ಮೇ ತಿಂಗಳಿಂದ ಇಪಿಎಫ್ ಗೆ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಿ
Team Udayavani, Feb 20, 2017, 3:45 AM IST
ನವದೆಹಲಿ: ಕಾರ್ಮಿಕ ಭವಿಷ್ಯ ನಿಧಿಯ ಹಣ (ಇಪಿಎಫ್) ಇನ್ನು ಫಟಾಫಟ್ ಕೈಸೇರಲಿದೆ! ಮೇ ತಿಂಗಳ ವೇಳೆಗೆ ಆನ್ಲೈನ್ ಮೂಲಕವೇ ಇಪಿಎಫ್ ಗೆ ಅರ್ಜಿ ಸಲ್ಲಿಕೆ ಮತ್ತು ಹಣ ಪಡೆಯುವ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಅಲ್ಲದೆ, ಅನಾರೋಗ್ಯಕ್ಕೆ ತುತ್ತಾದ ಉದ್ಯೋಗಿಗಳೂ ಇನ್ಷೊರೆನ್ಸ್ ಸಂಬಂಧಿತ ವಿಚಾರಗಳನ್ನು ಆನ್ಲೈನ್ ಮೂಲಕವೇ ಬಗೆಹರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಈಗಾಗಲೇ 1 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವನ್ನೆಲ್ಲ ಕೇಂದ್ರ ಸರ್ಕಾರದ ಸರ್ವರ್ಗೆ ಸಂಪರ್ಕಿಸಲಾಗುತ್ತಿದೆ.
“ಇಪಿಎಫ್ ಗೆ ಅರ್ಜಿ ಸಲ್ಲಿಸಿದ 3 ಗಂಟೆಯೊಳಗೆ ಅರ್ಜಿದಾರನ ಖಾತೆಗೆ ಹಣ ಸೇರುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಗರಿಷ್ಠ 20 ದಿನಗಳೊಳಗೆ ಹಣ ಪಾವತಿಯಾಗಲಿದೆ. ಭವಿಷ್ಯ ನಿಧಿ ಖಾತೆ, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆಗಳನ್ನು ಆನ್ಲೈನ್ ಅರ್ಜಿಯಲ್ಲಿಯೇ ಭರ್ತಿಮಾಡುವುದು ಕಡ್ಡಾಯ’ ಎಂದು ಇಪಿಎಫ್ ಕಮಿಷನರ್ ವಿ ಪಿ ಜಾಯ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು