ಇತ್ತ ಹುಲಿ ಹತ್ಯೆಗೈದು ಅತ್ತ ಆನೆ ರಕ್ಷಿಸಿದ್ರು!


Team Udayavani, Jan 18, 2017, 12:20 PM IST

mys2.jpg

9 ವರ್ಷದ ಹೆಣ್ಣು ಹುಲಿ ಸಾವು ನಿಗೂಢ
ಮೈಸೂರು:
ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನವಿಲ್ಲದೆ ರಾತ್ರಿವೇಳೆ ಕಾರ್ಯಾಚರಣೆ ನಡೆಸಿದ ಪರಿ
ಣಾಮ “ಹಿನ್ನೀರಿನ ಹೆಣ್ಣುಲಿ’ ಎಂದೇ ಜನಜನಿತವಾಗಿದ್ದ ಸುಮಾರು 9 ವರ್ಷ ವಯಸ್ಸಿನ ಹುಲಿ ಸಾವನ್ನಪ್ಪಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಗೊತ್ತು ಗುರಿಯಿಲ್ಲದೆ ಹುಲಿ ಹಿಡಿವ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸತ್ತ ನಂತರವೂ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಕ್ಕೆ ಸಾರ್ವಜನಿಕರು, ವನ್ಯಜೀವಿ ಪ್ರಿಯರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ನಡೆದದ್ದಿಷ್ಟು: ಸೋಮವಾರ ಮಧ್ಯಾಹ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ಗ್ರಾಮ, ಎಚ್‌.ಡಿ.ಕೋಟೆ ತಾಲೂಕಿನ ಗುಂಡತ್ತೂರು ಗ್ರಾಮದ ಶಿವನಂಜೇಗೌಡ ಅವರ ಬಾಳೆ ತೋಟದಲ್ಲಿ ಕಟ್ಟಲಾಗಿದ್ದ ಹಸುವನ್ನು ಹುಲಿ ಕೊಂದಿದ್ದನ್ನು ಶಿವನಂಜೇಗೌಡರ ಹುಡುಗ ನೋಡಿದ್ದಾನೆ. ಹುಲಿ ಗುರ್‌ ಎಂದ ಕೂಡಲೇ ಓಡಿಬಂದ ಹುಡುಗ ಮನೆಗೆ ವಿಷಯ ತಿಳಿಸಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ವಿಷಯ ತಿಳಿಸಿದ ನಂತರ ಸಂಜೆ 5ರ ಸುಮಾರಿಗೆ ಡಿ.ಬಿ.ಕುಪ್ಪೆ ವಲಯ ಅರಣ್ಯಾಧಿ ಕಾರಿ ವಿನಯ್‌ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ ಸುಮಾರು 30 ಜನ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಶುರು ಮಾಡಿದೆ.

ಸಂಜೆ 5.45ರ ಸುಮಾರಿಗೆ ಹುಲಿ ಕಾಣಿಸಿಕೊಂಡಿದ್ದು, ಕೂಡಲೇ ಬಂದೂಕಿ ನಿಂದ ಅರಿವಳಿಕೆ ಚುಚ್ಚುಮದ್ದು ನೀಡ ಲಾಗಿದೆ. ಆದರೆ, ಅರಿವಳಿಕೆ ನೀಡಿ 1 ಗಂಟೆ ಕಾಲ ಕಾದರೂ ಹುಲಿಯ ಚಲನ ವಲನದಲ್ಲಿ ಯಾವುದೇ ಬದಲಾವಣೆ ಕಾಣದ್ದರಿಂದ ಮತ್ತೂಂದು ಬಾರಿ ಅರಿವಳಿಕೆ ಸಿಡಿಸಲಾಗಿದೆ. ಬಳಿಕ ರಾತ್ರಿ 9ರ ವೇಳೆ ಅರವಳಿಕೆ ಕೊಟ್ಟಾಗಲೂ ಹುಲಿಗೆ ಏನೂ ಆಗಿಲ್ಲ. ಕಡೆಗೆ ರಾತ್ರಿ 11.30ರಲ್ಲಿ ಮತ್ತೆ ಅರಿವಳಿಕೆ ಕೊಟ್ಟಾಗ ನಿತ್ರಾಣಗೊಂಡು ಬಿದ್ದ ಹುಲಿಯನ್ನು ಬಲೆಯಲ್ಲಿ ಹಿಡಿದು ಅರಣ್ಯಕ್ಕೆ ಬಿಡುವ ಸಲುವಾಗಿ ಕೇಜ್‌ನಲ್ಲಿ ಹಾಕಿಕೊಂಡು ಟ್ರಾಕ್ಟರ್‌ನಲ್ಲಿ ಉದೂºರು ಗೇಟ್‌ ಬಳಿ ತಂದು ನಿಲ್ಲಿಸಿಕೊಂಡಿದ್ದಾರೆ.

ಬಳಿಕ ದಮ್ಮನಕಟ್ಟೆ ರಸ್ತೆ ಬಳಿ ಟ್ರಾಕ್ಟರ್‌ ನಿಲ್ಲಿಸಿಕೊಂಡು ಕಾದರೂ ಸರಿರಾತ್ರಿಯಲ್ಲಿ ಯಾವ ಹಿರಿಯ ಅಧಿಕಾರಿಯೂ ಸಂಪರ್ಕಕ್ಕೆ ಸಿಗದ ಪರಿಣಾಮ ಕಿರಿಯ ಅಧಿಕಾರಿಗಳಿಗೆ ಮುಂದೇನು ಎಂಬ ದಾರಿ ಕಾಣದೆ ಕಾದು ಕುಳಿತಿದ್ದಾರೆ. ಅಷ್ಟರಲ್ಲಿ ಮುಂಜಾನೆ 4.30ರ ಸುಮಾರಿಗೆ ಹುಲಿ ಸಾವನ್ನಪ್ಪಿರುವುದು ಖಚಿತವಾಗಿದೆ. ನಂತರ ಮಧ್ಯಾಹ್ನದ ವೇಳೆಗೆ ಮೈಸೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಡಾ.ಧರಣೇಶ್‌, ಡಾ.ಸುಮಂತ್‌ ಹಾಗೂ ಡಾ.ಯಶವಂತ್‌ ಅವರು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಆಹಾರಕ್ಕಾಗಿ ಗಡಿ ಉಲ್ಲಂಘನೆ ವನ್ಯಜೀವಿ ಪ್ರಿಯರು ಹೇಳುವ ಪ್ರಕಾರ, ಬೇಸಿಗೆಯಿಂದಾಗಿ ನಾಗರಹೊಳೆಯ ಕಾಡು ಪೂರ್ತಿ ಒಣಗಿದೆ. ಕೆರೆಗಳು ಬರಿದಾಗಿರುವುದರಿಂದ ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ, ಕಡವೆಗಳು ಹಿನ್ನೀರಿನ ಪ್ರದೇಶ, ಇಲ್ಲವೇ ಹಸಿರಿದ್ದ ಕಡೆಗೆ ವಲಸೆ ಹೋಗಿವೆ. ಹೀಗಾಗಿ ಬೇಟೆ ಪ್ರಾಣಿಗಳನ್ನು ಹುಡುಕಿಕೊಂಡು ಹುಲಿಗಳು ಅರಣ್ಯದಂಚಿಗೆ ಬರುತ್ತವೆ. ಅಲ್ಲಿ ಅವು ದನಗಳನ್ನು ಸುಲಭವಾಗಿ ಬೇಟೆ ಆಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಹೆಣ್ಣು ಹುಲಿ ತನ್ನ ಗಡಿ ಬಿಟ್ಟು ಹೋಗುವುದು ಕಡಿಮೆ. ಆದರೆ, ಮರಿಗಳಿಗೆ ಆಹಾರ ಕೊಡಬೇಕಾದ ಅನಿವಾರ್ಯ ಸಂದರ್ಭದಲ್ಲಿ ಈ ಹುಲಿ ತನ್ನ ಗಡಿ ಬಿಟ್ಟು ಬಂದಿರಬಹುದು ಎನ್ನುತ್ತಾರೆ.

ಪ್ರತಿ ಚುಚ್ಚುಮದ್ದು ನೀಡದ್ದೇ ಸಾವಿಗೆ ಕಾರಣ
ಪ್ರತ್ಯಕ್ಷದರ್ಶಿಗಳ ಪ್ರಕಾರ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ತಜ್ಞರನ್ನು ಕರೆ ತರದೆ, ಕತ್ತಲಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ ನಡೆಸಿದ್ದೇ ತಪ್ಪು. ಸುಮಾರು 4 ಬಾರಿ ಅರವಳಿಕೆ ಚುಚ್ಚುಮದ್ದು ಕೊಟ್ಟ ನಂತರ ಕುಸಿದು ಬಿದ್ದ ಹುಲಿಯ ಕೈ-ಕಾಲುಗಳನ್ನು ಹಗ್ಗದಲ್ಲಿ ಬಿಗಿದು, ಬಾಕ್ಸ್‌ ಮಾದರಿಯ ಕೇಜ್‌ನಲ್ಲಿ ತುಂಬಿದರು. ಸುಮಾರು ಮೂರ್‍ನಾಲ್ಕು ಗಂಟೆಗಳ ಕಾಲ, ಅರಿವಳಿಕೆ ಮಂಪರಿನಲ್ಲಿದ್ದ ಹುಲಿಗೆ ನೀರು ಸುರಿಯುವುದಾಗಲಿ, ಅರಿವಳಿಕೆ ಔಷಧದ ಪರಿಣಾಮ ತಗ್ಗಿಸಲು ಪ್ರತಿಯಾಗಿ ನೀಡುವ ಚುಚ್ಚುಮದ್ದನ್ನು ನೀಡುವ ಯಾವ ಕೆಲಸವನ್ನೂ ಅಧಿಕಾರಿಗಳು ವೇಗವಾಗಿ ಮಾಡಲಿಲ್ಲ. ಇದರಿಂದಾಗಿ ಹುಲಿ ಸಾವನ್ನಪ್ಪಿದೆ. ಆದರೆ, ಈ ವಿಷಯ ಬಾಯ್ಬಿಡದ ಅರಣ್ಯ ಇಲಾಖೆ ಅಧಿಕಾರಿಗಳು, ಬಳ್ಳೆ ಅರಣ್ಯ ತನಿಖಾ ಠಾಣೆ ಬಳಿಗೆ ಹುಲಿಯನ್ನು ತಂದು ಚಿಕಿತ್ಸೆ ನೀಡುವ ಹೆಸರಲ್ಲಿ ಜನರನ್ನು ದೂರ ಇರಿಸಿದರು ಎಂದು ದೂರುತ್ತಾರೆ.

20 ವರ್ಷದ ಹೆಣ್ಣಾನೆ ಕೆಸರಿಂದ ಬಚಾವ್‌
ಹುಣಸೂರು:
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ಹೊರಬಂದಿದ್ದ ಆರು ಕಾಡಾನೆಗಳ ಹಿಂಡಿನಲ್ಲಿ ಕೆರೆಯ ಹೂಳಿನಲ್ಲಿ ಸಿಲುಕಿ ಮೇಲೇಳಲಾರದೆ ನಿತ್ರಾಣಗೊಂಡಿದ್ದ ಹೆಣ್ಣಾನೆಯೊಂದನ್ನು 6 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಸೇರಿಸಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಬಳಿಯ ಕಚುವಿನಹಳ್ಳಿ ಹೊಸಕೆರೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಘಟನೆ ಜರುಗಿದ್ದು, ಗ್ರಾಮಸ್ಥರ ಸಹಕಾರದಿಂದ ಕಾಡಾನೆಯನ್ನು ಸಂರಕ್ಷಿಸಿ ಸುರಕ್ಷಿತವಾಗಿ ಕಾಡಿಗಟ್ಟಿದರೆ, ಸಂಗಾತಿ ಮತ್ತೂಂದು ಹೆಣ್ಣಾನೆ ಮಾತ್ರ ಕಾರ್ಯಾಚರಣೆಯನ್ನು ವೀಕ್ಷಿಸುತ್ತಾ, ಘೀಳಿಡುತ್ತಾ ಪಕ್ಕದ ತೋಟದೊಳಕ್ಕೆ ಸೇರಿಕೊಂಡಿತ್ತು.

ಆರು ಆನೆಗಳ ಹಿಂಡು: ಸೋಮವಾರ ರಾತ್ರಿ ಮೇವನ್ನರಸಿ ಉದ್ಯಾನದಿಂದ ಹೊರ ಬಂದಿದ್ದ 6 ಆನೆಗಳ ಹಿಂಡು, ಅಲ್ಲಲ್ಲಿ ರೈತರ ಬೆಳೆಗಳನ್ನು ತಿಂದು ಕಚುವಿನಹಳ್ಳಿ ಕೆರೆಯಲ್ಲಿ ನೀರು ಕುಡಿಯಲು ಆಗಮಿಸಿದ್ದವು. ಈ ವೇಳೆ ಸುಮಾರು 20 ವರ್ಷದ ಹೆಣ್ಣಾನೆ ಕೆಸರಿನ ಗುಂಡಿಯಲ್ಲಿ ಸಿಲುಕಿಕೊಂಡಿತು. ಮೇಲೆ ಬರಲು ಸಾಕಷ್ಟು ಕಸರತ್ತು ನಡೆಸಿ ವಿಫ‌ಲವಾಗಿದೆ. ಜೊತೆಗಿದ್ದ ತನ್ನ ಸಂಗಾತಿಯೂ ಸಹ ಮೇಲೆತ್ತಲು ಸಹಕರಿಸಿದರೂ ಕೆಸರು ತುಂಬಿದ್ದ ಭಾರೀ ಹೊಂಡದಿಂದ ಮೇಲೇಳಲಾಗದೆ ಒದ್ದಾಡಿ ನಿತ್ರಾಣಗೊಂಡಿತ್ತು.

ಕಾರ್ಯಾಚರಣೆ: ಆನೆ ಘೀಳಿಡುತ್ತಾ ತನ್ನ ಇರುವಿಕೆಯನ್ನು ಇತರರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದ ವೇಳೆ ಬೆಳಗ್ಗೆ ಕೆರೆಯ ಸಮೀಪದಲ್ಲೇ ಅಟ್ಟಣೆಯಲ್ಲಿದ್ದ ರೈತನಿಗೆ ಹೂಳಿನಲ್ಲಿ ಸಿಲುಕಿರುವುದು ಗೊತ್ತಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ವನ್ಯಜೀವಿ ವಿಭಾಗದ ಎಸಿಎಫ್ಗಳಾದ ಪ್ರಸನ್ನಕುಮಾರ್‌, ಸೋಮಪ್ಪ, ಆರ್‌ಎಫ್ಒಗಳಾದ ಸುಬ್ರಹ್ಮಣ್ಯ, ಕಿರಣ್‌ಕುಮಾರ್‌ ನೇತೃತ್ವದ ತಂಡ ಕೆಸರಿನಲ್ಲಿ ಹೂತು ಹೋಗಿದ್ದ ಸ್ಥಳಕ್ಕೆ ಪಕ್ಕದ ಕಚುವಿನಹಳ್ಳಿಯ ಸಮೀಪದ ಮಹದೇವ್‌ರ ಪಂಪ್‌ಸೆಟ್‌ನಿಂದ ನೀರು ಹರಿಸಿ ಹೊಂಡದ ಮಣ್ಣನ್ನು ಸಡಿಲಗೊಳಿಸಿದರು. ಸಾಕಾನೆ ಗಣೇಶನ ಸಹಾಯದಿಂದ ಆನೆಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆದು ಹೊರ ತರಲಾಯಿತು. ಸದ್ಯ ಬದುಕಿದೆಯಾ ಬಡಜೀವವೇ ಎಂಬ ಸಂತಸದಿಂದ ಕಾಡಿನ ಕಡೆ ಮುಖಮಾಡಿತು.

ಗೆಳತಿಯ ಸಂತಸ: ಈ ನಡುವೆ ತನ್ನ ಗೆಳತಿ ಆನೆ ಹೂಳಿನಲ್ಲಿ ಸಿಕ್ಕಿಕೊಂಡಿರುವುದನ್ನು ಕಂಡು ಮರುಗಿದ ಹೆಣ್ಣು ಕಾಡಾನೆ ಪಕ್ಕದ ಜಮೀನಿನಲ್ಲೇ ನಿಂತು ಕಾರ್ಯಾಚರಣೆ ವೀಕ್ಷಿಸುತ್ತಿತ್ತು. ಸಂಗಾತಿ ಕೆಸರಿನಿಂದ ಮೇಲೆದ್ದ ವೇಳೆಯಂತೂ ಘೀಳಿಡುತ್ತಾ ಅತ್ತಿಂದಿತ್ತ ಸಂತಸದಿಂದ ಓಡಾಡುತ್ತಿತ್ತು, ಈ ವೇಳೆಯಂತೂ ಜನರು ಹೋ ಎಂದು ಕಿರುಚುತ್ತಿದ್ದರು. ಕಾಡಿನತ್ತ ಸಂಗಾತಿ ತೆರಳುತ್ತಿದ್ದಂತೆ ಸಂತಸದಿಂದ ಪಕ್ಕದ ಯಲ್ಲಪ್ಪರಿಗೆ ಸೇರಿದ ತೋಟಕ್ಕೆ ಸೇರಿಕೊಂಡು ಪಂಪ್‌ಸೆಟ್‌ ಹಾಗೂ ಪೈಪ್‌ಗ್ಳನ್ನು ಧ್ವಂಸ ಮಾಡಿತು. ಸಂಜೆ ವೇಳೆಗೆ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿದರು.

ಜನಸಾಗರ: ಆನೆ ಕೆರೆಯಲ್ಲಿ ಸಿಲುಕಿರುವ ವಿಷಯ ಹರಡುತ್ತಿದ್ದಂತೆ ಸುತ್ತಮುತ್ತಲ ಹಳ್ಳಿಗರು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿ ಸಿದರು. ಕಾರ್ಯಾಚರಣೆ ವೇಳೆಯಂತೂ ಹೋ ಆನೆ ಮೇಲೆದ್ದಿದೆ, ಹೋಗುತ್ತದೆ ಎಂದು ಕೂಗುತ್ತಾ ಓಡಾಡತೊಡಗಿದ್ದರಿಂದ ಜನರನ್ನು ನಿಯಂತ್ರಸಲು ಪೊಲೀಸರು ಹೈರಾಣಾಗಿದ್ದರು. ವೃತ್ತ ನಿರೀಕ್ಷಕ ಧರ್ಮೇಂದ್ರ ನೇತೃತ್ವದಲ್ಲಿ ಪೊಲೀಸರು ಜನರನ್ನು ಆನೆ ಹತ್ತಿರ ಬಾರದಂತೆ ನಿಯಂತ್ರಿಸಿದರಲ್ಲದೆ, ಆನೆ ಮೇಲೆತ್ತಲು ಸಹಕರಿಸಿದರು.

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.