“ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ ಕೊಂದುಹಾಕ್ತೇವೆ ಅಂತಾರೆ’

Team Udayavani, Jun 25, 2017, 11:38 AM IST

mys4.jpg

ಮೈಸೂರು: ಹಿಂದೂ ಧರ್ಮದಷ್ಟು ಭಯಂಕರವಾದ ಧರ್ಮ ಈ ಪ್ರಪಂಚದಲ್ಲಿ ಮತ್ತೂಂದಿಲ್ಲ. ಇದನ್ನು ಹೇಳಿದರೆ ತನ್ನನ್ನು ಕೊಂದು ಹಾಕುತ್ತೇವೆ ಎನ್ನುತ್ತಾರೆ ವಿನಾ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ವಿಚಾರವಾದಿ ಪೊ›.ಕೆ.ಎಸ್‌.ಭಗವಾನ್‌ ಅಸಮಾಧಾನ ವ್ಯಕ್ತಪಡಿಸಿದರು. 

ಚಾರ್ವಾಕ ಸೋಷಿಯಲ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ದೇವರು-ಧರ್ಮ-ರಾಜಕಾರಣ ಕುರಿತು ಅವರು ಮಾತನಾಡಿದರು. ಹಳೆಯ ಯಾವುದೇ ದೇವಸ್ಥಾನಗಳಲ್ಲಿ ಬೆಳಕಿಲ್ಲ. ಅದೇ ರೀತಿ ಸಮಾಜವನ್ನೂ ಕಗತ್ತಲಲ್ಲಿಟ್ಟಿದ್ದಾರೆ. ಜನ ಬುದ್ಧಿವಂತರಾದರೆ ಪ್ರಶ್ನೆ ಮಾಡುತ್ತಾರೆ. ಒತ್ತಾಯ ಮಾಡಿ ಪ್ರತಿಭಟನೆ ಮಾಡುತ್ತಾರೆ ಎಂಬ ಕಾರಣಕ್ಕೆ ಎಲ್ಲ ಕಾಲದಲ್ಲಿಯೂ ಜನರನ್ನು ಕತ್ತಲಲ್ಲಿಡುತ್ತಾ ಬಂದಿದ್ದಾರೆ.

ಯಾವುದೋ ಶಕ್ತಿ ತನ್ನನ್ನು ಕಾಪಾಡುತ್ತಿದೆ ಎಂಬ ಭಯದಿಂದ ಮನುಷ್ಯ ದೇವರನ್ನು ಸೃಷ್ಟಿ ಮಾಡಿಕೊಂಡ, ಒಂದೊಂದು ಬುಡಕಟ್ಟು ಕೂಡ ಒಂದೊಂದು ದೇವರನ್ನು ಸೃಷ್ಟಿ ಮಾಡಿಕೊಂಡಿತು. ಆ ನಂತರದಲ್ಲಿ ಧರ್ಮ ಹುಟ್ಟಿಕೊಂಡಿತು. ನಂತರದಲ್ಲಿ ಪುರೋಹಿತಶಾಹಿಗಳು ದುಡಿಯುವ ವರ್ಗವನ್ನು ಸೃಷ್ಟಿಸಿದರು ಎಂದು ಅವರು ಪ್ರತಿಪಾದಿಸಿದರು.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಂಗಡಿಸಿ ಕಂದಾಚಾರದ ಮೂಲಕ ಎಲ್ಲರನ್ನೂ ಹಿಡಿದಿಡುವ ಕೆಲಸವನ್ನು ಪುರೋಹಿತಶಾಹಿ ಮಾಡಿದೆ. ಕ್ರಿ.ಪೂ.6ನೇ ಶತಮಾನದಲ್ಲಿ ಬುದ್ಧ, ಮಹಾವೀರರು ಇಂತಹ ಕಂದಾಚಾರಗಳನ್ನು ಪ್ರಶ್ನೆ ಮಾಡಲು ಶುರು ಮಾಡಿದರು ಎಂದು ಹೇಳಿದರು. ದೇಶದ ಮೇಲೆ ಮುಸ್ಲಿಮರು ಆಕ್ರಮಣ ಮಾಡಲೂ ಈ ವೈದಿಕ ಧರ್ಮದವರೇ ಕಾರಣ ಎಂದ ಅವರು, ಧರ್ಮ ಇದ್ದ ಕಡೆ ರಾಜಕಾರಣ ಇರಲ್ಲ.

ಜಾತಿ ಇದ್ದ ಕಡೆ ಮಾತ್ರ ರಾಜಕಾರಣ ಇರುತ್ತೆ ಎಂದರು. ಮತ ಧರ್ಮ ಎಂದು ಪ್ರತಿಪಾದಿಸುವವರಿಗೆ ಎರಡೂ ಶಬ್ದದ ನಿಜವಾದ ಅರ್ಥಗೊತ್ತಿಲ್ಲ. ಮತವೇ ಬೇರೆ, ಧರ್ಮವೇ ಬೇರೆ. ವೈಚಾರಿಕ ವಿಚಾರಗಳಿಲ್ಲದೆ ಹುಟ್ಟಿಕೊಂಡಿದ್ದೇ ಮತ, ಮನುಷ್ಯ ತನ್ನ ಮಾನಸಿಕ ಶಕ್ತಿಯನ್ನು ಬಳಸಿಕೊಳ್ಳದಿದ್ದರೆ ಬೆಳವಣಿಗೆಯಾಗಲ್ಲ ಎಂದರು.

ಸಮುದ್ರಕ್ಕೆ ಎಲ್ಲಾ ನದಿಗಳು ಸೇರಿದರೂ ಇದು ಇಂತಹ ನದಿಯ ನೀರು ಎಂದು ಗುರುತಿಸಲಾಗುವುದಿಲ್ಲ. ಅದೇ ರೀತಿ ಸಮುದ್ರಗಳು ಸೇರಿಕೊಂಡಂತೆ ಮನುಷ್ಯ ಜನಾಂಗ ಸೇರಿದೆ. ಆದರೆ, ನಾವು ಹಿಂದೂ, ಮುಸ್ಲಿಂ, ಕ್ರೆ„ಸ್ತ ಎಂದು ಒಡೆದು ಹಾಕಿದ್ದೇವೆ. ಸಮುದ್ರದ ಉದಾಹರಣೆಕೊಟ್ಟು ಮಾನವ ಜನಾಂಗ ಒಂದು ಎಂದು ಹೇಳಿದ ಬುದ್ಧನನ್ನು ರಾಮಯಾಣದಲ್ಲಿ ರಾಮನ ಬಾಯಲ್ಲಿ ನಿಂದಿಸಲಾಗಿದೆ ಎಂದು ಹೇಳಿದರು.

ವೇದ, ಉಪನಿಷತ್‌, ಸಂಸ್ಕೃತ ಗ್ರಂಥಗಳಲ್ಲೆಲ್ಲೂ ಹಿಂದೂ ಎಂಬ ಪದ ಉಲ್ಲೇಖವಿಲ್ಲ. ಆದರೆ, ಅನಾದಿ ಕಾಲದಲ್ಲಿ ಹೀನರನ್ನು ಹಿಂದೂ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಗೌರವ ಇದ್ದವರ್ಯಾರೂ ನಾನು ಹಿಂದೂ ಎಂದು ಹೇಳಿಕೊಳ್ಳಬಾರದು ಎಂದರು. ಬಸವಣ್ಣ ದಯೆಯೇ ಧರ್ಮದ ಮೂಲ ಎಂದಿದ್ದಾರೆ. ಆದರೆ, ಇಂದು ಭಯವೇ ಧರ್ಮದ ಮೂಲವಾಗಿದೆ ಎಂದು ಲೇವಡಿ ಮಾಡಿದರು.

ಉರಿಲಿಂಗಿಪೆದ್ದಿಮಠದ ಜಾnನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಚಿಂತಕಿ ನಂದಾ ಹಳೆಮನೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮ್‌, ಚಿಂತಕಿ ಡಾ.ರತಿರಾವ್‌, ರಘೋತ್ತಮ್‌ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.