ನನ್ನೆದೆಯ ಪಿಸುಮಾತು ಅರ್ಥವಾದ್ರೆ ನಾಳೆ ಮಾತಾಡು!

Team Udayavani, Oct 24, 2017, 10:26 AM IST

24-30.jpg

ನನ್ನ ಮನಸ್ಸು, ನನ್ನ ಅನುರಾಗ ಎಲ್ಲವೂ ನಿನಗೆ ಅರ್ಥವಾದಂತಿದೆ. ಆದರೂ, ಏನೂ ಗೊತ್ತಿಲ್ಲದವಳಂತೆ ವರ್ತಿಸ್ತಾ ಇದೀಯ. ಇಷ್ಟೆಲ್ಲಾ ಅರ್ಥವಾದ ಮೇಲೂ ನಿನ್ನ ಮೇಲಿರುವ ಆಕರ್ಷಣೆ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚುತ್ತಲೇ ಇದೆ…

ಕೇಶಿರಾಜನನ್ನು ಓದುತ್ತಿದ್ದ ನನ್ನನ್ನು ಕೇಶರಾಶಿಯಿಂದಲೇ ಮರಳು ಮಾಡಿದ ಹುಡುಗಿಯೇ ಕೇಳು. ವ್ಯಾಕರಣದ ಒಂದೊಂದು ನಿಯಮವನ್ನೂ ಸೂತ್ರದಲ್ಲಿ ಬಂಧಿಸಿಟ್ಟು ಕಲಿಕಾರ್ಥಿಯನ್ನು ಪಂಡಿತನನ್ನಾಗಿಸುವ ಆ ‘ಶಬ್ದಮಣಿ’ಯ ಸೆಳೆತಕ್ಕೊಳಗಾದ ನಾನು ನಿನ್ನ ಆ ಸೊಂಪಾದ ಕೇಶದ ಮೋಡಿಗೊಳಗಾಗಿಬಿಟ್ಟಿದ್ದೇ ಒಂದು ವಿಸ್ಮಯ! ಪ್ರತಿನಿತ್ಯ ಆ ಕಾಲೇಜು ಕ್ಯಾಂಪಸ್ಸಿನ ಕಾರಿಡಾರು ಕಾಣುವಂತೆ ಅಲ್ಲೇ ಹತ್ತಿರದಲ್ಲೇ ಕುಳಿತು ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿರುವ ನನ್ನನ್ನು ನೀ ನೋಡಿಯೂ ನೋಡದಂತೆ ಗಮನಿಸುತ್ತಿರುವೆಯಲ್ಲ, ಆ ನೋಟ ನನ್ನನ್ನು ಮತ್ತಷ್ಟು ಹುಚ್ಚನನ್ನಾಗಿಸುತ್ತಿದೆ. ಸಾಲದ್ದಕ್ಕೆ ಮುಂದೆ ಹೋಗಿ ಹಿಂದೆ ತಿರುಗಿ ನೀ ನಕ್ಕು ಸಾಗುವ ಪರಿ ಪ್ರೀತಿಯಲಿ ಪರಿತಪಿಸುವಂತೆ ಮಾಡಿದೆ.

ಗೆಳತಿಯರ ಗುಂಪಿನಲ್ಲಿ ನಿಂತು ಹರಟುವಾಗ ಆಗಾಗ ನನ್ನೆಡೆ ನೋಡಿ ಕೈಬೆರಳಿಂದ ಮುಂಗುರುಳು ಸರಿಪಡಿಸಿಕೊಳ್ಳುವ ಭಂಗಿ ನನ್ನನ್ನು ಮೈ ಮರೆಯುವಂತೆ ಮಾಡಿಬಿಟ್ಟಿದೆ. ಹೀಗಿರುವಾಗ, ಮೊನ್ನೆ ನಿನಗೆದುರಾದಾಗ ಬಿಚ್ಚಿದ ನಿನ್ನ ಕೇಶರಾಶಿಯಿಂದ ಒಂದು ಕೂದಲು ಹಾರಿ ಬಂದು ನನ್ನೆದೆಗೊರಗಿತು! ಆಗ ನೀನೇ ಬಂದು ನನ್ನೆದೆಗೆ ಗುದ್ದಿ ಪ್ರೇಮಭಾವನೆಗಳನ್ನು ಬಡಿದೆಬ್ಬಿಸಿದಂಥ ಅನುಭವವಾಯ್ತು! ಆ ಕ್ಷಣ ಮೈಯೆಲ್ಲ ರೋಮಾಂಚನ. “ಹೃದಯದಲಿ ಇದೇನಿದು ನದಿಯೊಂದು ಓಡಿದೆ’ ಎಂದು ಹಾಡಿದಂತಾಯ್ತು. ಆ ಕ್ಷಣದಿಂದಲೇ ನನ್ನೊಳಗೆ ಪ್ರೀತಿಯ ನವಪಲ್ಲವ ಚಿಗುರೊಡೆದುಬಿಟ್ಟಿತು. ಅದು ಹೂವಾಗಿ, ಕಾಯಾಗಿ, ಹಣ್ಣಾಗಿ ನಿನ್ನ ನಾಲಿಗೆಗೆ ರುಚಿಯ ಅನುಭವ ನೀಡುವ ತವಕದಲ್ಲಿದ್ದರೂ ಅದೇಕೋ ನ್ನಿನ್ನ ನಿರ್ಲಕ್ಷ್ಯ ಮನಸ್ಸಿಗೆ ಘಾಸಿ ಮಾಡುತ್ತಿದೆ. ಆದರೆ, ನಿನ್ನ ಮೇಲೆ ಉಂಟಾದ ಈ ಮಧುರ ಅನುರಾಗ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಮಳೆಯಂತೆ…! 

ನೇರವಾಗಿ ಬಂದು ಹೃದಯದಲ್ಲಿ ಹುದುಗಿರುವ ಮಧುರ ಮನಸ್ಸಿನ ಪ್ರೇಮಭಾವನೆಗಳನ್ನು ನಿನ್ನೆದುರು ವ್ಯಕ್ತಪಡಿಸಲಾಗದೇ ಈ ಪತ್ರದಲ್ಲಿ ತೆರೆದಿಡುತ್ತಿದ್ದೇನೆ. ನನ್ನೆದೆಯ ಈ ಪಿಸುಮಾತು ನಿನಗರ್ಥವಾದರೆ, ನಾಳೆಯೇ ಪ್ರತಿಕ್ರಿಯಿಸು. ನನ್ನೆದೆಯ ಹಾಡಿಗೆ ಧ್ವನಿಯಾಗು. ಸುಂದರ ಭವಿಷ್ಯದ ಬದುಕಿನ ಸಾರ್ಥಕತೆಯ ನನ್ನ ಕನಸಿನ ಹಕ್ಕಿಗೆ ನೀ ರೆಕ್ಕೆಯಾಗು. ಒಂದೇ ಅಭಿರುಚಿ, ಆಸಕ್ತಿ, ಅಂತಸ್ತಿನ ನಾವು ಒಂದಾಗೋಣ, ಹೊಸ ಪ್ರೇಮಪಯಣದ ಸವಿಜೇನು ಸವಿಯಲು ಮುಂದಾಗೋಣ.

ನಿನ್ನೊಲುಮೆಯ ಒಪ್ಪಿಗೆಯ ನಿರೀಕ್ಷೆಯಲಿ…
ಅಶೋಕ ವಿ. ಬಳ್ಳಾ, ಬಾಗಲಕೋಟ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.