಷೆ ಇಂಗ್ಲಿಷ್‌ ಎದೆಗೆ ಇಳಿಯುವಾಗ, ತನಗೆ ಬೇಕಾದಂತೆ ಪರೀಕ್ಷಿಸುತ್ತದೆ. ಹರಕು- ಮುರಕು ಇಂಗ್ಲಿಷನ್ನು ಸಮಾಜ ಸ್ವೀಕರಿಸುವಾಗ, ಅಲ್ಲೊಂದು ನಗು, ವ್ಯಂಗ್ಯ- ಎಲ್ಲವೂ ಬಾಣದಂತೆ ತಿವಿಯುತ್ತವೆ. “ಇಂಗ್ಲಿಷ್‌ ವಿಂಗ್ಲಿಷ್‌’ನಲ್ಲಿ ಶ್ರೀದೇವಿಗಾದ ಸಂಕಷ್ಟಗಳೇ ಇಲ್ಲೂ ಧುತ್ತನೆ ಎದುರು ನಿಲ್ಲುತ್ತವೆ. ಅಂದಿನ ಅಣ್ಣಾ ವ್ರಿಂದ ಹಿಡಿದು, ಇಂದಿನ ಮೈಸೂರು ಮೇಯರ್‌ ವರೆಗೂ ಇಂಗ್ಲಿಷ್‌ ಹೇಗೆಲ್ಲ ಪರೀಕ್ಷೆ ಮಾಡಿದೆ? “ವಿಂಗ್ಲಿಷ್‌’ ಅವಮಾನವನ್ನು ಸಹಿಸಿಕೊಂಡೂ, ಬದುಕಿನಲ್ಲಿ ಸೈ ಎನಿಸಿಕೊಳ್ಳುವುದು ಹೇಗೆ? ತಾರೆಯರ ವಿಂಗ್ಲಿಷ್‌ ಪ್ರಸಂಗಗಳನ್ನು ಮೆಲುಕು ಹಾಕುತ್ತಾ, “ಇಂಗ್ಲಿಷ್‌’ ಎಂಬ ಆನೆಯನ್ನು ಮುಟ್ಟಿ ನೋಡುವುದಾದರೆ…

ಇತ್ತೀಚೆಗೆ ಮೈಸೂರು ಮೇಯರ್‌ ಎಂ.ಜೆ. ರವಿಕುಮಾರ್‌ ಅವರ ಇಂಗ್ಲಿಷ್‌ ನಾಡಿನ ಗಮನ ಸೆಳೆಯಿತು. ಅವರು ದಸರಾ ಸಿದ್ಧತೆಗಳ ಬಗ್ಗೆ ಇಂಗ್ಲಿಷ್‌ ಚಾನೆಲ್‌ ಜತೆಗೆ ಮಾತಾಡಿದ ವಿಡಿಯೊ ಜಾಲತಾಣಗಳಲ್ಲಿ  ವೈರಲ್‌ ಆಯಿತು. ಅವರ ಇಂಗ್ಲಿಷ್‌ ಅನ್ನು ಜನ ಆಡಿಕೊಂಡರು. ನಕ್ಕ ರು. “ಕನ್ನಡದಲ್ಲಿ ಮಾತಾಡಿದ್ರೆ ಏನಾಗ್ತಿತ್ತಪ್ಪ ಇವರಿಗೆ?’… ಅಂತ ಕಾಮೆಂಟ್‌ಗ ಳೂ ಬಂದವು. ಈಗ ಇಂಗ್ಲಿಷ್‌ ಕೇವಲ ಭಾಷೆಯಾಗಿರದೆ, ಅದೊಂದು “ಕ್ಲಾಸ್‌’ ಆಗಿದೆ ಎಂಬ ನಮ್ಮ ಮನಃಸ್ಥಿತಿಗೆ ಇದು ಸಾಕ್ಷಿ. ಕನ್ನಡದಲ್ಲಿ ತಪ್ಪು ತಪ್ಪಾಗಿ ಮಾತಾಡಿದರೆ ಸ್ಟೈಲ್‌, ಇಂಗ್ಲಿಷ್‌ ಬರದಿದ್ದರೆ ಹಳ್ಳಿ ಗಮಾರ ಎಂಬ ಮನಃಸ್ಥಿತಿಯೂ ಚಾಲ್ತಿಯಲ್ಲಿದೆ.

ಹಾಗಾದರೆ, “ಜಾಗತಿಕ ಭಾಷೆ’ ಎನಿಸಿಕೊಂಡ ಇಂಗ್ಲಿಷ್‌ ಅನ್ನು ಕಲಿತವರು ಮಾತ್ರ ಬುದ್ಧಿವಂತರೇ? ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈ ದವರೆಲ್ಲರೂ ಇಂಗ್ಲಿಷ್‌ ಪಂಡಿತರೇ? ಇಂಗ್ಲಿಷ್‌ ಗೊತ್ತಿಲ್ಲ ಎನ್ನುವುದು ಅವಮಾನದ ವಿಷಯವೇ? ಇಂಗ್ಲಿಷ್‌ ಕಲಿಯುವುದು ಅಷ್ಟೊಂದು ಕಷ್ಟವೇ?… ಖಂಡಿತವಾಗಿಯೂ ಅಲ್ಲ ಅನ್ನುತ್ತಾರೆ ಸೆಲೆಬ್ರಿಟಿಗಳಿಗೂ ಇಂಗ್ಲಿಷ್‌ ಹೇಳಿ ಕೊಡುವ ಪ್ರಕೃತಿ ಬನವಾಸಿ.

“ಪ್ರಕೃತಿ’ ಮಾತು…
ಭಾಷೆ ಅನ್ನೋದು ಕಿಟಕಿ ಇದ್ದಂತೆ. ಮನೆಯಲ್ಲಿ ಎಷ್ಟು ಜಾಸ್ತಿ ಕಿಟಕಿಗಳಿರುತ್ತವೋ ಅಷ್ಟು ಜಾಸ್ತಿ ಗಾಳಿ- ಬೆಳಕು ಒಳಕ್ಕೆ ಬರುತ್ತದೆ. ಭಾಷೆ ಅನ್ನೋದರಲ್ಲಿ ಶ್ರೇಷ್ಠ, ಕನಿಷ್ಠ ಅಂತೆಲ್ಲ ಇಲ್ಲ. ನನ್ನ ಇಂಗ್ಲಿಷ್‌ ಕ್ಲಾಸ್‌ಗೆ ಗೃಹಿಣಿಯರು, ಕೆಲಸ ಹುಡುಕುತ್ತಿರುವವರು, ಸೆಲೆಬ್ರಿಟಿಗಳು, ಉದ್ಯಮಿಗಳು… ಹೀಗೆ ಎಲ್ಲ ಸ್ತರದ ಜನರೂ ಬರುತ್ತಾರೆ. ಅವರಲ್ಲಿ ಸಾಮಾನ್ಯರಿಂದ, ಸೆಲೆಬ್ರಿಟಿಯವರೆಗೆ ಎಲ್ಲರಿಗೂ ತಮಗೆ ಇಂಗ್ಲಿಷ್‌ ಬ ರೋದಿಲ್ಲ ಎಂಬ ಕೀಳರಿಮೆ ಇದೆ. ಮೊದಲು ಆ ಕೀಳರಿಮೆ ಬಿಡಿ. ಆಗ ಸುಲಭವಾಗಿ ಇಂಗ್ಲಿಷ್‌ ಕಲಿಯಬಹುದು. ಭಾಷೆ ಎಂದರೆ ಸಾಹಿತ್ಯ, ಗ್ರಾಮರ್‌, ಆಡುಭಾಷೆ. ಈ  ಮೂರೂ ಅಂಶಗಳಲ್ಲಿ ಎಲ್ಲರೂ ಪರ್ಫೆಕ್ಟ್ ಇರಲು ಸಾಧ್ಯವಿಲ್ಲ. ಹಾಗಾಗಿ, ಇನ್ನೊಬ್ಬರ ಇಂಗ್ಲಿಷ್‌ ಚೆನ್ನಾಗಿಲ್ಲ ಅಂತ ನಗೋದು ನಮ್ಮ ಸಣ್ಣತನ.

“ನಮಗೂ ಅಲ್ಪ ಸ್ವಲ್ಪ ಇಂಗ್ಲಿಷ್‌ ಬರುತ್ತೆ. ಆದ್ರೆ ತಪ್ಪು ಮಾತಾಡಿದ್ರೆ ಜನ ನಗ್ತಾರೆ ಅಂತ ನಾವು ಮಾತಾಡೋದಿಲ್ಲ ಅಷ್ಟೇ’ ಅಂತ ಜನರು ಹೇಳುವುದನ್ನು ಕೇಳಿದ್ದೇನೆ. ನೀವು ಚಾಕುವಿನಿಂದ ಗಾಯ ಮಾಡಿಕೊಂಡು, ಚಾಕುವಿನದ್ದೇ ತಪ್ಪು ಅಂದರೆ ಹೇಗೆ? ಯಾರು ನಿಮ್ಮನ್ನು ನೋಡಿ ನಗುತ್ತಾರೋ ಅವರ ಮುಂದೆಯೇ ಚೆನ್ನಾಗಿ ಇಂಗ್ಲಿಷ್‌ ಮಾತಾಡ್ತೀನಿ ಅಂದುಕೊಳ್ಳಿ. ಇಂಗ್ಲಿಷ್‌ ಬರಲ್ಲ ಅನ್ನೋದು ಅವಮಾನವಲ್ಲ. ನಮಗೆಲ್ಲರಿಗೂ ಇಂಗ್ಲಿಷ್‌ನ ಪದಗಳ ಪರಿಚಯ ಇದೆ. ವಾಕ್ಯ ರಚನೆ ಕಷ್ಟ ಆಗಬಹುದು. ಮಾತನಾಡಿ, ಓದಿ, ವಿಡಿಯೊ ನೋಡಿ… ಹೀಗೆ ಬೇರೆ ಬೇರೆ ರೀತಿಯಲ್ಲಿ ಇಂಗ್ಲಿಷ್‌ ಕಲಿಯಬಹುದು. (https://www.youtube.com/user/PrakruthiNBanwasi ಯುಟ್ಯೂಬ್‌ ಚಾನೆಲ್‌ ಮೂಲಕ ಸುಲಭವಾಗಿ ಇಂಗ್ಲಿಷ್‌  ಕಲಿಯಬಹುದು)

ಭಜ್ಜಿಯನ್ನು ಕಾಡಿದ ಇಂಗ್ಲಿಷ್‌ 
ಹರ್ಭಜನ್‌ ಸಿಂಗ್‌ ಕ್ರಿಕೆಟ್‌ನಲ್ಲಿ ಹೆಸರು ಮಾಡುತ್ತಿದ್ದ ಸಮಯ. ಯುವರಾಜ್‌ ಸಿಂಗ್‌ ಮತ್ತು ಹರ್ಭಜನ್‌ ಸಿಂಗ್‌ ಪಬ್‌ಗ ಹೋಗಿದ್ದರು. ಅಲ್ಲಿ ಹುಡುಗಿಯರ ಗುಂಪೊಂದು ಪಾರ್ಟಿ ಮಾಡುತ್ತಿತ್ತು. ಅವರಲ್ಲೊಬ್ಬಳು ಭಜ್ಜಿ ಬಳಿ ಬಂದು ಸ್ಟೈಲಾಗಿ ಇಂಗ್ಲಿಷ್‌ನಲ್ಲಿ, “ಇವತ್ತು ರೋಸ್‌ ಡೇ, ನನಗೊಂದು ರೋಸ್‌ ಕೊಡ್ತೀ ರಾ?’ ಎಂದು ಕೇಳಿದಳು. ಇಂಗ್ಲಿಷ್‌ನಲ್ಲಿ ವೀಕ್‌ ಇದ್ದ ಭಜ್ಜಿಗೆ, ಆಕೆ ರೋಸ್‌ ಅಂದಿದ್ದು “ಕೆನ್‌ ಐ ಹ್ಯಾವ್‌ ಎ ಬ್ಲೌಸ್‌ ಫ‌ಮ್‌ ಯು’ ಅಂತ ಕೇಳಿಸಿ ತ್ತು! ಗಾಬರಿಯಾದ ಭಜ್ಜಿ, ಯುವಿ ಕಡೆ ತಿರುಗಿ, “ಭಾಯ್‌, ಬಂದಿ ಬ್ಲೌಸ್‌ ಮಾಂಗ್‌ ರಹಿ ಹೈ’ ಅಂದರು.  “ಏನಂತ ಸರಿಯಾಗಿ ಕೇಳಿಸಿಕೋ’ ಎಂದು ಯುವಿ ಹೇಳಿದರು. ಆಗ ಭಜ್ಜಿ ಆ ಹುಡುಗಿಗೆ, “ಏನು, ನಿಮಗೆ ಬ್ಲೌಸ್‌ ಬೇಕಾ?’ ಎಂದು ಕೇಳಿಬಿಟ್ಟರು. ಪೆಚ್ಚಾದ ಆಕೆ ತಿರುಗಿಯೂ ನೋಡದೆ ಹೊರಟೇಹೋದಳು.

ಇನ್ನೊಂದು ಘಟನೆ ಹರ್‌ಭಜನ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿದ್ದಾಗ ನಡೆದದ್ದು. ಒಮ್ಮೆ ಅಕಾಡೆಮಿಗೆ ವಿದೇಶದಿಂದ ಗಣ್ಯರು ಬಂದಿದ್ದರು. ಅವರು ಅಕಾಡೆಮಿಯ ಮಕ್ಕಳೊಂದಿಗೆ ಮಾತಾಡುತ್ತಾ, ಒಬ್ಬೊಬ್ಬರ ಹೆಸರು- ಊರನ್ನು ಕೇಳುತ್ತಿದ್ದರು. ಭಜ್ಜಿ ಇಂಗ್ಲಿಷ್‌ನಲ್ಲಿ ಮೊದಲು ತನ್ನ ಹೆಸರು, ನಂತರ ಊರಿನ ಹೆಸರು ಹೇಗೆ ಹೇಳುವುದೆಂದು ಉರು ಹೊಡೆದಿಟ್ಟುಕೊಂಡರು.  ತನ್ನ ಸರದಿ ಬಂದಾಗ ಭಜ್ಜಿ ಹೇಳಿದ್ದು, “ಮೈ ನೇಮ್‌ ಈಸ್‌ ಜಲಂಧರ್‌ ಆಡ್‌ ಆ್ಯಮ್‌ ಫ‌ಮ್‌ ಹರ್ಭಜನ್‌ ಸಿಂಗ್‌’!

ಕೇವಲ ಭಜ್ಜಿ ಅಲ್ಲ, ಕ್ರಿಕೆಟ್‌ ಅಗಳದಲ್ಲಿ ಅನೇಕರಿಗೆ ಇಂಗ್ಲಿಷ್‌ ಕಾಡಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಹೆಸರು ಮಾಡುತ್ತಿರುವ ಕನ್ನಡತಿ ರಾಜೇಶ್ವರಿ ಗಾಯಕವಾಡ ಇತ್ತೀಚೆಗೆ ಇಂಗ್ಲಿಷ್‌ ಪತ್ರಕರ್ತರ ಜೊತೆ ಹಿಂದಿಯಲ್ಲೇ ಮಾತಾಡಿರುವ ವಿಡಿಯೊವನ್ನು ನೀವು ನೋಡಿರಬಹುದು. ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಸಹ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಯ ನೆರ ವು ಪಡೆದು ಮಾತಾಡುವಾಗ ಅವರ ಮುಖದಲ್ಲಿ ಯಾವ ಅಳುಕೂ ಇರಲಿಲ್ಲ. “ಇಂಗ್ಲಿಷ್‌ ಮೊದಲಿಗೆ ಸ್ವಲ್ಪ ತೊಡಕು ಎನಿಸಿದರೂ, ಅದು ಎಂದಿಗೂ ನನಗೆ ತೊಂದರೆ ಅನ್ನಿಸಿಯೇ ಇಲ್ಲ’ ಎನ್ನುತ್ತಾರೆ ರಾಜೇಶ್ವರಿ!

ಸ್ಟಾರ್‌ಗಳ ಪಾಡೂ…
ನಿಮ್ಗೆ ಗೊತ್ತಾ? ನಟನೆಯಲ್ಲಿ ತಾರೆಗಳೆನಿಸಿಕೊಂಡ ಎಷ್ಟೋ ಮಂದಿಗೆ ಆರಂಭದಲ್ಲಿ ಇಂಗ್ಲಿಷ್‌ ತೊಡಕಾಗಿತ್ತು. ಅಣ್ಣಾವ್ರು ತಮ್ಮ ಮೊದಲ ಸಿನಿಮಾ “ಬೇಡರ ಕಣ್ಣಪ್ಪ’ ಶೂಟಿಂಗ್‌ ವೇಳೆ ಪಂಡರಿಬಾಯಿ ಅವರಿಂದ ಕೆಲವು ಇಂಗ್ಲಿಷ್‌ ಪದಗಳನ್ನು ಕಲಿತರು. ಮದ್ರಾಸ್‌ನಲ್ಲಿ ಚಿತ್ರೀಕರಣ ನಡೆಯುವಾಗ ಅಲ್ಲಿ ಟೆಕ್ನಿಕಲ್‌ ಪದಗಳನ್ನು ಬಳಸುತ್ತಿದ್ದರು. ಲಿಟಲ್‌ ರೈಟ್‌, ಲಿಟಲ್‌ ಲೆಫ್ಟ್, ಕ್ಲೋಸ್‌ ಅಪ್‌ ಅಂದಾಗ ಅಣ್ಣಾವ್ರಿಗೆ ಯಾವುದು ಬಲ, ಯಾವುದು ಎಡ ಎಂದು ಗೊತ್ತಾಗದೆ ಗೊಂದಲವಾಗುತ್ತಿತ್ತು. ಆಗ ಪಂಡರಿಬಾಯಿ ನೆರ ವಾ ಗು ತ್ತಿ ದ್ದ ರು. ತಮಗೆ ಯಾವುದು ಗೊತ್ತಿಲ್ಲವೋ ಅದನ್ನು ಬೇಗ ಕಲಿತುಕೊಳ್ಳುವ ಶ್ರದ್ಧೆ ಹೊಂದಿದ್ದ ಅಣ್ಣಾವ್ರು ಕೆಲವೇ ದಿನಗಳಲ್ಲಿ ಆ ಟೆಕ್ನಿಕಲ್‌ ಪದಗಳನ್ನೆಲ್ಲ ಕಲಿತುಬಿಟ್ಟರು. ಮುಂದೆ ಅವರು ಇಂಗ್ಲಿಷ್‌ ಅನ್ನೂ ಕಲಿತರು. ಅಣ್ಣಾವ್ರು ಹಾಡಿದ- ಲವ್‌ ಮಿ ಆರ್‌ ಹೇಟ್‌ ಮಿ, ಇಫ್ ಯು ಕಂ ಟುಡೇ ಹಾಡುಗಳನ್ನು ಮರೆಯುವುದುಂಟೇ? ದಿಲೀಪ್‌ ಕುಮಾರ್‌ರಂಥ ಹಿಂದಿ ನಟರ ಜೊತೆಗೆ ಅವರು ಇಂಗ್ಲಿಷಿನಲ್ಲೇ ಸಂವಾದಿಸಿದ್ದರು.

ಇನ್ನು ನೀವು ಬಾಲಿವುಡ್‌ಗೆ ಹೋದರೆ, ಅಲ್ಲಿ ಈಗ ನಂ.1 ನಟಿ ಎನಿಸಿ ಕೊಂಡ ಕಂಗನಾ ರಣಾವತ್‌  ಕೂಡ ಇಂಗ್ಲಿ ಷ್‌ ಅಂದ್ರೆ ಕಂಗಾಲಾಗುತ್ತಿದ್ದಳು. “ಕಿಲಾಡಿ’ ಅಕ್ಷಯ್‌ ಕುಮಾರ್‌ ಕೂಡ ಇಂಗ್ಲಿಷ್‌ ಕಲಿಯಲು ಬಹಳ ಒದ್ದಾಡಿದ್ದರು. ನವಾಜುದ್ದೀನ್‌ ಸಿದ್ದಿಕಿ, ಕೈಲಾಶ್‌ ಖೇರ್‌, ಗೋವಿಂದ, ಧರ್ಮೇಂದ್ರ ಅವ ರ ಕ ತೆ ಯೂ ಇಂಗ್ಲಿ ಷ್‌ ವಿಂಗ್ಲಿ ಷೇ!

ಪಾಕ್‌ ಟೀಂಗೆ ಇಂಗ್ಲಿಷೇ ಶಾಪ!
ಕಿಸ್ತಾನದ ಕ್ರಿಕೆಟ್‌ ತಂಡಕ್ಕೂ ಇಂಗ್ಲಿಷ್‌ ದೊಡ್ಡ ಮೈಗ್ರೇನ್‌. ಮೈದಾನದಲ್ಲಿ ಬ್ಯಾಟ್‌ ಬೀಸಿದ ದಾಂಡಿಗರೂ ಮಾಧ್ಯಮದ ಎದುರು ಇಂಗ್ಲಿಷ್‌ ಮಾತಾಡಲು ತಡವರಿಸುತ್ತಾರೆ. ಇಂಗ್ಲಿಷ್‌ನ ಕಾರಣದಿಂದಲೇ ಪಾಕ್‌ ತಂಡದ ಮೇಲೆ ಸಾಕಷ್ಟು ಜೋಕ್ಸ್‌ ಸೃಷ್ಟಿಯಾಗಿವೆ. ಗೆದ್ದುಬಿಟ್ಟರೆ ಇಂಗ್ಲಿಷ್‌ ಮಾತಾಡಬೇಕಾಗುತ್ತದೆಂದು ಹೆದರಿಯೇ ಅವರು ಪಂದ್ಯಗಳನ್ನು ಸೋಲುತ್ತಾರೆ ಎಂದೂ ಅಪಹಾಸ್ಯಕ್ಕೊಳಗಾಗಿದ್ದಾರೆ. 

ನಿಮಗೆ ನೀವೇ ಇಂಗ್ಲಿಷ್‌ ಟೀಚರ್‌
1. ಇಂಗ್ಲಿಷ್‌ ರೇಡಿಯೊ, ಎಫ್.ಎಂ. ಹಾಗೂ ಯುಟ್ಯೂಬ್‌ನಲ್ಲಿ ಇಂಗ್ಲಿಷ್‌ ವಿಡಿಯೊಗಳನ್ನು ನೋಡಿ.
2. ನಿಮ್ಮಷ್ಟಕ್ಕೆ ನೀವೇ ಇಂಗ್ಲಿಷ್‌ನಲ್ಲಿ ಮಾತಾಡಿಕೊಳ್ಳಿ, ಇಂಗ್ಲಿಷ್‌ ಹಾಡುಗಳನ್ನು ಗುನುಗಿ.
3. ಸ್ನೇಹಿತರು, ಅಪರಿಚಿತರು ಇಂಗ್ಲಿಷ್‌ನಲ್ಲಿ  ಮಾತಾಡುತ್ತಿದ್ದರೆ ಅವರು ಬಳಸುವ ಪದ ಹಾಗೂ ಭಾಷೆಯ ಶೈಲಿಯ ಬಗ್ಗೆ ಗಮನ ಕೊಡಿ.
4. ಇಂಗ್ಲಿಷ್‌ ಜಾಹೀರಾತು ಫ‌ಲಕ, ಮ್ಯಾಗಜಿನ್‌, ನ್ಯೂಸ್‌ ಪೇಪರ್‌ ಓದಿ.
5. ಇಂಗ್ಲಿಷ್‌ ಹಾಡುಗಳನ್ನು ಕೇಳಿ, ಅದರ ಸಾಹಿತ್ಯವನ್ನು ಅಥೆಸಿಕೊಳ್ಳಿ. ಕ್ಲಿಷ್ಟ ಪದಗಳಿಗೆ ಸಮಾನಾರ್ಥಕ ಪದಗಳನ್ನು ಹುಡುಕಿ ನಿಮ್ಮ ಶಬ್ದ ಭಂಡಾರ ಹೆಚ್ಚಿಸಿಕೊಳ್ಳಿ.
6. ಇಂಗ್ಲಿಷ್‌ ಸಿನಿಮಾ ನೋಡಿ. ಬೇರೆ ಭಾಷೆಯ ಸಿನಿಮಾ ನೋಡುವಾಗ ಇಂಗ್ಲಿಷ್‌ನ ಸಬ್‌ಟೈಟಲ್ಸ್‌ಗಳನ್ನು ಓದಿ.
7. ಫೇಸ್‌ಬುಕ್‌ನಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವವರ ಪೋಸ್ಟ್‌ಗಳನ್ನು ಓದಿ.  
8. ಅಪರಿಚಿತರೊಂದಿಗೆ ಇಂಗ್ಲಿಷ್‌ನಲ್ಲಿ ಮಾತಾಡಿ. ತಪ್ಪಾದರೂ ಪರವಾಗಿಲ್ಲ, ಅವರು ನಕ್ಕರೂ ಚಿಂತೆಯಿಲ್ಲ. ಯಾಕಂದ್ರೆ, ನೀವ್ಯಾರೆಂದು ಅವರಿಗೆ ಗೊತ್ತಿರೋದಿಲ್ವಲ್ಲ!
9. ಮನಸ್ಸಿನಲ್ಲಿ ಯೋಚಿಸುವಾಗ, ನಿಮ್ಮ ಯೋಚನೆಗಳಿಗೆ ಇಂಗ್ಲಿಷ್‌ ವಾಕ್ಯದ ರೂಪ ಕೊಡಿ. ನಿಮ್ಮೊಳಗೆ ನೀವೇ ಇಂಗ್ಲಿಷ್‌ನಲ್ಲಿ ಮಾತಾಡಿಕೊಳ್ಳಿ.

ಮೊಬೈಲೇ ಇಂಗ್ಲಿಷ್‌ ಕಲಿಸುತ್ತೆ!
1. ಆಪ್ಗಳು: ಹೆಲೊ ಇಂಗ್ಲಿಷ್‌, ಡ್ಯುಲಿಂಗೊ, ಮೆಮೆùಸ್‌, ಆಕ್ಸ್‌ಫ‌ರ್ಡ್‌ ಡಿಕ್ಷನರಿ ಆಫ್ ಇಂಗ್ಲಿಷ್‌, ಡಿಕ್ಷನರಿ. ಕಾಂ, ಗೂಗಲ್‌ ಟ್ರಾನ್ಸ್‌ಲೇಟ್‌, ಇಂಗ್ಲಿಷ್‌ ಗ್ರಾಮರ್‌ ಟೆಸ್ಟ್‌ ಬೈ ಸೆವೆನ್‌ಲಿಂಕ್ಸ್‌, ಜಾನಿ ಗ್ರಾಮರ್ ವಡ್ಸ್‌ ಚಾಲೆಂಜ್‌, ಬುಸು, ಫ‌ನ್‌ ಈಸಿ ಲರ್ನ್ ಇಂಗ್ಲಿಷ್‌.

2. ಯೂಟ್ಯೂ ಬ್‌ ಚಾನೆಲ್‌: ಸ್ಪೀಕ್‌ ಇಂಗ್ಲಿಷ್‌ ವಿತ್‌ ಮಿಸ್ಟರ್‌ ಡಂಕನ್‌, ಬಿಬಿಸಿ ಲರ್ನಿಂಗ್‌ ಇಂಗ್ಲಿಷ್‌, ವಿ.ಒ.ಎ. ಲರ್ನ್ ಇಂಗ್ಲಿಷ್‌, ರೇಚಲ್ಸ್‌ ಇಂಗ್ಲಿಷ್‌, ಈಸಿ ಇಂಗ್ಲಿಷ್‌, ರಿಯಲ್‌ ಇಂಗ್ಲಿಷ್‌, ಬಿಸಿನೆಸ್‌ ಇಂಗ್ಲಿಷ್‌ ಪಾಡ್‌, ಲೆಟ್ಸ್‌ ಟಾಕ್‌, ಕಿಡ್ಸ್‌ ಟಿವಿ 123, ಇಂಗ್ಲಿಷ್‌ ಲೆಸ್ಸನ್‌ ಫಾರ್‌ ಯು.

ನೋಟ್‌: ಇಂಗ್ಲಿ ಷ್‌ ಅನೇಕರಿಗೆ ಕಬ್ಬಿಣದ ಕಡಲೆ. ಇಂಗ್ಲಿಷ್‌ ಗೊತ್ತಿಲ್ಲದೇ, ನೀವೂ ಪೇಚಾಡಿದ್ದರೆ, ಆಮಜ ಭರಿತ ಪ್ರಸಂಗಗಳನ್ನು “ಜೋಶ್‌’ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಬರಹ 150 ಪದಗಳ ಮಿತಿಯಲ್ಲಿರಲಿ. ಇ ಮೇಲ್‌: [email protected]

ವೇಲು ಹುಡುಕಿದ ಇಂಗ್ಲಿಷ್‌ ಹೆಂಡ್ತಿ!

ಮನೇಲಿ “ವೇಲು, ಮದ್ವೆ ಮಾಡ್ಕೊಳ್ಳಪ್ಪಾ’ ಅಂತ ಗಂಟು ಬಿದ್ದಿದ್ದರು. ನಾನು ಮದುವೆ ಅನ್ನೋ ಪದ ಕೇಳಿದ್ರೇ ಓಡಿ ಹೋಗ್ತಿದ್ದೆ. ಹೀಗೆ ಎರಡು, ಮೂರು ಸಲ ಆದಾಗ, “ಓಹೋ ಇವ್ನು ಯಾರನ್ನೋ ನೋಡ್ಕೊಂಡಿದ್ದಾನೆ’ ಅಂತ ಎಲ್ರಿಗೂ ಡೌಟು ಬಂತು. ನಿಜವಾಗಿಯೂ ನಾನು ಯಾರನ್ನೂ ನೋಡ್ಕೊಂಡಿರಲಿಲ್ಲ.

ಆದರೆ, ನನ್ನೊಳಗೆ ಒಂದು ಇನ್ಫಿಯಾರಿಟಿ ಕಾಂಪ್ಲೆಕ್ಸ್‌ ಇತ್ತು. ಅದುವೇ ಇಂಗ್ಲಿಷ್‌. ನಾಲಗೆಗೆ ಗೊತ್ತಿದ್ದಿದ್ದು ಕನ್ನಡವೊಂದೇ. ಆದರೂ ನನ್ನದು ಬಿಕಾಂ, ಇಂಗ್ಲಿಷ್‌ ಮೀಡಿಯಂ! ಬ್ಯುಸಿನೆಸ್‌ಗೂ ಕಾಲಿಟ್ಟಿದ್ದೆ. ಅಲ್ಲೂ ಹಿಂದಿ, ಇಂಗ್ಲಿಷ್‌ನದ್ದೇ ರಾಜ್ಯಭಾರ. ಕ್ಲಾಸಿಗೆ ಹೋಗಿ ಕಲಿಯೋಕೆ, ಏನೋ ಹಿಂಜರಿಕೆ. ಹಾಗಾಗಿ ಇಂಗ್ಲಿಷ್‌ ಬರೋ ಹುಡುಗಿಯನ್ನೇ ಮದುವೆ ಆಗೋದು ಅಂತ ನಿರ್ಧರಿಸಿದ್ದೆ! ಅದನ್ನ ಮನೆಯವರಿಗೆ ಹೇಳ್ಳೋಕೆ ನಾಚಿಕೆ. ಅದಕ್ಕೇ ಹುಡ್ಗಿ ನೋಡ್ತೀವಿ ಅಂದಾಗೆಲ್ಲಾ, ಅವರಿಂದ ತಪ್ಪಿಸಿ ಕೊಳ್ತಿದ್ದೆ.

ಕೊನೆಗೂ ಒಂದು ದಿನ ಹೇಳಿದೆ: “ನನಗೆ ಇಂಗ್ಲಿಷ್‌ ಗೊತ್ತಿರೋ ಹುಡ್ಗಿ ಬೇಕು’ ಅಂತ. ಎಲ್ಲರೂ, ಇದೆಂಥ ಬೇಡಿಕೆ ಅಂತ ತಲೆಗೀ ರಿಕೊಂಡರು. ಕೊನೆ ಗೂ ಹುಡ್ಗಿ ಫಿಕ್ಸ್‌ ಆಯ್ತು. ಹೆಸರು ಉಷಾ. ಮೌಂಟ್‌ ಕಾರ್ಮೆಲ್‌ ಕಾಲೇಜಿನ ಹುಡ್ಗಿ- ಕಾರ್ಪೋರೇಷನ್‌ ಸ್ಕೂಲ್‌ ಹುಡ್ಗ! ಹೇಗಿರಬೇಡ ಜೋಡಿ?

ಮದುವೆ ಆಯ್ತು, ಇಂಗ್ಲಿಷ್‌ ಪಾಠವೂ ಶುರುವಾಯ್ತು. ಮಾತು ತಪ್ಪಾದಾಗ, “ಇಟ್ಸ್‌ ಓಕೆ, ಯೂ ಟಾಕ್‌’ ಅಂತ ಇಂಗ್ಲಿಷ್‌ನಲ್ಲೇ ಮಾ ತಾಡಿಸುತ್ತಿದ್ದಳು. ನಿಧಾನಕ್ಕೆ ನಾಲಗೆ ಮೇಲೆ ಭಾಷೆ ಕೂರುತ್ತಾ ಹೋಯ್ತು. ಬಾಡಿ ಲಾಂಗ್ವೇಜ್‌, ಸ್ಟೈಲ್‌ ಬದಲಾಯ್ತು. ಅವಕಾಶಗಳು ಜಾಸ್ತಿ ಆದವು. ಇವತ್ತು ನಾಲಗೆ ಮೇಲೆ ಇಂಗ್ಲಿಷ್‌ ಪಿ.ಟಿ. ಉಷಾ ರೀತಿ ಓಡು ತ್ತಿದೆ. ಉಷಾ ಕಲಿಸಿದ ಇಂಗ್ಲಿಷ್‌ ಇಡೀ ಮನೆಯವರ ನಾಲಗೆಯ ಮೇಲೂ ಇದೆ! 

ಪ್ರಿಯಾಂಕಾ ನಟ ಶೇಖರ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.