Updated at Wed,24th May, 2017 10:33AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅವಧಿಗೆ ಮುನ್ನವೇ ಗುಜರಾತ್‌ ವಿಧಾನಸಭೆ ಚುನಾವಣೆ?

ಅಹಮದಾಬಾದ್‌: ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಲಭಿಸಿ ಅಧಿಕಾರದ ಗದ್ದುಗೆ ಏರಿರುವುದರಿಂದ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೂ ಅವಧಿಗೆ ಮುನ್ನ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಜುಲೈ ಅಥವಾ ಸೆಪ್ಟಬರ್‌ನಲ್ಲೇ ಗುಜರಾತ್‌ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಲಿ ವಿಧಾನಸಭೆ ಅವಧಿ ಡಿಸೆಂಬರ್‌ನಲ್ಲಿ ಮುಕ್ತಾಯವಾಗಲಿದೆ.

ಆದರೆ ಬಿಜೆಪಿಯ ಗುಜರಾತ್‌ ಘಟಕದ ನಾಯಕರು ಈ ಅಂಶಗಳನ್ನು ತಿರಸ್ಕರಿಸಿದ್ದಾರೆ. ಸಿಎಂ ವಿಜಯ ರುಪಾಣಿ ಪ್ರತಿಕ್ರಿಯೆ ನೀಡಿ 5 ವರ್ಷ ಆಳ್ವಿಕೆ ನಡೆಸಲು ಜನರು ಅಧಿಕಾರ ನೀಡಿದ್ದಾರೆ. ಅದನ್ನು ಪೂರ್ತಿಗೊಳಿಸುತ್ತೇವೆ ಎಂದಿದ್ದಾರೆ. ಕೆಲ ಸಮಯದ ಹಿಂದೆ ಹಾಲಿ ಸಿಎಂ ಅಧಿಕಾರಕ್ಕೇರಿದ್ದಾಗ ಅವಧಿಗೆ ಮುನ್ನ ಚುನಾವಣೆ ಸುಳಿವನ್ನು ಗುಜರಾತ್‌ ಬಿಜೆಪಿ ಘಟಕದ ನಾಯಕರೇ ನೀಡಿದ್ದರು. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.


More News of your Interest

Trending videos

Back to Top