ಅಂಬಾಲಾ ಸಮೀಪ ಹಳಿ ತಪ್ಪಿದ ಗೂಡ್ಸ್ ಟ್ರೈನಿನ 15 ಬೋಗಿಗಳು
Team Udayavani, Apr 20, 2017, 3:44 PM IST
ಚಂಡೀಗಢ : ಕಲ್ಲಿದ್ದಲು ತುಂಬಿದ್ದ ಗೂಡ್ಸ್ ಟ್ರೈನ್ ಒಂದರ ಸುಮಾರು 15 ಬೋಗಿಗಳು ಹರಿಯಾಣದ ಅಂಬಾಲಾದಲ್ಲಿ ಹಳಿ ತಪ್ಪಿದ ಘಟನೆ ಇಂದು ಗುರುವಾರ ನಡೆದಿರುವುದಾಗಿ ಹಿರಿಯ ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.
ಟ್ರೈನ್ ಚಾಲಕ ಮತ್ತು ಗಾರ್ಡ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿರುವರೆಂದು ಅಧಿಕಾರಿ ತಿಳಿಸಿದ್ದಾರೆ.
ಅಂಬಾಲಾ – ಸಹರಾನ್ಪುರ ರೈಲು ಮಾರ್ಗದಲ್ಲಿ ಅಂಬಾಲಾ ಸಮೀಪ ಕೇಸರಿ ಸ್ಟೇಶನ್ ಬಳಿಯಲ್ಲಿ ಈ ಹಳಿ ತಪ್ಪಿದ ದುರಂತವು ಇಂದು ಮಧ್ಯಾಹ್ನ ನಡೆಯಿತೆಂದು ಅಂಬಾಲಾ ವಿಭಾಗೀಯ ರೈಲ್ವೇ ಮ್ಯಾನೇಜರ್ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಗೂಡ್ಸ್ ರೈಲಿನ ಹಳಿ ತಪ್ಪಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!