ಅಂತಾರಾಷ್ಟ್ರೀಯ ಸರ್ಫಿಂಗ್‌ ಉತ್ಸವಕ್ಕೆ ಸಸಿಹಿತ್ಲು  ಸಜ್ಜು

Team Udayavani, May 24, 2017, 3:56 PM IST

2305mlr17.jpg

ಸಸಿಹಿತ್ಲು: ಕಡಲ ಅಲೆಗಳ ಜತೆ ಸರ್ಫಿಂಗ್‌ ಕಲಿಗಳ ಕಲರವಕ್ಕೆ  ಸಸಿಹಿತ್ಲು ಸಜ್ಜುಗೊಳ್ಳುತ್ತಿದೆ. ಮೇ 26 ರಿಂದ 28 ವರೆಗೆ ಇಲ್ಲಿನ ಬೀಚ್‌ ನಲ್ಲಿ ನಡೆಯುವ  ಅಂತಾರಾಷ್ಟ್ರೀಯ  ಸರ್ಫಿಂಗ್‌ ಉತ್ಸವಕ್ಕೆ  ದಿನಗಣನೆ ಆರಂಭವಾಗಿದ್ದು, ದೇಶ ವಿದೇಶಗಳಿಂದ  ಸರ್ಫಿಂಗ್‌ ಪಟುಗಳು  ಆಗಮಿಸುತ್ತಿದ್ದಾರೆ.
  
ಕಡಲ ಅಲೆಗಳ ಜತೆಗೆ ಸೆಣಸಾಟದ ರೋಮಾಂಚಕ  ಸಾಹಸ ಕ್ರೀಡೆ  ಸರ್ಫಿಂಗ್‌. ಇದರ ಉತ್ಸವ ಈ ಬಾರಿ ದೊಡ್ಡ ಮಟ್ಟದಲ್ಲಿ ಆಯೋಜನೆಗೊಳ್ಳುತ್ತಿದ್ದು,  ದೇಶಾದ್ಯಂತ ವ್ಯಾಪಕ ಪ್ರಚಾರ ಪಡೆದಿದೆ. ಈಗಾಗಲೇ ಗೋವಾ, ಪಾಂಡಿಚೇರಿ, ತಮಿಳುನಾಡಿನಿಂದ ಸ್ಪರ್ಧಿಗಳು ಆಗಮಿಸಿ ಅಭ್ಯಾಸ ನಿರತರಾಗಿದ್ದಾರೆ. ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಮುಂತಾದೆಡೆಗಳ ಸರ್ಫಿಂಗ್‌ ಕ್ಲಬ್‌ಗಳ ಸದಸ್ಯರೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳಿಗೆ ಪೈಪೋಟಿ ನೀಡಲು ಸಜ್ಜುಗೊಳ್ಳುತಿದ್ದಾರೆ. 

ಕೆನರಾ ಸರ್ಫಿಂಗ್‌ ಆ್ಯಂಡ್‌ ವಾಟರ್‌ ನ್ಪೋರ್ಟ್ಸ್ ಪ್ರಮೋಷನ್‌ ಕೌನ್ಸಿಲ್‌ ಹಾಗೂ ಮಂತ್ರ ಸರ್ಫ್‌ ಕ್ಲಬ್‌ ಆಶ್ರಯದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ಪರ್ಧೆ ನಡೆಯುತ್ತಿದೆ.

200 ಕ್ಕೂ ಅಧಿಕ ಸ್ಪರ್ಧಿಗಳು
ಸರಕಾರವು ಈ ಬಾರಿಯ ಬಜೆಟ್‌ನಲ್ಲಿ ಸಸಿಹಿತ್ಲಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಉತ್ಸವ ಘೋಷಿಸುವ ಮೂಲಕ ಅಧಿಕೃತಗೊಳಿಸಿದೆ. ಈ ಬಾರಿ ದೇಶ ಮತ್ತು ವಿದೇಶಗಳ  ಸುಮಾರು  200ಕ್ಕೂ ಅಧಿಕ ಸರ್ಫಿಂಗ್‌ಪಟುಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಫ್ರಾನ್ಸ್‌, ಮಾಲ್ಡೀವ್ಸ್‌, ಮಡಾಸ್ಕರ್‌ ಸಹಿತ ವಿವಿಧ ದೇಶಗಳಿಂದ ಅಂತಾರಾಷ್ಟ್ರೀಯ ಪಟುಗಳು ಹೆಸರು ನೋಂದಾಯಿಸಿದ್ದಾರೆ. ಉತ್ಸವ ಆರಂಭಗೊಳ್ಳಲು 3 ದಿನಗಳಿದ್ದೂ  ಇನ್ನಷ್ಟು  ಸ್ಪರ್ಧಿಗಳು ಆಗಮಿಸುವ ನಿರೀಕ್ಷೆ  ಇದೆ ಎನ್ನುತಾರೆ ಸಂಘಟಕರು.

ಏಳರಿಂದ ಎಪ್ಪತ್ತೂಂದರವರೆಗೆ
ಉತ್ಸವದಲ್ಲಿ   7ರಿಂದ 71 ವಯೋಮಿತಿವರೆಗಿನ ಸ್ಪರ್ಧಿಗಳಿದ್ದಾರೆ. 14, 16ರ ಒಳಗಿನ ಮಕ್ಕಳು, 17ರಿಂದ 22, 22ರಿಂದ 28 ಹಾಗೂ 28ರಿಂದ ಹೆಚ್ಚಿನ ವಯೋಮಿತಿಯವರಿಗೆ ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 

ಮಹಿಳೆಯರಿಗೂ ಪ್ರತ್ಯೇಕ ವಿಭಾಗಗಳಿವೆ. ಒಟ್ಟು 6 ಲಕ್ಷ ರೂ. ಮೊತ್ತದ ನಗದು ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಸರ್ಫಿಂಗ್‌ ತಜ್ಞ  ಸ್ವಾಮಿ ವಿವರಿಸುತ್ತಾರೆ. ಮೂಲತಃ ಕ್ಯಾಲಿಫೋರ್ನಿ ಯಾದವರಾದ ಜ್ಯಾಕ್‌  ಅವರು ಸ್ವಾಮಿ ಹೆಸರಿನಲ್ಲಿ  ಪರಿಚಿತರಾಗಿದ್ದು,   ಭಾರತದಲ್ಲಿ  ಸರ್ಫಿಂಗ್‌ ಕ್ರೀಡೆಯನ್ನು  ಜನಪ್ರಿಯ ಗೊಳಿಸುವಲ್ಲಿ ನಿರತರಾಗಿದ್ದಾರೆ.

ಇಪ್ಪತ್ತು ಸಾವಿರಕ್ಕೂ ಅಧಿಕ 
ಪ್ರೇಕ್ಷಕರ ನಿರೀಕ್ಷೆ

ಉತ್ಸವಕ್ಕೆ  ರಾಷ್ಟ್ರಾದ್ಯಂತ ಭಾರೀ ಪ್ರಚಾರ ನೀಡಿದ್ದು, ಶುಕ್ರವಾರ, ಶನಿವಾರ ಮತ್ತು ರವಿವಾರ ಉತ್ಸವ ನಡೆಯಲಿದೆ. ವಾರಾಂತ್ಯ ದಿನಗಳಾದ ಶನಿವಾರ  ಹಾಗೂ ರವಿವಾರ ಸುಮಾರು 20,000 ಪ್ರೇಕ್ಷಕರು ಆಗಮಿಸಬಹುದು. 

ಐಪಿಎಲ್‌ ಹೀರೋ ಸಂಜು ಸ್ಯಾಮ್ಸನ್‌,  ಮಾಜಿ ಅಂತಾರಾಷ್ಟ್ರೀಯ  ಕ್ರಿಕೆಟ್‌ ಆಟಗಾರ, “ಸರ್ಫಿಂಗ್‌ ಸ್ಪೆಷಲಿಸ್ಟ್‌’ ಜಾಂಟಿ ರೋಡ್ಸ್‌, ಚಿತ್ರನಟ ಸುನೀಲ್‌ ಶೆಟ್ಟಿ ಸಹಿತ ಹಲವು ಸ್ಟಾರ್‌ಗಳು ಭಾಗವಹಿಸುವರು.

ಪ್ರವೇಶ ಉಚಿತ
ಈ ಉತ್ಸವ ನೋಡಲು ಬರುವವರಿಗೆ ಉಚಿತ. ಎಲ್ಲ ವಿಭಾಗಗಳ ವೀಕ್ಷಣೆಗೂ ಮುಕ್ತ ಅವಕಾಶವಿದೆ. ಜತೆಗೆ ವಾಹನಗಳ ಉಚಿತ ನಿಲುಗಡೆಗೆ ಸಸಿಹಿತ್ಲು ಬಳಿ 9 ಎಕ್ರೆ ಪ್ರದೇಶದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲಿಂದ  ಉತ್ಸವ ತಾಣಕ್ಕೆ ತೆರಳಲು ಮಿನಿಬಸ್‌ಗಳೂ ಇರಲಿವೆ.

ಉತ್ಸವ ತಾಣದಲ್ಲಿ  ಎಲ್ಲೂ  ಸುಗಮ ಸಂಚಾರಕ್ಕೆ  ಅಡಚಣೆ ಯಾಗಬಾರದು ಎಂಬುದು ನಮ್ಮ ಉದ್ದೇಶ ಎನ್ನುತ್ತಾರೆ ಕೆನರಾ ಸರ್ಫಿಂಗ್‌ ಆ್ಯಂಡ್‌ ವಾಟರ್‌ ನ್ಪೋರ್ಟ್ಸ್ ಪ್ರಮೋಷನ್‌ ಕೌನ್ಸಿಲ್‌ನ ಕೋಶಾಧಿಕಾರಿ ಹಾಗೂ ಉತ್ಸವದ ಕೋರ್‌ಕಮಿಟಿ ಸದಸ್ಯ ಯತೀಶ್‌ ಬೈಕಂಪಾಡಿ.

ಸುರಕ್ಷೆಗೆ ವಿಶೇಷ ನಿಗಾ
ಉತ್ಸವ ಸಂದರ್ಭದಲ್ಲಿ  ಸುರಕ್ಷೆಗೆ ವಿಶೇಷ ಆದ್ಯತೆ ನೀಡಲಾಗಿದೆ.  ಸುಮಾರು 12 ಮಂದಿ ಜೀವರಕ್ಷಕರನ್ನು  ನಿಯೋಜಿಸಲಾಗುತ್ತಿದೆ. ನಿಗಾ ಗೋಪುರಗಳನ್ನು  ಸ್ಥಾಪಿಸಲಾಗುತ್ತಿದೆ ಹಾಗೂ ಸಿಸಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ.

ಸಸಿಹಿತ್ಲು ಬೀಚ್‌ಗೆ ದಾರಿ 
ಕರ್ನಾಟಕ ಕರಾವಳಿಯಲ್ಲಿ  ಸುಂದರ ಬೀಚ್‌ಗಳಲ್ಲೊಂದಾದ ಸಸಿಹಿತ್ಲು ಈಗಾಗಲೇ ಉತ್ತಮ ಸರ್ಫಿಂಗ್‌ತಾಣವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಗುರುತಿಸಿಕೊಂಡಿದೆ. ಈ ಸಮುದ್ರ ತೀರ ಮಂಗಳೂರಿನಿಂದ  22 ಕಿ.ಮೀ. ದೂರದಲ್ಲಿಧಿದೆ. ರಾಷ್ಟ್ರೀಯ ಹೆದ್ದಾರಿ 16 ರಲ್ಲಿ  ಮುಕ್ಕದಿಂದ ಸಸಿಹಿತ್ಲು ರಸ್ತೆಯಲ್ಲಿ 6 ಕಿ.ಮೀ. ಸಾಗಿದರೆ ಬೀಚ್‌ ತಲುಪಬಹುದು. ಉಡುಪಿ ಕಡೆಯಿಂದ ಬರುವವರು ಹಳೆಯಂಗಡಿ ಜಂಕ್ಷನ್‌ ಮೂಲಕ ತಿರುಗಿ ಇಲ್ಲಿಗೆ ಬರಬಹುದು. 

ಉತ್ಸವದ ವಿಶೇಷತೆ 
ಉತ್ಸವ ಬೆಳಗ್ಗೆ  7 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಇದರ ಜತೆಗೆ ಬೀಚ್‌ ವಾಲಿಬಾಲ್‌, ಗಾಳಿ ಪಟ ಹಿಡಿದುಕೊಂಡು ಮಾಡುವ  ಕೈಟ್‌ ಸರ್ಫಿಂಗ್‌, ಆಹಾರೋತ್ಸವ ಆಯೋಜಿಸಲಾಗಿದೆ. ವಾಲ್‌ ಕ್ಲೈಮಿಂಗ್‌, ಸ್ಕೇಟ್‌ ಬೋರ್ಡ್‌ ಮುಂತಾದವೂ ಇರಲಿವೆ ಪುರುಷರ 10 ಕಿ.ಮೀ. ಸ್ಪೀಡ್‌ರೇಸ್‌ ಹಾಗೂ ಮಹಿಳೆಯರ 5 ಕಿ.ಮೀ. ಸ್ಟಾಂಡ್‌ ಆಫ್‌ ಪ್ಯಾಡ್ಲಿಂಗ್‌ ವಿಶೇಷ ಆಕರ್ಷಣೆ.

ಸಿದ್ಧತೆ ಬಹುತೇಕ ಪೂರ್ಣ
ಸಸಿಹಿತ್ಲಿನಲ್ಲಿ  ಅಂತಾರಾಷ್ಟ್ರೀಯ ಸರ್ಪಿಂಗ್‌ ಉತ್ಸವಕ್ಕೆ  ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಈಗಾಗಲೇ ಗಣನೀಯ ಸಂಖ್ಯೆಯಲ್ಲಿ  ಸ್ಪರ್ಧಿಗಳು ನೋಂದಣಿ ಮಾಡಿದ್ದಾರೆ. ಮೇ 26 ರಂದು ರಾಜ್ಯ  ಪ್ರವಾಸೋದ್ಯಮ ಸಚಿವರಿಂದ ಉತ್ಸವ ಉದ್ಘಾಟನೆಗೊಳ್ಳಲಿರುವುದು. 

– ಕುಮಾರ್‌, ಜಿಲ್ಲಾ ಅಪರ ಜಿಲ್ಲಾಧಿಕಾರಿ

ಟಾಪ್ ನ್ಯೂಸ್

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.