ನಿಮಗ್ಯಾವ ಆಸ್ಪತ್ರೆ ಬೆಸ್ಟ್? ಮೊದಲೇ ತಿಳಿಯಿರಿ ಎಲ್ಲ ಮಾಹಿತಿ
Team Udayavani, Mar 26, 2017, 3:50 AM IST
ಚೆನ್ನೈ: ಪ್ಯಾರಿಸ್ನಲ್ಲೋ, ಸಿಂಗಾಪುರದಲ್ಲೋ ಪ್ರವಾಸ ಮಾಡಬೇಕೆಂದರೆ ಎಷ್ಟು ವೆಚ್ಚವಾಗುತ್ತದೆ, ಅಗ್ಗದ ದರದಲ್ಲಿ ಹೋಟೆಲ್ ಎಲ್ಲಿ ಸಿಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಟ್ರಿಪ್ ಅಡ್ವೆ„ಸರ್ ಅಥವಾ ಮೇಕ್ವೆು ಟ್ರಿಪ್ನಲ್ಲಿ ಬುಕ್ ಮಾಡುವ ಮೂಲಕ ಪಡೆಯುತ್ತೀರಿ ಅಲ್ಲವೇ? ಅಂತೆಯೇ ಆಸ್ಪತ್ರೆಗೆ ದಾಖಲಾಧಿಗುವಾಗ ಅಥವಾ ಯಾವುದೋ ಪರೀಕ್ಷೆ ಮಾಡಿಸಬೇಕೆಂದಾಗ ಇದೇ ರೀತಿ ಆಸ್ಪತ್ರೆಗಳ ವೆಚ್ಚಗಳ ಹೋಲಿಕೆ ಮಾಡುವ ಅವಕಾಶ ಸಿಕ್ಕರೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?
ಮೆಡಿ ಅಸಿಸ್ಟ್ ಮತ್ತು ವಿಸ್ತಾರಾ ಹೆಲ್ತ್ನಂಥ ಸ್ಟಾರ್ಟ್ಅಪ್ಗ್ಳು ಇದೀಗ ಇಂತಹುದೊಂದು ಪ್ರಯತ್ನಕ್ಕೆ ಕೈಹಾಕಿವೆ. ಇವುಗಳು ತಮ್ಮ ವೆಬ್ಸೈಟ್ಗಳಲ್ಲಿ ಆಯಾ ನಗರಗಳ ಆಸ್ಪತ್ರೆಗಳ ಮಾಹಿತಿ, ಅಲ್ಲಾಗುವ ವೆಚ್ಚಗಳು, ರೂಂ ಬಾಡಿಗೆ, ವೈದ್ಯರ ಶುಲ್ಕ, ಪ್ಯಾಕೇಜ್ಗಳು… ಹೀಗೆ ಎಲ್ಲ ಮಾಹಿತಿಗಳನ್ನೂ ಒದಗಿಸುತ್ತವೆ. ಈ ಮೂಲಕ ಗ್ರಾಹಕರು ತಮ್ಮ ಬಜೆಟ್ಗೆ ಅನುಗುಣವಾದ ಹಾಗೂ ಗುಣಮಟ್ಟದ ಆಸ್ಪತ್ರೆಗಳನ್ನು ಕುಳಿತಲ್ಲಿಯೇ ಆಯ್ಕೆ ಮಾಡುವ ಅವಕಾಶ ಕಲ್ಪಿಸಿವೆ. ಯಾವ ಆಸ್ಪತ್ರೆಗೆ ಹೋದರೆ ಎಷ್ಟು ವೆಚ್ಚವಾಗುತ್ತದೆ ಎಂಬುದು ಮೊದಲೇ ತಿಳಿದರೆ, ಗ್ರಾಹಕರು ಅದಕ್ಕೆ ಮಾನಸಿಕವಾಗಿ ಸಿದ್ಧರಾಗಿಯೇ ಹೋಗಬಹುದು ಅಥವಾ ಬೇರೆ ಆಸ್ಪತ್ರೆಗಳತ್ತ ಮುಖಮಾಡಬಹುದು ಎನ್ನುತ್ತಾರೆ ಮೆಡಿ ಅಸಿಸ್ಟ್ನ ಮುಖ್ಯಸ್ಥ ಪ್ರಶಾಂತ್ ಜವೇರಿ.
ಇಂತಹ ಪಾರದರ್ಶಕತೆಯು ವೈದ್ಯಕೀಯ ಹಣದುಬ್ಬರದ ಹೆಚ್ಚಳವನ್ನೂ ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು. ಜತೆಗೆ, ಗ್ರಾಹಕರಿಗೂ ಹಲವು ಆಯ್ಕೆಗಳು ತೆರೆದುಕೊಳ್ಳುತ್ತವೆ ಎನ್ನುವುದು ಜವೇರಿ ಅವರ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು