Updated at Sun,23rd Apr, 2017 11:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪೆಟ್ರೋಲ್‌ ಬಂಕ್‌ ಬಂದ್‌ಗೆ ಒಪ್ಪದ ಕೇಂದ್ರ ಸರ್ಕಾರ

ನವದೆಹಲಿ: ಮುಂದಿನ ತಿಂಗಳ 14ರಿಂದ ಪ್ರತಿ ಭಾನುವಾರ ಪೆಟ್ರೋಲ್‌ ಪಂಪ್‌ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್‌ ಬಂಕ್‌ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ತೈಲ ಸಚಿವಾಲಯ ಅಭಿಪ್ರಾಯಪಟ್ಟಿದೆ.

ವಾರದಲ್ಲಿ ಒಂದು ದಿನ ಪೆಟ್ರೋಲ್‌, ಡೀಸೆಲ್‌ ಅನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ದೇಶ ಕಚ್ಚಾ ತೈಲದ ಆಮದನ್ನು ತಗ್ಗಿಸಬಹುದು. ಈ ಮೂಲಕ ದೇಶಕ್ಕೆ ಉಳಿತಾಯ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ "ಮನ್‌ ಕಿ ಬಾತ್‌'ನಲ್ಲಿ ಹೇಳಿದ್ದಾರೆಯೇ ಹೊರತು, ವಾರದಲ್ಲಿ ಒಂದು ದಿನ ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚಲು ಅಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಈ ಕುರಿತಂತೆ ಸರಣಿ ಟ್ವೀಟ್‌ ಮಾಡಿರುವ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌, "ಅಲ್ಪ ಸಂಖ್ಯೆಯ ಪಂಪ್‌ಗ್ಳ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಹೀಗಾಗಿ ಒಕ್ಕೂಟದ ಈ ಬೇಡಿಕೆಗೆ ಸಮ್ಮತಿಸುವ ಪ್ರಮೇಯವೇ ಇಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ದೇಶದಲ್ಲಿ ಶೇ.80ರಷ್ಟು (53,224) ಪೆಟ್ರೋಲ್‌ ಪಂಪ್‌ಗ್ಳನ್ನು ಹೊಂದಿರುವ ಇಂಡಿಯನ್‌ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್‌, ಪಂಪ್‌ ಮುಚ್ಚುವ ಪ್ರಕ್ರಿಯೆಯಲ್ಲಿ ತಾನಿಲ್ಲ ಎಂದಿದೆ.

ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪುದುಚೇರಿ, ಕರ್ನಾಟಕ (ಬೆಂಗಳೂರು ಸುತ್ತ), ಮಹಾರಾಷ್ಟ್ರ (ಮುಂಬೈ ಸುತ್ತ) ರಾಜ್ಯಗಳಲ್ಲಿ ಮೇ 14ರಿಂದ ಭಾನುವಾರಗಳಂದು ಪೆಟ್ರೋಲ್‌ ಪಂಪ್‌ಗ್ಳಿಗೆ ರಜೆ ನೀಡಲು ಅನುಮತಿ ನೀಡುವಂತೆ ಭಾರತದ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟ ಕೋರಿತ್ತು. ಆದರೆ ಕರ್ನಾಟಕ ಡೀಲರ್‌ಗಳೂ ಇದಕ್ಕೆ ಅಸಮ್ಮತಿ ಸೂಚಿಸಿದ್ದರು.


More News of your Interest

Trending videos

Back to Top