ಬಂಡಿಪೋರ್ನಲ್ಲಿ ಭಾರೀ ಗುಂಡಿನ ಕಾಳಗ: ಲಷ್ಕರ್ ಕಮಾಂಡರ್ ಫಿನಿಶ್
Team Udayavani, Jan 19, 2017, 8:52 AM IST
ಶ್ರೀನಗರ : ಉತ್ತರ ಕಾಶ್ಮೀರದ ಬಂಡಿಪೋರ್ನ ಹಾಜಿನ್ ಎಂಬಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದ್ದು ಓರ್ವ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್ನನ್ನು ಹತ್ಯೆ ಗೈಯಲಾಗಿದೆ. ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್ ಸಿಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಸುಕಿನ ವೇಳೆ ಪೊಲೀಸರು ಮತ್ತು ಸೇನಾ ಪಡೆಗಳು ಜಂಟಿ ಕಾರ್ಯಾಚರಣೆಗಿಳಿದು ಲಷ್ಕರ್ ಕಮಾಂಡರ್ ಆಗಿದ್ದ ಅಬು ಮುಸೈಬ್ನನ್ನು ಹತ್ಯೆಗೈದಿವೆ.
ಸ್ಥಳೀಯವಾಗಿ ಯುವಕರನ್ನು ಉಗ್ರ ಚಟುವಟಿಕೆಗಳತ್ತ ಆಕರ್ಷಿಸುವಲ್ಲಿ ಮುಸೈಬ್ ಕೆಲಸ ಮಾಡುತ್ತಿದ್ದು ಆತನ ಹತ್ಯೆಯಿಂದ ಸೇನಾ ಪಡೆಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಸ್ಥಳದಲ್ಲಿ ಇನ್ನೂ ಉಗ್ರರು ಇರುವ ಸಾಧ್ಯತೆಗಳಿದ್ದು ಶೋಧ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು