ಕರ್ಮಯೋಗಿಗೆ ಯೋಗಾಯೋಗ

Team Udayavani, Mar 19, 2017, 3:50 AM IST

19-PTI-7.jpg

ಲಕ್ನೋ: ಯೋಗಿ ಆದಿತ್ಯನಾಥ್‌ ಉತ್ತರಪ್ರದೇಶದ ಸಾಮಾನ್ಯ ನಾಯಕ ಅಲ್ಲ. ಜನಪ್ರಿಯ ನಾಯಕ! ಚುನಾವಣೆಗೂ ಪೂರ್ವದಲ್ಲಿಯೇ ಒಂದು ಹಂತದಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎನ್ನು­ವು­ದನ್ನು ಸ್ವತಃ ಅವರೇ ಪರೋಕ್ಷವಾಗಿ ಬಿಂಬಿಸಿಕೊಂಡಿದ್ದರು. ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳದೇ ಇದ್ದರೂ, ಇದು ಬೆಂಬ­ಲಿಗರ ಮನದಲ್ಲಿ ಅಚ್ಚೊತ್ತಿತ್ತು. ಕಡೇ ಹಂತದವರೆಗೂ ಯೋಗಿ ಅವರ ಜತೆ ಈ ಬೆಂಬಲ ಇದ್ದುದು ರಾಷ್ಟ್ರರಾಜಧಾನಿಯಲ್ಲಿ ಕುಳಿತು ನೋಡುತ್ತಿರುವ ವರಿಷ್ಠರಿಗೆ ಇದೇ ಒಳ್ಳೆಯ ಆಯ್ಕೆ ಎಂದೆನಿಸಿರಲಿಕ್ಕೆ ಸಾಕು.

ಪರಿಣಾಮ ಸಾಧುವಾಗಿ, ಹಿಂದುತ್ವ ಪ್ರತಿಪಾದಕರಾಗಿ, ಎಲ್ಲಕ್ಕಿಂತ ಮುಖ್ಯವಾಗಿ ಐದು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಜನಪ್ರಿಯತೆ ಕಡೆಗೂ ಅವರನ್ನು ಸಿಎಂ ಆಗಿಸಿದೆ. ಅಷ್ಟಕ್ಕೂ, ಯೋಗಿ ಆದಿತ್ಯನಾಥ್‌ “ಕರ್ಮಯೋಗಿ’, ದಿನದ 24 ಗಂಟೆಗಳ ಕಾಲ ಜನಕಲ್ಯಾಣಕ್ಕಾಗಿ ದುಡಿಯುತ್ತಾರೆನ್ನುವ ನಂಬಿಕೆ ಪ್ರಧಾನಿ ಮೋದಿ ಅವರದ್ದಾಗಿರುವುದೂ ಇದಕ್ಕೊಂದು ಕಾರಣವಾಗಿದೆ. ಹಾಗೇ, ಚುನಾವಣೆಗೂ ಮೊದಲ ಪ್ರಚಾರದ ಸಂದರ್ಭದಲ್ಲಿ ಅಮಿತ್‌ ಶಾ ಮತ್ತು ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ ಮತ್ತು ಮಾಫಿಯಾ ವಿರುದ್ಧದ ಹೋರಾಟದ ತಂತ್ರವನ್ನೇ ಪ್ರಮುಖ ಅಜೆಂಡಾ ಎನ್ನುವಂತೆ ಬಿಂಬಿಸಿಕೊಂಡಿದ್ದರು. ಯೋಗಿ ಆದಿತ್ಯನಾಥ್‌ ಕೂಡ ಈ ಎರಡು ವಿಚಾರಗಳಲ್ಲಿ ಬದ್ಧತೆ ತೋರಿಕೊಂಡು ಬಂದಿರುವುದು, ಅವರನ್ನು ಸಿಎಂ ಸ್ಥಾನಕ್ಕೆ ಅರ್ಹರನ್ನಾಗಿಸಲು ಪ್ರಮುಖ ಕಾರಣ­ಗಳಲ್ಲೊಂದಾಗಿದೆ.

ಹಿಂದಿದ್ದಾರೆ ಹಿಂದೂ ಬೆಂಬಲಿಗರು
ದೇಶದ ಅತಿ ಜನನಿಬಿಡ ರಾಜ್ಯದ ನೊಗ ಹೊರುವ ಯೋಗ ಯೋಗಿ ಆದಿತ್ಯನಾಥ್‌ ಅವರಿಗೆ ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ಮೋದಿ ನಂತರ ಬಿಜೆಪಿಯ ಪ್ರಮುಖ ಚಹರೆಯಾಗಿದ್ದ ಈ ನಾಯಕ ಚಿಕ್ಕ ವಯಸ್ಸಿ­ನಿಂದಲೇ ಬಲಿಷ್ಠ ಬೇಸ್‌ ನಿರ್ಮಿಸಿಕೊಂಡೇ ಬಂದವರು.  

ಸಾಮಾನ್ಯ ರಜಪೂತ ಕುಟುಂಬದಲ್ಲಿ ಹುಟ್ಟಿದ ಅಜಯ್‌ ಸಿಂಗ್‌ ಬಿಶ್‌¤ ಅದಿತ್ಯನಾಥ್‌ ಆಗಿ ಬದಲಾಗುವುದಕ್ಕೂ ಮುನ್ನ ಗಣಿತದಲ್ಲಿ ಪದವಿ ಪಡೆದಿದ್ದರು. ಚಿಕ್ಕ ವಯಸ್ಸಿನಿಂದಲೇ ಪ್ರಬಲ ವಾಗ್ಮಿಯಾಗಿ ಗುರುತಿಸಿಕೊಂಡಿದ್ದರಿಂದ ಗೋರಖ­ಪುರ­ದಲ್ಲಿ ಅವರ ಬೆಂಬಲಿಗರ ಸಂಖ್ಯೆ ಬೆಳೆದುಬಿಟ್ಟಿತ್ತು. 1998ರಲ್ಲಿ ತಮ್ಮ 26ನೇ ವಯಸ್ಸಿಗೇ ಸಂಸದರಾಗಿ ಆಯ್ಕೆಯಾದ ಆದಿತ್ಯ­ನಾಥ್‌, 12ನೇ ಲೋಕಸಭೆಯ ಅತಿ ಕಿರಿಯ ಸಂಸದರಾಗಿದ್ದರು. ಇದೇ ಗೋರಖಪುರ ಕ್ಷೇತ್ರ­ದಿಂದ 5 ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ.

2002ರಲ್ಲಿ “ಹಿಂದೂ ಯುವ ವಾಹಿನಿ’ (ಹೆಚ್‌ವೈಯು) ಸಂಘ ಹುಟ್ಟುಹಾಕಿದ ಯೋಗಿ ಆ ಸಂಘಟನೆಯ ಬಲದಿಂದ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಎದುರಿಸು­ತ್ತಲೇ ಬಂದಿದ್ದಾರೆ. ಈ ಸಂಘಟನೆಯ ಬಲ­ದಿಂದಲೇ ಅವರು ರಾಜಕೀಯ­ವಾಗಿ ಭದ್ರ ಬುನಾದಿ ಸೃಷ್ಟಿಸಿಕೊಂಡಿದ್ದಾರೆ ಎನ್ನುತ್ತಾರೆ ವಿರೋಧಿಗಳು. ವಿಶೇಷವೆಂದರೆ ರಾಜಕೀಯ ಪ್ರವೇ ಶದ ನಂತರ ಅಲ್ಪಸಂಖ್ಯಾತರ ವಿರುದ್ಧದ ಹೇಳಿಕೆಗ­ಳಿಂದಲೇ ಗುರು­ತಿಸಿ­ಕೊಂಡಿದ್ದರೂ, ತಮ್ಮ ಮತ-ಮಠ ಕ್ಷೇತ್ರ ಗೋರಖ­ಪುರದಲ್ಲಂತೂ ಎಲ್ಲಾ ಸಮುದಾಯದ ಜನರಿಂದಲೂ ಗೌರವ ಪಡೆದಿರುವ ವ್ಯಕ್ತಿ ಅವರು. ಗೋರಖನಾಥ್‌ ಮಂದಿರದ ಸುತ್ತಲಿನ ಮುಸಲ್ಮಾನ­ರಿಗೂ ಅವರ ಸಂಘಟನೆ ಭದ್ರತೆ ಒದಗಿಸುತ್ತಿದೆ.  

2014ರಲ್ಲಿ ಗೋರಖ್‌ಪುರದ ಗೋರಖ್‌ನಾಥ್‌ ಮಠದ ಪೀಠಾಧೀಶ ಸ್ಥಾನವೂ ಅವರಿಗೆ ಒಲಿದು ಬಂದಿತು. ಈ ಮಠವು ಶೈವ ಪಂಥದ ಉಪಸಂಪ್ರದಾ ಯವಾಗಿದ್ದು, ಅದ್ವೆ„ತ ವೇದಾಂತ ಮತ್ತು ಬೌದ್ಧ ಪರಂಪರೆಯ ಮಿಶ್ರಣವಾಗಿದೆ. ಶಿವನ ಆರಾಧಕರಾ ಗಿರುವ ನಾಥರು ಭಾರತದಲ್ಲಿ “ಯೋಗ’ ಚಳವಳಿ ಹಬ್ಬುವುದರಲ್ಲಿ ಪ್ರಮುಖ ಕಾರಣಕರ್ತರು. ಯೋಗದ ಪ್ರಚಾರಕರೂ ಆಗಿರುವ ಯೋಗಿ ದೇಶ ದಲ್ಲಿ ಯೋಗ ದಿನಾಚರಣೆಯ ಬಗ್ಗೆ ಅಪಸ್ವರವೆದ್ದಾಗ ಪ್ರಬಲವಾಗಿ ಅದರ ಪರ ಧ್ವನಿಯೆತ್ತಿದವರು. 

ಉತ್ತರಾಖಂಡ ಸಿಎಂ ಆಗಿ ತ್ರಿವೇಂದ್ರ ಸಿಂಗ್‌ ಪ್ರಮಾಣ
ಡೆಹ್ರಾಡೂನ್‌: ಉತ್ತರಾಖಂಡದ 8ನೇ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ತ್ರಿವೇಂದ್ರ ಸಿಂಗ್‌ ರಾವತ್‌ ಶನಿವಾರ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ. ಈ ಹಿಂದೆ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ರಾವತ್‌ ಅವರಿಗೆ ರಾಜ್ಯಪಾಲ ಕೆ.ಕೆ.ಪೌಲ್‌ ಅವರು ಪ್ರಮಾಣವಚನ ಬೋಧಿಸಿದರು. ರಾವತ್‌ ಅವರೊಂದಿಗೆ 9 ಮಂದಿ ಸಚಿವರೂ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೇರಿದಂತೆ ಪಕ್ಷದ ಹಲವು ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸತ್ಪಾಲ್‌ ಮಹಾರಾಜ್‌, ಹರಾಕ್‌ ಸಿಂಗ್‌ ರಾವತ್‌, ಮದನ್‌ ಕೌಶಿಕ್‌, ಅರವಿಂದ್‌ ಪಾಂಡೆ, ಸುಬೋಧ್‌ ಉನಿಯಾಲ್‌, ಯಶ್‌ಪಾಲ್‌ ಆರ್ಯ ಮತ್ತು ಪ್ರಕಾಶ್‌ ಪಂತ್‌ ಸಚಿವ ಸಂಪುಟ ಸೇರಿದ ಪ್ರಮುಖರು. 

ಸಾಧು “ಪ್ರವಚನ’
ಉತ್ತರ ಪ್ರದೇಶದ ಎರಡೂವರೆ ವರ್ಷದ ಆಡಳಿತದಲ್ಲಿ 450 ಗಲಭೆಗಳಾಗಿವೆ. ಏಕೆಂದರೆ ಒಂದು ನಿರ್ದಿಷ್ಟ ಕೋಮಿನ ಜನಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಉತ್ತರ ಭಾಗದಲ್ಲೇಕೆ ಗಲಭೆಗಳಾಗಿಲ್ಲ? ಇದನ್ನು ಸುಲಭವಾಗಿ ಅರ್ಥಮಾಡಿ­ಕೊಳ್ಳಬಹುದು. ಯಾವ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಸಂಖ್ಯೆ 10-20 ಪ್ರತಿಶತವಿರು­ತ್ತದೋ, ಅಲ್ಲಿ ಚಿಕ್ಕ ಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಎಲ್ಲಿ ಅವರ ಸಂಖ್ಯೆ 20-35 ಪ್ರತಿಶತವಿರುತ್ತದೋ, ಅಲ್ಲಿ ಗಂಭೀರ ಕೋಮು­ಗಲಭೆ­ಗಳಾಗುತ್ತವೆ. ಅವರ ಸಂಖ್ಯೆ 35%ಗಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಅನ್ಯಕೋಮಿನವರಿಗೆ ಜಾಗವೇ ಇರುವುದಿಲ್ಲ. ಭಾರತವನ್ನು ಕ್ರೈಸ್ತೀಕರಣಗೊಳಿಸುವ ಹುನ್ನಾರದ ಭಾಗವಾಗಿದ್ದರು ಮದರ್‌ ಥೆರೇಸಾ. ಸೇವೆಯ ಹೆಸರಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಯಿತು. ಯೋಗವನ್ನು ಆರಂಭಿಸಿದ ಅತಿದೊಡ್ಡ ಯೋಗಿಯೆಂದರೆ ಮಹಾದೇವ. ಮಹಾದೇವ ಈ ದೇಶದ ಪ್ರತಿ ವಸ್ತುವಿನಲ್ಲೂ ಇದ್ದಾನೆ. ಯೋಗ ಮತ್ತು ಶಿವನಿಂದ ದೂರ ಉಳಿಯಲು ಬಯಸುವವರು ಹಿಂದೂಸ್ಥಾನವನ್ನು ತೊರೆಯಲಿ. ಈ ದೇಶದ ಬಹುಸಂಖ್ಯಾತರೇ ತನ್ನನ್ನು ಸ್ಟಾರ್‌ ಮಾಡಿದ್ದಾರೆ ಎನ್ನುವುದನ್ನು ಶಾರೂಖ್‌ ಮರೆಯಬಾರದು. ಒಂದು ವೇಳೆ ಹಿಂದೂಗಳೇನಾದರೂ ಶಾರೂಖ್‌ ಕೈಬಿಟ್ಟಿದ್ದರೆ ಆತ ರಸ್ತೆಯಲ್ಲಿ ಅಲೆದಾಡಬೇಕಿತ್ತು. ಹಫೀಜ್‌ ಸಯೀದ್‌ನ ಭಾಷೆಯಲ್ಲೇ ಎಸ್‌ಆರ್‌ಕೆ ಮಾತನಾಡುತ್ತಿರುವುದು ವಿಪರ್ಯಾಸ.

ಆದಿತ್ಯನಾಥ್‌ ಆಯ್ಕೆಯು ದೇಶದ ಜಾತ್ಯ ತೀತತೆಯ ಮೇಲೆ ಈವರೆಗೆ ನಡೆದಿರದಂಥ ಅತಿದೊಡ್ಡ ಹಲ್ಲೆ. ಬಿಜೆಪಿ ಅಥವಾ ಆರೆಸ್ಸೆಸ್‌ ತಮ್ಮ ಹಿಂದುತ್ವವಾದವನ್ನು ಉತ್ತೇಜಿಸಲು ಈ ರೀತಿ ಮಾಡಿರಬಹುದು. ಭಾರತವು ಹಿಂದುತ್ವವಲ್ಲ, ಹಿಂದುತ್ವವು ಭಾರತವಲ್ಲ.
ವೀರಪ್ಪ ಮೊಯ್ಲಿ, ಕಾಂಗ್ರೆಸ್‌ ನಾಯಕ

ನಾನು ಪ್ರಧಾನಿ ಮೋದಿ ಅವರ “ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌’ ನೀತಿಯನ್ನೇ ಅನುಸರಿಸುತ್ತೇನೆ. ಇನ್ನು ನಮ್ಮ ರಾಜ್ಯವು ಅಭಿ ವೃದ್ಧಿಯ ಪಥ ದತ್ತ ಸಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ.
ಯೋಗಿ ಆದಿತ್ಯನಾಥ್‌

ಟಾಪ್ ನ್ಯೂಸ್

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.