ನಾ ಹಾಡಿ ಕುಣಿಯುವ ಕಾರವಾರ: ಬದಲಾಗುತ್ತಾ ಇದೆ ನೋಡು ಬಾರಾ…


Team Udayavani, Jul 22, 2017, 12:25 PM IST

699.jpg

 ಮೋಡಗಳು ಪದೇಪದೆ ಮೆರವಣಿಗೆ ಹೊರಡುತ್ತಿರುತ್ತವೆ. ಇದರ ಹಿಂದೆಯೇ  ಆಗಾಗ ತುಂತುರು ಮಳೆ. ಓಹ್‌, ಮಳೆ ಬರುವ ಹಾಗಿದೆ ಅಂದುಕೊಳ್ಳುವುದರೊಳಗೇ ಪಟಪಟಪಟ ಎನ್ನು ಸದ್ದು  ಹೆಚ್ಚಾಗಿ ಹೆಚ್ಚಾಗಿ ಜೋರು ಮಳೆ. ಕಾರವಾರದ ಕಡಲ ತಡಿಯಲ್ಲಿ ಮಳೆಯನ್ನು ನೋಡುವುದೇ ಹಬ್ಬ. ಹೌದು, ಕಾರವಾರ ಈಗ ಸಂಪೂರ್ಣ ಬದಲಾಗಿದೆ. 

 ಕಡಲತೀರವೆಲ್ಲ ಸ್ವತ್ಛಗೊಂಡಿದೆ. ಊರಿನ ರಸ್ತೆಗಳಿಗೆ ನವೀನ ಕಳೆ ಬಂದಿದೆ. ಅಲ್ಲಲ್ಲಿ ಸೈಕಲ್ಲು ತುಳಿಯುವ ಹೆಣ್ಣುಮಕ್ಕಳು, ನಾವೇನು ಕಮ್ಮಿ ಎನ್ನುವಂತೆ ಪೆಡಲ್‌ ದೂಕುವ ಗಂಡುಮಕ್ಕಳು. 

ಕಾರವಾರ ಸುತ್ತಿದರೆ ಗಂಡಸರಂತೇ, ಹೆಣ್ಮಕ್ಕಳೂ ಸ್ಟ್ರಾಂಗ್‌ ಗುರೂ ಅನಿಸಿಬಿಟ್ಟರೆ ಆಶ್ಚರ್ಯವಿಲ್ಲ. 

ಕಾರವಾರದ ಕಡಲು, ತೀರದಲ್ಲಿ ಬಹಳಷ್ಟು ಹೊಸ ಮರಳನ್ನು ತಂದು ಹಾಕಿದೆ. ಕಳೆದ ಏಳೆಂಟು ವರ್ಷಗಳು ಕಾರವಾರದ ಪಾಲಿಗೆ ಬದಲಾವಣೆಯ ಪರ್ವ ಎನ್ನುವುದರ ಮುನ್ನುಡಿಯಂತಿದೆ.  ಹೊಸ ಹೊಸ ಯೋಜನೆಗಳು , ಕ್ರಿಯಾಶೀಲ ಅಧಿಕಾರಿವರ್ಗ , ಊರು ವಿಸ್ತಾರಗೊಳ್ಳುತ್ತಿದ್ದಂತೆಯೇ  ಹಿಂಡು, ಹಿಂಡಾಗಿ ಲಗ್ಗೆ ಇಡುತ್ತಿರುವ‌ ಹೊಸ ನಿವಾಸಿಗಳು, ಇವೆಲ್ಲವಕ್ಕೆ ಮೈಕೊಡವಿ ಅಣಿಯಾಗುತ್ತಿರುವ ಮೂಲ ಕಾರವಾರಿಗರು-  ಹೀಗೆ ಊರಿಗೆ ಊರೇ ಪುನರುಜ್ಜೀವನಗೊಳ್ಳುತ್ತಿದೆ. 

ಮೊದಲಿಗೆ ಕುಡ್ಸೆಂಪ ಕಾಮಗಾರಿಯಿಂದ ಕಾರವಾರದ ಮುಖ್ಯ ರಸ್ತೆಗಳೆಲ್ಲ ಪುನರ್ಜನ್ಮ ಪಡೆದರೆ , ಅದರ ಜೊತೆಗೇ ಬಂದಿದ್ದು ಜನತೆಯ ಬಹು ಅಪೇಕ್ಷೆಯ ಈಜುಕೊಳ. ಇವೆಲ್ಲದರ ಜೊತೆಜೊತೆಗೆ ಊರಿನ ಹೃದಯ ಭಾಗದಲ್ಲಿ ಹಾದು ಹೋಗಿರುವ ಕೋಣೆನಾಲಾದಿಂದ ಕೋಡಿಬಾಗವರೆಗಿನ ರಸ್ತೆಯ ಹಾಗೂ ಇದರ ಇನ್ನೊಂದು ಮಗ್ಗುಲಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರ ವಿಸ್ತರಣಾ ಕಾರ್ಯ.  ನಗರದ ಮಧ್ಯದಲ್ಲಿದ್ದು ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಮೀನು ಮಾರ್ಕೆಟ್‌ನ ಸ್ಥಳಾಂತರ ಮತ್ತು ನೂತನ ಕಟ್ಟಡದ ನಿರ್ಮಾಣ , ಭಾರಿ ಜನಾಂದೋಲನದಿಂದ ಕೈಗೂಡಿದ ಸರ್ಕಾರಿ ವೈದ್ಯಕೀಯ ಕಾಲೇಜು… ಹೀಗೆ ವಿವಿಧ ಕಾರಣಗಳಿಂದಊರಿಗೆ ಊರೇ ರೂಪಾಂತರಗೊಳ್ಳುತ್ತಿದೆ. ಅನತಿ ದೂರದಲ್ಲಿ ನಗರದ ಎರಡು ಮಗ್ಗುಲಿನಲ್ಲಿರುವ ಕದಂಬ ನೌಕಾನೆಲೆ ಮತ್ತು ಕೈಗಾ ಅಣುಸ್ಥಾವರ ತಮ್ಮ ತಮ್ಮ ಯೋಜನೆಗಳ ವಿಸ್ತಾರದ ಕಾಮಗಾರಿಗೆ ಸಜಾjಗುತ್ತಿವೆ. 

ಇದು ಊರಿನ ಕಥೆ.  ಕಾರವಾರದ ಕಡಲತೀರದಲ್ಲಿ ಸಾಹಸ ಪ್ರಿಯರಿಗಾಗಿ ಈಗಾಗಲೇ ಪಾರಾಗ್ಲೆ„ಡಿಂಗ್‌ ಪ್ಯಾರಾಸೇಲಿಂಗ ಜೊತೆಗೆ ಬನಾನಾ ಬೋಟಿಂಗ್‌ ಕ್ರೀಡೆಗಳೂ ಶುರುವಾಗಿದೆ.  ಗಿಡಗಂಟಿಗಳನ್ನೆಲ್ಲ ತೆಗೆದು ಹಾಕಲಾಗಿದೆ. ಹೌದು, ಈಗ ಕಡಲತೀರ ಸ್ವತ್ಛಗೊಂಡಿದೆ. 

ಕಡಲ ತೀರವನ್ನು ವರ್ಷವಿಡೀ, ಸ್ವತ್ಛವಾಗಿಡಲು ಸ್ಥಳೀಯ ಸಂಘಸಂಸ್ಥೆಗಳು ಆಗಾಗ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳುತ್ತಿವೆ. ಕಡಲತೀರಕ್ಕೆ ಭೇಟಿ ಕೊಡುವವರ ಹಸಿವು ನೀಗಿಸಲು ಕ್ಯಾಂಟೀನ್‌ ಶುರುವಾಗಿದೆ.  ಸಮುದ್ರ ತೀರದ ಅಂಚಿನಲ್ಲಿರುವ ಚಾಪೆಲ್‌ ಯುದ್ಧ ನೌಕಾ ಸಂಗ್ರಹಕ್ಕೆ ಹೋಗುವುದನ್ನು ಮರೆಯಬೇಡಿ. ಅಲ್ಲಿಗೆ ಮಕ್ಕಳನ್ನು ಕರೆದೊಯ್ದರೆ ಅವರು ಯುದ್ಧ ನೌಕೆಯನ್ನು ನೋಡಿಖುಷಿ ಪಡುವುದರಲ್ಲಿ ಅನುಮಾನವೇ ಬೇಡ. ಇದರ ಪಕ್ಕದಲ್ಲೇ ಮತ್ಸಾéಲಯವಿದೆ. 

 ಅಂದಹಾಗೆ, ಕೋಡಿಬಾಗ್‌ನ ಕಾಳಿ ಹಿನ್ನೀರಿನಲ್ಲಿ ಫ್ಲೈಯಿಂಗ್‌ ಫಿಶ್‌ ಸಾಹಸಕ್ರೀಡೆ ನಡೆಯುತ್ತಿದೆ.  ಅದರಲ್ಲಿ ಪಾಲ್ಗೊಳ್ಳಿ. ಗೊತ್ತಿರಲಿ; ಇದು ಮುಂಬಯಿ ಬಿಟ್ಟರೆ ಭಾರತದ ಎರಡನೇ ಫ್ಲೈಯಿಂಗ್‌ ಫಿಶ್‌ ಕ್ರೀಡೆ ಇರುವುದು ಕಾರವಾರದಲ್ಲಿ.                             

 ಇನ್ನು ಉತ್ತರ ಕನ್ನಡದ ಜೀವನ ಶೈಲಿಯನ್ನು ಬಿಂಬಿಸುವ ರಾಕ್‌ಗಾರ್ಡನ್‌ ಶುರುವಾಗುತ್ತಲಿದೆ.  ಪುಟಾಣಿ ರೈಲು ಮತ್ತು ಸಂಗೀತ ಕಾರಂಜಿಗಳು ಪುನರ್ಜನ್ಮ ಪಡೆದಿವೆ. ಕಾರವಾರ ತಾಲ್ಲೂಕಿನ ತುತ್ತತುದಿಯಲ್ಲಿರುವ ಅತಿ ಅಪರೂಪದ ಕಪ್ಪುಮರಳಿನ ಕಡಲತೀರವಾದ ತೀಳಮಾತಿಗೆ ಹೋಗುವುದನ್ನು ಮರೆಯಬೇಡಿ. 

ಪ್ರವಾಸಿಗರನ್ನು ಸ್ವಾಗತಿಸಲು ಕಾರವಾರಿಗರು ಸಹ ಇದೇ ಉತ್ಸಾಹದಲ್ಲಿ ತಯಾರಾಗಿದ್ದಾರೆ.  ಒಂದೆಡೆ ಹೊಸ ಹೊಸ ವಸತಿಗೃಹಗಳು ತಲೆಎತ್ತುತ್ತಿದ್ದರೆ ಇನ್ನೊಂದೆಡೆ ಹಳೆಯವು ಹೊಸ ಮೇಕಪ್‌ನಲ್ಲಿ ಅಣಿಯಾಗುತ್ತಿವೆ. ಕಾರವಾರದ ಮೀನೂಟವನು °ಒಂದು ಬ್ರಾಂಡ್‌ ಮಾಡಲು ಮತ್ಸ್ಯಖಾದ್ಯಗಳನ್ನು ಇಲ್ಲಿನ ಶೈಲಿಯಲ್ಲಿ ಬಡಿಸಲು ನಗರದೆಲ್ಲೆಡೆ ಹೋಟೆಲ್‌ಗ‌ಳು ತಲೆ ಎತ್ತುತ್ತಲಿವೆ. 

ಬದಲಾಗುತ್ತಿರುವ ವಾತಾವರಣದ ಕಾರಣಕ್ಕೆ ಈಗ ಕಾರವಾರ ಎಷ್ಟು ಬ್ಯುಸಿ ಗೊತ್ತಾ? ಕಳೆದ ವರ್ಷ ನವೆಂಬರ್‌ನಿಂದ ಮೇವರೆಗೆ ಕಾರವಾರದ ಪ್ರಮುಖ ವಸತಿಗೃಹಗಳೆಲ್ಲ ಭರ್ತಿಯಾಗಿದ್ದವು.  ಕಡಲ ತೀರವಂತೂ ಈಗ ಚಟುವಟಿಕೆಗಳ ತಾಣ. ಅದರಲ್ಲೂ ಸಾಯಂಕಾಲದ ವೇಳೆ ಪ್ರತಿದಿನವೂ ನೂರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. 

 ಬದಲಾಗಿರುವ ಕಾರವಾರ,  ಹಲವು ಹೊಸತುಗಳನ್ನು ಅಳವಡಿಸಿಕೊಂಡು ಕೈಬೀಸಿ ಕರೆಯುತ್ತಿದೆ. 

ಖಂಡಿತ ಬರುತ್ತೀರಲ್ಲ…?

ಸುನೀಲ ಬಾರಕೂರ 

ಟಾಪ್ ನ್ಯೂಸ್

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.