ಚೆನ್ನಿಮೂಲೆ: ಪಾಳುಬಿದ್ದ ಕಲ್ಲಿನ ಕೋರೆಯಲ್ಲೂ ನೀರು!

Team Udayavani, Apr 24, 2017, 3:16 PM IST

water.jpg

ಉಪ್ಪಳ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ಬೇಗೆ. ಕೆರೆ, ಬಾವಿ, ತೋಡು, ಹಳ್ಳ, ನದಿ ಹೀಗೆ ಜಲಸಂಪನ್ಮೂಲಗಳು ಬತ್ತಿ ಹೋಗುತ್ತಿವೆ. ಹೀಗಿರುವಂತೆ ಅಲ್ಲಲ್ಲಿ ಜಲೋದ್ಭವ ಆಗುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ. ಕೆಲವು ದಿನಗಳ ಹಿಂದೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ  ಸರಕಾರಿ ಕಾಲೇಜು ಪರಿಸರದ ಕಾಲನಿಯ ಸರಕಾರಿ ಬತ್ತಿ ಹೋದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಜಲೋದ್ಭವ ಆಗಿತ್ತು. ಇದೀಗ ಪೈವಳಿಕೆ ಗ್ರಾಮ ಪಂಚಾಯತ್‌ ಪ್ರದೇಶದಲ್ಲಿ ಪಾಳು ಬಿದ್ದ ಕಲ್ಲಿನ ಕೋರೆಯಲ್ಲಿ ನೀರು ನಿಧಿಯಾಗಿ ಲಭಿಸಿದೆ. ಬತ್ತಿ ಹೋದ ಬರಡು ಭೂಮಿಯಲ್ಲೂ ಅಲ್ಲಲ್ಲಿ ನೀರು ಲಭಿಸುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ.

ಪೈವಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಾಯಾರುಪದವಿನಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಚೆನ್ನಿಮೂಲೆಯಲ್ಲಿರುವ ಪಾಳು ಕಲ್ಲಿನ ಕೋರೆಯೊಂದರಲ್ಲಿ ಅಚ್ಚರಿ ಎಂಬಂತೆ ನೀರು ಸಿಕ್ಕಿದೆ. ಕಲ್ಲಿನ ಕೋರೆಯಲ್ಲಿ ನೀರು ಲಭಿಸಿರುವುದರಿಂದ ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ಸಂತಸ ಮೂಡಿಸಿದೆ. ಸುಡು ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಎನ್ನುವ ಸಂದರ್ಭದಲ್ಲೇ ಪಣೆಯ ಮಾಲಕ ಜೆಸಿಬಿ ಯಂತ್ರದ ಮೂಲಕ ತೋಡಿದ ಗುಂಡಿಯಲ್ಲಿ ನೀರು ಸಿಕ್ಕಿದ್ದು ಅಚ್ಚರಿಯ ಸಂಗತಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಚೆನ್ನಿಮೂಲೆಯಲ್ಲಿ ಮೂರು ವರ್ಷಗಳ ಹಿಂದೆ ಕೆಂಪು ಕಲ್ಲಿನ ಪಣೆಯೊಂದನ್ನು ಆರಂಭಿಸಲಾಗಿತ್ತು. ಸುಮಾರು 20 ಅಡಿ ಆಳಕ್ಕೆ ಹೋದಾಗ ಅಲ್ಲಿ ಮಣ್ಣು ಸಿಕ್ಕಿದ್ದರಿಂದ ಪಣೆಯನ್ನು ಅರ್ಧದಲ್ಲಿ ನಿಲ್ಲಿಸಲಾಯಿತು. ಬದಲಾಗಿ ಅಲ್ಲಿಯೇ ಸಮೀಪದ ಇನ್ನೊಂದು ಸ್ಥಳದಲ್ಲಿ ಕೆಂಪು ಕಲ್ಲಿನ ಕೋರೆ ಆರಂಭಿಸಲಾಗಿತ್ತು. ಬಿರು ಬಿಸಿಲಿನ ನಡುವೆ ಕೆಲವು ದಿನಗಳ ಹಿಂದೆ ಜೆಸಿಬಿ ಬಳಸಿ ಹಳೆ ಕೋರೆ(ಪಣೆಯಲ್ಲಿ)ಯಲ್ಲಿ ಒಂದು ಗುಂಡಿಯನ್ನು ತೋಡಿದಾಗ ನೀರಿನ ಸಣ್ಣ ಒರತೆ ಕಾಣಿಸಿತು. ಸುಮಾರು 7 ರಿಂದ ಹತ್ತು ಅಡಿ ಆಳವಿರುವ ಗುಂಡಿಯಲ್ಲಿ ನೀರು ಸಿಕ್ಕಿರುವುದು ಸಂತಸ ತಂದಿದೆ ಎನ್ನುತ್ತಾರೆ ಕೋರೆ ಮಾಲಕ ಮಹಮ್ಮದ್‌ ಬಂದ್ಯೋಡು. ಬೇಸಿಗೆ ಸಮಯ ಕೋರೆಯಲ್ಲಿ ದುಡಿಯುವ ಕಾರ್ಮಿಕರಿಗಾಗಿ ಬಹಳಷ್ಟು ನೀರಿನ ಆವಶ್ಯಕತೆ ಇತ್ತು. ಸಮೀಪದ ಜಲನಿಧಿ ಟ್ಯಾಂಕ್‌ನಲ್ಲಿಯೂ ನೀರು ಇಲ್ಲದಾಯಿತು. ಆ ವೇಳೆ ಜೆಸಿಬಿ ಮೂಲಕ ಸಣ್ಣಗುಂಡಿ ತೋಡಿಸಿದ್ದು ಇದರಲ್ಲಿ ನೀರು ಸಿಕ್ಕಿದೆ. ಇದು ಕಾರ್ಮಿಕರ ಕುಡಿಯುವ ಹಾಗು ಅಡುಗೆ ಆವಶ್ಯಕತೆಯನ್ನು ಪೂರೈಸಿದೆ. ಹೆಚ್ಚಿನ ನೀರು ಸಮೀಪದ ಮನೆ ಮಂದಿ ಕೊಂಡೊಯ್ಯುತ್ತಿದ್ದಾರೆ ಎಂದು ಮಹಮ್ಮದ್‌ ಸಂತಸದಿಂದಲೇ ಹೇಳುತ್ತಿದ್ದಾರೆ.
ಸ್ಥಳಿಯಾಡಳಿತ ಆಸಕ್ತಿ ವಹಿಸಿ ಸಣ್ಣಗುಂಡಿಯನ್ನು ಬಾವಿ ರೂಪದಲ್ಲಿ ಅಗಲೀಕರಿಸಿ ಜಲನಿಧಿ ಆವಶ್ಯಕತೆಗಾಗಿ ನೀರನ್ನು ಪೂರೈಸ ಬಹುದು ಎನ್ನುತ್ತಾರೆ ಅವರು. ಎತ್ತರದ ಪ್ರದೇಶದಲ್ಲಿರುವ ಈ ಕಲ್ಲಿನ ಕೋರೆಯಲ್ಲಿ ಹೇಗೆ ನೀರು ಸಿಕ್ಕಿದೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ!

ಮಳೆಗಾಲದಲ್ಲಿ ಇಂಗು ಗುಂಡಿ : ನೀರಿನ ಒರತೆ ಕಾಣಿಸಿಕೊಂಡ ಕಲ್ಲಿನ ಕೋರೆಯನ್ನು ಮಳೆಗಾಲದ ಸಂದರ್ಭದಲ್ಲಿ ನೀರು ಶೇಖರಿಸುವ ಇಂಗು ಗುಂಡಿಯಾಗಿ ಪರಿವರ್ತಿಸಲಾಗುವುದು. 

ಸುಮಾರು 20 ಅಡಿ ಆಳವಿರುವ ಈ ಪಣೆಯಲ್ಲಿ ನೀರು ಇಂಗಿಸಿದರೆ ಹೆಚ್ಚು ಪ್ರಯೋಜನಕಾರಿಯಾಗಬಲ್ಲುದು. ಜಿಲ್ಲೆಯಲ್ಲಿನ ಇತರ ಪಾಳು ಪಣೆಗಳಲ್ಲಿಯೂ ಹೊರ ರಕ್ಷಣಾ ಗೋಡೆ ನಿರ್ಮಿಸಿ ನೀರು ಶೇಖರಿಸಿ, ಇಂಗಿಸುವ ಕ್ರಮವನ್ನು ಅನುಸರಿಸಿದರೆ ಬೇಸಿಗೆ ಕಾಲದಲ್ಲಿ ನೀರಿನ ûಾಮವನ್ನು ನಿವಾರಿಸಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಮುಹಮ್ಮದ್‌ ಬಂದ್ಯೋಡು.

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Kasaragod: ಬೋಟು ಅಪಘಾತ; ನಾಲ್ವರಿಗೆ ಗಾಯ

Kasaragod: ಬೋಟು ಅಪಘಾತ; ನಾಲ್ವರಿಗೆ ಗಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.