Updated at Wed,28th Jun, 2017 12:48PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಂಬಾಲಾ ಸಮೀಪ ಹಳಿ ತಪ್ಪಿದ ಗೂಡ್ಸ್‌ ಟ್ರೈನಿನ 15 ಬೋಗಿಗಳು

ಚಂಡೀಗಢ : ಕಲ್ಲಿದ್ದಲು ತುಂಬಿದ್ದ ಗೂಡ್ಸ್‌ ಟ್ರೈನ್‌ ಒಂದರ ಸುಮಾರು 15 ಬೋಗಿಗಳು ಹರಿಯಾಣದ ಅಂಬಾಲಾದಲ್ಲಿ ಹಳಿ ತಪ್ಪಿದ ಘಟನೆ ಇಂದು ಗುರುವಾರ ನಡೆದಿರುವುದಾಗಿ ಹಿರಿಯ ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.

ಟ್ರೈನ್‌ ಚಾಲಕ ಮತ್ತು ಗಾರ್ಡ್‌ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿರುವರೆಂದು ಅಧಿಕಾರಿ ತಿಳಿಸಿದ್ದಾರೆ. 

ಅಂಬಾಲಾ - ಸಹರಾನ್‌ಪುರ ರೈಲು ಮಾರ್ಗದಲ್ಲಿ ಅಂಬಾಲಾ ಸಮೀಪ ಕೇಸರಿ ಸ್ಟೇಶನ್‌ ಬಳಿಯಲ್ಲಿ  ಈ ಹಳಿ ತಪ್ಪಿದ ದುರಂತವು ಇಂದು ಮಧ್ಯಾಹ್ನ ನಡೆಯಿತೆಂದು ಅಂಬಾಲಾ ವಿಭಾಗೀಯ ರೈಲ್ವೇ ಮ್ಯಾನೇಜರ್‌ ದಿನೇಶ್‌ ಕುಮಾರ್‌ ತಿಳಿಸಿದ್ದಾರೆ. 

ಗೂಡ್ಸ್‌ ರೈಲಿನ ಹಳಿ ತಪ್ಪಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ. 


More News of your Interest

Back to Top