Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಎಫ್ಡಿಐ ನಿಯಮ ಸಡಿಲಿಕೆಗೆ ಕೇಂದ್ರ ಇಂಗಿತ

ಹೊಸದಿಲ್ಲಿ: ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ವಿರೋಧಿಸಿದ್ದ ಬಿಜೆಪಿ, ಪ್ರಸ್ತುತ ಎಫ್ಡಿಐ ನಿಯಮಗಳನ್ನು ಸಡಿಲಿಸಿ ವಿದೇಶಿ ಕಂಪೆನಿಗಳು ದೇಶದಲ್ಲಿ ತಮ್ಮ ರಿಟೇಲ್‌ ಮಳಿಗೆ ತೆರೆಯಲು ಅವಕಾಶ ನೀಡಲು ಚಿಂತನೆ ನಡೆಸಿದೆ. ದೇಶದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಅಧಿಕ ಪ್ರಮಾಣದ ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಲು ಮುಂದಾಗಿರುವ ಕೇಂದ್ರ ಸರಕಾರ, ವಿದೇಶಿ ರೀಟೇಲರ್‌ಗಳು ಭಾರತದಲ್ಲಿ ಮಲ್ಟಿ ಬ್ರಾಂಡ್‌ ರಿಟೇಲ್‌ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವ ಚಿಂತನೆ ನಡೆಸಿದೆ. ಆದರೆ ಭಾರತದಲ್ಲಿ ಮಳಿಗೆ ಆರಂಭಿಸುವ ವಿದೇಶಿ ಕಂಪೆನಿಗಳು 'ಮೇಡ್‌ ಇನ್‌ ಇಂಡಿಯಾ' ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರಕಾರ ತಿಳಿಸಿದೆ.


More News of your Interest

Trending videos

Back to Top