ರಾಜಾ ಹರಿಶ್ಚಂದ್ರ


Team Udayavani, Feb 16, 2017, 3:45 AM IST

puraana-kathe.jpg

ರಾಜಾ ಹರಿಶ್ಚಂದ್ರನು ಇಕ್ಷ್ವಕು ವಂಶದ ಅರಸು. ಅಯೋಧ್ಯೆಯ ದೊರೆ. ಇವನಿಗೆ ಚಂದ್ರಮತಿ ಎಂಬ ಸುಶೀಲೆಯಾದ ಹೆಂಡತಿಯೂ, ಲೋಹಿತಾಶ್ವ ಎಂಬ ಮಗನೂ ಇದ್ದರು. ಹರಿಶ್ಚಂದ್ರನು ದಕ್ಷನಾದ ಚಕ್ರವರ್ತಿಯಾಗಿದ್ದನು. ರೂಪದಲ್ಲೂ, ಗುಣದಲ್ಲೂ, ಶೌರ್ಯದಲ್ಲೂ ಅವನಿಗೆ ಸರಿಸಾಟಿಯಾಗಿ ಯಾರೂ ಇರಲಿಲ್ಲ. ಅವನು ಸತ್ಯವಂತನೆಂದೂ ಯಾವುದೇ ಕಷ್ಟ ಬಂದರೂ ಸತ್ಯವನ್ನು ಬಿಡಲಾರ ಹಾಗೂ ಮಾತಿಗೆ ತಪ್ಪದವನು ಎಂದು ಪ್ರಸಿದ್ಧನಾಗಿದ್ದನು. ಇವನ ಉದಾತ್ತ ಗುಣಗಳನ್ನು ಕೇಳಿ ತಿಳಿದ ಮಹರ್ಷಿ ವಿಶ್ವಾಮಿತ್ರನಿಗೆ ಹರಿಶ್ಚಂದ್ರನನ್ನು ಪರೀಕ್ಷಿಸಬೇಕೆನಿಸಿತು. ಅದಕ್ಕಾಗಿ ಒಂದು ಕುಟಿಲವಾದ ವ್ಯೂಹವನ್ನು ಹೆಣೆದನು. 

ಹರಿಶ್ಚಂದ್ರನು ಒಮ್ಮೆ ಬೇಟೆಗಾಗಿ ಕಾಡಿಗೆ ಹೋದಾಗ ಇಬ್ಬರು ಮಾಯಾ ಸ್ತ್ರೀಯರು ಅವನನ್ನು ಅಡ್ಡಗಟ್ಟಿ ನಾವು ಅಪಾಯದಲ್ಲಿದ್ದೇವೆ. ರಕ್ಷಿಸೆಂದು ಕೇಳಿಕೊಂಡರು. ಒಪ್ಪಿಕೊಂಡ ರಾಜನಿಗೆ ‘ರಕ್ಷಿಸುವೆನೆಂದು ಮಾತು ಕೊಟ್ಟಿದ್ದೀಯೆ ನೀನೇ ನಮ್ಮನ್ನು ಮದುವೆಯಾಗಬೇಕು’ ಎಂದು ದುಂಬಾಲು ಬಿದ್ದರು. ರಾಜನು ಇದಕ್ಕೆ ಒಪ್ಪಲಿಲ್ಲ. ತಾನು ಏಕಪತ್ನಿàವ್ರತಸ್ಥನಾದ್ದರಿಂದ ಮದುವೆ ಅಸಾಧ್ಯ ಎಂದನು. ಈ ಮಾಯಾನಿಯರು ದೂರನ್ನು ವಿಶ್ವಾಮಿತ್ರನವರೆಗೂ ಕೊಂಡೊಯ್ದರು. ಮಹರ್ಷಿಯೂ ರಾಜನಿಗೆ ಮದುವೆಯಾಗೆಂದೇ ಹೇಳಿದನು. ಮಹರ್ಷಿ ಮಾತಿಗೂ ರಾಜ, ಈ ಮೊದಲು ಮಾಯಾವಿ ಮಹಿಳೆಯರಿಗೆ ಹೇಳಿದ್ದನ್ನೇ ಹೇಳಿ, ಅವರನ್ನು ಮದುವೆಯಾಗಲು ಆಗುವುದೇ ಇಲ್ಲ ಎಂದನು. ಮಹರ್ಷಿಯು ಮಾತಿಗೆ ತಪ್ಪಿದರೆ ದಂಡ ತೆರಬೇಕಾಗುತ್ತದೆ ಎಂದು ಹೆದರಿಸಿದನು. ರಾಜ ದಂಡ ತೆರುವುದಕ್ಕೆ ಒಪ್ಪಿಕೊಂಡನು. ಸೂಕ್ತಕಾಲದಲ್ಲಿ ತಾನು ರಾಜನ ಅರಮನೆಗೇ ಬಂದು ದಂಡ ವಸೂಲು ಮಾಡುವೆನೆಂದು ಮಹರ್ಷಿ ತಿಳಿಸಿದನು. ರಾಜ ತನ್ನ ರಾಜ್ಯಕ್ಕೆ ಂತಿರುಗಿದ. 

ಕೆಲವು ಕಾಲಾನಂತರ ವಿಶ್ವಾಮಿತ್ರನು ಅಯೋಧ್ಯೆಗೆ ಬಂದು ರಾಜನ ಬಳಿ ದಂಡ ವಸೂಲು ಮಾಡಲು ಬಂದಿರುವೆನೆಂದು ಹೇಳಿ, ದಂಡದ ರೂಪದಲ್ಲಿ ರಾಜನ ರಾಜನ ಸಕಲ ಸಂಪತ್ತು, ರಾಜ್ಯಕೋಶಾದಿಗಳನ್ನು ವಶಪಡಿಸಿಕೊಂಡು ರಾಜನನ್ನು ಕಾಡಿಗೆ ಹೋಗೆಂದನು. ಇಷ್ಟೇ ಅಲ್ಲದೆ ದಂಡಕ್ಕೆ ಅಷ್ಟು ದಿನದ ಬಡ್ಡಿಯನ್ನೂ ಕೇಳಿದನು. ರಾಜ ಬಡ್ಡಿ ಕೊಡಲು ಒಪ್ಪಿ ಕೊಂಚ ಸಮಯಾವಕಾಶ ಕೇಳಿದನು. ಮಹರ್ಷಿ ಒಪ್ಪಿ$ ‘ಅಲ್ಲಿಯವರೆಗೂ ನಿನಗೆ ನೆನಪು ಮಾಡಿಕೊಡಲು ನನ್ನ ಶಿಷ್ಯನನ್ನು ನಿನ್ನ ಜೊತೆ ಕಳಿಸುತ್ತೇನೆ ಆದರೆ ನೀನು ಯಾವುದೇ ಕಾರಣಕ್ಕೂ ಅವನ ಮೇಲೆ ಕೋಪಿಸಬಾರದು’ ಎಂದು ಷರತ್ತು ಹಾಕಿ ನಕ್ಷತ್ರಿಕ ಎಂಬ ಶಿಷ್ಯನನ್ನು ರಾಜನ ಜೊತೆ ಕಳಿಸಿದನು. 

ಮಾತಿಗೆ ತಪ್ಪದ ರಾಜಾ ಹರಿಶ್ಚಂದ್ರ, ತನ್ನ ಪತ್ನಿ ಚಂದ್ರಮತಿ, ರಾಜಕುಮಾರ ಲೋಹಿತಾಶ್ವರೊಂದಿಗೆ  ರಾಜೋಚಿತವಾದ ಉಡುಗೆಗಳನ್ನು  ತೆಗೆದಿಟ್ಟು ನಾರುಮಡಿಯುಟ್ಟು ವನವಾಸಕ್ಕೆ ಹೊರಟುನಿಂತ. ಊರಿನ ಜನರೆಲ್ಲ ಕಣ್ಣೀರು ತುಂಬಿ ರಾಜಪರಿವಾರವನ್ನು ಬೀಳ್ಕೊàಟ್ಟರು. ಈ ಪರಿವಾರದ ಜೊತೆಯಿದ್ದ ನಕ್ಷತ್ರಿಕ ರಾಜನನ್ನು ಪದೇ ಪದೇ ಹೀಯಾಳಿಸುತ್ತಾ ಬಡ್ಡಿಯನ್ನು ನೆನೆಪುಮಾಡುತ್ತಾ ಹೋಗುತ್ತಿದ್ದನು. ಸಂಪಾದನೆಗಾಗಿ ರಾಜ ಕಾಡುಮೇಡಿನಲ್ಲಿ ಬಹುವಾಗಿ ಅಲೆದಾಡಿ ದಣಿದನು. ನಂತರ ಒಂದು ಊರಿನಲ್ಲಿ ಅವನು ತನ್ನ ಪತ್ನಿ ಹಾಗೂ ಪುತ್ರನನ್ನು ಒಬ್ಬ ಬ್ರಾಹ್ಮಣನ ಬಳಿ ಜೀತಕ್ಕಿಟ್ಟು ಹಣವನ್ನು ಪಡೆದನು ಅದನ್ನು ನಕ್ಷತ್ರಿಕನಿಗೆ ಕೊಟ್ಟಾಗ ‘ಇದೇನೋ ಬಡ್ಡಿಯಾಯಿತು. ನಿನ್ನ ಹಿಂದೆ ಅಲೆದದ್ದಕ್ಕಾಗಿ ನನಗೇನೂ ಇಲ್ಲವೇ?’ ಎಂದು ಕೇಳಿದನು. ರಾಜ ಒಬ್ಬ ಸ್ಮಶಾನದ ಕಾವಲುಗಾರನಿಗೆ ತನ್ನನ್ನೇ ತಾನು ಮಾರಿಕೊಂಡು ಆ ಹಣವನ್ನು ನಕ್ಷತ್ರಿಕನಿಗೆ ಕೊಟ್ಟು ಕಳಿಸಿದನು. 

ಇತ್ತ ಬ್ರಾಹ್ಮಣನ ಮನೆಯಲ್ಲಿ ರಾಣಿ ಚಂದ್ರಮತಿ ನಾನಾ ಕಷ್ಟಗಳನ್ನು ಅನುಭವಿಸಿದಳು. ರಾಜಕುಮಾರನೂ ಸಹ ಕಠಿಣವಾದ ಕೆಲಸಗಳನ್ನು ಮಾಡುತ್ತಿದ್ದನು. ಸರಿಯಾದ ಊಟೋಪಚಾರಗಳಿಲ್ಲದೆ ಇಬ್ಬರೂ ಸೊರಗಿ ಹೋಗಿದ್ದರು. ಒಮ್ಮೆ ಕಟ್ಟಿಗೆ ತರಲು ಕಾಡಿಗೆ ಹೋದ ಲೋಹಿತಾಶ್ವ ಹಾವು ಕಡಿದು ಸತ್ತು ಹೋದನು. ಚಂದ್ರಮತಿಗೆ ಮಗನ ಶವ ಸಂಸ್ಕಾರ ಮಾಡಲೂ ಹಣವಿರಲಿಲ್ಲ. ಮಗನ ಶವವನ್ನು ಸುಡಲು ಸ್ಮಶಾನಕ್ಕೆ ತಂದಾಗ ಕಾವಲುಗಾರ ಹರಿಶ್ಚಂದ್ರ ಶುಲ್ಕ ಕೊಡೆಂದು ಅವಳನ್ನು ತಡೆದು ನಿಲ್ಲಿಸಿದನು. ಗ್ರಹಚಾರವಶಾತ್‌ ಇಬ್ಬರೂ ಒಬ್ಬರನ್ನೊಬ್ಬರು ಗುರುತಿಸಲಿಲ್ಲ. ಇದರ ಮದ್ಯೆ ಚಂದ್ರಮತಿಯ ಮೇಲೆ ಕಳ್ಳತನದ ಆರೋಪ ಬಂದು ಅವಳನ್ನು ಹಿಡಿಯಲು ಅಡವಿಗೆ ರಾಜಭಟರು ಬಂದರು.

ಅವಳು ಕಳ್ಳತನ ಮಾಡಿಲ್ಲವೆಂಬುದಕ್ಕೆ ಯಾವುದೇ ಆಧಾರ ಸಿಗಲಿಲ್ಲ. ಹರಿಶ್ಚಂದ್ರನಿಗೆ ಅವಳ ತಲೆ ಕಡಿಯಬೇಕೆಂದು ರಾಜಾಜ್ಞೆಯಾುತು. ಹರಿಶ್ಚಂದ್ರ ಇನ್ನೇನು ಚಂದ್ರಮತಿಯ ತಲೆ ಕಡಿಯಬೇಕೆಂದು ಕತ್ತಿ ಮೇಲೆತ್ತಿದಾಗ ಶಿವನ ದಯೆಯಿಂದ ಕತ್ತಿ ಹೂವಿನ ಹಾರವಾಯಿತು. ರಾಜನ ಸತ್ಯಸಂಧತೆಗೆ ಮೆಚ್ಚಿ ಪರಶಿವನು ಪ್ರತ್ಯಕ್ಷನಾದನು. ರಾಜನ ಕಾರ್ಪಣ್ಯ ತೀರಿತು. ಸತ್ಯಕ್ಕೆ ಗೆಲುವಾಯಿತು, ರಾಜನನ್ನು ಬಗೆಬಗೆಯಲ್ಲಿ ಕಷ್ಟಕ್ಕೆ ಗುರಿ ಮಾಡಿದ್ದಕ್ಕೆ ವಿಶ್ವಾಮಿತ್ರನೂ ಕ್ಷಮೆಯಾಚಿಸಿದನು. ಎಲ್ಲವೂ ಸುಖಾಂತಮಾತು. 

– ವೀಣಾ ರಾವ್‌

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.